ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐದು ದಶಕದ ನಂತರ ಯುವ ಜನರ ಮನ ಗೆದ್ದ ಅಗಲ ಬಾಟಂನ ಜೀನ್ಸ್: ಹಳೆ ಫ್ಯಾಷನ್‌ ಅಪ್ಪಿಕೊಂಡ ಹೊಸ ಜೆನ್

ಹಳೆಯ ಹ್ಯಾಂಡ್‌ಬ್ಯಾಗ್‌ಗಳು, ವಾಚ್‌ಗಳು ಮತ್ತು ಸಾಂಪ್ರದಾಯಿಕ ಆಕ್ಸೆಸರೀಸ್‌ಗಳೂ ಮತ್ತೆ ಟ್ರೆಂಡ್‌ಗೆ ಬರುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ, ಈಗ ಅಜ್ಜಿಯ ವಾರ್ಡ್‌ರೋಬ್ ನಮ್ಮದ ಕ್ಕಿಂತ ಹೆಚ್ಚು ಫ್ಯಾಷನೇ ಬಲ್ ಆಗಿರಬಹುದು! ಒಂದು ದಿನ ಸ್ಕಿನ್ನಿ ಜೀನ್ಸ್‌ಗಳದ್ದೇ ಹವಾ; ಮರುದಿನ ಅವು ಹಾಕಿಕೊಂಡರೆ ಫ್ಯಾಷನ್ ಲೋಕಕ್ಕೇ ಅಪಮಾನ ಮಾಡಿದಂತೆ!

ಮಧುಮಿತಾ ಸಿದ್ದೇಶ್ವರ್ ‌

1970-80ರ ದಶಕದಲ್ಲಿ ವೈಡ್ ಲೆಗ್ ಪ್ಯಾಂಟ್ ಬಹಳ ಜನಪ್ರಿಯವಾಗಿತ್ತು; ಅಂದಿನ ಸಿನಿಮಾ ನಟನಟಿ ಯರು ಅಂತಹ ಬಟ್ಟೆ ಧರಿಸಿ ಕುಣಿದಾಡುತ್ತಿದ್ದರು! ಅಂದಿನ ಯುವ ಜನತೆಗೆ, ವೈಡ್ ಬೆಲ್ ಬಾಟಂ ಪ್ಯಾಂಟ್ ಅಂದರೆ, ಹುಚ್ಚು; ಪಾದದ ಬಳಿ, ಪ್ಯಾಂಟಿನ ಅಗಲ ಹೆಚ್ಚಾದಷ್ಟೂ, ಹುಚ್ಚು ಜಾಸ್ತಿ! ಈಗ ಮತ್ತೆ ಅದೇ ರೀತಿಯ ಫ್ಯಾಷನ್ ಮರುಕಳಿಸಿದೆ. ಇದನ್ನು ವೈಡ್ ಲೆಗ್ ಜೀನ್ಸ್ ಎನ್ನುವರು! ಇದಕ್ಕೇ ಅಲ್ಲವೇ, ಭೂಮಿಯು ದುಂಡಾಗಿದೆ ಎಂದು ಹೇಳುವುದು‌.

ಫ್ಯಾಷನ್‌ಗೆ ಒಂದು ವಿಚಿತ್ರ ಗುಣವಿದೆ. ಮೊದಲು ‘ಹಳೆಯ ಫ್ಯಾಷನ್’ ಎಂದುಕೊಂಡಿದ್ದೇ ಒಂದು ದಿನ ನಮ್ಮ ವಾರ್ಡ್ ರೋಬ್‌ನ ಅತ್ಯಂತ ಟ್ರೆಂಡಿ ವಸ್ತುವಾಗಿ ಬಿಡುತ್ತದೆ. ಅದಕ್ಕೇ ಅಲ್ಲವೇ ‘ಓಲ್ಡ್ ಇಸ್ ಗೋಲ್ಡ್’ ಅಂತ ಹೇಳೋದು! ಒಮ್ಮೆ ಹಳೆಯದು ಎಂದು ಬದಿಗಿಟ್ಟಿದ್ದ ವಸ್ತುಗಳೇ ಮತ್ತೆ ಹೊಸ ಟ್ರೆಂಡ್ ಆಗಿ ಮರಳುತ್ತಿವೆ. ಅಜ್ಜಿಯ ಹಳೆಯ ಸೀರೆಗಳು ಈಗ ವಿಂಟೇಜ್ ಅಥವಾ ಆಂಟಿಕ್ ಫ್ಯಾಷನ್ ಎಂದು ಹೆಮ್ಮೆಯಿಂದ ಧರಿಸಲಾಗುತ್ತವೆ. ಅವರ ಹಳೆಯ ಆಭರಣಗಳು ಮತ್ತೆ ಹೊರಗೆ ಬಂದು ‘ಟೈಮ್‌ಲೆಸ್ ಜ್ಯುವೆಲ್ಲರಿ’ ಆಗುತ್ತವೆ.

