ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ರೀಲ್ಸ್‌ಗಾಗಿ ಸ್ಕೂಟರ್‌ನಲ್ಲಿ ಐವರ ಅಪಾಯಕಾರಿ ಪ್ರಯಾಣ; ಮುಂದೆ ಸಿಕ್ಕಿದ್ದು ಯಾರೂ ಊಹಿಸದ ಟ್ವಿಸ್ಟ್‌!

Viral News: ಯುವ ಸಮುದಾಯ ಸೋಷಿಯಲ್ ಮೀಡಿಯಾ ಕಂಟೆಂಟ್‌ಗಾಗಿ ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವ ಸಾಹಸವನ್ನು ಮಾಡುತ್ತಿದೆ. ರಸ್ತೆ ಮಧ್ಯೆ ಸ್ಟಂಟ್, ರೈಲು ಹಳಿಯಲ್ಲಿ ರೀಲ್ಸ್ ಚಿತ್ರೀಕರಣ ಹೀಗೆ ಅಪಾಯಕಾರಿ ಸ್ಥಳದಲ್ಲಿ ವಿಡಿಯೊ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಸ್ಕೂಟರ್ ಒಂದರಲ್ಲಿ ಬರೋಬ್ಬರಿ ಐವರು ಪ್ರಯಾಣಿಸಿ ರೀಲ್ಸ್‌ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ರಸ್ತೆ ಮಧ್ಯೆ ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಯುವಕರು

ಮುಂಬೈ, ಸೆ‌. 7: ಇತ್ತೀಚೆಗೆ ಯುವ ಸಮುದಾಯವು ಸೋಷಿಯಲ್ ಮೀಡಿಯಾ ಕಂಟೆಂಟ್‌ಗಾಗಿ ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವ ಸಾಹಸ ಮಾಡುತ್ತಿದೆ. ರಸ್ತೆ ಮಧ್ಯೆ ಸ್ಟಂಟ್, ರೈಲು ಹಳಿಯಲ್ಲಿ ರೀಲ್ಸ್ ಚಿತ್ರೀಕರಣ ಹೀಗೆ ಅಪಾಯಕಾರಿ ಸ್ಥಳದಲ್ಲಿ ವಿಡಿಯೊ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಸ್ಕೂಟರ್ ಒಂದರಲ್ಲಿ ಬರೋಬ್ಬರಿ ಐವರು ಯುವಕರು ಪ್ರಯಾಣಿಸುವ ಮೂಲಕ ರೀಲ್ಸ್ ಮಾಡಿದ್ದಾರೆ. ಈ ವಿಡಿಯೊ ವೈರಲ್ (Viral News) ಆದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 1ರ ಮಧ್ಯಾಹ್ನ ಪಂಚಕ್ಕಿ-ಔರಂಗಪುರ ಪ್ರದೇಶದಲ್ಲಿ ಪಠಾಣ್ ಹಾಗೂ ಆತನ ನಾಲ್ವರು ಸ್ನೇಹಿತರು ಅತಿಯಾದ ವೇಗದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ನಾಲ್ವರು ಯುವಕರು ಮತ್ತೊಬ್ಬನನ್ನು ಗಾಳಿಯಲ್ಲಿ ತೂಗಾಡಿಸಿಕೊಂಡು ಸಾಹಸ ಪ್ರದರ್ಶಿಸಿದ್ದಾರೆ.

ವಿಡಿಯೊ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಯುವಕರು ಈ ಸ್ಟಂಟ್ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ವರು ಸವಾರಿ ಮಾಡಿ ಒಬ್ಬನನ್ನು ಗಾಳಿಯಲ್ಲಿ ತೂಗಾಡಿಸಿದ್ದಾರೆ. ​ಅಷ್ಟೇ ಅಲ್ಲದೆ, ಚಾಲನೆ ಮಾಡುತ್ತಿದ್ದ ಯುವಕ ಹೆಲ್ಮೆಟ್ ಧರಿಸಿರಲಿಲ್ಲ. ಇತರ ಪ್ರಯಾಣಿಕರ ಜೀವಕ್ಕೂ ಅಪಾಯ ತಂದೊಡ್ಡುವ ರೀತಿಯಲ್ಲಿ ಸ್ಕೂಟರ್‌ ಚಲಾಯಿಸಿದ್ದಾನೆ.

ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಈ ಘಟನೆಯು ಮತ್ತೊಮ್ಮ ರಸ್ತೆಯಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿರುವ ಬಗ್ಗೆ ಕಳವಳ ಮೂಡಿಸಿದೆ. ಈ ಘಟನೆ ವಿರುದ್ಧ ಕಾನ್ಸ್‌ಟೇಬಲ್ ಮಹಾಶಾಂಖ್ ನಾಮದೇವರಾವ್ ದಂಡ್ಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಕೇಸ್ ದಾಖಲಾಗುತ್ತಿದ್ದಂತೆ ತಪ್ಪು ಸ್ಕೂಟರ್‌ ಚಲಾಯಿಸಿದ ಯುವಕ, ಕ್ಯಾಮೆರಾ ಮುಂದೆ ಬಂದು ಕ್ಷಮಾಪಣೆ ಕೇಳಿದ್ದಾನೆ. "ನಾವು ಐವರು ಒಂದೇ ವಾಹನದಲ್ಲಿ ಪ್ರಯಾಣಿಸಿ ಇನ್‌ಸ್ಟಾಗ್ರಾಮ್‌ಗಾಗಿ ರೀಲ್ಸ್ ಮಾಡಿದೆವು. ರಸ್ತೆ ನಿಯಮಉಲ್ಲಂಘಿಸಿ ನಾವು ದೊಡ್ಡ ತಪ್ಪು ಮಾಡಿದ್ದೇವೆ. ಅದಕ್ಕೆ ತಕ್ಕ ಶಿಕ್ಷೆಯನ್ನೂ ಅನುಭವಿಸಿದ್ದೇವೆ. ​ಮುಂದೆ ಈ ರೀತಿಯ ಮಾಡುವುದಿಲ್ಲ ಹಾಗೂ ಸ್ಕೂಟರ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಪ್ರಯಾಣ ಮಾಡುವುದಿಲ್ಲ" ಎಂದು ತಪ್ಪು ಒಪ್ಪಿಕೊಂಡಿದ್ದಾನೆ.