ಭೋಪಾಲ್, ಡಿ. 21: ಯೋಗ ಗುರು ರಾಮ್‌ದೇವ್ (Yoga guru Baba Ramdev) ಪತ್ರಕರ್ತರೊಬ್ಬರಿಗೆ ಕುಸ್ತಿ ಪಂದ್ಯಕ್ಕೆ ಸವಾಲು ಹಾಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸದ್ಯ ಪಂದ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral video) ಆಗಿದೆ. ಮಾಧ್ಯಮ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, 59 ವರ್ಷದ ರಾಮ್‌ದೇವ್ ವೇದಿಕೆಯಲ್ಲಿದ್ದ ಪತ್ರಕರ್ತರೊಬ್ಬರನ್ನು ಕುಸ್ತಿ (wrestling) ಪಂದ್ಯಕ್ಕೆ ಆಹ್ವಾನಿಸಿದರು. ಅವರ ಎದುರಾಳಿಯು ಅನುಭವಿ ಕುಸ್ತಿಪಟು ಆಗಿದ್ದರು.
ಮಧ್ಯ ಪ್ರದೇಶದ ಇಂದೋರ್‌ನ ಪತ್ರಕರ್ತ ಜೈದೀಪ್ ಕಾರ್ಣಿಕ್, ಕುಸ್ತಿ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೊದಲ್ಲಿ ರಾಮ್‌ದೇವ್ ಜೈದೀಪ್ ಕಾರ್ಣಿಕ್‌ನನ್ನು ಸೋಲಿಸಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ ಕಾರ್ಣಿಕ್ ಅವರನ್ನು ನೆಲಕ್ಕೆ ಬೀಳಿಸುವಲ್ಲಿ ಯಶಸ್ವಿಯಾದರು. ಆದರೆ ಪತ್ರಕರ್ತ ತನ್ನನ್ನು ತಾನು ನಿಯಂತ್ರಿಸಿಕೊಂಡರು. ಪಂದ್ಯವು ಸೌಹಾರ್ದಯುತವಾಗಿ ಕೊನೆಗೊಂಡಿತು. ಇಬ್ಬರು ಆಟಗಾರರು ನೆಲಕ್ಕೆ ಬಿದ್ದು ನಂತರ ನಗುತ್ತಾ ಮೇಲೆದ್ದರು.
ಕರುವಿಗೆ ಟೂತ್‌ಬ್ರಷ್‌ನಿಂದ ಹಲ್ಲುಜ್ಜಿದ ಪುಟ್ಟ ಬಾಲಕಿ: ಮುಗ್ಧತೆಗೆ ಮನಸೋತ ನೆಟ್ಟಿಗರು!
ಈ ವಿಡಿಯೊವು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯಿತು. ಕೆಲವರು ರಾಮದೇವ್ ಅವರ ದೈಹಿಕ ಸದೃಢತೆಯನ್ನು ಶ್ಲಾಘಿಸಿದರು. ಯಾರು ಏನೇ ಹೇಳಲಿ, ಬಾಬಾ ರಾಮದೇವ್ ಈ ವಯಸ್ಸಿನಲ್ಲೂ ತುಂಬಾ ಫಿಟ್ ಆಗಿದ್ದಾರೆ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ರಾಮ್‌ದೇವ್ ಪತ್ರಕರ್ತನಿಗೆ ಕುಸ್ತಿ ಬರುವುದಿಲ್ಲ ಎಂದು ಭಾವಿಸಿದಂತೆ ಕಾಣುತ್ತಿದೆ ಎಂದು ಇತರರು ಟೀಕಿಸಿದ್ದಾರೆ.