ಹಳೆಯ ಹ್ಯಾಂಡ್‌ಬ್ಯಾಗ್‌ಗಳು, ವಾಚ್‌ಗಳು ಮತ್ತು ಸಾಂಪ್ರದಾಯಿಕ ಆಕ್ಸೆಸರೀಸ್‌ಗಳೂ ಮತ್ತೆ ಟ್ರೆಂಡ್‌ಗೆ ಬರುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ, ಈಗ ಅಜ್ಜಿಯ ವಾರ್ಡ್‌ರೋಬ್ ನಮ್ಮದ ಕ್ಕಿಂತ ಹೆಚ್ಚು ಫ್ಯಾಷನೇಬಲ್ ಆಗಿರಬಹುದು! ಒಂದು ದಿನ ಸ್ಕಿನ್ನಿ ಜೀನ್ಸ್‌ಗಳದ್ದೇ ಹವಾ; ಮರುದಿನ ಅವು ಹಾಕಿಕೊಂಡರೆ ಫ್ಯಾಷನ್ ಲೋಕಕ್ಕೇ ಅಪಮಾನ ಮಾಡಿದಂತೆ!

ಈಗ ಹಾಗೇ ಆಗಿದೆ: ನಮ್ಮ ಜೀವನಕ್ಕೆ ವೈಡ್-ಲೆಗ್ಡ್ ಜೀನ್ಸ್ ಎಂಟ್ರಿ ಕೊಟ್ಟಿವೆ. ವಾರ್ಡ್ ರೋಬ್, ಇನ್ ಸ್ಟಾಗ್ರಾಂ ಫೀಡ್ ಎಲ್ಲೆಲ್ಲೂ ಇದರದ್ದೇ ಕ್ರೇಜ್. ಕಾಲೇಜಿನಿಂದ ಹಿಡಿದು ಕಾಫಿ ಶಾಪ್‌ವರೆಗೆ ಹುಡುಗಿಯರ ಫೇವರಿಟ್ ಡ್ರೆಸ್ ಇದು. ಆರಾಮವಾಗಿದ್ದು, ನಾನು ಏನೂ ಪ್ರಯತ್ನ ಮಾಡದಿದ್ದರೂ ತುಂಬಾ ಫ್ಯಾಷನೇಬಲ್ ಆಗಿ ಕಾಣುತ್ತಿದ್ದೇನೆ ಎಂಬ ಲುಕ್ ಕೊಡುವುದರಿಂದ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಈ ವೈಡ್‌ಲೆಗ್ ಜೀನ್ಸ್ ಅದೇಕೆ ಇಂದು ಯುವಜನತೆಯ ಕ್ರೇಜ್ ಆಗಿದೊಯೋ ವಿಶ್ಲೇಷಿಸುವುದು ಕಷ್ಟ; ಆದರೆ, ಈಗ ಜನಪ್ರಿಯವಾಗಿರುವ ಈ ಫ್ಯಾಷನ್ ಟ್ರೆಂಡ್‌ನಿಂದಾಗಿ, ನಮ್ಮ ಗೆಳತಿಯರ ಗುಂಪು ಒಂದು ಪಾಠ ಕಲಿತ ವಿಷಯ ಸ್ವಾರಸ್ಯಕರವಾಗಿದೆ!

