ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೋಮು ಸೌಹಾರ್ದತೆ ಎಂದರೆ ಇದು; ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ ಮೆರವಣಿಗೆಗೆ ದಾರಿ ಕೊಡಲು ವಿಜಯೋತ್ಸವವನ್ನೇ ನಿಲ್ಲಿಸಿದ ಬಿಜೆಪಿ ಕಾರ್ಯಕರ್ತರು

Viral Video: ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆಯನ್ನು ಛಿದ್ರ ಮಾಡುವ ಮೂಲಕ ಬಿಜೆಪಿ ಈ ಬಾರಿ ಸರ್ಕಾರ ರಚಿಸಲು ಮುಂದಾಗಿದ್ದು, ಹೊಸ ಇತಿಹಾಸ ಬರೆದಿದೆ. ದೇಶಾದ್ಯಂತ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಮಾದರಿ ಘಟನೆಯೊಂದು ನಡೆದಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಮೆರೆದ ಯುವಕರು

ಕೋಲ್ಕತ್ತಾ, ಮೇ 5: ಪಶ್ಚಿಮ ಬಂಗಾಳದಲ್ಲಿ (West Bengal) ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೋಟೆಯನ್ನು ಛಿದ್ರ ಮಾಡುವ ಮೂಲಕ ಬಿಜೆಪಿ ಭಾರಿ ಮುನ್ನಡೆ ಸಾಧಿಸಿ ಸರ್ಕಾರ ರಚಿಸಲು ಸನ್ನದ್ಧವಾಗಿದೆ. ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಹೊಸ ಇತಿಹಾಸ ಬರೆದಿದೆ. ದೇಶಾದ್ಯಂತ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಅದಾಗ್ಯೂ ಇದರ ನಡುವೆ ಪಶ್ಚಿಮ ಬಂಗಾಳದಲ್ಲಿ ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ಸಂಭ್ರಮದ ಮೆರವಣಿಗೆ ಸಮಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯ ಮೆರವಣಿಗೆಯೊಂದು ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಸ್ಥಗಿತಗೊಳಿಸಿದ್ದಾರೆ. ಸದ್ಯ ಈ ವಿಡಿಯೊಗೆ (Viral News) ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ದೇಶಾದ್ಯಂತ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸುತ್ತಿದ್ದಂತೆ ಪಶ್ಚಿಮ ಬಂಗಾಳದ ವಿಡಿಯೊ ಎಲ್ಲರ ಹೃದಯ ಗೆಲ್ಲುತ್ತಿದೆ. ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಬಿಜೆಪಿ‌ ಕಾರ್ಯಕರ್ತರು ಮೆರೆದಿದ್ದು ಮಾನವೀಯತೆಯ ಪಾಠ ಸಾರಿದ್ದಾರೆ.

ವಿಡಿಯೊ ನೋಡಿ:



ವಿಡಿಯೊದಲ್ಲಿ ಬಿಜೆಪಿ ಕಾರ್ಯಕರ್ತರು ಬೀದಿಗಳಲ್ಲಿ ತಮ್ಮ ವಿಜಯವನ್ನು ಆಚರಿಸುತ್ತಿರುವುದನ್ನು ಕಾಣಬಹುದು. ಡೋಲು, ತಮಟೆ ಹಾಗೂ ಘೋಷ ವಾಕ್ಯಗಳೊಂದಿಗೆ ಇಡೀ ವಾತಾವರಣ ಹಬ್ಬದಿಂದ ಕೂಡಿತ್ತು. ಈ ಸಂಭ್ರಮದ ಮೆರವಣಿಗೆ ಸಾಗುತ್ತಿದ್ದ ರಸ್ತೆಯಲ್ಲೇ ಅಂತ್ಯಕ್ರಿಯೆಯ ಮೆರವಣಿಗೆವೊಂದು ಹಾದುಹೋಗಿದೆ. ಕಾರ್ಯಕರ್ತರು ಈ ಮೆರವಣಿಗೆಯನ್ನು ನೋಡಿದ ತಕ್ಷಣ, ತಮ್ಮ ಸಂಭ್ರಮಾಚರಣೆ ನಿಲ್ಲಿಸಿ ಹಾದುಹೋಗಲು ದಾರಿ ಮಾಡಿ ಕೊಟ್ಟಿದ್ದಾರೆ.

ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!

ಸಂಭ್ರಮಾಚರಣೆಯಲ್ಲಿದ್ದ ಕಾರ್ಯಕರ್ತರು ತಕ್ಷಣವೇ ತಮ್ಮ ಸಂಗೀತ ಮತ್ತು ಘೋಷಣೆಗಳನ್ನು ನಿಲ್ಲಿಸಿದರು. ತಮ್ಮ ಆಚರಣೆಗಳನ್ನು ನಿಲ್ಲಿಸಿ ಯಾವುದೇ ಅಡೆತಡೆಯಾಗದಂತೆ ರಸ್ತೆ ಬದಿಯಲ್ಲಿ ನಿಂತು ದಾರಿ ಮಾಡಿಕೊಟ್ಟರು. ಶವಸಂಸ್ಕಾರದ ಮೆರವಣಿಗೆ ಸಾಗಿಹೋದ ನಂತರವೇ ತಮ್ಮ ಸಂಭ್ರಮವನ್ನು ಮುಂದುವರಿಸಿದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವು ಪ್ರತಿಕ್ರಿಯೆ ಬಂದಿದೆ. ನೆಟ್ಟಿಗರೊಬ್ಬರು "ಬಂಗಾಳದ ಜಾತ್ಯತೀತ ಮನೋಭಾವ. ನಮ್ಮ ಬಂಗಾಳದ ಹೆಮ್ಮೆ" ಎಂದು ಹೇಳಿದ್ದಾರೆ. ಮತ್ತೊಬ್ಬರು ''ತುಂಬಾ ಒಳ್ಳೆಯ ನಡೆ" ಎಂದು ಬರೆದುಕೊಂಡಿದ್ದಾರೆ.