ವಿಡಿಯೊ ಇಲ್ಲಿದೆ:
ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಬಾಬಾ ಸುಲಭವಾಗಿ ಬೇಟೆಯಾಡಬಹುದೆಂದು ಭಾವಿಸಿದ್ದರು. ಆದರೆ ಕೊನೆಗೆ ತಮ್ಮನ್ನು ತಾವು ಅಪಹಾಸ್ಯ ಮಾಡಿಕೊಂಡರು ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ಪತ್ರಕರ್ತ ಈ ಘಟನೆಯನ್ನು ಜೀವಮಾನವಿಡೀ ನೆನಪಿಸಿಕೊಳ್ಳುತ್ತಾನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಜೈದೀಪ್ ಕಾರ್ಣಿಕ್ ಅವರ ತಂದೆ ಸುಭಾಷ್ ಕಾರ್ಣಿಕ್ ಒಬ್ಬ ಪ್ರಸಿದ್ಧ ಕುಸ್ತಿಪಟು ಮತ್ತು ಮಧ್ಯಪ್ರ ದೇಶದ ಕ್ರೀಡೆಯ ಬಗ್ಗೆ ಬರೆಯುತ್ತಿದ್ದ ಅತ್ಯಂತ ಗೌರವಾನ್ವಿತ ಬರಹಗಾರರಲ್ಲಿ ಒಬ್ಬರು. ಅವರ ಅಜ್ಜ ರಂಗನಾಥ್ ಕಾರ್ಣಿಕ್ ಅವರನ್ನು ಕುಸ್ತಿಯ ದಂತಕಥೆ ಎಂದೇ ಪರಿಗಣಿಸಲಾಗಿತ್ತು.
ಶೀತ ಮತ್ತು ಕೆಮ್ಮಿಗೆ ಮದ್ದು ತಿಳಿಸಿದ ಬಾಬಾ ರಾಮ್‌ದೇವ್
ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮ್‍ದೇವ್ ಯಾವಾಗಲೂ ಆಯುರ್ವೇದ ಮತ್ತು ವಿವಿಧ ಕಾಯಿಲೆಗಳಿಗೆ ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾತನಾಡುತ್ತಾರೆ. ಪ್ರಸ್ತುತ, ಚಳಿಗಾಲ ಮತ್ತು ಮಾಲಿನ್ಯದಿಂದಾಗಿ, ಮಕ್ಕಳು ಸೇರಿದಂತೆ ಅನೇಕ ಜನರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಬಾಬಾ ರಾಮದೇವ್ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎನ್ನುವುದರ ಬಗ್ಗೆ ವಿಡಿಯೊದಲ್ಲಿ ಮಾಹಿತಿ ನೀಡಿದ್ದಾರೆ.
ಬಾಲ್ಯದಿಂದಲೂ ಯಾರಾದರೂ ಶೀತದಿಂದ ಬಳಲುತ್ತಿದ್ದರೆ, ಅದು ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇವುಗಳನ್ನು ನಿವಾರಿಸಲು, ಕಾಕರಸಿಂಘಿ, ಮುಲೇತಿ, ಸಾಸಿವೆ, ಅರಿಶಿನ ಮತ್ತು ಹಸುವಿನ ತುಪ್ಪದ ಮಿಶ್ರಣವನ್ನು ಬಳಸಲು ಅವರು ಸಲಹೆ ನೀಡಿದ್ದಾರೆ. ಈ ಮಿಶ್ರಣಕ್ಕೆ ಪತಂಜಲಿಯ ಜ್ಯೋತಿಷ್ಮತಿ ಎಣ್ಣೆಯನ್ನು ಸೇರಿಸುವುದರಿಂದ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಈ ಮಿಶ್ರಣದ ಹೊಗೆಯನ್ನು ಒಂದು ಮೂಗಿನ ಹೊಳ್ಳೆಯ ಮೂಲಕ ಎಳೆದುಕೊಳ್ಳಬೇಕು ಮತ್ತು ಇನ್ನೊಂದು ಮೂಗಿನ ಹೊಳ್ಳೆಯ ಮೂಲಕ ಹೊರಹಾಕಬೇಕು. ಇದು ದೀರ್ಘ ಕಾಲದ ಶೀತ, ಕಫ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ.