ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೀರೆಯುಟ್ಟು ಸಾಹಸ ಮೆರೆದ ಯುವತಿ: ಏಷ್ಯಾದ ಅತ್ಯಂತ ಕಠಿಣ ಅಡೆತಡೆ ಓಟ ಪೂರ್ಣಗೊಳಿಸಿ ದಾಖಲೆ

Viral Video: ಬಿಹಾರದ ಮಹಿಳೆಯೊಬ್ಬರು ಕ್ರೀಡಾ ಉಡುಪುಗಳನ್ನು ಧರಿಸದೆ, ಸೀರೆ ಧರಿಸಿ ಏಷ್ಯಾದ ಕ್ರೀಡಾತ್ಸೋವದಲ್ಲಿ ಪಾಲ್ಗೊಂಡ ಘಟನೆ ನಡೆದಿದೆ. ಸಾಮಾನ್ಯವಾಗಿ ಕ್ರೀಡಾ ಸ್ಪರ್ಧಿಗಳು ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ ಪಾಲ್ಗೊಳ್ಳುತ್ತಾರೆ. ಆದರೆ ಏಷ್ಯಾದ ಅತ್ಯಂತ ಕಠಿಣ ಅಡೆತಡೆಗಳ ಓಟವನ್ನು ನಿಶಾ ಎಂಬ ಯುವತಿ ಸಾಂಪ್ರದಾಯಿಕ ಸೀರೆಯನ್ನು ಉಟ್ಟುಕೊಂಡೇ ಯಶಸ್ವಿ ಗೊಳಿಸಿ ದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೀರೆ ಧರಿಸಿ ಏಷ್ಯಾದ ಕ್ರೀಡೆಯಲ್ಲಿ ಪಾಲ್ಗೊಂಡ ಯುವತಿ

ಬಿಹಾರ,ಮಾ.17: ಪ್ರಯತ್ನ ಪಟ್ಟರೆ ಯಾವುದೇ ಕೆಲಸಗಳು ಸಾಧ್ಯ ಅನ್ನೋದಕ್ಕೆ ಬಹುಶಃ ಈ ಘಟನೆಯೇ ಸಾಕ್ಷಿಯಾಗಿದೆ. ಬಿಹಾರದ ಮಹಿಳೆಯೊಬ್ಬರು ಕ್ರೀಡಾ ಉಡುಪುಗಳನ್ನು ಧರಿಸದೆ, ಸೀರೆ ಧರಿಸಿ ಏಷ್ಯಾದ ಕ್ರೀಡಾತ್ಸೋವದಲ್ಲಿ ಪಾಲ್ಗೊಂಡ ಘಟನೆ ನಡೆದಿದೆ. ಸಾಮಾನ್ಯವಾಗಿ ಕ್ರೀಡಾ ಸ್ಪರ್ಧಿಗಳು ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ ಪಾಲ್ಗೊಳ್ಳುತ್ತಾರೆ. ಆದರೆ ಏಷ್ಯಾದ ಅತ್ಯಂತ ಕಠಿಣ ಅಡೆತಡೆಗಳ ಓಟವನ್ನು ನಿಶಾ ಎಂಬ ಯುವತಿ ಸಾಂಪ್ರದಾಯಿಕ ಸೀರೆಯನ್ನು ಉಟ್ಟುಕೊಂಡೇ ಯಶಸ್ವಿ ಗೊಳಿಸಿದ್ದಾರೆ .ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಉಡುಗೆಗಿಂತ ದೃಢನಿಶ್ಚಯ ಮುಖ್ಯ ಎಂದು ಯುವತಿ ಸಾಬೀತು ಪಡಿಸಿದ್ದಾಳೆ. ನಿಶಾ ಮಿಶ್ರಾ ಸಾಂಪ್ರದಾಯಿಕ ಸೀರೆ ಧರಿಸಿ ಏಷ್ಯಾದ ಅತ್ಯಂತ ಕಠಿಣ ಅಡಚಣೆಯ ಓಟವನ್ನು ಯಶಸ್ವಿ ಗೊಳಿಸಿದ್ದಾರೆ‌ ವೈರಲ್ ವಿಡಿಯೊದಲ್ಲಿ ಅವರು ಸೀರೆಯಲ್ಲೇ ಓಡುವುದು, ಹಗ್ಗ ಹತ್ತುವುದು, ಎತ್ತರ ಜಿಗಿತಗಳನ್ನು ಪ್ರದರ್ಶಿ ಸುವುದು, ನೇತಾಡುವ ಬಲೆಗಳ ಮೇಲೆ ನಡೆಯುವುದು ಇತ್ಯಾದಿ ದೃಶ್ಯವನ್ನು ಕಾಣಬಹುದು.

ವಿಡಿಯೋ ನೋಡಿ:



ಇದು ಸಾಮಾನ್ಯ ಕ್ರೀಡಾ ಉಡುಪುಗಳಲ್ಲಿಯೂ ಸಹ ಅತ್ಯಂತ ಕಷ್ಟಕರವೆಂದು ಪರಿಗಣಿಸಲಾಗಿದೆ. ಭಾರತದ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ಮಹಿಳೆಯರಿಗೆ ಸಂದೇಶವನ್ನು ತಿಳಿಸಲು ತಾನು ಸೀರೆಯನ್ನು ಧರಿಸಲು ಆರಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾವು ಎಲ್ಲಿಂದ ಬಂದಿದ್ದೇವೆ, ಯಾವ ಉಡುಗೆ ತೊಟ್ಟಿದ್ದೇವೆ ಎಂದು ಮುಖ್ಯವಲ್ಲ.ಯಾವುದೇ ಸ್ಥಳದಿಂದ ಬಂದರೂ ಶ್ರಮ ಪಟ್ಟರೆ ಏನು ಬೇಕಾದರೂ ಮಾಡಬಹುದು ಮಾಡಬಹುದು ಎಂದು ಅವರು ಹೇಳಿದರು.

Viral Video: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್‌ ಟ್ರೀಟ್‌ಮೆಂಟ್‌; ವೈರಲ್‌ ಆಗ್ತಿದೆ ವಿಡಿಯೋ

ಈ ವೀಡಿಯೊ ಸದ್ಯ ಭಾರೀ ವೈರಲ್ ಆಗಿದ್ದು ಜನಪ್ರಿಯತೆಯನ್ನು ಗಳಿಸಿದೆ. ಮಿಶ್ರಾ ಅವರ ಸಾಂಪ್ರದಾಯಿಕ ಉಡುಪು ಮತ್ತು ಆತ್ಮವಿಶ್ವಾಸದ ಬಗ್ಗೆ ಅನೇಕರು ಶ್ಲಾಘಿಸಿದ್ದಾರೆ. ಬಳಕೆದಾರ ರೊಬ್ಬರು ಇದು ಮಹಿಳಾ ಸಬಲೀಕರಣಕ್ಕೆ ನೀಡುವ ಪ್ರೋತ್ಸಾಹ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನಿಜವಾಗಿಯೂ ಇವರ ಶ್ರಮಕ್ಕೆ ಮೆಚ್ಚಲೇಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.