ಹೊಸ ದೆಹಲಿ,ಮೇ 28: ಸಾಮಾನ್ಯವಾಗಿ ಯುವತಿಯರ ಫ್ರೆಂಡ್ಸ್ ಪಾರ್ಟಿ ಎಂದಾಗ ರುಚಿಕರವಾದ ಆಹಾರ,ಹರಟೆ, ಡ್ಯಾನ್ಸ್, ಮೋಜು- ಮಸ್ತಿಗಳೇ ನೆನಪು ಆಗುತ್ತವೆ. ಆದರೆ ಇಲ್ಲೊಂದು ಯುವತಿಯರ ಗುಂಪು ಇದನ್ನೆಲ್ಲ ಬದಿಗೊತ್ತಿ ಜೈ ಶ್ರೀ ರಾಮ್ ಥೀಮ್ ಇಟ್ಟು ಪಾರ್ಟಿ ನಡೆಸಿದ್ದಾರೆ. ಕೋಲ್ಕತ್ತಾದ ಕೆಫೆಯೊಂದಕ್ಕೆ ಕೇಸರಿ ಉಡುಪಿನಲ್ಲಿ ಬಂದ ಮಹಿಳೆಯರ ಗುಂಪು ಕೆಫೆಯನ್ನು ಕೇಸರಿ ಮಯ ವಾತಾವರಣವನ್ನು ಸೃಷ್ಟಿ ಮಾಡಿದೆ.ಕೆಫೆಯ ಅಲಂಕಾರದಿಂದ ಹಿಡಿದು ಅಲ್ಲಿನ ಎಲ್ಲವೂ ಕೇಸರಿ ಬಣ್ಣದಲ್ಲೆ ಕಂಗೊಳಿಸುತ್ತಿತ್ತು. ಸದ್ಯ ಇದರ ವಿಡಿಯೊ (Viral News) ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.
ಕೇಸರಿ ಉಡುಪಿನಲ್ಲಿ ಬಂದ ಮಹಿಳೆಯರ ಗುಂಪು ಕೆಫೆಯನ್ನು ರೋಮಾಂಚಕ ದೃಶ್ಯವನ್ನಾಗಿ ಮಾಡಿದೆ..ಈ ಕ್ಲಿಪ್‌ನಲ್ಲಿ ಅವರು ಪಾರ್ಟಿಯನ್ನು ಆನಂದಿಸುತ್ತಿರುವುದನ್ನು ತೋರಿಸಲಾಗಿದೆ. ಆಧುನಿಕ ಈ ಕೆಫೆಯೊಂದರಲ್ಲಿ ಡ್ಯಾನ್ಸ್ , ಮೋಜು ಮಸ್ತಿ ನಡೆಯುವ ಬದಲಿಗೆ ಭಕ್ತಿಗೀತೆಗಳು ಮತ್ತು ಜೈಕಾರಗಳ ಧ್ವನಿ ಮೊಳಗಿದ್ದು, ಸಾಂಪ್ರದಾಯಿಕ ಶ್ರದ್ಧೆ ಹಾಗೂ ಆಧುನಿಕ ಮನರಂಜನೆಯ ಸಮ್ಮಿಶ್ರಣದಂತಿತ್ತು.
ವಿಡಿಯೋ ನೋಡಿ:
ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಮಹಿಳೆಯರೆಲ್ಲರೂ ಸಾಂಪ್ರದಾಯಿಕ ಕೇಸರಿ ಬಣ್ಣದ ಉಡುಪುಗಳನ್ನು ಧರಿಸಿ ಕೆಫೆಗೆ ಬಂದಿದ್ದರು. ಇಲ್ಲಿ ಸಂಪೂರ್ಣವಾಗಿ ಭಕ್ತಿಗೆ ಆಧ್ಯತೆಯನ್ನು ನೀಡ ಲಾಗಿತ್ತು...ಸಾಂಸ್ಕೃತಿಕ ಗುರುತು ಮತ್ತು ಧಾರ್ಮಿಕತೆಯನ್ನು ಸಾರುವ ಈ ಕಾರ್ಯಕ್ರಮಕ್ಕೆ ವಿಶಿಷ್ಟವಾದ ಸ್ಪರ್ಶವನ್ನು ನೀಡಿದೆ. ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಸಾಮಾಜಿಕ ಸಂಪ್ರ ದಾಯಗಳು, ಇಂತಹ ಆಚರಣೆಗಳು ಜನರಿಗೆ ಸಂದೇಶವನ್ನು ನೀಡುವಂತಿದೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫಿದಾ ಆಗಿದ್ದಾರೆ. ಬಳಕೆದಾರರೊಬ್ಬರು ಇಂತಹ ಮಹಿಳೆಯರು ಸಮಾಜಕ್ಕೆ ಬೇಕು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಮಹಿಳೆಯರ ಆಚರಣೆ ವಿಭಿನ್ನವಾಗಿದೆ ಎಂದು ಬರೆದಿದ್ದಾರೆ. ಒಟ್ಟಾರೆಯಾಗಿ, ಕೋಲ್ಕತ್ತಾದ ಕೆಫೆಯೊಂದರಲ್ಲಿ ನಡೆದ ಈ ಸಣ್ಣ ಪಾರ್ಟಿ, ತನ್ನ ಸೃಜನಶೀಲತೆ ಮತ್ತು ಭಕ್ತಿಯ ವಿಭಿನ್ನ ಶೈಲಿಯಿಂದಾಗಿ ದೇಶಾದ್ಯಂತ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.