ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೀಲ್ಸ್‌ ಹುಚ್ಚು; ತುಂಬಿ ಹರಿಯುತ್ತಿದ್ದ ನದಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರ್‌ ನುಗ್ಗಿಸಿದ ಯುವಕರು, ಮುಂದೆ ಆಗಿದ್ದೇನು?

Viral Video: ಯುವಕರ ಗುಂಪೊಂದು ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ವಾಹನವನ್ನು ಬಳಸಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಕಾರ್ ಅನ್ನು ತುಂಬಿ ಹರಿಯುತ್ತಿರುವ ಸಿಂಧ್ ನದಿಗೆ ನುಗ್ಗಿಸಿ ರೀಲ್ಸ್ ಮಾಡಲು ಮುಂದಾಗಿದ್ದಾರೆ. ಆದರೆ ವಾಹನವು ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ ಮುಂದೆ ಹೋಗಲಾಗದೆ ನಡು ನದಿಯಲ್ಲಿಯೇ ನಿಂತುಹೋಗಿದೆ. ಇದರಿಂದಾಗಿ ವಾಹನದಲ್ಲಿದ್ದ ಯುವಕರು ಕಂಗಲಾಗಿದ್ದಾರೆ.

ರೀಲ್ಸ್‌ಗಾಗಿ ನದಿಗೆ ಮಹೀಂದ್ರಾ ಸ್ಕಾರ್ಪಿಯೋ ಕಾರ್ ನುಗ್ಗಿಸಿ ಸಿಲುಕಿಕೊಂಡ ಯುವಕರು

ಶ್ರೀನಗರ,ಸೆ.13: ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುವ ಉದ್ದೇಶದಿಂದ ಕೆಲವರು ಜೀವಕ್ಕೆ ಅಪಾಯ ತಂದೊಡ್ಡುವ ಸಾಹಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಯುವಕರ ಗುಂಪೊಂದು ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ವಾಹನವನ್ನು ಬಳಸಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಕಾರ್ ಅನ್ನು ತುಂಬಿ ಹರಿಯುತ್ತಿರುವ ಸಿಂಧ್ ನದಿಗೆ ನುಗ್ಗಿಸಿ ರೀಲ್ಸ್ ಮಾಡಲು ಮುಂದಾಗಿದ್ದಾರೆ. ಆದರೆ ವಾಹನವು ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ ಮುಂದೆ ಹೋಗಲಾಗದೆ ನಡು ನದಿಯಲ್ಲಿಯೇ ನಿಂತುಹೋಗಿದೆ. ಇದರಿಂದಾಗಿ ವಾಹನದಲ್ಲಿದ್ದ ಯುವಕರು ಕಂಗಲಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸೋನಮಾರ್ಗ್‌ನಲ್ಲಿ ಈ ಘಟನೆ ನಡೆದಿದೆ. ಯುವಕರ ಗುಂಪೊಂದು ಸೋಷಿಯಲ್ ಮೀಡಿಯಾ ರೀಲ್ ಚಿತ್ರೀಕರಿಸುವ ಉದ್ದೇಶದಿಂದ ಎಸ್‌ಯುವಿಯನ್ನು ವೇಗವಾಗಿ ಹರಿಯುವ ಸಿಂಧ್ ನದಿಗೆ ಇಳಿಸಿದೆ. ಆದರೆ ಈ ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರವಾಹದ ರಭಸಕ್ಕೆ ಸಿಲುಕಿಕೊಂಡಿದ್ಧಾರೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಸ್‌ಯುವಿ ನದಿಯ ಮಧ್ಯದಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು.

ವಿಡಿಯೋ ನೋಡಿ:



ಎಸ್‌ಯುವಿಯನ್ನು 'ಹೋಟೆಲ್ ಸಿಂಧ್ ರೆಸಾರ್ಟ್ಸ್' ಬಳಿಯ ಉಕ್ಕಿ ಹರಿಯುವ ನದಿಗೆ ಇಳಿಸಲಾಗಿತ್ತು. ಆದರೆ ನದಿಯ ವೇಗದ ಪ್ರವಾಹವನ್ನು ಲೆಕ್ಕಿಸದೆ ಸ್ಕಾರ್ಪಿಯೋ ವಾಹನವನ್ನು ನೀರಿನೊಳಗೆ ಚಲಾಯಿಸಿದ ಪರಿಣಾಮ ಕಾರ್ ನೀರಿನ ಬಲವಾದ ಸೆಳೆತಕ್ಕೆ ಸಿಲುಕಿ ಚಲಿಸಲಾಗದೆ ನಡು ನದಿಯಲ್ಲಿಯೇ ನಿಂತುಹೋಯಿತು. ಈ ಘಟನೆಯ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಸಹಾಯಕ್ಕಾಗಿ ಸ್ಥಳಕ್ಕೆ ಆಗಮಿಸಿದರು.

ಕೂಡಲೇ ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಪೊಲೀಸರು ಮತ್ತು ಸ್ಥಳೀಯರು ಒಟ್ಟಾಗಿ ಕೆಲಸ ಮಾಡಿ, ಎಸ್‌ಯುವಿಯಲ್ಲಿದ್ದ ಯುವಕರನ್ನು ಸುರಕ್ಷಿತವಾಗಿ ರಕ್ಷಿಸಿ ನದಿಯ ದಡಕ್ಕೆ ಕರೆತಂದಿದ್ದಾರೆ.. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಪೊಲೀಸರ ತನಿಖೆಯ ಪ್ರಕಾರ, ವಾಹನದ ಚಾಲಕನನ್ನು ಶ್ರೀನಗರದ ನವಕದಲ್ ನಿವಾಸಿ ಮೊಹಮ್ಮದ್ ಇಬಾದ್ ಭಟ್ ಎಂದು ಗುರುತಿಸಲಾಗಿದ್ದು, ಈತನ ಸ್ನೇಹಿತರು ಇದ್ದರು. ವೀಡಿಯೊಗಳನ್ನು ರೆಕಾರ್ಡ್ ಮಾಡಲು ಎಸ್‌ಯುವಿಯನ್ನು ನದಿಗೆ ಕೊಂಡೊಯ್ದದ್ದು ಗಂಭೀರ ನಿರ್ಲಕ್ಷ್ಯದ ಕೃತ್ಯವಾಗಿದೆ ಈ ಘಟನೆಗೆ ಸಂಬಂಧಿಸಿದಂತೆ ಅಧಿಕೃತ ಪ್ರಕರಣ ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ಪ್ರಸಿದ್ಧಿಗಾಗಿ ಇಂತಹ ಪ್ರಾಣಾಪಾಯ ತರುವ ಸಾಹಸಗಳಲ್ಲಿ ತೊಡಗಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರವಾಸಿಗರು ಹಾಗೂ ಯುವಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣ ಬಳಕೆದಾರರಿಂದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು ಇವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಬರೆದುಕೊಂಡಿದ್ದಾರೆ.