ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೀರಿನೊಳಗೂ ಮಹಿಳೆಯರಿಗೆ ರಕ್ಷಣೆ ಇಲ್ಲ: ಸ್ಕೂಬಾ ಡೈವಿಂಗ್‌ ವೇಳೆ ಯುವತಿಗೆ ಕಿರುಕುಳ

Viral Video: ಒಂಟಿಯಾಗಿ ತೆರಳುವ ಮಹಿಳೆಯರಿಗೆ ಎಲ್ಲೂ ರಕ್ಷಣೆ ಇಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಈಜಿಪ್ಟ್ ಪ್ರವಾಸಕ್ಕಾಗಿ ಒಬ್ಬಂಟಿಯಾಗಿ ತೆರಳಿದ್ದ ಯುವತಿಯೊಬ್ಬಳು ತಾನು ಕಿರುಕುಳ ಅನುಭವಿಸಿರುವ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ‌. ಈಜಿಪ್ಟ್‌ಗೆ ಪ್ರವಾಸ ಹೋಗಿದ್ದ ಯುವತಿಗೆ ಸ್ಕೂಬಾ ಡೈವಿಂಗ್ ಕಲಿಸುವಾಗ ಅಲ್ಲಿನ ತರಬೇತುದಾರ ಅಸಭ್ಯವಾಗಿ ವರ್ತಿಸಿದ್ದಾನೆ.

ಸ್ಕೂಬಾ ಡೈವಿಂಗ್ ತರಬೇತುದಾರನಿಂದ ಅಸಭ್ಯ ವರ್ತನೆ

ಕೈರೋ, ಮಾ.10: ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ಘಟನೆಗಳು ಈಗಲೂ ಆಗಾಗ ನಡೆಯುತ್ತಿರುತ್ತವೆ. ಅದರಲ್ಲೂ ಒಂಟಿ ಮಹಿಳೆಗೆ ಎಲ್ಲೂ ರಕ್ಷಣೆ ಇಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಈಜಿಪ್ಟ್ ಪ್ರವಾಸಕ್ಕಾಗಿ ಒಬ್ಬಂಟಿಯಾಗಿ ತೆರಳಿದ್ದ ಮಹಿಳೆಯೊಬ್ಬರು ಕಿರುಕುಳ ಎದುರಿಸಿರುವ ಘಟನೆಯನ್ನು ಶೇರ್ (Viral Video) ಮಾಡಿಕೊಂಡಿದ್ದಾರೆ‌. ಈಜಿಪ್ಟ್‌ಗೆ ಪ್ರವಾಸ ಹೋಗಿದ್ದ ಯುವತಿಗೆ ಸ್ಕೂಬಾ ಡೈವಿಂಗ್ ಕಲಿಸುವಾಗ ಅಲ್ಲಿನ ತರಬೇತುದಾರ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ಯುವತಿ ಶೇರ್‌ ಮಾಡಿಕೊಂಡಿದ್ದಾರೆ.

ಭೂಮಿ ಮೇಲೆ ಅಲ್ಲದೆ ನೀರೊಳಗಿನ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ರಾಶಾ ಮೆಡೀನ್ ಎಂಬ ಯುವತಿ ತನ್ನ ಮೇಲಾದ ಈ ದೌರ್ಜನ್ಯವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೊದಲ್ಲಿ ತರಬೇತುದಾರನು ನೀರಿನ ಅಡಿಯಲ್ಲಿರುವಾಗ ಪದೇ ಪದೆ ಯುವತಿಯನ್ನು ಸ್ಪರ್ಶಿಸುತ್ತಿರುವುದು ಕಾಣಬಹುದು.

ವಿಡಿಯೊ ನೋಡಿ:



ಆರಂಭದಿಂದಲೂ ತರಬೇತುದಾರನ ನಡವಳಿಕೆ ಅಸಾಮಾನ್ಯವಾಗಿ ಕಾಣುತ್ತಿತ್ತು ಎಂದು ಮೆಡೀನ್ ಹೇಳಿಕೊಂಡಿದ್ದಾರೆ. ತರಬೇತುದಾರನು ಸುರಕ್ಷತೆಯ ನೆಪದಲ್ಲಿ ಅಶ್ಲೀಲವಾಗಿ ಸ್ಪರ್ಶಿಸಲು ಮುಂದಾಗಿದ್ದಾನೆ. ಆಕೆ ಆತನಿಂದ ದೂರ ಸರಿದರೂ ಮತ್ತೆ ಮತ್ತೆ ಮುಟ್ಟಲು ಪ್ರಯತ್ನ ಮಾಡಿದ್ದಾನೆ.

ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ! ಸರ್ಕಾರವೇ ವಿದೇಶಿ ಹುಡುಗರಿಗೆ ಆಹ್ವಾನ ನೀಡುತ್ತೆ

ತನ್ನ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಂಡ ಅವರು ಇತರ ಮಹಿಳೆಯರು ಕೂಡ ಈ ರೀತಿಯಾದಾಗ ಮೌನವಾಗಿರದೆ ಧ್ವನಿ ಎತ್ತಬೇಕು ಎಂದಿದ್ದಾರೆ‌. ಈ ವಿಡಿಯೊ ಆನ್‌ಲೈನ್‌ನಲ್ಲಿ ವೇಗವಾಗಿ ವೈರಲ್ ಆಗಿದ್ದು ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆ ಕಂಡಿದೆ. ಅನಗತ್ಯವಾಗಿ ದೇಹವನ್ನು ಮುಟ್ಟುವುದು ಕಾನೂನುಬಾಹಿರ ಎಂದು ಡೈವಿಂಗ್ ತಜ್ಞರು ಕೂಡ ಕಿಡಿಕಾರಿದ್ದಾರೆ.