ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೊದಲ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮುಳುಗಡೆಯಾದ 10 ಕೋಟಿ ರೂ. ಮೌಲ್ಯದ ಐಷಾರಾಮಿ ಹಡಗು

ಟರ್ಕಿಯ ಜೊಂಗುಲ್ಡಾಕ್ ಕರಾವಳಿಯಲ್ಲಿ ಡಾಲ್ಸ್ ವೆಂಟೋ ಎಂಬ ಐಷಾರಾಮಿ ಹಡಗೊಂದು ಮುಳುಗಡೆಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮುಳುಗಡೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಮೊಬೈಲ್ ಫೋನ್‌ನಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.

ಇಸ್ತಾಂಬುಲ್: ಟರ್ಕಿಯ (Turkey) ಜೊಂಗುಲ್ಡಾಕ್ (Zonguldak) ಕರಾವಳಿಯಲ್ಲಿ ಡಾಲ್ಸ್ ವೆಂಟೋ ಎಂಬ ಐಷಾರಾಮಿ ಹಡಗು (luxury yacht) ತನ್ನ ಮೊದಲ ಪ್ರಯಾಣವನ್ನು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮುಳುಗಿದ ವಿಡಿಯೋ ವೈರಲ್ ಆಗಿದೆ. ಸುಮಾರು 1 ಮಿಲಿಯನ್ ಡಾಲರ್ (10 ಕೋಟಿ ರೂ.) ಮೌಲ್ಯದ 24 ಮೀಟರ್ ಉದ್ದದ ಈ ಯಾಚ್, ಪ್ರವಾಸಿಗರ ಜನಪ್ರಿಯ ತಾಣವಾದ ಜೊಂಗುಲ್ಡಾಕ್‌ನಲ್ಲಿ ಮುಳುಗಿದೆ.

ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ಹಡಗು ಓರೆಯಾಗಿ ಮುಳುಗುವುದನ್ನು ಕಾಣಬಹುದಾಗಿದೆ. ಕರಾವಳಿ ರಕ್ಷಣಾ ದಳ ಮತ್ತು ವೈದ್ಯಕೀಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದರೂ ಅವಘಡವನ್ನು ತಪ್ಪಿಸುವಲ್ಲಿ ವಿಫಲರಾಗಿದ್ದಾರೆ.

ವರದಿಯ ಪ್ರಕಾರ, ಹಡಗಿನ ಮಾಲೀಕ, ಕ್ಯಾಪ್ಟನ್ ಮತ್ತು ಇಬ್ಬರು ಸಿಬ್ಬಂದಿ ಸೇರಿ ನಾಲ್ಕು ಜನರಿದ್ದು, ಎಲ್ಲರೂ ಜಿಗಿದು ಈಜಿ ಸುರಕ್ಷಿತವಾಗಿ ದಡ ತಲುಪಿದ್ದಾರೆ. ಮುಳುಗಡೆಯ ನಿಖರ ಕಾರಣ ತಿಳಿದುಬಂದಿಲ್ಲ. ತಾಂತ್ರಿಕ ತಪಾಸಣೆಯಿಂದ ಘಟನೆಯ ಸಂದರ್ಭಗಳನ್ನು ತನಿಖೆ ಮಾಡಲಾಗುತ್ತದೆ.



ಈ ಸುದ್ದಿಯನ್ನು ಓದಿ: Viral Video: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಠಾಣೆಯೊಳಗೆ ಹಲ್ಲೆ ನಡೆಸಿದ್ದ ಪೊಲೀಸರು; ಹಳೆಯ ವಿಡಿಯೊ ಫುಲ್‌ ವೈರಲ್‌

2024ರಲ್ಲಿ ಮೆಡ್ ಯಿಲ್ಮಾಜ್ ಶಿಪ್‌ಯಾರ್ಡ್‌ನಲ್ಲಿ ಈ ಹಡಗಿನ ನಿರ್ಮಾಣ ಆರಂಭವಾಗಿತ್ತು. ಇಸ್ತಾಂಬುಲ್‌ನಿಂದ ಮಾಲೀಕರಿಗೆ ಹಸ್ತಾಂತರಗೊಂಡ ಈ 160 ಜಿಟಿ ಮೋಟಾರ್ ಯಾಚ್, ಉಕ್ಕಿನ ಗಾಡಿಯಾದ ಹಲ್ ಮತ್ತು ಅಲ್ಯೂಮಿನಿಯಂ ಸೂಪರ್‌ಸ್ಟ್ರಕ್ಚರ್ ಹೊಂದಿದೆ.

ನ್ಯೂಯಾರ್ಕ್‌ನಲ್ಲಿ ಮೀನುಗಾರಿಕೆ ದೋಣಿ ದುರಂತ

ಇದೇ ರೀತಿಯ ಇನ್ನೊಂದು ಘಟನೆಯಲ್ಲಿ, ಕಳೆದ ತಿಂಗಳು ನ್ಯೂಯಾರ್ಕ್‌ನ ಶೀಪ್‌ಸ್‌ಹೆಡ್ ಬೇಯಿನ ಪಿಯರ್ 1ರಲ್ಲಿ 11 ಪ್ರಯಾಣಿಕರಿದ್ದ ಮೀನುಗಾರಿಕೆ ದೋಣಿಯೊಂದು ಮುಳುಗಿತ್ತು. NYPD ಹಾರ್ಬರ್ ಯೂನಿಟ್ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿತು. ಯಾವುದೇ ಗಾಯಯ ದಬಗ್ಗೆ ವರದಿಯಾಗಿರಲಿಲ್ಲ. ಆದರೆ ಒಬ್ಬ ಪ್ರಯಾಣಿಕನನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಈ ಎರಡೂ ಘಟನೆಗಳು ಸಮುದ್ರ ಯಾನದ ಸುರಕ್ಷತೆಯ ಬಗ್ಗೆ ಚರ್ಚೆಗೆ ಕಾರಣವಾಗಿವೆ. ಟರ್ಕಿಯ ಯಾಚ್ ದುರಂತದ ತನಿಖೆಯ ಫಲಿತಾಂಶವನ್ನು ಎಲ್ಲರೂ ಎದುರುನೋಡುತ್ತಿದ್ದಾರೆ. ಇದು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಸಹಾಯಕವಾಗಬಹುದು ಎನ್ನುತ್ತಾರೆ ತಜ್ಞರು.