ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಯುವತಿಯ ಮೊಬೈಲ್ ಮಿಸ್ಸಿಂಗ್: 15 ನಿಮಿಷದಲ್ಲಿ ಪತ್ತೆಹಚ್ಚಿದ CISF ಸಿಬ್ಬಂದಿ

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ಯುವತಿಯ ಮೊಬೈಲ್ ಅನ್ನು ಅಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ CISF ಸಿಬ್ಬಂದಿ ಹದಿನೈದು ನಿಮಿಷದಲ್ಲಿ ಹುಡುಕಿ ಕೊಟ್ಟಿದ್ದಾರೆ. ಯುವತಿ ಸಿಬ್ಬಂದಿಯ ಕರ್ತವ್ಯ ನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಈ ಸುದ್ದಿ ವೈರಲ್‌ ಆಗಿದೆ.

ಕಳೆದುಹೋದ ಫೋನ್ ಪತ್ತೆ ಹಚ್ಚಿದ CISF ಸಿಬ್ಬಂದಿ

ಬೆಂಗಳೂರು, ಮೇ 25: ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಭದ್ರತಾ ಪಡೆಗಳು, ಪೊಲೀಸರ ಪಾತ್ರ ಮುಖ್ಯ. ಸಾರ್ವಜನಿಕರ ರಕ್ಷಣೆ ಮತ್ತು ಮಾನವೀಯತೆಯನ್ನು ಸಾರುವ ನಿಟ್ಟಿನಲ್ಲಿ ದಕ್ಷ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಅನೇಕರನ್ನು ನೀವು ನೋಡಿರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ವಿಮಾನ ನಿಲ್ದಾಣದಲ್ಲಿ ಕಳೆದುಹೋದ ಯುವತಿಯ ಮೊಬೈಲ್ ಫೋನ್‌ ಅನ್ನು ಕರ್ತವ್ಯ ನಿರ್ವಹಿಸುತ್ತಿದ್ದ CISF ಸಿಬ್ಬಂದಿ ಹದಿನೈದು ನಿಮಿಷದಲ್ಲಿ ಹುಡುಕಿ ಕೊಟ್ಟು ಗಮನ ಸೆಳೆದಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಯುವತಿ ಸಿಬ್ಬಂದಿಯ ಕರ್ತವ್ಯ ನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Viral News) ಕೂಡ ಇವರ ನಡೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಲೇಖಕಿ ಭಾವನಾ ಅರೋರಾ ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದಾಗ ತಮ್ಮ ಫೋನ್ ಕಳೆದುಕೊಂಡು ಗಾಬರಿಯಾಗಿದ್ದರು. ಆದಾಗ್ಯೂ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಸಂಪರ್ಕಿಸಿದರು. ತಕ್ಷಣವೇ ಸಿಬ್ಬಂದಿ ಕಾರ್ಯಪ್ರವೃತ್ತರಾದರು. ಭದ್ರತಾ ಸಿಬ್ಬಂದಿ, ಕೇವಲ ಹದಿನೈದು ನಿಮಿಷಗಳಲ್ಲೇ ಅವರ ಮೊಬೈಲ್ ಫೋನ್ ಹುಡುಕಿ ಕೈಗಿಟ್ಟಿದ್ದಾರೆ.

ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಅವರು ಹೀಗೆ ಬರೆದಿದ್ದಾರೆ. ʼʼಬೆಂಗಳೂರು ಏರ್ ಪೋರ್ಟ್‌ನಲ್ಲಿ ಮೊಬೈಲ್‌ ಫೋನ್ ಕಳೆದುಕೊಂಡು ಗಾಬರಿಯಾದೆ. ಕೂಡಲೇ ಅಲ್ಲಿ ಕರ್ತವ್ಯದಲ್ಲಿದ್ದ ಸಿಐಎಸ್‌ಎಫ್ ಸಿಬ್ಬಂದಿಯನ್ನು ಸಂಪರ್ಕಿಸಿದೆ. ಮೈ ಗಾಡ್...ಅವರು ಎಷ್ಟು ಪ್ರಾಮಾಣಿಕರಾಗಿದ್ದರೆಂದರೆ 15 ನಿಮಿಷಗಳಲ್ಲಿ ಫೋನ್ ಮತ್ತೆ ನನ್ನ ಕೈ ಸೇರಿತುʼʼ ಎಂದು ಹೇಳಿದ್ದಾರೆ.

"ದೇವರು ಇವರನ್ನು ಆಶೀರ್ವದಿಸಲಿ. ವಿಮಾನ ನಿಲ್ದಾಣದಲ್ಲಿ ತಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಯಾರೂ ಭಯಪಡಬೇಡಿ. ಕರ್ತವ್ಯದಲ್ಲಿದ್ದ CISF ಸಿಬ್ಬಂದಿಯ ಬಳಿಗೆ ಹೋಗಿ, ಅವರು ಅಗತ್ಯವಿರುವದನ್ನು ಮಾಡುತ್ತಾರೆʼʼ ಎಂದು ಸಲಹೆ ನೀಡಿದ್ದಾರೆ. ಅವರ ಪೋಸ್ಟ್ ತ್ವರಿತವಾಗಿ ಆನ್‌ಲೈನ್‌ನಲ್ಲಿ ಗಮನ ಸೆಳೆಯಿತು.

ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!

ಅನೇಕರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ನಡೆಯನ್ನು ಶ್ಲಾಘಿಸಿದರು. ಲೇಖಕಿಯ ಈ ಪೋಸ್ಟ್‌ಗೆ ಸಿಐಎಸ್‌ಎಫ್ ವಿಮಾನ ನಿಲ್ದಾಣದ ತಂಡವು ಪ್ರತಿಕ್ರಿಯೆ ನೀಡಿದೆ. ''ಆತ್ಮೀಯ ಭಾವನಾ ಅರೋರಾ, ನಿಮ್ಮ ಮಾತುಗಳು ಮತ್ತು ನಮ್ಮ CISF ಸಿಬ್ಬಂದಿಯ ಮೆಚ್ಚುಗೆಗೆ ಧನ್ಯವಾದಗಳು...ನಿಮ್ಮ ಸಂದೇಶವು ಶ್ರದ್ಧೆ ಮತ್ತು ಪ್ರಾಮಾಣಿಕತೆ ಯಿಂದ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಮುಂದುವರಿಸಲು ಪ್ರೇರೇಪಿಸುತ್ತದೆ" ಎಂದು ತಿಳಿಸಿದೆ.

ಪೋಸ್ಟ್ 55 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 2.3 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು, ʼʼನಿಜಕ್ಕೂ ಏರ್‌ಪೋರ್ಟ್‌ನಲ್ಲಿ ಮೊಬೈಲ್ ಮಿಸ್ ಆದಾಗ ಏನೂ ಮಾಡಬೇಕೆಂದು ತಿಳಿಯಲ್ಲ. ಸಿಬ್ಬಂದಿಯ ಕಾರ್ಯ ಮೆಚ್ಚಲೇ ಬೇಕುʼʼ ಎಂದಿದ್ದಾರೆ.