ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತುಂಬಿ ಹರಿಯುತ್ತಿರುವ ಅಪಾಯಕಾರಿ ನದಿಯಲ್ಲಿ ಯುವಕರ ಹುಚ್ಚಾಟ: ವಿಡಿಯೊ ಶೇರ್ ಮಾಡಿ ಎಚ್ಚರಿಕೆ ನೀಡಿದ ಪೊಲೀಸ್!

Viral Video: ಯುವಕರ ಗುಂಪೊಂದು ತೀವ್ರವಾಗಿ ಹರಿಯುತ್ತಿರುವ ನದಿಯಲ್ಲಿ ಈಜುತ್ತಿರುವ ವಿಡಿಯೊ ವೈರಲ್ ಆಗಿದ್ದು ನೀರಿನ ರಭಸದ ಪ್ರವಾಹದಲ್ಲಿ ಪ್ರಾಣದ ಭಯ ಇಲ್ಲದೆ ಈಜಾಡುತ್ತಿದ್ದಾರೆ. ಈ ದೃಶ್ಯ ಎಷ್ಟು ಅಪಾಯಕಾರಿ ಇತ್ತು ಅಂದ್ರೆ ಪರಿಣಿತ ಈಜುಗಾರರೂ ಸಹ ಇಂತಹ ರಭಸದ ಪ್ರವಾಹದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಈ ವಿಡಿಯೋವನ್ನು ಹಂಚಿಕೊಂಡ ಉತ್ತರಾಖಂಡ ಪೊಲೀಸರು ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ಪ್ರವಾಸಿಗರಿಗೆ ನೀಡಿದ್ದಾರೆ‌.

ತುಂಬಿ ಹರಿಯುತ್ತಿರುವ ಅಪಾಯಕಾರಿ ನದಿಯಲ್ಲಿ ಯುವಕರ ಹುಚ್ಚಾಟ

ಡೆಹ್ರಾಡೂನ್,ಜು.24: ಮಳೆಗಾಲ ಆರಂಭವಾದರೆ ಸಾಕು, ನೈಸರ್ಗಿಕ ತಾಣಕ್ಕೆ ಹೆಚ್ಚಿನವರು ಭೇಟಿ ನೀಡುತ್ತಾರೆ.ಆದರೆ ನೀರಿನಿಂದ ಆವೃತವಾದ ಜಲಧಾರೆಗಳನ್ನು ಕಣ್ತುಂಬಿಕೊಳ್ಳಲು ಹೋಗಿ ಕೆಲವರು ಜೀವಕ್ಕೆ ಆಪತ್ತು ತಂದುಕೊಂಡವರು ಇದ್ದಾರೆ. ಇದೀಗ ಅಂಥದ್ದೇ ಭಯಾನಕ ಘಟನೆಯೊಂದು ನಡೆದಿದೆ. ಯುವಕರ ಗುಂಪೊಂದು ತೀವ್ರವಾಗಿ ಹರಿಯುತ್ತಿರುವ ನದಿಯಲ್ಲಿ ಈಜುತ್ತಿರುವ ವಿಡಿಯೊ ವೈರಲ್ ಆಗಿದ್ದು ನೀರಿನ ರಭಸದ ಪ್ರವಾಹದಲ್ಲಿ ಪ್ರಾಣದ ಭಯ ಇಲ್ಲದೆ ಈಜಾಡುತ್ತಿದ್ದಾರೆ. ಈ ದೃಶ್ಯ ಎಷ್ಟು ಅಪಾಯಕಾರಿ ಇತ್ತು ಅಂದ್ರೆ ಪರಿಣಿತ ಈಜುಗಾರರೂ ಸಹ ಇಂತಹ ರಭಸದ ಪ್ರವಾಹದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಈ ವಿಡಿಯೋವನ್ನು (Viral News) ಹಂಚಿಕೊಂಡ ಉತ್ತರಾಖಂಡ ಪೊಲೀಸರು ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ಪ್ರವಾಸಿಗರಿಗೆ ನೀಡಿದ್ದಾರೆ‌.

