ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೈಸೂರಿನಲ್ಲೊಂದು ಬೆಕ್ಕಿನ ಮನೆ !

ಹಿಮಾಲಿಯನ್, ಬೆಂಗಾಲಿಯಂತಹ ಸ್ವದೇಶಿ ತಳಿಗಳ ಜೊತೆಗೆ ಸೈಬೀರಿಯನ್, ಪರ್ಷಿಯನ್ ತಳಿಯ ಬೆಕ್ಕುಗಳು ಇಲ್ಲಿವೆ. ಎಲ್ಲವೂ ಪರಸ್ಪರ ಹೊಂದಿಕೊಂಡು ಜೀವಿ ಸುತ್ತಿವೆ. ಬೆಕ್ಕುಗಳಿಗೆ ಸ್ವಚ್ಛ ಆಹಾರ, ಶುದ್ಧಗಾಳಿ ಮತ್ತು ನೀರು ಪೂರೈಸುವ ಮೂಲಕ ಆರೋಗ್ಯದ ಕಾಳಜಿ ವಹಿಸಲಾಗುತ್ತಿದೆ. ಕಾಲ ಕಾಲಕ್ಕೆ ಪಶು ವೈದ್ಯಾಧಿಕಾರಿಗಳಿಂದ ಲಸಿಕೆಗಳನ್ನು ಹಾಕಿಸುತ್ತಾರೆ.

ಸುರೇಶ ಗುದಗನವರ

ಪ್ರವಾಸಿ ತಾಣವಾಗಿ ಪ್ರಸಿದ ವಾಗಿರುವ ಮೈಸೂರಿನಲ್ಲಿ ಒಂದು ಬೆಕ್ಕುಗಳ ಲೋಕವಿದೆ, ಗೊತ್ತೇ?

ಅಲ್ಲಿಗೆ ಹೋದರೆ, ವಿವಿಧ ಶೃತಿಗಳಲ್ಲಿ ಬೆಕ್ಕುಗಳು ಮಿಂಯಾವ್ ಎನ್ನುವುದನ್ನು ಕೇಳು ವುದೇ ಒಂದು ವಿಭಿನ್ನ ಅನುಭವ; ಬೆಕ್ಕುಗಳನ್ನು ಇಷ್ಟಪಡುವವರಿಗೆ ಇಲ್ಲೊಂದು ಸಂಗೀತ ಕಚೇರಿಯ ಅನುಭವ ವೇ ದೊರಕ ಬಹುದು!

ಮೈಸೂರು-ನಂಜನಗೂಡು ರಸ್ತೆಯ ಮನೆ ಯೊಂದರಲ್ಲಿ ಹಲವಾರು ಬೆಕ್ಕುಗಳ ಒಡನಾಟದಲ್ಲಿ ಇಂತಹದ್ದೊಂದು ಲೋಕದ ಪರಿಚಯವಾಗುತ್ತದೆ. ಮನೆಯ ತುಂಬಾ ಬೆಕ್ಕುಗಳದ್ದೇ ಕಲರವ. ಮೈಸೂರಿನ ಶರತ್‌ಕುಮಾರ ಸ್ವಭಾವತಃ ಬೆಕ್ಕು ಪ್ರಿಯರು. ಅಪಘಾತದಲ್ಲಿ ಸಾವನ್ನಪ್ಪಿದ ತನ್ನ ಪ್ರೀತಿಯ ಬೆಕ್ಕಿನ ನೆನಪಿನಲ್ಲಿ ಕಟ್ಟಿದ ಬೆಕ್ಕಿನ ಸಂಗ್ರ ಹಾಲಯ, ಇಂದು ಹಲವು ಬೆಕ್ಕುಗಳಿಗೆ ಆಶ್ರಯ ನೀಡಿವೆ. ದೇಸಿ ತಳಿ ಬೆಕ್ಕುಗಳಿಂದ ಹಿಡಿದು ವಿದೇಶಿ ತಳಿಗ ವರೆಗಿನ ಬೆಕ್ಕುಗಳು ಈ ಸಂಗ್ರಹಾಲಯ ದಲ್ಲಿದ್ದು, ಬೆಕ್ಕುಗಳು ಭಯಮುಕ್ತವಾಗಿ ಓಡಾಡುವದನ್ನು ನಾವು ಕಾಣಬಹುದಾಗಿದೆ.

