ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ": ಟ್ರಾಫಿಕ್ ಜಾಮ್‌ನಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ನಿರ್ವಹಿಸಿದ ಉದ್ಯೋಗಿ

Viral Video: ಟ್ರಾಫಿಕ್ ಜಾಮ್‌ಗೆ ಸಿಲುಕಿದ ವ್ಯಕ್ತಿಯೊಬ್ಬ ಸಿಕ್ಕ ಕೆಲವೇ ನಿಮಿಷದಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಿದ ದೃಶ್ಯ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ದೃಶ್ಯ ನೋಡಿ ನೆಟ್ಟಿಗರು ಆಘಾತಕ್ಕೆ ಒಳಗಾಗಿದ್ದು, ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ ಎಂದು ಇದನ್ನು ಕರೆದಿದ್ದಾರೆ.

ಬೈಕ್‌ನಲ್ಲಿ ಕುಳಿತು ಆಫೀಸ್‌ ಕೆಲಸ ಮಾಡಿದ ವ್ಯಕ್ತಿ

ಹೊಸ ದೆಹಲಿ, ಜು. 23: ಕಾರ್ಪೊರೇಟ್ ಉದ್ಯಮದಲ್ಲಿ ಕೆಲಸದ ಒತ್ತಡ ಹೆಚ್ಚಿದೆ ಎಂದು ಅನೇಕರು ದೂರುತ್ತಲೇ ಇರುತ್ತಾರೆ. ವೈಯಕ್ತಿಕ ಕೆಲಸ, ಕುಟುಂಬಕ್ಕೂ ಸಮಯ ನೀಡಲಾಗದೆ ಬೇಸೆತ್ತವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ವ್ಯಕ್ತಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕ ಕೆಲವೇ ನಿಮಿಷದಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡಿದ್ದಾನೆ. ಬೈಕ್‌ ಸವಾರ ಲ್ಯಾಪ್‌ಟಾಪ್‌ನಲ್ಲಿ ತೆರೆದು ಕೆಲಸ ಮಾಡುತ್ತಿರುವ ದೃಶ್ಯ ವೈರಲ್ (Viral Video) ಆಗಿದೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದು ಇದು ಕಾರ್ಪೊರೇಟ್ ಉದ್ಯೋಗದ ಕರಾಳ ಮುಖ ಎಂದು ಕರೆದಿದ್ದಾರೆ.

ಟ್ರಾಫಿಕ್‌ನಲ್ಲಿ ರೆಡ್‌ ಸಿಗ್ನಲ್ ಕಾಣಿಸಿಕೊಂಡಾಗ ಅಯ್ಯೋ ಕಾಯಬೇಕಲ್ಲ ಅನ್ನುವ ಆಲೋಚನೆ ಎಲ್ಲರಲ್ಲೂ ಬರುತ್ತದೆ. ಆದರೆ ಇಲ್ಲಿ ಈತ ಸಿಕ್ಕ ಕೆಲ ನಿಮಿಷವನ್ನೂ ಆಫೀಸ್ ಕೆಲಸ ಮುಗಿಸಲು ಬಳಸಿಕೊಂಡಿದ್ದಾನೆ. ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ತೆರೆಯುವ ವಿಡಿಯೊ ವೈರಲ್ ಆಗಿದೆ. ಸದ್ಯ ಕಚೇರಿ ಕೆಲಸವು ವೈಯಕ್ತಿಕ ಸಮಯವನ್ನು ಆಕ್ರಮಿಸಿಕೊಳ್ಳುತ್ತಿದೆಯೇ ಎಂಬುದರ ಕುರಿತು ಚರ್ಚೆ ಆರಂಭವಾಗಿದೆ.

ವಿಡಿಯೊ ನೋಡಿ:



ವಿಡಿಯೊ ಟ್ರಾಫಿಕ್‌ನಲ್ಲಿ ಬೈಕ್ ನಿಂತಿರುವುದನ್ನು ತೋರಿಸುತ್ತದೆ. ಮೊದಲಿಗೆ, ಇದು ಸಾಮಾನ್ಯ ಟ್ರಾಫಿಕ್ ಜಾಮ್‌ನಂತೆ ಕಾಣುತ್ತದೆ. ಕೆಲವು ಕ್ಷಣಗಳ ನಂತರ, ಬೈಕ್‌ ಸವಾರ ತನ್ನ ಬ್ಯಾಗ್‌ನಿಂದ ಲ್ಯಾಪ್‌ಟಾಪ್ ತೆಗೆದು ರಸ್ತೆಯಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ಕೆಲವರು ಮನೆಗೆ ತಲುಪುವ ಮೊದಲು ಬಾಕಿ ಇರುವ ಕಚೇರಿ ಕೆಲಸವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಊಹಿಸಿದ್ದಾರೆ. ಈ ದೃಶ್ಯವು ಇಂದು ಅನೇಕ ವೃತ್ತಿಪರರು ಎದುರಿಸುತ್ತಿರುವ ಒತ್ತಡವನ್ನು ಪ್ರತಿಬಿಂಬಿಸಿದೆ.

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

"ಸಿಗ್ನಲ್‌ನಲ್ಲಿ 5 ನಿಮಿಷಗಳ ಟ್ರಾಫಿಕ್ ಜಾಮ್, ಈತ ಬೈಕ್‌ನಲ್ಲಿ ಕುಳಿತು, ತನ್ನ ಲ್ಯಾಪ್‌ಟಾಪ್ ಹೊರತೆಗೆದು ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. 8 ಗಂಟೆಗಳ ಕೆಲಸದ ನಂತರವೂ, ಮನೆಗೆ ಹೋಗುವ ದಾರಿಯಲ್ಲಿ ಕೆಲಸ ಮಾಡಬೇಕಾಗಿದೆ. ಅಂದರೆ ಬಹುಶಃ ಅವನು ಮನೆಗೆ ತಲುಪಿದ ನಂತರವೂ ಕೆಲಸ ಮಾಡುವುದನ್ನು ಮುಂದವರಿಸುತ್ತಾನೆ. ಭಾರತದಲ್ಲಿ ಜನರು ಯಂತ್ರಗಳಾಗಿ ಮಾರ್ಪಟ್ಟಿದ್ದಾರೆ" ಎಂದು ಈ ವಿಡಿಯೊದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದಕ್ಕೆ ಒಬ್ಬರು ಪ್ರತಿಕ್ರಿಯಿಸಿ, "ತಂತ್ರಜ್ಞಾನವು ಅವಕಾಶವನ್ನು ನೀಡುತ್ತದೆ. ಆದರೆ ನಮ್ಮ ಸಮಯವನ್ನು ಕಸಿದುಕೊಳ್ಳುತ್ತದೆʼʼ ಎಂದರು. ಮತ್ತೊಬ್ಬರು "ನಿಜವಾಗಿಯೂ ಈತ ಶ್ರಮ ಜೀವಿ ಮುಂದೆ ಒಳ್ಳೆಯ ಕೆಲಸ ಸಿಗಬಹುದು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.