ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿಯ‌ ನಡು ರಸ್ತೆಯಲ್ಲೇ ಹುಟ್ಟುಹಬ್ಬ ಆಚರಣೆ: ಸಂಚಾರಕ್ಕೆ ಅಡ್ಡಿಪಡಿಸಿದ ಯುವಕರ ವಿರುದ್ಧ ಕಿಡಿ

Viral Video: ದೆಹಲಿಯ ಜನನಿಬಿಡ ರಸ್ತೆಯಲ್ಲಿಯೇ ಯುವಕರ ಗುಂಪೊಂದು ಹುಟ್ಟುಹಬ್ಬ ಆಚರಿಸಿದೆ. ದೆಹಲಿಯ ಬಾಬರ್ ಪುರ ಎಂಬಲ್ಲಿ ಈ ಘಟನೆ ನಡೆದಿದೆ. ಸುತ್ತ-ಮುತ್ತ ವಾಹನಗಳು ಸ್ಥಗಿತಗೊಂಡು ನಿಂತಿದ್ದರೂ ಯುವಕರು ಕ್ಯಾರೇ ಎನ್ನದೇ ಆಚರಣೆಯಲ್ಲಿ ಮುಳುಗಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದ್ದು ಇತರ ವಾಹನ ಸವಾರರು ಭಾರಿ ತೊಂದರೆ ಅನುಭವಿಸಿದ್ದಾರೆ.

ಮಧ್ಯ ರಸ್ತೆಯಲ್ಲೇ ಬರ್ತ್ ಡೇ ಆಚರಿಸಿದ ಯುವಕರು

ದೆಹಲಿ, ಮೇ 4: ದೆಹಲಿಯಲ್ಲಿ ಸಾರ್ವಜನಿಕ ಸ್ಥಳದಲ್ಲೇ ಯುವಕರ ಗುಂಪೊಂದು ಹುಚ್ಚಾಟ ಮೆರೆದಿದೆ. ಮಧ್ಯ ರಸ್ತೆಯಲ್ಲಿ ಯುವಕರು ಹುಟ್ಟುಹಬ್ಬ ಆಚರಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ರಸ್ತೆಯ ಮಧ್ಯಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ, ಕಾರಿನ ಮೇಲೆ ನಿಂತು ಸಂಭ್ರಮಿಸುತ್ತಿರುವ ದೃಶ್ಯ (Viral News) ಕಂಡು ಬಂದಿದೆ. ಸದ್ಯ ಈ ವಿಡಿಯೊ ಆನ್‌ಲೈನ್‌ನಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದೆ. ಬಳಕೆದಾರರು ನಾಗರಿಕ ಪ್ರಜ್ಞೆಯನ್ನು ಟೀಕಿಸುತ್ತಿದ್ದು ಕಾನೂನು ಜಾರಿಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ದೆಹಲಿಯ ಜನನಿಬಿಡ ರಸ್ತೆಯಲ್ಲಿಯೇ ಯುವಕರ ಗುಂಪೊಂದು ಹುಟ್ಟುಹಬ್ಬ ಆಚರಿಸಿದೆ. ದೆಹಲಿಯ ಬಾಬರ್‌ಪುರ ಎಂಬಲ್ಲಿ ಈ ಘಟನೆ ನಡೆದಿದೆ. ಸುತ್ತ-ಮುತ್ತ ವಾಹನಗಳ ಸಂಚಾರ ಸ್ಥಗಿತಗೊಂಡು ನಿಂತಿದ್ದರೂ ಯುವಕರು ಕ್ಯಾರೇ ಎನ್ನದೇ ಆಚರಣೆಯಲ್ಲಿ ಮುಳುಗಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದ್ದು ಇತರ ವಾಹನ ಸವಾರರು ಭಾರೀ ತೊಂದರೆ ಅನುಭವಿಸಿದ್ದಾರೆ.

ವಿಡಿಯೊ ನೋಡಿ:



ಅಷ್ಟೇ ಅಲ್ಲದೆ ಈ ಆಚರಣೆಯಲ್ಲಿ ಕಾರಿನ ಮೇಲೆ ಕಾನೂನು ಬಾಹಿರವಾಗಿ ಪೊಲೀಸ್ ಸ್ಟ್ರೋಬ್ ಲೈಟ್ ಬಳಕೆ ಮಾಡಿರುವ ದೃಶ್ಯ ಕೂಡ ಕಂಡು ಬಂದಿದೆ. ಪೋಸ್ಟ್ ಪ್ರಕಾರ, ಈ ದೃಶ್ಯವನ್ನು ಹನಿಖಾತ್ರಿ ಎಂಬ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ನೆಟ್ಟಿಗರು ದೆಹಲಿ ಪೊಲೀಸರು ಮತ್ತು ಸಂಚಾರ ನಿಗಮದ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

ಶೂಟಿಂಗ್‌ ವೇಳೆ ಗೋಡೆ ಏರಿದ ಅಕ್ಷಯ ಕುಮಾರ್‌; ಮೈ ಝುಂ ಎನ್ನುವ ಸಾಹಸ ದೃಶ್ಯ ವೈರಲ್‌

ಈ ಘಟನೆಯು ಆನ್‌ಲೈನ್‌ನಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ಅನೇಕರು ರಸ್ತೆ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಸಾರ್ವಜನಿಕ ರಸ್ತೆ ಬ್ಲಾಕ್ ಮಾಡಿ ಬರ್ತ್ ಡೇ ಆಚರಿಸಲು ಕಾನೂನಿನಲ್ಲಿ ಅವಕಾಶವಿದೆಯೇ?'' ಎಂದು ಕೆಲವರು ಕಿಡಿಕಾರಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ, ದೆಹಲಿ ಸಂಚಾರ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಹೆಚ್ಚಿನ ವಿವರಗಳಾದ ದಿನಾಂಕ ಮತ್ತು ಸಮಯವನ್ನು ನಮೂದಿಸಿ ಮಾಹಿತಿ ಲಭ್ಯವಾದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ.