ಮುಂಬೈ, ಆ. 24: ಲೋಕಲ್ ರೈಲೊಂದರಲ್ಲಿ ಮಹಿಳೆಯರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವ ವಿಡಿಯೊ ವೈರಲ್ (Viral News) ಆಗಿದೆ. ಕಿಕ್ಕಿರಿದ ರೈಲಿನ ಬಾಗಿಲಲ್ಲಿ ನೇತಾಡಿಕೊಂಡು ಬಳಿ ಮಹಿಳಾ ಪ್ರಯಾಣಿಕರು ನೇತಾಡಿಕೊಂಡು ಪ್ರಯಾಣಿಸುತ್ತಿದ್ದಾರೆ. ಈ ದೃಶ್ಯ ನೋಡಿ ನೆಟ್ಟಿಗರು ಸಾರ್ವಜನಿಕ ಸಾರಿಗೆಯ ಸುರಕ್ಷತೆ ಬಗ್ಗೆ ಕಳವಳವನ್ನು ಹುಟ್ಟು ಹಾಕಿದೆ. ಜನದಟ್ಟಣೆಯ ಸಮಯದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕುರಿತು ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಮುಂಬೈಯ ಸಬರ್ಬನ್ ಲೋಕಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ಮಹಿಳೆಯರು ಬಾಗಿಲ ಹೊರ ಭಾಗದಲ್ಲಿ ಅಪಾಯಕಾರಿಯಾಗಿ ಜೋತುಬಿದ್ದು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಸ್ವಲ್ಪ ಕೈ ಬಿಟ್ಟರೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಕಿಕ್ಕಿರಿದ ರೈಲಿನಲ್ಲಿ ಮಹಿಳೆಯರು ತುಂಬಿಕೊಂಡಿರುವ ಈ ಕ್ಲಿಪ್ ಗಂಭೀರ ಸುರಕ್ಷತಾ ಕಾಳಜಿಯನ್ನು ಹುಟ್ಟು ಹಾಕಿದೆ.
ವಿಡಿಯೊ ನೋಡಿ:
ಪಲ್ಲವಿಕಾ ಎಂಬವರು ತಮ್ಮ ಖಾತೆಯಲ್ಲಿ ಈ ವಿಡಿಯೊ ಶೇರ್ ಮಾಡಿದ್ದು ʼನಾರಿ ಶಕ್ತಿʼ ಎಂದು ಶೀರ್ಷಿಕೆ ನೀಡಿದ್ದಾರೆ. ಆದರೆ, ಈ ದೃಶ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಇದು ನಾರಿಯರ ಶಕ್ತಿ ಅಲ್ಲ, ಇದು ಮೂಲಭೂತ ಸೌಕರ್ಯಗಳ ಕೊರತೆ ಎಂದು ಸಾರಿಗೆ ಸೌಲಭ್ಯದ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಪ್ರಾಣಕ್ಕೆ ಸಂಚಕಾರ ತರುವ ಇದನ್ನು ‘ಸಾಹಸ’ ಅಥವಾ ಶಕ್ತಿ ವೈಭವೀಕರಿಸುವುದನ್ನು ಹಲವರು ಖಂಡಿಸಿದ್ದಾರೆ.
ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ಇದು ಧೈರ್ಯವೋ ಅಥವಾ ಮೂರ್ಖತನವೋ? ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ ವಾಡುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಒಬ್ಬರು, ʼʼಇಂತಹ ಅಪಾಯಕಾರಿ ಸಾಹಸಗಳನ್ನು ತಪ್ಪಿಸಬೇಕು. ರೈಲು ಮತ್ತೆ ಸಿಗುತ್ತದೆ. ಆದರೆ ಜೀವ ಮತ್ತೆ ಬರುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. ಈ ಘಟನೆಯು ಮತ್ತೊಮ್ಮೆ ಮುಂಬೈ ಜನರು ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆದಿದೆ. ವಿಶೇಷವಾಗಿ ರೈಲುಗಳು ಇಲ್ಲಿನ ಜನರ ದೈನಂದಿನ ಪ್ರಯಾಣದ ಅತ್ಯಗತ್ಯ ಭಾಗವಾಗಿದೆ.