ಉತ್ತರ ಪ್ರದೇಶ, ಡಿ. 18: ನಮ್ಮ ದೇಶದ ಆರ್ಥಿಕತೆಯ ಮೇಲೆ ಅಬಕಾರಿ ಇಲಾಖೆಯ ಪಾಲುದಾರಿಕೆ ದೊಡ್ಡಮಟ್ಟದಲ್ಲೇ ಇದೆ. ದೇಶದಲ್ಲಿ ದಿನಕೂಲಿ ಮಾಡುವವರಿಂದ ಹಿಡಿದು ಲಕ್ಷಗಟ್ಟಲೆ ದುಡಿ ಯುವವರ ವರೆಗೂ ನಿತ್ಯ ಮದ್ಯ ಬೇಕೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇನ್ನು ಕೆಲವರು ಕುಡಿತದ ದಾಸರಾಗಿ ದುಡಿದ ಹಣವೆಲ್ಲ ಹೆಂಡದಂಗಡಿಗೆ ಸುರಿಯುವುದು ಇದೆ. ಕುಟುಂಬದ ಜೀವನ ಸೌಕರ್ಯಕ್ಕೆ ಹೆಂಗಸರು ಪ್ರಶ್ನೆ ಮಾಡಿದರೆ ಅವರಿಗೆ ಹೊಡೆದು ಬಡಿದು ಹಿಂಸಿಸುತ್ತಾರೆ. ಇಂತಹ ಮನಸ್ಥಿತಿಯಿಂದ ಬೇಸತ್ತ ಮಹಿಳೆಯರು ಮದ್ಯದಂಗಡಿಯ ವಿರುದ್ಧ ಪ್ರತಿಭಟನೆ ನಡೆಸಿ ಅಲ್ಲಿನ ಮದ್ಯದ ಬಾಟಲಿಗಳನ್ನು ಹೊರಗೆ ಎಸೆದ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಮಹುವಾ ಗ್ರಾಮದಲ್ಲಿ ನಡೆದಿದೆ. ಈ ಭಾಗದಲ್ಲಿ ಮದ್ಯ ಸೇವಿಸಿದ್ದ ಪುರುಷರು ನಿತ್ಯ ಕೌಟುಂಬಿಕ ಹಿಂಸೆ ನೀಡುತ್ತಿದ್ದು ಅದಕ್ಕೆ ಬೇಸತ್ತು ಮಹಿಳೆಯರು ತಮ್ಮ ಗ್ರಾಮದಲ್ಲಿದ್ದ ಮದ್ಯದ ಅಂಗಡಿ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ (Viral Video) ನಡೆಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಗ್ರಾ ಜಿಲ್ಲೆಯ ಮಹುವಾ ಗ್ರಾಮದಲ್ಲಿ ಇದ್ದ ಮದ್ಯದ ಅಂಗಡಿಗೆ ಅಲ್ಲಿನ ಸ್ಥಳೀಯ ನಿವಾಸಿಗಳು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು ನಿತ್ಯವು ಆ ರಸ್ತೆ ಮುಂಭಾಗ ಜಗಳ , ದಾಂದಲೆ ನಡೆಯುತ್ತಿತ್ತು. ಹೀಗಾಗಿ ಮಕ್ಕಳು ಮತ್ತು ಮಹಿಳೆಯರು ಆ ಭಾಗದಲ್ಲಿ ಓಡಾಡಲು ಕೂಡ ಹಿಂದೇಟು ಹಾಕುತ್ತಿದ್ದರು. ಅಷ್ಟು ಮಾತ್ರವಲ್ಲದೆ ಇಲ್ಲಿ ಕಂಠ ಪೂರ್ತಿ ಕುಡಿದು ಬರುವ ಪುರುಷರು ಮನೆಗೆ ಹೋಗಿ ಅಲ್ಲಿ ಹೆಂಡತಿ ಮಕ್ಕಳಿಗೆ ಹೊಡೆಯುವುದನ್ನು ಮಾಡುತ್ತಿದ್ದರು.. ಹೀಗಾಗಿ ಗ್ರಾಮದ ಮಹಿಳೆಯರೆಲ್ಲ ಒಟ್ಟಾಗಿ ಮದ್ಯದ ಅಂಗಡಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೋದಲ್ಲಿ ಕಿರೋಲಿ ಪ್ರದೇಶದ ಆಗ್ರಾ-ಜೈಪುರ ಹೆದ್ದಾರಿಯಲ್ಲಿರುವ ಮದ್ಯ ದಂಗಡಿಯ ಬಳಿ ನೂರಾರು ಮಹಿಳೆ ಯರು ಒಟ್ಟಿಗೆ ಜಮಾಯಿಸಿದ್ದ ದೃಶ್ಯಗಳನ್ನು ಕಾಣಬಹುದು. ಗ್ರಾಮಸ್ಥರು, ಮಹಿಳೆಯರೆಲ್ಲ ಸೇರಿಕೊಂಡು ಅಂಗಡಿಯೊಳಗೆ ನುಗ್ಗಿ ಮದ್ಯದ ಬಾಟಲಿಗಳನ್ನು ಹೊರಗೆ ಎಸೆದಿದ್ದಾರೆ. ಅದರ ಜೊತೆಗೆ ಅಂಗಡಿಯ ಸೈನ್‌ಬೋರ್ಡ್‌ಗೆ ಕೂಡ ಕೆಲವು ಮಹಿಳೆ ಯರು ಹಾನಿ ಮಾಡಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.
