ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೇನಾ ಸಿಬ್ಬಂದಿ ಜತೆ ವಾಗ್ವಾದ: ಸಾರ್ವಜನಿಕರ ಟೀಕೆ ಬೆನ್ನಲ್ಲೇ ಭಾರತೀಯ ಸೇನೆಗೆ ಕ್ಷಮೆಯಾಚಿಸಿದ ಜೆನ್ ಝೀ ಯುವತಿ!

Viral News: ಜೆನ್ ಝೀ ಯುವತಿ ಒಬ್ಬಳು ಸೇನಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ್ದು ಆಕೆಯ ನಡವಳಿಕೆ ವಿರುದ್ಧ ಬಹಳಷ್ಟು ಆಕ್ರೋಶ ವ್ಯಕ್ತವಾಗಿತ್ತು. ಲಡಾಖ್‌ನ ಚೆಕ್‌ ಪಾಯಿಂಟ್‌ ನಲ್ಲಿ ಪ್ರವಾಸಿಗರು ಮತ್ತು ಇತರ ಪ್ರಯಾಣಿಕರನ್ನು ಸುಮಾರು ಐದು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು ಎನ್ನುವ ಕಾರಣಕ್ಕೆ ಯುವತಿ ಆಕ್ರೋಶಗೊಂಡಿದ್ದಳು. ಇದರ ಬೆನ್ನಲ್ಲೇ ಆಕೆ ಭಾರತೀಯ ಸೇನೆಗೆ ಕ್ಷಮೆಯಾಚಿಸಿದ್ದಾರೆ. ನಾನು ಭಾರತೀಯ ಸೇನೆಯನ್ನು ತುಂಬಾ ಗೌರವಿಸುತ್ತೇನೆ..ತೀವ್ರ ಒತ್ತಡದಿಂದ ಆ ರೀತಿಯಾಗಿ ವರ್ತಿಸಿದೆ ಎಂದು ಕ್ಷಮೆ ಕೇಳಿದ್ದಾರೆ.

ಸೇನಾ ಸಿಬ್ಬಂದಿ ಜೊತೆ ಕಿರಿಕ್‌- ವಿಡಿಯೊ ವೈರಲ್ ಬೆನ್ನಲ್ಲೇ ಕ್ಷಮೆ ಕೇಳಿದ ಯುವತಿ

ಲಡಾಖ್‌,ಆ.21: ಇತ್ತೀಚೆಗೆ ಜೆನ್ ಝೀ ಯುವತಿ ಒಬ್ಬಳು ಸೇನಾ ಸಿಬ್ಬಂದಿ (Indian Army) ಜತೆಗೆ ವಾಗ್ವಾದ ನಡೆಸಿದ್ದು ಆಕೆಯ ನಡವಳಿಕೆ ವಿರುದ್ಧ ಬಹಳಷ್ಟು ಆಕ್ರೋಶ ವ್ಯಕ್ತವಾಗಿತ್ತು. ಲಡಾಖ್‌ನ ಚೆಕ್‌ ಪಾಯಿಂಟ್‌ನಲ್ಲಿ ಪ್ರವಾಸಿಗರು ಮತ್ತು ಇತರ ಪ್ರಯಾಣಿಕರನ್ನು ಸುಮಾರು ಐದು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು ಎನ್ನುವ ಕಾರಣಕ್ಕೆ ಯುವತಿ ಆಕ್ರೋಶಗೊಂಡಿದ್ದಳು. ಇದರ ಬೆನ್ನಲ್ಲೇ ಆಕೆ ಭಾರತೀಯ ಸೇನೆಗೆ ಕ್ಷಮೆಯಾಚಿಸಿದ್ದಾರೆ. ನಾನು ಭಾರತೀಯ ಸೇನೆಯನ್ನು ತುಂಬಾ ಗೌರವಿಸುತ್ತೇನೆ. ತೀವ್ರ ಒತ್ತಡದಿಂದ ಆ ರೀತಿಯಾಗಿ ವರ್ತಿಸಿದೆ ಎಂದು ಕ್ಷಮೆ ಕೇಳಿದ್ದಾರೆ. ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಲಡಾಖ್‌ನ ಚೆಕ್ ಪೋಸ್ಟ್ ನಲ್ಲಿ ವಿಐಪಿಗಳ ಸಂಚಾರಕ್ಕಾಗಿ ಪ್ರವಾಸಿಗರಿಗೆ ಸ್ವಲ್ಪ ಸಮಯದವರೆಗೆ ನಿರ್ಬಂಧ ವಿಧಿಸಲಾಗಿತ್ತು‌. ಹೀಗಾಗಿ ಸುಮಾರು ಐದು ಗಂಟೆಯವರೆಗೆ ಪ್ರವಾಸಿಗರನ್ನು ತಡೆದು ನಿಲ್ಲಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಯುವತಿಯೂ ʼʼನಾವು ಜೆನ್‌ ಝೀಗಳು, ಈ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಸಿಬ್ಬಂದಿ ಜೊತೆ ವಾಗ್ವಾದ ಮಾಡಿದ್ದಾಳೆ.

