ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಫ್ರಾನ್ಸ್‌ನಲ್ಲಿ ಮಹಿಳೆಯರ ಸುರಕ್ಷತೆ ಆದ್ಯತೆ; ಮುಂಜಾನೆ 4:30ಕ್ಕೆ ಒಬ್ಬಂಟಿಯಾಗಿ ಬೀದಿಯಲ್ಲಿ ಓಡಾಡಿದ ಭಾರತೀಯ ಮಹಿಳೆ

ವಿದೇಶದಲ್ಲಿ ಭಾರತಕ್ಕಿಂತ ಸುರಕ್ಷತೆ ಹೆಚ್ಚಿದೆ ಎಂದು ಮಹಿಳೆಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾಳೆ. ಪ್ರಾನ್ಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆ ಕಾರ್ಯಕ್ರಮ ಮುಗಿಸಿಕೊಂಡು ಮುಂಜಾನೆ 4:30ಕ್ಕೆ ಮನೆಗೆ ನಡೆದುಕೊಂಡು ಹೋಗಿದ್ದಾಳೆ. ಆದರೆ ಆ ಸಮಯದಲ್ಲಿ ತಮಗೆ ಸಿಕ್ಕ ಸುರಕ್ಷತೆ ಮೆಚ್ಚುವಂತದ್ದು ಎಂದು ಆಕೆ ಹೇಳಿದ್ದಾಳೆ.

ಫ್ರಾನ್ಸ್‌ನಲ್ಲಿ ಒಂಟಿಯಾಗಿ ಓಡಾಡಿದ ಮಹಿಳೆ

ಪ್ಯಾರಿಸ್‌, ಜೂ. 22: ಭಾರತದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಸವಾಲಾಗುವಂತಹ ಅನೇಕ ಘಟನೆಗಳು ವರದಿಯಾಗುತ್ತಿರುತ್ತವೆ. ವಿದೇಶದಲ್ಲಿ ಮಹಿಳೆಯರು ಭಾರತಕ್ಕಿಂತ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ಮಹಿಳೆಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ (Viral News) ಹಂಚಿಕೊಂಡಿದ್ದಾಳೆ. ಪ್ರಾನ್ಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆ ಕಾಲೇಜಿನ ಘಟಿಕೋತ್ಸವ ಮುಗಿಸಿಕೊಂಡು ಮುಂಜಾನೆ 4:30ಕ್ಕೆ ಮನೆಗೆ ನಡೆದುಕೊಂಡು ಹೋಗಿದ್ದಾಳೆ. ಆದರೆ ಆ ಸಮಯದಲ್ಲಿ ತನಗೆ ಯಾವುದೇ ಸಮಸ್ಯೆ ಎದುರಾಗಿಲ್ಲ, ಸಿಕ್ಕ ಸುರಕ್ಷತೆ ಮೆಚ್ಚುವಂತದ್ದು ಎಂದು ಹೇಳಿದ್ದಾಳೆ.

ಪ್ರಾನ್ಸ್‌ನಲ್ಲಿ ನೆಲೆಸಿರುವ ಮಹಿಳೆ ಕಾಲೇಜಿನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಬೆಳಗಿನ ಜಾವ 4:30ಕ್ಕೆ ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗಿದ್ದಾಳೆ. ಆಕೆ ವಿಡಿಯೊದಲ್ಲಿ, ʼʼಈಗ ಬೆಳಗ್ಗೆ 4:30 ಆಗಿದೆ. ನಾನು ಮನೆಗೆ ನಡೆಯುತ್ತ ಹೋಗುತ್ತಿದ್ದೇನೆ. ಯಾರೂ ನನಗೆ ಇಲ್ಲಿ ತೊಂದರೆ ನೀಡುತ್ತಿಲ್ಲ, ಕಿರುಕುಳ ನೀಡುತ್ತಿಲ್ಲ, ಅಥವಾ ನಾನು ಈ ಸಮಯದಲ್ಲಿ ಏಕೆ ಹೊರಗಿದ್ದೇನೆ ಎಂದು ಪ್ರಶ್ನಿಸುತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ರೀತಿಯ ಸುರಕ್ಷತೆ ಮತ್ತು ಸ್ವಾತಂತ್ರ್ಯವನ್ನು ನಾವು ಬೇರೆಲ್ಲಿ ಪಡೆಯಬಹುದು?ʼʼ ಎಂದು ಪ್ರಶ್ನಿಸಿದ್ದಾರೆ.

ವಿಡಿಯೊ ನೋಡಿ:



ಶುಭಂಗಿ ವ್ಯಾಸ್ ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಶೇರ್ ಮಾಡಿದ್ದಾಳೆ. ʼʼಘಟಿಕೋತ್ಸವ ಸಮಾರಂಭದ ನಂತರ ಕಾಲೇಜು ವಿದ್ಯಾರ್ಥಿಗಳಿಗಾಗಿ ಪಾರ್ಟಿಯನ್ನು ಆಯೋಜಿಸಿತ್ತು. ಕಾರ್ಯಕ್ರಮ ಮುಗಿದ ನಂತರ ಬೆಳಗಿನ ಜಾವ ಮನೆಗೆ ನಡೆದುಕೊಂಡು ಹೋಗಲು ನಿರ್ಧರಿಸಿದೆ. ಆದರೆ ಯಾರು ಕೂಡ ತನಗೆ ತೊಂದರೆ ನೀಡಿಲ್ಲ. ಬಹಳ ಆರಾಮವಾಗಿ ನಡೆದುಕೊಂಡು ಹೋಗಿ ಸೇಫ್ ಆಗಿ ಮನೆ ತಲುಪಿದೆʼʼ ಎಂದು ಹೇಳಿದ್ದಾಳೆ.

ಅಮೆರಿಕದಲ್ಲಿ ರಕ್ತ ಪರೀಕ್ಷೆಗೆ 1.9 ಲಕ್ಷ ರುಪಾಯಿ, ಭಾರತದಲ್ಲಿ 2,800 ರುಪಾಯಿ

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು, "ನೀವು ಯುರೋಪಿನಲ್ಲಿ, ವಿಶೇಷವಾಗಿ ಫ್ರಾನ್ಸ್‌ನಲ್ಲಿ ಎಲ್ಲೇ ಮತ್ತು ಯಾವಾಗ ಸುತ್ತಾಡಿದರೂ ಸೇಫ್ ಆಗಿರುತ್ತೀರಿʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, "ಈ ಪರಿಸ್ಥಿತಿಯನ್ನು ಭಾರತದೊಂದಿಗೆ ಹೋಲಿಸಿ. ನಮ್ಮ ದೇಶದಲ್ಲಿ ಇಂತಹ ಸುರಕ್ಷತೆ ಕೇವಲ ಕನಸಾಗಿ ಉಳಿದಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.