Gen-Zಗಳಿಗಾಗಿಯೇ ಬೆಂಗಳೂರಿನಲ್ಲಿ ತೆರೆಯಲಾಯ್ತು ಅಂಚೆ ಕಚೇರಿ; ಏನಿದು ಹೊಸ ಥೀಮ್?
ಮದ್ಯ ಸುಲಭವಾಗಿ ಸಿಗುವುದರಿಂದ ಅದನ್ನು ಕುಡಿದು ತಮ್ಮ ಮನೆಯ ಪುರುಷರು ಮನೆಗೆ ಬಂದು ಜಗಳಗಳನ್ನು ಮಾಡುತ್ತಾರೆ. ಇಲ್ಲ ಸಲ್ಲದ ಅಪವಾಧ ಮಾಡಿ ವಿವಾದಗಳನ್ನು ಕೂಡ ಮಾಡುತ್ತಾರೆ. ಮನೆಯ ಮಕ್ಕಳು , ವಯೋವೃದ್ಧರಿಗೆ ಮತ್ತು ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾರೆ. ಅಧಿಕಾರಿಗಳಿಗೆ ಈ ಬಗ್ಗೆ ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ನಾವೆಲ್ಲರೂ ಕೂಡಿ ಕೊಂಡು ಅನಿವಾರ್ಯವಾಗಿ ಇಂತಹ ನಿರ್ಧಾರ ಕೈಗೊಳ್ಳ ಬೇಕಾಯ್ತು ಎಂದು ಪ್ರತಿಭಟನಾ ನಿರತ ಮಹಿಳೆಯರು ಹೇಳಿಕೊಂಡಿದ್ದಾರೆ.
ಘಟನೆ ನಡೆದ ಕೂಡಲೇ ಪೊಲೀಸರಿಗೆ ಮಾಹಿತಿ ತಲುಪಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಆ ಸ್ಥಳಕ್ಕೆ ಕೂಡಲೇ ಪೊಲೀಸರು ಆಗಮಿಸಿದ್ದಾರೆ. ಅಧಿಕಾರಿಗಳು ಪ್ರತಿಭಟನಾಕಾರರ ಗುಂಪನ್ನು ಚದುರಿಸಿ ಪ್ರದೇಶದಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸಲು ಪ್ರಯತ್ನಿಸಿದ್ದಾರೆ. ಬಳಿಕ ಹಿಂಸಾಚಾರ ಮಾಡಿ ಮದ್ಯದ ಅಂಗಡಿ ವಿರುದ್ಧ ಪ್ರತಿಭಟಿಸುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ಅಲ್ಲಿನ ಗ್ರಾಮಸ್ಥರಿಗೆ ಮನದಟ್ಟು ಮಾಡಿದ್ದಾರೆ. ಮದ್ಯದ ಅಂಗಡಿಯ ಬಳಿ ಅಳವಡಿಸಲಾದ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಈ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಈ ಮೂಲಕ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ರುವುದಾಗಿ ಅಲ್ಲಿನ ಸ್ಥಳೀಯ ತಿಳಿಸಿದ್ದಾರೆ.