ಇದನ್ನೂ ಓದಿ: Hari Paraak Column: ಮೂಗು ತೂರಿಸೋ ಕೆಲ್ಸ ಮತ್ತು ಮೂಗು ತುರಿಸೋ ಕೆಲ್ಸ

ಹಿಮಾಲಿಯನ್, ಬೆಂಗಾಲಿಯಂತಹ ಸ್ವದೇಶಿ ತಳಿಗಳ ಜೊತೆಗೆ ಸೈಬೀರಿಯನ್, ಪರ್ಷಿಯನ್ ತಳಿಯ ಬೆಕ್ಕುಗಳು ಇಲ್ಲಿವೆ. ಎಲ್ಲವೂ ಪರಸ್ಪರ ಹೊಂದಿಕೊಂಡು ಜೀವಿ ಸುತ್ತಿವೆ. ಬೆಕ್ಕುಗಳಿಗೆ ಸ್ವಚ್ಛ ಆಹಾರ, ಶುದ್ಧಗಾಳಿ ಮತ್ತು ನೀರು ಪೂರೈಸುವ ಮೂಲಕ ಆರೋಗ್ಯದ ಕಾಳಜಿ ವಹಿಸಲಾಗುತ್ತಿದೆ. ಕಾಲ ಕಾಲಕ್ಕೆ ಪಶು ವೈದ್ಯಾಧಿಕಾರಿಗಳಿಂದ ಲಸಿಕೆಗಳನ್ನು ಹಾಕಿಸುತ್ತಾರೆ. ಇದು ಕೇವಲ ಕ್ಯಾಟ್ ಮ್ಯೂಸಿ ಯಂ ಮಾತ್ರವಲ್ಲ. ಬೆಕ್ಕುಗಳನ್ನು ಸಾಕುವವರಿಗೆ ಮಾಹಿತಿಯ ತಾಣವು ಆಗಿದೆ.

ಗೋಡೆಗಳಲ್ಲಿ ಅಂಟಿಸಿರುವ ಭಿತ್ತಿ ಪತ್ರಗಳು, ಚಿತ್ರಗಳು, ಬೆಕ್ಕಿನ ಜೀವನ ಶೈಲಿ, ಆಹಾರ ಕ್ರಮ, ಹಾವ ಭಾವ ಇತ್ಯಾದಿ ವಿಷಯ ಗಳು ಬೆಕ್ಕುಗಳ ಕುರಿತಾದ ಮಾಹಿತಿಯನ್ನು ಒದಗಿಸುತ್ತವೆ. ಈ ಸಂಗ್ರಹಾಲ ಯವು ಬೆಳಿಗ್ಗೆ 10ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ. ಸಂಗ್ರಹಾಲ ಯವನ್ನು ವೀಕ್ಷಿಸಲು ಪ್ರವೇಶ ಶುಲ್ಕವಿದೆ. ಇನ್ನೂ ಕೆಲವು ತಳಿಗಳು ಬೆಕ್ಕುಗಳನ್ನು ಸಂಗ್ರಹಾಲಯಕ್ಕೆ ತರುವ ಹಾಗೂ ಪ್ರವಾಸಿಗರಿಗೆ ಬೆಕ್ಕುಗಳೊಂದಿಗೆ ಸಮಯ ಕಳೆಯುತ್ತಾ ಕಾಫಿ ಸವಿಯುವ ಕ್ಯಾಟ್ ಕೆಫೆಟೇರಿ ಯಾವನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿರು ವುದಾಗಿ ಜಿನ್ ಮಿನ್ ಕ್ಯಾಟ್ ವರ್ಲ್ಡ್ ಬೆಕ್ಕು ಸಂಗ್ರಹಾಲಯದ ಸ್ಥಾಪಕ ಶರತ್ ಕುಮಾರ ಅವರ ಆಶಯ.

ಮುಂಬಯಿಯಲ್ಲಿ ಇಂತಹ ಒಂದು ಕೆಫೆಟೇರಿಯಾ ಇದೆ; ಅಲ್ಲಿ ಬೆಕ್ಕುಗಳನ್ನು ನೋಡಲು ಶುಲ್ಕ ವಿಲ್ಲ, ಆದರೆ ಕೆಫೆಟೇರಿಯಾದಲ್ಲಿ ಏನನ್ನಾ ದರೂ ಖರೀದಿಸಿದರೆ ಸಾಕು. ನೀವು ಬೆಕ್ಕು ಪ್ರಿಯ ರಾಗಿದ್ದರೆ, ಮೈಸೂರಿನ ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’ಗೆ ಭೇಟಿ ನೀಡಬಹುದು, ಬೆಕ್ಕುಗಳ ಸಾಂಗತ್ಯ ದಲ್ಲಿ ಕಾಲ ಕಳೆಯಬಹುದು.