ಉತ್ತರಾಂಡ ಪೊಲೀಸರು ಜಾಗೃತಿ ಮೂಡಿಸಲು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ನದಿಯೊಂದು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು ನೀರಿನ ಮಟ್ಟ ತೀವ್ರವಾಗಿತ್ತು. ಭೀಕರ ಪ್ರವಾಹದ ಮಧ್ಯೆ ಮೂವರೂ ಯುವಕರು ನಿಂತಿದ್ದು ತೀವ್ರ ಅಲೆಯಿದ್ದರೂ ನೀರಿಗೆ ಇಳಿದಿದ್ದಾರೆ. ಯುವಕರ ಪ್ರಾಣಕ್ಕೆ ಅಪಾಯ ತರುವಷ್ಟು ನೀರಿನ ಹರಿವು ಇದ್ದರೂ ಜೀವವನ್ನೇ ಬಲಿಪಡೆಯುವ ಪರಿಸ್ಥಿತಿ ಇದ್ದರೂ ಯುವಕರು ಬೇಜವ್ದಾರಿ ವರ್ತನೆ ತೋರಿದ್ದಾರೆ.

ವಿಡಿಯೋ ನೋಡಿ:



ವಿಡಿಯೋವನ್ನು ಹಂಚಿಕೊಂಡ ಉತ್ತರಾಖಂಡ ಪೊಲೀಸರು, ಉಕ್ಕಿ ಹರಿಯುವ ನದಿಗಳಿಗೆ ಇಳಿದು ಜೀವವನ್ನು ಅಪಾಯಕ್ಕೆ ಸಿಲುಕಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಮಳೆಗಾಲದಲ್ಲಿ ನದಿಯ ನೀರಿನ ಮಟ್ಟ ಹೆಚ್ಚಾಗಬಹುದು, ನೀರಿನ ಪ್ರವಾಹಗಳು, ಜಾರುವ ಬಂಡೆಗಳು ಗಂಭೀರ ಅನಾಹುತ ಉಂಟು ಮಾಡಬಹುದು ಎಂದು ಇಲಾಖೆ ಒತ್ತಿ ಹೇಳಿದೆ.

Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

"ಉಕ್ಕಿ ಹರಿಯುವ ನದಿಗಳಿಂದ ದೂರವಿರುವುದೇ ಸುರಕ್ಷಿತ ನದಿಯ ಬಲವಾದ ಪ್ರವಾಹವು ಕ್ಷಣಮಾತ್ರದಲ್ಲಿ ಮಾರಕ ವಾಗಬಹುದು. ಅಪಾಯಗಳನ್ನು ತೆಗೆದುಕೊಳ್ಳಬೇಡಿ, ಜಾಗರೂಕರಾಗಿರಿ. ಯಾರಾದರೂ ಯಾವುದೇ ಅಪಾಯಕಾರಿ ಸ್ಥಳದಲ್ಲಿ ನೀವು ನೋಡಿದರೆ, ತಕ್ಷಣ 112 ಗೆ ತಿಳಿಸಿ" ಎಂದು ಈ ವಿಡಿಯೊಗೆ ಶೀರ್ಷಿಕೆ ಬರೆದು ಪೊಲೀಸರು ಶೇರ್ ಮಾಡಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕರ ಬೇಜವಾಬ್ದಾರಿ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ದಿನ ನಿತ್ಯ ಅವಘಡಗಳು ಸಂಭವಿಸಿದರೂ ಇವರಿಗೆ ಬುದ್ಧಿ ಬಂದಿಲ್ಲ ಎಂದು ಒಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ಪ್ರಾಣಕ್ಕೆ ಅಪಾಯ ಇದೆ ಎಂದು ತಿಳಿದಿದ್ದರೂ ಇವರ ನಡವಳಿಗೆ ದುರದೃಷ್ಟಕರ ಅಂದರು.