ವಿಡಿಯೋ ನೋಡಿ:



ಈ ವಾಗ್ವಾದದ ವಿಡಿಯೊ ವೈರಲ್ ಆಗುತ್ತಿದ್ದಂತೆ ಮಾಜಿ ಸೇನಾ  ಅಧಿಕಾರಿಗಳು ಸೇರಿದಂತೆ ಸಾಮಾನ್ಯ ಜನರು ಯುವತಿಯ ವರ್ತನೆಯನ್ನು ಟೀಕಿಸಿದ್ದರು. ಇದರ ಬೆನ್ನಲ್ಲೇ ಆಕೆ ಸ್ವತ ಮುಂದೆ ಬಂದು ಕ್ಷಮೆ ಕೇಳಿದ್ದಾರೆ‌.  ಸಂದರ್ಶನದಲ್ಲಿ ಮಾತನಾಡಿದ ಯುವತಿ ಭಾರತೀಯ ಸೇನೆ ಮೇಲೆ ತನಗೆ ಅಪಾರವಾದ ಗೌರವ ಇದೆ. ಹೆಚ್ಚು ಸಮಯ ಕಾಯಬೇಕು ಎನ್ನುವ ಕಾರಣಕ್ಕೆ ಒತ್ತಡದಲ್ಲಿದೆ. ಹೀಗಾಗಿ ತಾಳ್ಮೆ ಕಳೆದು ಮಾತನಾಡಿದೆ. ಯೋಧರಿಗೆ ನೋವುಂಟು ಮಾಡಬೇಕು ಎನ್ನುವ ಯಾವುದೇ ಉದ್ದೇಶ ಇರಲಿಲ್ಲ ಎಂದರು.

Viral Video: ಸಮೋಸ ನೀಡಲು ತಡವಾಗಿದ್ದಕ್ಕೆ ರಣರಂಗವಾದ ಬೇಕರಿ; ನೌಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಹಕರು

ನಾವು ಲಡಾಖ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದೆವು. ವಿಐಪಿ ಚಳುವಳಿ ನಡೆಯಲಿದೆ ಎಂದು ನಮಗೆ ತಿಳಿದಿರಲಿಲ್ಲ. ನಾವು ಬೆಳಿಗ್ಗೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಾಯುತ್ತಿದ್ದೆವು. ವೀಡಿಯೊ ವೈರಲ್ ಆದ ನಂತರ ತಾನು 'ತೀವ್ರ ದುಃಖದ' ಸ್ಥಿತಿಯಲ್ಲಿದ್ದೇನೆ ಎಂದು ಯುವತಿ ಕ್ಷಮೆ ಕೇಳಿದ್ದಾರೆ. ನಟ ರಣವೀರ್ ಶೋರೆ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಯುವತಿ ಕ್ಷಮೆಯಾಚಿಸಿದ್ದು ಪ್ರಾಮಾಣಿಕವಾಗಿದೆ‌. ಭಾರತೀಯ ಸೇನೆ ಮತ್ತು ಸಾರ್ವಜನಿಕರು ಆಕೆಯನ್ನು ಕ್ಷಮಿಸಿ ಈ ವಿಷಯವನ್ನು ಮುಕ್ತಾಯಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.