ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಜಾಗರೂಕತೆಯಿಂದ ಹಾವು ಹಿಡಿಯಲು ಹೋಗಿ ಕಚ್ಚಿಸಿಕೊಂಡ ಯುವಕ: ವಿಡಿಯೊ ನೋಡಿ ನೆಟ್ಟಿಗರು ಕಿಡಿ

Viral Video: ಯುವಕನೊಬ್ಬ ಮನೆಯೊಳಗೆ ನುಗ್ಗಿದ ಹಾವನ್ನು ಹಿಡಿಯಲು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಈ ಆಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಯಾವುದೇ ರಕ್ಷಣಾತ್ಮಕ ಸಾಧನ ಅಥವಾ ವೃತ್ತಿಪರ ಬೆಂಬಲವಿಲ್ಲದೆ ಮನೆಯೊಳಗೆ ಇದ್ದ ಹಾವನ್ನು ಯುವಕನೊಬ್ಬ ಸೆರೆ ಹಿಡಿಯಲು ಪ್ರಯತ್ನಿಸಿದ್ದಾನೆ.

ಹಾವನ್ನು ಹಿಡಿಯಲು ಹೋಗಿ ಪೇಚಿಗೆ ಸಿಲುಕಿದ ಯುವಕ

ಗಾಂಧಿನಗರ, ಮೇ 17: ಹಾವಿನ ಜತೆ ಹುಚ್ಚಾಟ ಮೆರೆಯುವ ಅನೇಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತವೆ. ಇದೀಗ ಯುವಕನೊಬ್ಬ ಮನೆಯೊಳಗೆ ನುಗ್ಗಿದ ಹಾವನ್ನು ಹಿಡಿಯಲು ಹೋಗಿ ಅಪಾಯಕ್ಕೆ ಸಿಲಕಿದ ಘಟನೆ ನಡೆದಿದೆ. ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ನಡೆದಿದ್ದು ಈ ಆಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಯಾವುದೇ ರಕ್ಷಣಾತ್ಮಕ ಸಾಧನ ಅಥವಾ ವೃತ್ತಿಪರ ಬೆಂಬಲವಿಲ್ಲದೆ ಮನೆಯೊಳಗೆ ಇದ್ದ ಹಾವನ್ನು ಯುವಕನೊಬ್ಬ ಸೆರೆಹಿಡಿಯಲು ಪ್ರಯತ್ನಿಸಿದ ವೇಳೆ ಈ ಘಟನೆ ನಡೆದಿದೆ.

ಸಾಮಾನ್ಯವಾಗಿ ಹಾವು ಅಂದಾಕ್ಷಣ ಎಲ್ಲರೂ ಭಯ ಪಡುತ್ತಾರೆ. ಆದರೆ ಇಲ್ಲಿ ಯುವಕ ಹಾವಿನ ಜತೆ ಹುಚ್ಚಾಟ ಮೆರೆಯಲು ಹೋಗಿ ಜನರಲ್ಲಿ ಆತಂಕ ಮೂಡಿಸಿದ್ದಾನೆ. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ಯಾರ ಸಹಾಯವಿಲ್ಲದೆ, ಮನೆಯೊಳಗೆ ನುಗ್ಗಿದ ಹಾವನ್ನು ಹಿಡಿಯಲು ಮುಂದಾಗಿದ್ದಾನೆ‌.

ವಿಡಿಯೊ ನೋಡಿ:



ವೈರಲ್ ಆದ ಮಾಹಿತಿಯಂತೆ ಸಚಿನ್ ಎನ್ನುವ ಯುವಕ ಮನೆಯೊಳಗೆ ಬಂದಿದ್ದ ಹಾವನ್ನು ಹಿಡಿಯಲು ಹೋಗಿದ್ದಾನೆ‌ . ತಾನೊಬ್ಬ ಹಾವಿನ ತಜ್ಞನಂತೆ ವರ್ತಿಸಿ ಬರಿಗೈನಲ್ಲಿ ಹಿಡಿಯಲು ಹೋಗಿದ್ದಾನೆ. ಆದಾಗ್ಯೂ, ಸೆಕೆಂಡುಗಳಲ್ಲಿ, ಪರಿಸ್ಥಿತಿ ಉಲ್ಬಣಗೊಂಡಿದೆ. ಹಾವು ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗಿ ವರ್ತಿಸಿದೆ.

ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ

ಹಾವು ದಿಢೀರನೆ ಆಕ್ರಮಣಕಾರಿಯಾಗಿ ಯುವಕನ ಮೇಲೆ ಸರಣಿ ದಾಳಿ ನಡೆಸಿದೆ. ಕೊನೆಗೆ ಯುವಕನಿಗೆ ಹಾವು ಸರಿಯಾಗಿ ಕಚ್ಚಿಯೇ ಬಿಟ್ಟಿದೆ. ಹಾವು ಕಚ್ಚುತ್ತಿದ್ದಂತೆ ಗಾಬರಿಯಾಗಿ ಹಾವನ್ನು ಬಿಟ್ಟು ರೂಮಿನಿಂದ ಸೀದಾ ಓಡಿ ಹೋಗಿದ್ದಾನೆ. ಆದರೆ ಈ ಹಾವು ವಿಷ ಹೊಂದಿರಲಿಲ್ಲ.

ಈ ಹಾವು ವಿಷರಹಿತವಾಗಿದ್ದರೂ, ಚಿಕಿತ್ಸೆ ನೀಡದಿದ್ದರೆ ಕಡಿತವು ಗಾಯ, ಬ್ಯಾಕ್ಟೀರಿಯಾದ ಸೋಂಕು, ಊತ ಮತ್ತು ತೀವ್ರ ನೋವನ್ನು ಉಂಟು ಮಾಡಬಹುದು ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಸಖತ್ ವೈರಲ್ ಆಗುತ್ತಿದ್ದಂತೆ ಯುವಕನ ನಡೆಗೆ ಹಲವರು ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ಇಂತಹ ಅಪಾಯಕಾರಿ ಸಾಹಸಕ್ಕೆ ಕೈ ಹಾಕಲು ಹೋಗಬಾರದು ಎಂದು ಬರೆದಿದ್ದಾರೆ.