ನೋಯ್ಡಾ: ಜಿಮ್ ಒಳಗೆ ಇಬ್ಬರು ಮಹಿಳೆಯರ ನಡುವೆ ಜಡೆ ಜಗಳ ನಡೆದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ (Noida) ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಜಿಮ್‍ನಲ್ಲಿ ಯಂತ್ರವನ್ನು ಬಳಸುವ ಬಗ್ಗೆ ಇಬ್ಬರಲ್ಲಿ ವಿವಾದ ಉಂಟಾಗಿದ್ದು, ಪರಸ್ಪರ ಜಗಳವಾಡಿದ್ದಾರೆ. ಇಬ್ಬರೂ ಪರಸ್ಪರ ತಲೆಗೂದಲನ್ನು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.
ಈ ಘಟನೆಯ ವಿಡಿಯೊವನ್ನು ಎಕ್ಸ್ ( ಈ ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ಘಟನೆಯ ನಿಖರವಾದ ದಿನಾಂಕ ಮತ್ತು ಸ್ಥಳದ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಆದರೆ, ವಿಡಿಯೊ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ಒಬ್ಬ ಮಹಿಳೆಯು ಸ್ಕ್ವಾಟ್‌ಗಳನ್ನು ಮಾಡುತ್ತಿರುವುದು ಮತ್ತು ಇನ್ನೊಬ್ಬ ಮಹಿಳೆ ತನ್ನ ಸರದಿಗಾಗಿ ಕಾಯುತ್ತಿರುವುದನ್ನು ತೋರಿಸಲಾಗಿದೆ.
ವಿಡಿಯೊ ವೀಕ್ಷಿಸಿ:
ಮೊದಲ ಮಹಿಳೆ ತನ್ನ ವರ್ಕೌಟ್ ಮುಗಿಸಿ ಹೊರಡಲು ಸಿದ್ಧವಾಗುತ್ತಿದ್ದಂತೆ, ಎಲ್ಲಿಂದಲೋ ಬಂದ ಮಹಿಳೆಯೊಬ್ಬಳು ವರ್ಕೌಟ್ ಮಾಡಲು ಮುಂದಾದಳು. ಇದು ಸರದಿಗಾಗಿ ಕಾಯುತ್ತಿದ್ದಾಗ ಮಹಿಳೆಯ ಕೋಪಕ್ಕೆ ಕಾರಣವಾಯಿತು. ಇದರಿಂದ ಆಕೆ ಆ ಮಹಿಳೆ ಜೊತೆ ಜಗಳವಾಡಲು ಮುಂದಾದಳು. ಇಬ್ಬರ ನಡುವೆಯೂ ದೊಡ್ಡ ಜಗಳ ಉಂಟಾಯಿತು.
ಇಬ್ಬರೂ ಸ್ಕ್ವಾಟ್ ಮಾಡಲು ಯಂತ್ರವನ್ನು ಹಿಡಿದುಕೊಂಡರು. ಈ ವೇಳೆ ಪರಸ್ಪರ ತಳ್ಳಾಟ, ನೂಕಾಟ ನಡೆಯಿತು. ಇಬ್ಬರೂ ಪರಸ್ಪರರ ಕೂದಲು ಹಿಡಿದುಕೊಂಡು ಎಳೆದಾಡಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಜಿಮ್‌ನಲ್ಲಿದ್ದ ಇತರೆ ಮಹಿಳೆಯರು ಇವರಿಬ್ಬರ ಜಗಳವನ್ನು ನಿಲ್ಲಿಸಲು ಮುಂದಾದರು. ಇಬ್ಬರನ್ನೂ ಬೇರ್ಪಡಿಸಿ ಜಗಳ ನಿಲ್ಲಿಸಿದ್ದಾರೆ. ಈ ಘಟನೆ ಜಿಮ್ ಒಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ತರಹೇವಾರಿ ಪ್ರತಿಕ್ರಿಯಿಗಳನ್ನು ನೀಡಿದ್ದಾರೆ. ಕೆಲವರು ಇವರಿಬ್ಬರ ಜಗಳ ನೋಡಿ ತಮಾಷೆ ಮಾಡಿದರೆ, ಇನ್ನೂ ಕೆಲವರು ವ್ಯಂಗ್ಯವಾಡಿದ್ದಾರೆ. ಕೆಲವರು ನಂತರ ಬಂದ ಮಹಿಳೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಛೇ... ಇವೆರೆಂಥಾ ಮನಷ್ಯರು! ಗಾಯಗೊಂಡ ನವಿಲನ್ನು ರಕ್ಷಿಸುವ ಬದಲು ಗರಿಗಳನ್ನು ಕಿತ್ತ ಜನ