ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾರ್ವಜನಿಕ ಸ್ಥಳದಲ್ಲಿ ಎಲ್ಲರೆದುರೇ ಯುವಕ-ಯುವತಿಯ ರೊಮ್ಯಾನ್ಸ್; ಮಣಿಪಾಲದಲ್ಲಿ ಕಂಡುಬಂದ ದೃಶ್ಯಕ್ಕೆ ನೆಟ್ಟಿಗರು ಕಿಡಿಕಿಡಿ

Viral Video: ಕೆಲ ಯುವಕ-ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಬಸ್ಸಿನಲ್ಲಿ ಪ್ರೇಮಿಗಳು ಮೈಮರೆತು ಚುಂಬಿಸುವುದು, ರೈಲಿನಲ್ಲಿ ಪರಸ್ವರ ಅಪ್ಪಿಕೊಳ್ಳುವುದು ಹೀಗೆ ನಾನಾ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉಡುಪಿಯ ಮಣಿಪಾಲದಲ್ಲಿ ಯುವ ಜೋಡಿಯೊಂದು ಸಾರ್ವಜನಿಕವಾಗಿಯೇ ರೊಮ್ಯಾನ್ಸ್‌ ಮಾಡಿದೆ.

ಸಾರ್ವಜನಿಕ ಸ್ಥಳದಲ್ಲೇ ಯುವಕ-ಯುವತಿಯ ರೊಮ್ಯಾನ್ಸ್

ಮಣಿಪಾಲ,ಏ. 25: ಇತ್ತೀಚೆಗೆ ಯುವ ಜನತೆ ಪ್ರೀತಿಯ ಹೆಸರಿನಲ್ಲಿ ಅತಿರೇಕದ ವರ್ತನೆ ತೋರುತ್ತಿರುವ ಘಟನೆ ಹೆಚ್ಚಾಗಿದೆ. ಕೆಲ ಯುವಕ-ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಬಸ್ಸಿನಲ್ಲಿ ಪ್ರೇಮಿಗಳು ಮೈಮರೆತು ಚುಂಬಿಸುವುದು, ರೈಲಿನಲ್ಲಿ ಪರಸ್ವರ ಅಪ್ಪಿಕೊಳ್ಳುವುದು ಹೀಗೆ ನಾನಾ ವಿಡಿಯೊಗಳು ವೈರಲ್ (Viral News) ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉಡುಪಿಯ ಮಣಿಪಾಲದಲ್ಲಿ ಯುವಜೋಡಿಯೊಂದು ಸಾರ್ವಜನಿಕವಾಗಿ ಪರಸ್ಪರ ಮುತ್ತಿಕ್ಕುತ್ತ ಸ್ಥಳದ ಪರಿವೇ ಇಲ್ಲದೆ ಅಸಭ್ಯವಾಗಿ ನಡೆದುಕೊಂಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ನಡವಳಿಕೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಈ ಕ್ಲಿಪ್‌ನಲ್ಲಿ, ಯುವ ಜೋಡಿ ರಸ್ತೆ ಬದಿಯಲ್ಲಿಯೇ ತುಟಿಗೆ ತುಟಿ ಒತ್ತುತ್ತಿರುವುದು ಕಂಡು ಬಂದಿದೆ. ವಿವಿಧ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಸಿದ್ಧ ಶೈಕ್ಷಣಿಕ ಕೇಂದ್ರ ಮಣಿಪಾಲದಲ್ಲಿ ಈ ಘಟನೆ ನಡೆದಿದೆ.

ವಿಡಿಯೊ ನೋಡಿ:



ವಿಡಿಯೊದಲ್ಲಿ, ಯುವಕ- ಯುವತಿ ಸಾರ್ವಜನಿಕವಾಗಿ ಕಿಸ್‌ ಮಾಡುತ್ತ ಕಾಲಹರಣ ಮಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಅವರ ಬಳಿ ತೆರಳಿ, "ಇದು ಸಾರ್ವಜನಿಕ ಸ್ಥಳ, ಇಲ್ಲಿ ಈ ರೀತಿಯಾಗಿ ವರ್ತಿಸುವುದು ಸರಿಯಲ್ಲ"ಎಂದು ಕಿಡಿಕಾರಿದ್ದಾರೆ. ಆ ಸಮಯದಲ್ಲಿ ಆ ಯುವಕ ಹಿಂದಿಯಲ್ಲಿ ಏನೋ ಹೇಳಿದ್ದಾನೆ.

ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿದ ಯುವಕ

ಸ್ಥಳೀಯ ವ್ಯಕ್ತಿ ಕನ್ನಡದಲ್ಲಿ ಪ್ರಶ್ನಿಸಿದರೆ, ಯುವಕ ತನಗೆ ಕನ್ನಡ ಬರುವುದಿಲ್ಲವೆಂದು ಹೇಳಿ ಹಿಂದಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾನೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಸಭ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಸಾರ್ವಜನಿಕವಾಗಿ ಪ್ರೀತಿಯ ಪ್ರದರ್ಶನಗಳು ಕಾನೂನುಬಾಹಿರವಲ್ಲ. ಆದಾಗ್ಯೂ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ರ ಅಡಿಯಲ್ಲಿ"ಅಶ್ಲೀಲ"ಕೃತ್ಯವೆಂದು ಪರಿಗಣಿಸಿದರೆ ಅಧಿಕಾರಿಗಳು ಮಧ್ಯಪ್ರವೇಶಿಸಬಹುದು.

ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಈ ವಯಸ್ಸಿನಲ್ಲಿ ಪರಸ್ಪರ ಒಪ್ಪಿಗೆಯಿಂದ ಪ್ರೀತಿ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ ಎಂದು ಯುವಕ ಯುವತಿಯ ಪರ ಮಾತನಾಡಿದ್ದಾರೆ. ಮತ್ತೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವರ್ತನೆ ತಪ್ಪು ಎಂದು ಹೇಳಿದ್ದಾರೆ.