ನವದೆಹಲಿ, ಆ.5: ಆನ್ ಲೈನ್ ಮೀಟಿಂಗ್ ಎಂದಾಗ ಉದ್ಯೋಗಿಗಳು ಮನೆಯಿಂದಲೂ ಹಾಜರಾಗುತ್ತಾರೆ. ಕೆಲವೊಮ್ಮೆ ಉದ್ಯೋಗಿಗಳ ವಿಚಿತ್ರ ವರ್ತನೆ, ನಡವಳಿಕೆ ಕಂಡು ಬಾಸ್‌ಗಳೇ ಅಚ್ಚರಿಗೆ ಒಳಗಾಗುತ್ತಾರೆ. ಇದೀಗ ಜೆನ್ ಝಿ ಯುವತಿಯೊಬ್ಬಳು ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿ ಮೀಟಿಂಗ್ನಲ್ಲಿ ಪಾಲ್ಗೊಂಡಿದ್ದಾಳೆ. ಈ ಬಗ್ಗೆ ಪ್ರಶ್ನೆ ಮಾಡಿದ ಮ್ಯಾನೇಜರ್ ಗೆ ನಾಟುವಂತೆ ಉತ್ತರ ನೀಡಿದ್ದು ಕೆಲವರು ಆಕೆಯ ಹಾಸ್ಯಮಯ ಉತ್ತರವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಕೆಲಸದ ಸ್ಥಳದ ಶಿಷ್ಟಾಚಾರವನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ವರ್ಚುವಲ್ ಸಭೆಗಳ ಸಮಯದಲ್ಲಿ ಉದ್ಯೋಗಿಗಳು ತಮ್ಮ ಕ್ಯಾಮೆರಾಗಳನ್ನು ಆನ್‌ನಲ್ಲಿ ಇಡಬೇಕೇ? ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.
ಆನ್‌ಲೈನ್ ಸಭೆಯ ಮಿಟೀಂಗ್‌ವೊಂದನ್ನು ಮ್ಯಾನೇಜರ್ ಆಯೋಜಿಸಿದ್ದು ಕ್ಯಾಮೆರಾವನ್ನು ಆನ್ ಮಾಡಲು ಉದ್ಯೋಗಿಯನ್ನು ಪದೇ ಪದೇ ಕೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಉದ್ಯೋಗಿ ಆರಂಭದಲ್ಲಿ ತನ್ನ ಕ್ಯಾಮೆರಾವನ್ನು ಆಫ್ ಮಾಡಿ ಇಟ್ಟುಕೊಂಡಿದ್ದರು. ಮ್ಯಾನೇಜರ್, "ದಯವಿಟ್ಟು ನಿಮ್ಮ ಕ್ಯಾಮೆರಾವನ್ನು ಆನ್ ಮಾಡಬಹುದೇ? ನಾನು ನಿಮ್ಮೊಂದಿಗೆ ಕೆಲವೊಂದಿಷ್ಟು ಕೆಲಸದ ಪ್ಲಾನ್ ಗಳ ಬಗ್ಗೆ ಮಾತನಾಡುತ್ತೇನೆ" ಎಂದಿದ್ದಾರೆ. ಆಗ ಉದ್ಯೋಗಿ ತನ್ನ ಕ್ಯಾಮೆರಾವನ್ನು ಆನ್ ಮಾಡಿದಾಗ, ಅವಳು ಮುಖದ ಮೇಲೆ ಫೇಸ್ ಪ್ಯಾಕ್ ಧರಿಸಿರುವುದು ಕಂಡುಬಂದಿದೆ.
ವಿಡಿಯೋ ನೋಡಿ:
ಇದನ್ನು ನೋಡಿದ ಮ್ಯಾನೇಜರ್ ಕೆಲಸದ ಸಮಯದಲ್ಲಿ ಇದೆಲ್ಲಾ ಮಾಡಿಕೊಳ್ಳುವುದೇ? ಇದೆಲ್ಲಾವನ್ನು ನಿಮ್ಮ ಲಂಚ್ ಟೈಮ್ ನಲ್ಲಿ ಮಾಡಿಕೊಳ್ಳಿ ಎಂದು ನಯವಾಗಿ ಹೇಳುತ್ತಾರೆ. ಇದಕ್ಕೆ ಚಾಟಿ ಬೀಸಿದ ಜೆನ್ ಜಿ ಯುವತಿ ನೀವು ಕೊಡುವುದೇ ಹದಿನೈದು ನಿಮಿಷಗಳ ಅವಧಿಯನ್ನು, ಆದರೆ ಈ ಫೇಸ್ ಪ್ಯಾಕ್ ಒಣಗಲು 20 ನಿಮಿಷ ಬೇಕಾಗುತ್ತದೆ ಅಂದರು. ಅಷ್ಟೇ ಅಲ್ಲದೆ, "ಈಗ ನಾನು ಕ್ಯಾಮೆರಾ ಆಫ್ ಮಾಡಬಹುದಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ಈ ಹಾಸ್ಯಮಯ ಸಂವಹನವು ವ್ಯಾಪಕ ಗಮನ ಸೆಳೆದಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಯುವತಿಯ ಪ್ರತಿಕ್ರಿಯೆಗೆ ಮೆಚ್ಚುಗೆ ನೀಡಿದ್ದಾರೆ. ಯುವ ಪೀಳಿಗೆಯ ವಿಶ್ವಾಸ ವನ್ನು ಹೊಗಳುತ್ತಾ ಬಳಕೆದಾರರೊಬ್ಬರು "ನಾನು ಜೆನ್ ಝಿ ಯುವಕರನ್ನು ಪ್ರೀತಿಸುತ್ತೇನೆ, ಅವರು ಯಾವತ್ತಿಗೂ ಒತ್ತಡವನ್ನು ಸಹಿಸಿಕೊಳ್ಳುವುದಿಲ್ಲ ಅಂದರು. ಇನ್ನೊಬ್ಬರು "ಹೊಳೆಯುವುದು ಮತ್ತು ಬೆಳವಣಿಗೆ ಎರಡೂ ಒಟ್ಟಿಗೆ ಸಾಗಬಹುದು" ಎಂದು ಕಮೆಂಟ್ ಮಾಡಿದ್ದಾರೆ.