ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶಾಪಿಂಗ್‌ ಬ್ಯುಸಿಯಲ್ಲಿದ್ದ ಮಹಿಳೆಯರ ಜೊತೆ ಕಿಡಿಗೇಡಿಯ ಅನುಚಿತ ವರ್ತನೆ; ವಿಡಿಯೊ ವೈರಲ್

Women Slap and Kick Pervert: ಕರ್ವಾ ಚೌತ್ ಆಚರಿಸಲು ಮಹಿಳೆಯರು ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದರು. ಈ ವೇಳೆ ಜನದಟ್ಟಣೆಯ ಲಾಭ ಪಡೆದ ವ್ಯಕ್ತಿಯೊಬ್ಬ ಹೆಂಗಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳಾಮಣಿಗಳು ಆತನಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ.

ಲಖನೌ: ಅಕ್ಟೋಬರ್ 10, ಶುಕ್ರವಾರದಂದು ದೇಶಾದ್ಯಂತ ಕರ್ವಾ ಚೌತ್ ಆಚರಿಸಲಾಗುತ್ತದೆ. ಕರ್ವಾ ಚೌತ್ (Karwa Chauth) ದಿನದಂದು ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಆಚರಿಸುತ್ತಾರೆ. ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಅಗತ್ಯ ವಸ್ತುಗಳನ್ನು ಖರೀದಿಸಲು ಮಹಿಳೆಯರು ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದಾರೆ. ಈ ಸಂಭ್ರಮದ ನಡುವೆ, ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಹೆಂಗಳೆಯರು ಧರ್ಮದೇಟು ನೀಡಿರುವ ವಿಡಿಯೊ ವೈರಲ್ (Viral Video) ಆಗಿದೆ.

ಮಹಿಳೆಯರು ಹಬ್ಬದ ಸಂಭ್ರಮದಲ್ಲಿ ತೊಡಗಿದ್ದರೆ, ವ್ಯಕ್ತಿಯೊಬ್ಬ ಜನಸಂದಣಿಯ ಲಾಭ ಪಡೆದು ಮಾರುಕಟ್ಟೆಯಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಾರುಕಟ್ಟೆಯಲ್ಲಿದ್ದ ಮಹಿಳೆಯರು ಅವನಿಗೆ ತಕ್ಕ ಪಾಠ ಕಲಿಸಿದರು. ಹೆಂಗಳೆಯರು ಆತನಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಈ ಘಟನೆ ನಡೆದಿದೆ.

ವೈರಲ್ ಆಗಿರುವ ಈ ವಿಡಿಯೊದಲ್ಲಿ, ಜನಸಮೂಹದ ಮಧ್ಯೆ, ಅದರಲ್ಲೂ ಹೆಚ್ಚಾಗಿ ಮಹಿಳೆಯರೇ ಇರುವ ಸ್ಥಳದಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಆತನ ಕಾಲರ್ ಪಟ್ಟಿ ಹಿಡಿದ ಮಹಿಳಾಮಣಿಯರು ಅವನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೆ, ಹಿಗ್ಗಾಮುಗ್ಗಾ ಹಲ್ಲೆ ಮಾಡುವ ಮೂಲಕ ಆತನ ಗ್ರಹಚಾರ ಬಿಡಿಸಿದ್ದಾರೆ. ಜನದಟ್ಟಣೆಯ ಮಾರುಕಟ್ಟೆಯಲ್ಲಿ ಆ ವ್ಯಕ್ತಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಲಾಗಿದೆ.

ವಿಡಿಯೊ ವೀಕ್ಷಿಸಿ:



ವಿಡಿಯೊದಲ್ಲಿ, ಆ ವಿಕೃತ ವ್ಯಕ್ತಿ ತನ್ನನ್ನು ಹೊಡೆಯುತ್ತಿದ್ದ ಮಹಿಳೆಯರ ಬಳಿ ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಿರುವುದು ಕಂಡುಬರುತ್ತದೆ. ತನ್ನ ನಾಚಿಕೆಗೇಡಿನ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾನೆ. ಸ್ವಲ್ಪ ಸಮಯದವರೆಗೆ ಅವನನ್ನು ಹೊಡೆದ ನಂತರ, ಮಹಿಳೆಯರು ಅವನನ್ನು ಬಿಡುಗಡೆ ಮಾಡಿದರು. ನಂತರ ಅವನು ಸ್ಥಳದಿಂದ ಓಡಿಹೋದನು.

ಇದನ್ನೂ ಓದಿ: Viral Video: ಉಬರ್‌ ಆಟೋ ಚಾಲಕನಿಂದ ದೌರ್ಜನ್ಯ- ಬೆಂಗಳೂರಿನಲ್ಲಾದ ಕರಾಳ ಅನುಭವವನ್ನು ಹಂಚಿಕೊಂಡ ಮಹಿಳೆ

ವಿಡಿಯೊದಲ್ಲಿ, ಮಹಿಳೆಯರು ಆತನಿಗೆ ಹೊಡೆಯುತ್ತಿರುವಾಗ ಇತರ ಮಹಿಳೆಯರು ಹಲ್ಲೆಯನ್ನು ಆನಂದಿಸುತ್ತಿರುವುದು ಕಂಡುಬರುತ್ತದೆ. ಆ ವ್ಯಕ್ತಿ ತನ್ನ ಬಿಡುಗಡೆಗಾಗಿ ಬೇಡಿಕೊಳ್ಳುತ್ತಿರುವಾಗ ಅವರು ನಗುತ್ತಿರುವಂತೆ ಕಂಡುಬರುತ್ತದೆ. ಆದರೂ ಆ ವ್ಯಕ್ತಿ ಮಾಡಿದ್ದು ಸರಿಯಲ್ಲ. ಆತನಿಗೆ ಹೆಂಗಳೆಯರು ತಕ್ಕಶಾಸ್ತಿ ಮಾಡಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮ ಕೈಗೊಂಡಿರುವ ಬಗ್ಗೆ ವರದಿಗಳು ಬಂದಿಲ್ಲ. ಹಾಗೆಯೇ ಈ ವಿಷಯದ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿದೆಯೇ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಈ ನಾಚಿಕೆಗೇಡಿನ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯ ಗುರುತು ಕೂಡ ತಿಳಿದಿಲ್ಲ. ಆದರೆ, ಈ ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ವಿಡಿಯೊ ಭಾರಿ ವೈರಲ್ ಆಗಿದೆ. ನೆಟ್ಟಿಗರು ಆತನ ವಿರುದ್ಧ ಮಹಿಳೆಯರು ಕ್ರಮ ತೆಗೆದುಕೊಂಡಿದ್ದನ್ನು ಅಭಿನಂದಿಸಿದ್ದಾರೆ. ತಪ್ಪಿಗೆ ತಕ್ಕ ಶಾಸ್ತಿಯಾಗಿದೆ ಎಂದಿದ್ದಾರೆ.