ಸಿಯೋಲ್, ಏ. 20: ಇತ್ತೀಚೆಗೆ ಯುವ ಜನತೆ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಖ್ಯೆ ಹೆಚ್ಚಾಗಿದೆ. ದಾಂಪತ್ಯ ಕಲಹ, ಉದ್ಯೋಗ ಸಮಸ್ಯೆ ಹೀಗೆ ನಾನಾ ಕಾರಣಕ್ಕೆ ನೊಂದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಯುವತಿಯೊಬ್ಬಳು ಬಹುಮಹಡಿ ಕಟ್ಟಡದ 20 ಅಂತಸ್ತಿನಿಂದ ಜಿಗಿಯಲು ಮುಂದಾದ ಘಟನೆ ನಡೆದಿದೆ. ಈ ಸಮಯದಲ್ಲಿ ಸಾರ್ವಜನಿಕರ ಸಮಯ ಪ್ರಜ್ಞೆ ಆಕೆಯ ಜೀವ ಉಳಿಸಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ದಕ್ಷಿಣ ಕೊರಿಯಾದ ಸಿಯೋಲ್‌ನ ಗಂಗ್ನಮ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಯುವತಿಯೊಬ್ಬಳು ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವರದಿಗಳ ಪ್ರಕಾರ ಕಳೆದ ವರ್ಷ ಮೇ ತಿಂಗಳಲ್ಲಿ ಯೋಕ್ಸಮ್-ಡಾಂಗ್ ಪ್ರದೇಶದ ಕಟ್ಟಡವೊಂದರ ಬಳಿ ಈ ಘಟನೆ ನಡೆದಿದ್ದು, ಆಕೆ ಕಟ್ಟಡದಿಂದ ಜಿಗಿಯಲು ಮುಂದಾಗುತ್ತಿದ್ದಂತೆ ಅಲ್ಲಿದ್ದ ದಾರಿಹೋಕರೊಬ್ಬರು ಗಮನಿಸಿ ಮಧ್ಯ ಪ್ರವೇಶಿಸಿದ್ದಾರೆ.
ವಿಡಿಯೊ ನೋಡಿ:
ಈ ದೃಶ್ಯವು ನೋಡುಗರಿಗೆ ಮೈ ಜುಮ್ಮೆಎನಿಸುವಂತಿದೆ. 20ನೇ ಅಂತಸ್ತಿನ ಕಟ್ಟಡದ ಅಂಚಿನಿಂದ ಜಿಗಿಯಲು ಯುವತಿ ಯತ್ನಿಸಿದ್ದಾಳೆ. ಆಕೆಯ ನಡೆಯನ್ನು ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬ ತಕ್ಷನ ಕಾರ್ಯ ಪ್ರವೃತ್ತನಾಗಿದ್ದಾನೆ. ಆ ವ್ಯಕ್ತಿ ಯುವತಿಯ ಕೈಯನ್ನು ಬೇಗನೆ ಹಿಡಿದು, ನಂತರ ಆಕೆಯ ಕೂದಲನ್ನು ತನ್ನ ಇನ್ನೊಂದು ಕೈಯಿಂದ ಹಿಡಿದು, ಆಕೆ ಬೀಳದಂತೆ ತಡೆದಿದ್ದಾರೆ. ಮತ್ತೊಬ್ಬ ವ್ಯಕ್ತಿ ಶೀಘ್ರದಲ್ಲೇ ಸೇರಿಕೊಂಡು, ಆಕೆಯನ್ನು ಮತ್ತೆ ಸುರಕ್ಷಿತವಾಗಿ ಹಿಂದಕ್ಕೆ ಎಳೆಯಲು ಸಹಾಯ ಮಾಡಿದ್ದಾರೆ.
ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್ ಕೆಳಗೆ ಬೈಕ್ ಓಡಿಸಿದ ಯುವಕ
ಬಳಿಕ ಅಧಿಕಾರಿಗಳಿಗೆ ತುರ್ತು ಎಚ್ಚರಿಕೆ ನೀಡಿದ್ದು, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯ ಒಟ್ಟು 71 ಸಿಬ್ಬಂದಿ 19 ತುರ್ತು ವಾಹನಗಳೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದರು. ಸುಮಾರು ಒಂದು ಗಂಟೆ 40 ನಿಮಿಷಗಳ ಸಂಘಟಿತ ಪ್ರಯತ್ನಗಳ ನಂತರ, ರಕ್ಷಣಾ ತಂಡಗಳು ಯುವತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿದವು.