ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅರ್ಬನ್ ಕಂಪನಿ ಸಿಬ್ಬಂದಿಯಿಂದ ಚಿನ್ನದ ಉಂಗುರ ಕಳವು: ಖಡಕ್ ಕಾರ್ಯಾಚರಣೆ ನಡೆಸಿ ಆರೋಪಿ ಪತ್ತೆ ಹಚ್ಚಿದ ಪೊಲೀಸರು!

Viral News: ಮನೆಯ ಸ್ವಚ್ಛತೆಗಾಗಿ ಬಂದಿದ್ದ ಕ್ಲೀನಿಂಗ್ ಸಿಬ್ಬಂದಿ ವರಾಹ ವಲಯದಲ್ಲಿ ಮಹಿಳೆಯ ಮದುವೆಯ ಚಿನ್ನದ ಉಂಗುರವನ್ನು ಕಳವು ಮಾಡಿದ್ದಾರೆ. ಮನೆಯ ಮಾಲೀಕರು ತಕ್ಷಣವೇ ಆ್ಯಪ್ ಮೂಲಕ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ‌. ಆದರೆ ವಿಷಯವನ್ನು ಪರಿಶೀಲಿಸಲು ನಾಲ್ಕರಿಂದ ಐದು ದಿನ ಕಾಯುವಂತೆ ಗ್ರಾಹಕ ಸೇವಾ ವಿಭಾಗ ತಿಳಿಸಿದೆ.

ಇಂಟರ್ ನೆಟ್ ಚಿತ್ರ

ಬೆಂಗಳೂರು,ಅ.12: ಅರ್ಬನ್ ಕಂಪನಿಯ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಕಂಪನಿಯ ಸೇವಾ ಸಿಬ್ಬಂದಿಯೊಬ್ಬರು ಮನೆ ಸ್ವಚ್ಛಗೊಳಿಸುವ ಸಂದರ್ಭ ದಲ್ಲಿ ಚಿನ್ನದ ಉಂಗುರವನ್ನು ಕದ್ದ ಘಟನೆಯೊಂದು (Viral News) ನಡೆದಿದೆ. ಶುಭಮ್ ಮಜುಂದಾರ್ ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. 'ಅರ್ಬನ್ ಕಂಪನಿ'ಯ ಪ್ರೀಮಿಯಂ 'ಗೋಲ್ಡ್ ಎಕ್ಸ್‌ಪರ್ಟ್' ವಿಭಾಗದಡಿ 'ಇನ್‌ಸ್ಟಾಹೆಲ್ಪ್' ಸೇವೆಯ ಮೂಲಕ ಮನೆ ಸ್ವಚ್ಛತೆಗಾಗಿ ಬುಕ್ ಮಾಡಲಾಗಿತ್ತು. ಆದರೆ ಸಿಬ್ಬಂದಿಯೂ ಮನೆಯ ಸ್ವಚ್ಚತಾ ಕೆಲಸ ಮಾಡಿದ ನಂತ ಉಂಗುರ ಕಾಣೆಯಾಗಿದೆ ಎಂದು ದೂರಿದ್ದಾರೆ.

ಮನೆಯ ಸ್ವಚ್ಛತೆಗಾಗಿ ಬಂದಿದ್ದ ಕ್ಲೀನಿಂಗ್ ಸಿಬ್ಬಂದಿ ವರಾಹ ವಲಯದಲ್ಲಿ ಮಹಿಳೆಯ ಮದುವೆಯ ಚಿನ್ನದ ಉಂಗುರವನ್ನು ಕಳವು ಮಾಡಿದ್ದಾರೆ. ಮನೆಯ ಮಾಲೀಕರು ತಕ್ಷಣವೇ ಆ್ಯಪ್ ಮೂಲಕ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ‌. ಆದರೆ ವಿಷಯವನ್ನು ಪರಿಶೀಲಿಸಲು ನಾಲ್ಕರಿಂದ ಐದು ದಿನ ಕಾಯುವಂತೆ ಗ್ರಾಹಕ ಸೇವಾ ವಿಭಾಗ ತಿಳಿಸಿದೆ.

Viral Video: ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ

ಶುಭಮ್ ಮಜುಂದಾರ್ ಅವರು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಈ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಅರ್ಬನ್ ಕಂಪನಿ'ಯ ಪ್ರೀಮಿಯಂ 'ಗೋಲ್ಡ್ ಎಕ್ಸ್‌ಪರ್ಟ್' ವಿಭಾಗದಡಿ 'ಇನ್‌ಸ್ಟಾಹೆಲ್ಪ್'  ಸೇವೆಯ ಮೂಲಕ ಮನೆ ಸ್ವಚ್ಛಗೊಳಿಸಲು ಬುಕ್ ಮಾಡಲಾಗಿತ್ತು. ಆದರೆ ಅರ್ಬನ್ ಕಂಪನಿಯು ನನ್ನ ಮನೆಗೆ ಕಳ್ಳನೊಬ್ಬನನ್ನು ಕಳುಹಿಸಿಕೊಟ್ಟಿತು, ಆತ ನನ್ನ ಪತ್ನಿಯ ವಿವಾಹದ ಉಂಗುರವನ್ನು ಕದ್ದನು" ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಬಗ್ಗೆ ದೂರು ನೀಡಿದರೂ ಕಂಪನಿಯೂ ಅಪ್‌ಡೇಟ್ ನೀಡುವಲ್ಲಿ ವಿಫಲವಾಗಿದೆ‌ ಎಂದು 'ಅರ್ಬನ್ ಕಂಪನಿ'ಯನ್ನು ಟೀಕಿಸಿದ್ದಾರೆ. ಕೊನೆಗೆ ಕಂಪನಿಯ ಸಹಾಯಕ್ಕಾಗಿ ಕಾಯದೆ ಗ್ರಾಹಕರು ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿ ಉಂಗುರವನ್ನು ಪತ್ತೆ ಹಚ್ಚಿ ವಾಪಸ್ಸು ನೀಡಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅರ್ಬನ್ ಕಂಪನಿಯೂ ಪ್ರತಿಕ್ರಿಯೆ ನೀಡಿ ಕ್ಷಮೆಯಾಚಿಸಿತು. ತನಿಖೆ ನಡೆಸಲು ಅನುಕೂಲವಾಗುವಂತೆ ತಮ್ಮ ನೋಂದಾಯಿತ ಸಂಪರ್ಕ ಸಂಖ್ಯೆಯನ್ನು ನೇರ ಸಂದೇಶದ ಮೂಲಕ ಹಂಚಿಕೊಳ್ಳುವಂತೆ ಕೋರಿತು. ಈ ಘಟನೆ ಬಗ್ಗೆ ಆನೇಕರು ಕಿಡಿಕಾರಿದ್ದು ಇದೇ ರೀತಿಯ ಕಳ್ಳತನದ ಘಟನೆಗಳು ಮತ್ತು ಅರ್ಬನ್ ಕಂಪನಿಯಿಂದ ಸೂಕ್ತ ಬೆಂಬಲ ಸಿಗದಿರುವ ಬಗ್ಗೆ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಕಂಪನಿಯನ್ನು ಟ್ಯಾಗ್ ಮಾಡಿ ಇದೇ ನಿಮ್ಮ ಜವಾಬ್ದಾರಿಯೇ? ಎಂದು ಪ್ರಶ್ನಿಸಿದ್ದಾರೆ.