ಇದನ್ನೂ ಓದಿ: Bangles Fashion 2026: ವರಮಹಾಲಕ್ಷ್ಮೀ ಹಬ್ಬಕ್ಕೆ ಬಂತು ಕಲರ್‌ಫುಲ್‌ ಬಳೆಗಳು

ಗೆಳತಿಗೆ ಒತ್ತಾಯ

ನಾವೆಲ್ಲರೂ ವೈಡ್ ಲೆಗ್ಡ್ ಜೀನ್ಸ್‌ಗೆ ಮಾರುಹೋಗಿದ್ದರೂ, ನಮ್ಮ ಗುಂಪಿನಲ್ಲಿ ಒಬ್ಬಳು ಮಾತ್ರ ಟೈಟ್ ಜೀನ್ಸ್‌ನ ಕಟ್ಟಾ ಅಭಿಮಾನಿ. ಎಲ್ಲಿಗೆ ಹೋದರೂ ಅದೇ ಜೀನ್ಸ್. ಹಾಗೆ ನೋಡಿದರೆ ಆ ಜೀನ್ಸ್ ಅವಳ ವ್ಯಕ್ತಿತ್ವದ ಒಂದು ಭಾಗವೇ ಆಗಿಬಿಟ್ಟಿತ್ತು. ನಮಗೆ ಅವಳೂ ನಮ್ಮೆಲ್ಲರಂತೆ ಹೊಸ ಟ್ರೆಂಡಿ ಜೀನ್ಸ್ ಹಾಕಲಿ ಎನಿಸುತಿತ್ತು. ಅವಳಿಗೆ ‘ಸ್ಕಿನ್ನಿ ಜೀನ್ಸ್ ಔಟ್, ವೈಡ್-ಲೆಗ್ಸ್ ಇನ್. ಇದರಲ್ಲಿ ನೀನು ಇನ್ನೂ ಸ್ಟೈಲಿಶ್ ಆಗಿ ಕಾಣುತ್ತೀಯ’ ಎಂದು ಸಾಕಷ್ಟು ಪುಸಲಾಯಿಸಿದೆವು.

ಮೊದಮೊದಲು ಹಿಂಜರಿದವಳು, ನಮ್ಮ ಒತ್ತಾಯದ ನಂತರ ಕೊನೆಗೂ ಒಪ್ಪಿದಳು. ಆದರೂ ಅವಳು ಮನಸ್ಸು ಬದಲಾಯಿಸಿದರೆ ಎಂದು ಹೆದರಿಕೆ; ಇದಕ್ಕೆ ಒಂದುಪಾಯ ಮಾಡಿದೆವು; ಅವಳ ಹುಟ್ಟುಹಬ್ಬಕ್ಕೆ ನಾವು ವೈಡ್-ಲೆಗ್ಡ್ ಜೀನ್ಸ್‌ನ್ನೇ ಗಿಫ್ಟ್ ಮಾಡಿದೆವು. ನಮ್ಮ ಫ್ಯಾಷನ್ ಸಲಹೆ ಮತ್ತು ಗಿಫ್ಟ್‌ʼಗಾಗಿ ನಮಗೆ ದೊಡ್ಡ ಥ್ಯಾಂಕ್‌ಯೂ ಸಿಗುತ್ತದೆ ಎಂದು ಕೊಂಡಿದ್ದೆವು.

ಕುಂಟಿದ್ದಾದರೂ ಏಕೆ?

ಆದರೆ ಆದದ್ದು ಮಾತ್ರ ಬೇರೆಯೇ! ವಾರದ ನಂತರ, ಊರಿಗೆ ಹೋಗಿ ಬಂದ ವಳು ಕುಂಟುತ್ತಿದ್ದಳು. ಕಾರಣ, ರಜಾದಿನದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದಾಗ, ಮುಗ್ಗರಿಸಿ ಬಿದ್ದದ್ದಳು. ಅದನ್ನು ಕಂಡು ‘ಅಯ್ಯೋ ಪಾಪ’ ಎಂದು ಕನಿಕರ ಸೂಚಿಸಿದಾಗ ಅವಳು ನಮ್ಮ ಕಡೆ ನೋಡಿದ ರೀತಿ ಮಾತ್ರ ವಿಚಿತ್ರ ವಾಗಿತ್ತು.ಆ ಘಟನೆ ನಡೆಯಲು, ನಮ್ಮೆಲ್ಲರ ಒಳಸಂಚೇ ಕಾರಣ ಎನ್ನುವ ಭಾವನೆ ಅದರಲ್ಲಿತ್ತು.

