ದೆಹಲಿ,ಜು.24: ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನಾ ಕಿಚ್ಚು ಹೆಚ್ಚುತ್ತಿದೆ. ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತದೆ. ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ್ದು ಪೊಲೀಸರು ಪ್ರತಿಭಟನಾಕರರನ್ನು ತಡೆಯಲು ತೀವ್ರ ಹರಸಾಹಸ ಪಡಬೇಕಾಯಿತು. ಈ ನಡುವೆ ಹೋರಾಟಕ್ಕೆ ನಾಗಾಲ್ಯಾಂಡ್ ನಲ್ಲಿರುವ ಇದ್ದ ಯುವಕ ಅಲ್ಲಿಂದಲೇ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯಲ್ಲಿ ವೈಯಕ್ತಿಕವಾಗಿ ಭಾಗ ವಹಿಸಲು ಸಾಧ್ಯವಾಗದ ಕಾರಣ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ 67,000 ಮೌಲ್ಯದ 150 ಚೀಸ್ ಬರ್ಸ್ಟ್ ಪೀಜ್ಜಾ ಆರ್ಡರ್ ಅನ್ನು ತಲುಪಿಸುವ ಮೂಲಕ ಬೆಂಬಲ ನೀಡಿದ್ದಾರೆ. ಸದ್ಯ ಇವರು ಸೋಷಿಯಲ್ ಮೀಡಿಯಾದಲ್ಲಿ (Viral News) ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ದೆಹಲಿಯಲ್ಲಿ ನೀಟ್ ಅವ್ಯವಹಾರ ವಿರೋಧಿಸಿ ನಡೆಯುತ್ತಿರುವ CJP ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈ ಹೋರಾಟಕ್ಕೆ ನಾಗಾಲ್ಯಾಂಡ್‌ನ ವ್ಯಕ್ತಿ ವಿದ್ಯಾರ್ಥಿಗಳ ಹಸಿವು ನೀಗಿಸಲು ಆಹಾರ ವಿತರಣೆ ಮಾಡಿದ್ದಾರೆ. ದೆಹಲಿಯಿಂದ 2,000 ಕಿಲೋಮೀಟರ್‌ಗಳಿಗೂ ಹೆಚ್ಚು ದೂರದಿಂದಲೇ ಈ ಚಳುವಳಿಯನ್ನು ಬೆಂಬಲಿಸಲು ಈ ಮಾರ್ಗ ಕಂಡುಕೊಂಡಿದ್ದಾರೆ..
ಸೋಷಿಯಲ್ ಮೀಡಿಯಾದಲ್ಲಿ ದಿಯೇಲ್ಹಿ ದಿಯೇನು ಎಂಬ ಯುವಕ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ದುಃಖಿತನಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ 67,000 ರೂ.ಗಿಂತ ಹೆಚ್ಚು ಮೌಲ್ಯದ ಆಹಾರವನ್ನು ಆರ್ಡರ್ ಮಾಡುವ ಮೂಲಕ ಪ್ರತಿಭಟನಾಕಾರರಿಗೆ ವಿತರಿಸಲು ಡೆಲಿವರಿ ಬಾಯ್ ಗೆ ಸೂಚಿಸಿದರು. ತನಗೆ ಭಾಗವಹಿಸಲು ಸಾಧ್ಯವಾಗಿಲ್ಲ , ಹೀಗಾಗಿ ಅಲ್ಲಿ ಹಗಲಿರುಳು ಹೋರಾಡುತ್ತಿರುವ ವಿದ್ಯಾರ್ಥಿಗಳ ಹಸಿವು ನೀಗಿಸಲು ಈ ವಿಭಿನ್ನ ನಿರ್ಧಾರ ಮಾಡಿದ್ದಾರೆ.
ಅವರು ಜುಲೈ 22 ರಂದು ಸಂಜೆ 4:30 ರ ಸುಮಾರಿಗೆ ಡೊಮಿನೋಸ್‌ನಿಂದ 150 ಫಾರ್ಮ್‌ಹೌಸ್ ಚೀಸ್ ಬರ್ಸ್ಟ್ ಪಿಜ್ಜಾಗಳನ್ನು ಆರ್ಡರ್ ಮಾಡಿದ್ದು ಇವುಗಳನ್ನು ಪ್ರತಿಭಟನಾ ಸ್ಥಳಕ್ಕೆ ತಲುಪಿಸಿದ್ದಾರೆ. ಪಿಜ್ಜಾಗಳ ಒಟ್ಟು ಬೆಲೆ 64,650 ರೂ.ಗಳಾಗಿದ್ದು, ತೆರಿಗೆಗಳು, ರೆಸ್ಟೋರೆಂಟ್ ಶುಲ್ಕಗಳು ಮತ್ತು ವಿತರಣಾ ಶುಲ್ಕಗಳನ್ನು ಸೇರಿಸಿದ ನಂತರ ಒಟ್ಟು 67,734 ರೂ. ಆಗಿದೆ. ಇದು ನಾನು ಮಾಡಿದ ಅತ್ಯಂತ ಸಣ್ಣ ಕೆಲಸ, ನಾನು ನಾಗಾಲ್ಯಾಂಡ್‌ನಲ್ಲಿ ಕುಳಿತಿದ್ದೇನೆ, ಸಾವಿರಾರು ವಿದ್ಯಾರ್ಥಿಗಳು ಮನೆಯಿಂದ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿ ಉತ್ತಮ ಭವಿಷ್ಯ ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ಹೋರಾಡುತ್ತಿದ್ದಾರೆ. ನಾನು ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ಮಾಡಬಹುದಾದ ಕನಿಷ್ಠ ಕೆಲಸ ಇದು ಎಂದು ಬರೆದಿದ್ದಾರೆ.
ಪೀಜ್ಜಾ ತಲುಪಿಸಲು ಬಂದ ಡೆಲಿವರಿ ಎಕ್ಸಿಕ್ಯೂಟಿವ್ ಫೋನ್ ಮಾಡಿ ಸರ್, ನಾನು ಇದನ್ನು ಯಾರಿಗೆ ತಲುಪಿಸಬೇಕು? ಎಂದು ಕೇಳಿದಾಗ ನಾನು, ''ದಯವಿಟ್ಟು ಊಟ ಮಾಡದವರಿಗೆ ವಿತರಿಸಿ ಎಂದು ಉತ್ತರಿಸಿದೆ" ಇದಕ್ಕೆ ಭಾವುಕರಾದ ಡೆಲಿವರಿ ಬಾಯ್, ನೀವು ಹೃದಯವಂತರು ಎಂದು ಭಾವುಕರಾಗಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು"ನಮ್ಮ ಸಮಾಜದಲ್ಲಿ ಈ ರೀತಿಯ ಜನರು ಹೆಚ್ಚು ಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬರು "ವಿದ್ಯಾರ್ಥಿಗಳ ಪರ ನಿಮ್ಮ ಬೆಂಬಲಕ್ಕೆ ಧನ್ಯವಾದ" ಎಂದು ಬರೆದಿದ್ದಾರೆ.