ಶಿಮ್ಲಾ, ಮಾ. 29: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಾಧುವಿನ ವೇಷ ಧರಿಸಿದ ವ್ಯಕ್ತಿಯೊಬ್ಬ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ವಿಡಿಯೊ ವೈರಲ್ (Viral News) ಆದ ಬಳಿಕ ಶಿಮ್ಲಾ ಪೊಲೀಸರು ಸಾಧುವಿನ ವೇಷ ಧರಿಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸದ್ಯ ಈ ವಿಡಿಯೊ ಹಿಮಾಚಲ ಪ್ರದೇಶದ ರಾಜಧಾನಿಯಲ್ಲಿ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಆಕ್ರೋಶ ಮತ್ತು ಗಂಭೀರ ಕಳವಳ ಹುಟ್ಟು ಹಾಕಿದೆ.
ಸಾಧುವಿನ ವೇಷ ಧರಿಸಿದ್ದ ವ್ಯಕ್ತಿ ರಸ್ತೆ ಬದಿ ನಿಂತು ಮಹಿಳೆಯರನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ. ಸನ್ಯಾಸಿಯಂತೆ ವೇಷ ಧರಿಸಿದ್ದ ಆತ ಬರಿಗಾಲಿನಲ್ಲಿ ನಡೆಯುತ್ತಿದ್ದ. ಈ ವ್ಯಕ್ತಿ ಮಾಲ್ ರಸ್ತೆಯಲ್ಲಿ ಮಹಿಳೆಯರು ನಡೆದುಕೊಂಡು ಹೋಗುತ್ತಿರುವಾಗ ಸ್ಪರ್ಶಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊ ನೋಡಿ:
ಪೊಲೀಸರು ಆರೋಪಿಯನ್ನು ರಾಜಸ್ಥಾನದ ಜಾಮ್ಡೋಲಿ ಗ್ರಾಮದ ನಿವಾಸಿ ನಾರಾಯಣ್ ದಾಸ್ ಎಂದು ಗುರುತಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಆ ವ್ಯಕ್ತಿ ಹಿಂದೆ 2025ರಲ್ಲಿ ಶಿಮ್ಲಾಕ್ಕೆ ಭೇಟಿ ನೀಡಿದ್ದ. ಆರೋಪಿಯು ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸಿದ ನಂತರ ಮುಂದೆ ಸಾಗುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಮಹಿಳೆ ಆತನ ವರ್ತನೆಯಿಂದ ಆಘಾತಕ್ಕೊಳಗಾಗಿದ್ದಾರೆ.
ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್ ಸಂಸದರು
ವಿಡಿಯೊ ವೈರಲ್ ಬಳಿಕ ನಂತರ ತ್ವರಿತವಾಗಿ ಕಾರ್ಯ ನಿರ್ವಹಿಸಿದ ಶಿಮ್ಲಾ ಪೊಲೀಸರು ಕಾರ್ಯಾಚರಣೆಯನ್ನು ಆರಂಭ ಮಾಡಿ ದುಷ್ಕರ್ಮಿಯನ್ನು ಬಂಧಿಸಿದ್ದಾರೆ. ಈ ಘಟನೆಯು ಶಿಮ್ಲಾದ ಅತ್ಯಂತ ಸುರಕ್ಷಿತ ಮತ್ತು ಪ್ರವಾಸಿ ತಾಣ ಮಾಲ್ ರೋಡ್‌ನಲ್ಲಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.