ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಳಿ ವಯಸ್ಸಿನಲ್ಲಿಯೂ ಸ್ವಾವಲಂಬಿ ಬದುಕು; ಕಾರು ವಾಶ್‌ ಮಾಡಿ ಜೀವನ ನಡೆಸುತ್ತಿರುವ ಅಜ್ಜಿಗೆ ಯುವಕ ನೀಡಿದ ಗಿಫ್ಟ್‌ ಏನು ಗೊತ್ತಾ?

Viral Video: ಮುಂಬೈನ ಯುವಕ ಅಜ್ಜಿಯ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದ್ದಾರೆ.‌ ರಸ್ತೆಯ ಬದಿಯಲ್ಲಿ ಕಾರುಗಳನ್ನು ತೊಳೆದು ಜೀವನ ದುಡುತ್ತಿದ್ದ ವಯಸ್ಸಾದ ಅಜ್ಜಿಗೆ ವ್ಯಕ್ತಿಯೊಬ್ಬರು ಹಣ ಮತ್ತು ಸೀರೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಕಾರು ತೊಳೆಯುವ 'ಅಜ್ಜಿ'ಗೆ ಉಡುಗೊರೆ ನೀಡಿದ ಯುವಕ

ಮುಂಬೈ,ಫೆ.19: ದುಡಿದು ತಿನ್ನಬೇಕು ಎನ್ನುವ ಮಾತನ್ನು ನೀವು ಕೇಳಿರಬಹುದು. ಇಲ್ಲೊಂದು ಅಜ್ಜಿ ರಸ್ತೆ ಬದಿಯಲ್ಲಿ ಕಾರನ್ನು ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಅವರ ವಯಸ್ಸಿನ ಹೊರ ತಾಗಿಯೂ, ಅವರು ಪೂರ್ಣ ಶ್ರಮದಿಂದ ಬಹಳ ಆಸಕ್ತಿಯಿಂದ ಕೆಲಸವನ್ನು ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಮುಂಬೈನ (Mumbai) ಯುವಕ ಅಜ್ಜಿಯ ಮೊಗದಲ್ಲಿ ಮಂದಹಾಸವನ್ನು ಮೂಡಿಸಿ ದ್ದಾರೆ.‌ ರಸ್ತೆಯ ಬದಿಯಲ್ಲಿ ಕಾರುಗಳನ್ನು ತೊಳೆದು ಜೀವನ ದುಡುತ್ತಿದ್ದ ವಯಸ್ಸಾದ ಅಜ್ಜಿಗೆ ವ್ಯಕ್ತಿಯೊಬ್ಬರು ಹಣ ಮತ್ತು ಸೀರೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹಣ ಸಂಪಾದಿಸಲು ವೃದ್ಧ ಮಹಿಳೆಯೊಬ್ಬರು ಜನನಿಬಿಡ ಮುಂಬೈ ರಸ್ತೆಯಲ್ಲಿ ಧೂಳು ಹಿಡಿದ ಕಾರುಗಳನ್ನು ತೊಳೆಯುವ ದೃಶ್ಯವೊಂದು ಕಂಡು ಬಂದಿದೆ. ಈ ಇಳಿ ವಯಸ್ಸಿನಲ್ಲೂ ಯಾರ ಮುಂದೆಯೂ ಅವಲಂಬನೆ ಆಗದೆ ಸ್ವತಃ ಕಷ್ಟಪಟ್ಟು ದುಡಿಯುತ್ತಿದ್ದ ಅವರನ್ನು ಅಲ್ಲಿಯೇ ಹಾದು ಹೋಗುತ್ತಿದ್ದ ಹುಸೇನ್ ಮನ್ಸೂರಿ ಎನ್ನುವ ವ್ಯಕ್ತಿ ಗಮನಿಸಿದ್ದಾರೆ.

ವಿಡಿಯೋ ನೋಡಿ:



ಆ ವ್ಯಕ್ತಿ ತನ್ನ ಕಾರುಗಳನ್ನು ಬೇಕಂತಲೆ ಗಲೀಜು ಮಾಡಿಕೊಂಡು ಅಜ್ಜಿಗೆ ಸ್ವಚ್ಛ ಗೊಳಿಸಲು ಕೇಳಿದ್ದಾರೆ. ಬಳಿಕ ಅಜ್ಜಿ ಈ ಕೆಲಸವನ್ನು ಪೂರ್ಣಗೊಳಿಸಿದ ನಂತರ ದೊಡ್ಡ ಮೊತ್ತದ ಹಣವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಅಜ್ಜಿಗೆ ಬೇಕಾದ ಸೀರೆ ಹಾಗೂ ಉಡುಗೊರೆಯನ್ನು ನೀಡುವ ಮೂಲಕ ಮನಸ್ಸಿನಲ್ಲಿ ಮಂದಹಾಸ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ಅಜ್ಜಿ ಭಾವುಕರಾಗಿ ಹುಸೇನ್ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಇಬ್ಬರೂ ಪರಸ್ಪರ ಅಪ್ಪಿಕೊಂಡ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral Video: ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ; ನೆಟ್ಟಿಗರಿಂದ ಆಕ್ರೋಶ

ವಿಡಿಯೊದಲ್ಲಿ ಅವರು ತಾಯಿಗಿಂತ ದೊಡ್ಡ ಯೋಧ ಇಲ್ಲ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಫೆಬ್ರವರಿ 9 ರಂದು ಶೇರ್ ಮಾಡ ಲಾದ ಈ ವೀಡಿಯೊ 16.9 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಮಹಿಳೆಯ ಪ್ರಯತ್ನವನ್ನು ಗೌರವಿಸಿ ಮತ್ತು ಅವರಿಗೆ ಗೌರವದಿಂದ ಸಹಾಯ ಮಾಡಿದ್ದಕ್ಕಾಗಿ ಅನೇಕ ಬಳಕೆದಾರರು ಯುವಕನನ್ನು ಶ್ಲಾಘಿಸಿದ್ದಾರೆ.

ಬಳಕೆದಾರರೊಬ್ಬರ "ಇನ್ನೂ ಜನರಲ್ಲಿ ಮಾನವೀಯತೆ ಇದೆ ಎಂಬುದಕ್ಕೆ ಇದೇ ಉದಾಹರಣೆ ಎಂದಿದ್ದಾರೆ. ಮತ್ತೊಬ್ಬರು ಅವರನ್ನು "ನಿಜ ಜೀವನದ ನಾಯಕ" ಎಂದು ಕರೆದಿದ್ದಾರೆ