Viral Video: ಕೋಟೆಯಲ್ಲಿ ನಮಾಜ್ ಮಾಡಿದ ಮುಸ್ಲಿಂ ಮಹಿಳೆಯರು; ಗೋಮೂತ್ರದಿಂದ ಶುದ್ಧೀಕರಿಸಿದ ಬಿಜೆಪಿ ಸಂಸದೆ
ಐತಿಹಾಸಿಕ ಶನಿವಾರ್ ವಾಡಾದಲ್ಲಿ ಮುಸ್ಲಿಂ ಮಹಿಳೆಯರು ನಜಮ್ ಅರ್ಪಿಸುತ್ತಿರುವ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ನೇತೃತ್ವದ ಹಿಂದೂ ಸಂಘಟನೆಗಳ ಗುಂಪು "ಶುದ್ಧೀಕರಣ ಸಮಾರಂಭ" ನಡೆಸಿದೆ. ಇದು ಪುಣೆಯಲ್ಲಿ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

-

ಪುಣೆ: ಐತಿಹಾಸಿಕ ಶನಿವಾರ್ ವಾಡಾದಲ್ಲಿ ಮುಸ್ಲಿಂ ಮಹಿಳೆಯರು ನಮಾಜ್ (Namaz) ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ನೇತೃತ್ವದ ಹಿಂದೂ ಸಂಘಟನೆಗಳ ಗುಂಪು "ಶುದ್ಧೀಕರಣ ಸಮಾರಂಭ" ನಡೆಸಿದೆ. ಇದು ಪುಣೆಯಲ್ಲಿ ದೊಡ್ಡ (Viral video) ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರು ನಮಾಜ್ ಮಾಡಿದ ಸ್ವಚ್ಛಗೊಳಿಸಿ, ಶಿವವಂದನೆ ಮಾಡುವ ಮೂಲಕ ನಾಯಕರು 'ಶುದ್ಧೀಕರಣ' ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮರಾಠಾ ಸಾಮ್ರಾಜ್ಯದ ಸಂಕೇತವಾಗಿರುವ ಐತಿಹಾಸಿಕ ಪುಣೆ ಕೋಟೆಯಲ್ಲಿ ನಡೆದ ಘಟನೆಯು "ಪ್ರತಿಯೊಬ್ಬ ಪುಣೇಕರನಿಗೂ ಕಳವಳ ಮತ್ತು ಆಕ್ರೋಶದ ವಿಷಯವಾಗಿತ್ತು ಎಂದು ಹಿಂದೂ ಪರ ಕಾರ್ಯಕರ್ತರು ಹೇಳಿದ್ದಾರೆ.
ಇದು ದುರದೃಷ್ಟಕರ. ಶನಿವಾರ್ ವಾಡಾ ನಮಾಜ್ ಮಾಡಲು ಸೂಕ್ತ ಸ್ಥಳವಲ್ಲ. ಆಡಳಿತವು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ನಾವು ಶನಿವಾರ್ ವಾಡಾದಲ್ಲಿ ಶಿವವಂದನೆ ಮಾಡಿ ಸ್ಥಳವನ್ನು ಶುದ್ಧೀಕರಿಸಿದ್ದೇವೆ. ನಾವು ಕೇಸರಿ ಧ್ವಜ ಹಾರಿಸಲು ಪ್ರಯತ್ನಿಸಿದೆವು ಆದರೆ ಅಧಿಕಾರಿಗಳು ನಮ್ಮನ್ನು ತಡೆದರು. ಈ ಜನರು ಯಾವುದೇ ಸ್ಥಳದಲ್ಲಿ ನಮಾಜ್ ಮಾಡಿ ನಂತರ ಅದನ್ನು ವಕ್ಫ್ ಆಸ್ತಿಗೆ ಸೇರಿಸುತ್ತಾರೆ. ಹಿಂದೂ ಸಮುದಾಯವು ಜಾಗರೂಕವಾಗಿದೆ ಎಂದು ಮೇಧಾ ಕುಲಕರ್ಣಿ ಹೇಳಿದ್ದಾರೆ.
शनिवार वाड्यात नमाज पठण चालणार नाही, हिंदू समाज आता जागृत झाला आहे ! 🚩🚩
— Dr. Medha Kulkarni (@Medha_kulkarni) October 19, 2025
🚩चलो शनिवार वाडा! 🚩
रविवार, 19 ऑक्टोबर 2025
📍 शनिवार वाडा, कसबा पोलीस चौकीसमोर
🕓 सायंकाळी 4 वाजता
---
🔥 पुण्याचे वैभव – शनिवार वाडा
ऐतिहासिक वारसा स्थळ की गैर हिंदू प्रार्थना स्थळ?
सारसबाग येथे… pic.twitter.com/EObcXMZ6Rt
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಕೂಡ ಕೋಟೆಯಲ್ಲಿ ನಮಾಜ್ ಮಾಡುವ ಕೃತ್ಯವನ್ನು ಖಂಡಿಸಿ, "ಶನಿವಾರವಾಡಕ್ಕೆ ಒಂದು ಇತಿಹಾಸವಿದೆ. ಅದು ಶೌರ್ಯದ ಸಂಕೇತ. ಶನಿವಾರವಾಡ ಹಿಂದೂ ಸಮುದಾಯಕ್ಕೆ ಹತ್ತಿರವಾಗಿದೆ. ಹಿಂದೂಗಳು ಹಾಜಿ ಅಲಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದರೆ, ಮುಸ್ಲಿಮರ ಭಾವನೆಗಳಿಗೆ ನೋವಾಗುವುದಿಲ್ಲವೇ? ಮಸೀದಿಗೆ ಹೋಗಿ ನಮಾಜ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: Basanagouda Patil Yatnal: ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿ: ಸಿಎಂಗೆ ಶಾಸಕ ಯತ್ನಾಳ್ ಪತ್ರ
ಬಿಜೆಪಿ ಸಂಸದರ ಈ ಕ್ರಮ ವಿರೋಧ ಪಕ್ಷದ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಯಿತು, ಅಜಿತ್ ಪವಾರ್ ಅವರ ಎನ್‌ಸಿಪಿ ವಕ್ತಾರೆ ರೂಪಾಲಿ ಪಾಟೀಲ್ ಥೋಂಬ್ರೆ ಅವರು "ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು" ಪ್ರಯತ್ನಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದರು. "ಪುಣೆಯಲ್ಲಿ ಎರಡೂ ಸಮುದಾಯಗಳು ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತಿರುವಾಗ, ಅವರು ಹಿಂದೂ vs ಮುಸ್ಲಿಂ ಎಂಬ ವಿಷಯವನ್ನು ಎತ್ತುತ್ತಿದ್ದಾರೆ" ಎಂದು ಥೋಂಬ್ರೆ ಹೇಳಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ (ASI) ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೋಟೆಯಲ್ಲಿ ನಜಮ್ ಅರ್ಪಿಸಿದ ಅಪರಿಚಿತ ಮಹಿಳೆಯರ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋಟೆಯಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.