ಜೈಪುರ, ಜು. 8: ಇತ್ತೀಚೆಗೆ ಮಹಿಳೆಯರು ಕಾನೂನು ರಕ್ಷಣೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನದಲ್ಲಿ ಮಹಿಳೆಯೊಬ್ಬಳು ಅರ್ಚಕರ ಮೇಲೆಯೇ ದೌರ್ಜನ್ಯ ಎಸಗಿ ಸುಳ್ಳು ಆರೋಪ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅರ್ಚಕರು ತನ್ನ ಬಟ್ಟೆಗಳನ್ನು ಹರಿದು ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ಸತ್ಯಾಸತ್ಯತೆ ತಿಳಿದು ಬಂದಿದೆ.
ರಾಜಸ್ಥಾನದ ಸಿಕಾರ್‌ನ ಗನೇರಿ ಗ್ರಾಮದಲ್ಲಿರುವ ಶ್ರೀ ಜಾಂಕಿನಾಥ್ ದೇವಾಲಯದ ಹತ್ತಿರ ಈ ಘಟನೆ ನಡೆದಿದೆ. ವೈರಲ್ ಆದ ವಿಡಿಯೊದಲ್ಲಿ ಒಬ್ಬ ಮಹಿಳೆ "ಅವರು ನನ್ನ ಬಟ್ಟೆಗಳನ್ನು ಹರಿದುಹಾಕಿದ" ಎಂದು ಕಿರುಚುತ್ತಿರುವುದು ಕಂಡುಬಂದಿದೆ. ಮಹಿಳೆ ಅರ್ಚಕರ ಬಳಿ ಬಂದು, ತನ್ನ ತಲೆಯ ಮೇಲಿದ್ದ ದುಪಟ್ಟಾವನ್ನು ತೆಗೆದು, ನನ್ನ ಬಟ್ಟೆ ಹರಿದು ಹಾಕಿದ್ದಾನೆ ಎಂದು ಜೋರಾಗಿ ಕಿರುಚುತ್ತ ಅಳಲು ಆರಂಭಿಸಿದ್ದಾಳೆ.
ವಿಡಿಯೊ ನೋಡಿ:
ಈ ವ್ಯಕ್ತಿ ರಾಜಸ್ಥಾನದ ಸಿಕಾರ್‌ನ ಗನೇರಿಯ ಶ್ರೀ ಜಾನಕಿನಾಥ ದೇವಾಲಯದ ಅರ್ಚಕರು. ಮೊದಲಿಗೆ ಆರ್ಚಕರೇ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ವಿಡಿಯೊದಲ್ಲಿ ಹೇಳಲಾಗಿತ್ತು. ಈ ಘಟನೆ ಸಂಪೂರ್ಣವಾಗಿ ನೋಡಿದಾಗ ಮಹಿಳೆಯೇ ಅರ್ಚಕರ ಬಳಿ ಹೋಗುವ ಮೊದಲೇ ವಿಡಿಯೊ ರೆಕಾರ್ಡ್ ಮಾಡಲು ಸಹೋದರನ ಕೈಗೆ ನೀಡಿದ್ದಾಳೆ. ಈಕೆ ಪೂರ್ವನಿಯೋಜಿತವಾಗಿ ಅರ್ಚಕರ ಬಳಿ ಹೋಗಿ ನಾಟಕವಾಡಿ ಸುಳ್ಳು ಆರೋಪ ಮಾಡಿದ್ದಾಳೆ.
ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು
ಮಹಿಳೆ ಮತ್ತು ಆಕೆಯ ಕುಟುಂಬವು ದೇವಾಲಯದ ಭೂಮಿಯ ವಿವಾದದಲ್ಲಿ ಭಾಗಿಯಾಗಿದ್ದು ಅರ್ಚಕರ ಮೇಲೆ ಸುಳ್ಳು ಆರೋಪ ಹೊರಿಸಲು ಪ್ರಯತ್ನಿಸಿದೆ. ಈ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ದೇವಾಲಯದ ಜಮೀನಿಗೆ ಸಂಬಂಧಿಸಿದಂತೆ ವಿವಾದ ಈಗಾಗಲೇ ಆಗಿತ್ತು. ಹೀಗಾಗಿ ಅರ್ಚಕರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸಿ, ಆ ಜಮೀನನ್ನು ವಶಪಡಿಸಿಕೊಳ್ಳಲು ಈ ಇಡೀ ನಾಟಕವನ್ನು ಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅರ್ಚಕರ ವಿರುದ್ಧ ಸುಳ್ಳು ಆರೋಪ ಹೊರಿಸಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಒಬ್ಬರು, "ವಯಸ್ಸಾದ ಅರ್ಚಕರ ಮೇಲೆ ಸುಳ್ಳು ಆರೋಪ ಮಾಡುವುದು ಅಸಹ್ಯ" ಎಂದಿದ್ದಾರೆ. ಮೊತ್ತೊಬ್ಬರು, ʼʼಈ ರೀತಿ ನಾಟಕವಾಡಿ ಆರೋಪ ಹೊರಿಸಬೇಕೆ?ʼʼ ಎಂದು ಟೀಕಿಸಿದ್ದಾರೆ.