ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರವಾಸಕ್ಕೆಂದು ಬಂದು ಹೋಂ ಸ್ಟೇ ಧ್ವಂಸಗೊಳಿಸಿ ವಿಕೃತಿ ಮೆರೆದ ಯುವಕರು; ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಗರಂ

Viral Video: ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಆಗ್ರಾಕ್ಕೆ ಬಂದ ಯುವಕರ ತಂಡವೊಂದು ಸ್ಟೆ ಮಾಡಿದ್ದ ಕೊಠಡಿಯನ್ನು ಧ್ವಂಸಗೊಳಿಸಿದ ಘಟನೆಯೊಂದು ನಡೆದಿದೆ. ಯುವಕರ ಈ ಅಸಭ್ಯ ವರ್ತನೆಯೂ ಆಕ್ರೋಶಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಕ್ಲಿಪ್ ಬಗ್ಗೆ ನಾಗರಿಕ ಪ್ರಜ್ಞೆಯ ಕೊರತೆಯ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ

ಹೋಮ್ ಸ್ಟೇ ಧ್ವಂಸಗೊಳಿಸಿದ ಯುವಕರು

ಆಗ್ರಾ,ಜ.22: ಪ್ರೆಂಡ್ಸ್ ಜೊತೆ ಸೇರಿ ಟ್ರಿಪ್ ಪ್ಲಾನ್ ಮಾಡಿ ತೆರಳುವವರು ಬಹುತೇಕ ಮಂದಿ ಇರುತ್ತಾರೆ. ಅಂತೆಯೇ ಕೆಲವರು ತಾವು ಹೋದ ಪ್ರವಾಸಿ ಸ್ಥಳವನ್ನು ಅನುಭವಿಕರಿಸಿ ಎಂಜಾಯ್ ಮಾಡುತ್ತಾರೆ. ಆದ್ರೆ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಆಗ್ರಾಕ್ಕೆ ಬಂದ ಯುವಕರ ತಂಡವೊಂದು ಸ್ಟೆ ಮಾಡಿದ್ದ ಕೊಠಡಿಯನ್ನು ಧ್ವಂಸ ಗೊಳಿಸಿದ ಘಟನೆಯೊಂದು ನಡೆದಿದೆ. ಯುವಕರ ಈ ಅಸಭ್ಯ ವರ್ತನೆಯೂ ಆಕ್ರೋಶಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಕ್ಲಿಪ್ (Viral Video) ಬಗ್ಗೆ ನಾಗರಿಕ ಪ್ರಜ್ಞೆಯ ಕೊರತೆಯ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಯುವಕರ ಗುಂಪೊಂದು ಆಗ್ರಾಗೆ ಭೇಟಿ ನೀಡಿದ್ದು ಕೇವಲ 500 ರೂಪಾಯಿ ನೀಡಿ ಕೊಠಡಿ ಬುಕ್ ಮಾಡಿದ್ದಾರೆ. ಕಡಿಮೆ ಬೆಲೆಗೆ ಬಾಡಿಗೆಗೆ ಸಿಕ್ಕ ರೂಮನ್ನು ಬೇಕಂತಲೇ ಅಸ್ತವ್ಯಸ್ತಗೊಳಿಸಿ, ಅಲ್ಲಿನ ವಸ್ತುಗಳನ್ನು ಕದ್ದು ವಿಕೃತಿ ಮೆರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಶೇರ್ ಮಾಡಲಾಗಿದ್ದು , ಯುವಕರ ಗುಂಪೊಂದು ರೂಮಿನ ಒಳಗೆ ಮಾಡುತ್ತಿರುವ ಅವಾಂತರಗಳು ನೋಡಬಹುದು.

ವಿಡಿಯೋ ನೋಡಿ:



ವೀಡಿಯೊದಲ್ಲಿ, ಒಂದು ಕೋಣೆಯೊಳಗೆ ಯುವ ಹುಡುಗರ ಗುಂಪನ್ನು ಕಾಣಬಹುದು. ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ ವ್ಯಕ್ತಿಯು ನಗರವನ್ನು ಅನ್ವೇಷಿಸಲು ಆಗ್ರಾಕ್ಕೆ ಬಂದಿರುವುದಾಗಿ ಹೇಳುತ್ತಾನೆ. ಒಬ್ಬ ಯುವಕನು ಶೂ ಧರಿಸಿ ಹಾಸಿಗೆಗಳ ಮೇಲೆ ಓಡುವುದು ಮತ್ತು ಹಾರಿ ಅವು ಗಳನ್ನು ಕೊಳಕು ಮಾಡುವುದನ್ನು ಕಾಣಬಹುದು.ಇನ್ನೊಬ್ಬ ವ್ಯಕ್ತಿಯು ಕಂಬಳಿಗಳನ್ನು ತುಳಿದು ಅದರಿಂದ ನೆಲವನ್ನು ಸ್ವಚ್ಛಗೊಳಿಸುವುದನ್ನು ಸಹ ಕಾಣಬಹುದು.

Viral Video: ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ

ರೂಮಿನಿಂದ ಹೊರಡುವ ಮುನ್ನ ಅಲ್ಲಿನ ಬಲ್ಬ್ ಅನ್ನು ಕದ್ದಿದ್ದೇವೆ ವಿಡಿಯೋ ಚಿತ್ರೀಕರಿಸು ವವನು ಹೆಮ್ಮೆಯಿಂದ ನಾವು ಇಲ್ಲಿ‌ ಬಹಳಷ್ಟು ಆನಂದಿಸಿದೆವು ಎಂದು ಹೇಳಿಕೊಂಡಿದ್ದಾನೆ. ಈ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಯುವಕರ ಕೃತ್ಯಗಳಿಗಾಗಿ ಹಲವಾರು ಟೀಕಿಸಿದ್ದಾರೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ನಿಕಿಲ್ ಸೈನಿ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರವಾಸಿ ತಾಣದಲ್ಲಿ ಕಡಿಮೆ ದರಕ್ಕೆ ತಂಗಲು ಸ್ಥಳ ಕೊಟ್ಟರೆ ಈ ರೀತಿ ಅಶಿಸ್ತಿನಿಂದ ನಡೆದುಕೊಳ್ಳುವುದೇ? ಇದು ನಾಗರಿಕ ಪ್ರಜ್ಞೆಯ ಕೊರತೆ ಎಂದು ಕಿಡಿಕಾರಿ ದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದು ಈ ಕೃತ್ಯವು "ಅತ್ಯಂತ ಅಸಹ್ಯಕರವಾಗಿದೆ" ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ರೂಮ್ ಬಾಡಿಗೆ ಕಡಿಮೆ ಇರಬಹುದು, ಆದರೆ ವರ್ತನೆ ಇಷ್ಟು ಕೀಳಾಗಿ ಇರಬಾರದು ಎಂದು ಬರೆದುಕೊಂಡಿದ್ದಾರೆ.