ಏಕೆಂದರೆ, ಮುಗ್ಗರಿಸಿ ಬಿದ್ದು, ಕಾಲು ನೋವು ಮಾಡಿಕೊಳ್ಳುವ ದಿನ, ಅವಳು ತೊಟ್ಟಿದ್ದು ನಾವು ಕೊಟ್ಟ ಜೀನ್ಸ್! ನಾವು ಏನೂ ಹೇಳಲಿಲ್ಲ. ನಿಜ ಹೇಳಬೇಕೆಂದರೆ ಹೇಳಲು ಏನೂ ಇರಲಿಲ್ಲ. ಸಿಟ್ಟು ಮತ್ತು ಬೇಸರದಿಂದ ಅವಳನ್ನು ನೋಡುತ್ತಾ ನಿಂತಿದ್ದೆವು. ಅವಳ ಮುಖ ಭಾವವು ನಮ್ಮನ್ನು ಅಪರಾಧಿಯಂತೆ ಮಾಡಿತು! ‘ಅಯ್ಯೋ, ಈ ಜೀನ್ಸ್‌ನ್ನು ಗಿಫ್ಟ್ ಮಾಡಿದ್ದಕ್ಕೆ ಹೀಗೆ ಹೇಳಿಸಿ ಕೊಳ್ಳಬೇಕಾಯಿತು!’ ಎಂದು ನಮ್ಮ ಮನಸ್ಸನ್ನು ಚುಚ್ಚುತ್ತಿತ್ತು.

ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ. ಆ ದಿನದಿಂದ ಅವಳು ಕುಂಟುತ್ತಾ ನಡೆಯುವಾಗಲೆಲ್ಲಾ ‘ನೀವೇ ನನಗೆ ವೈಡ್ ಲೆಗ್ ಜೀನ್ಸ್ ಗಿಫ್ಟ್ ಮಾಡಿದ್ದೀರಲ್ಲಾ,‌ ಅದರಿಂದಲೇ ಬಿದ್ದೆ ನೆನಪಿರಲಿ!’ ಎಂದಂತೆ ಅನಿಸುತ್ತಿತ್ತು. ನಾವು ಟ್ರೆಂಡ್‌ನ್ನು ಪ್ರೋತ್ಸಾಹಿಸಿದ್ದೆವು, ಜೀನ್ಸ್‌ನ್ನು ಗಿಫ್ಟ್ ಮಾಡಿದ್ದೆವು, ಈಗ ಅವಳು ಟ್ರೆಕ್ಕಿಂಗ್‌ನಿಂದ ಬಿದ್ದ ಅನುಭವದೊಂದಿಗೆ ಹಿಂದಿರುಗಿದ್ದಳು. ‌ಆ ಕ್ಷಣದಲ್ಲಿ ನಮ್ಮ ಫ್ರೀ ಫ್ಯಾಷನ್ ಕನ್ಸಲ್ಟೆಂಟ್ ವೃತ್ತಿ, ಗಿಫ್ಟ್ ಕೊಡುವ ರೂಢಿ ಎರಡನ್ನೂ ಬಿಟ್ಟುಬೊಡೋಣ ಎನಿಸಿದ್ದಂತೂ ನಿಜ!

ಡೆಡ್ಲಿ ಪ್ಯಾಂಟ್ಸ್

ಅದಾದ ಕೆಲವು ದಿನಗಳ ನಂತರ ನಾನು ‘ಡೆಡ್ಲಿ ಪ್ಯಾಂಟ್ಸ್’ ಎಂಬ ಶೀರ್ಷಿಕೆಯ ಲೇಖನವನ್ನು ಓದಿದೆ. ಅತಿಯಾಗಿ ಅಗಲವಾಗಿರುವ ಅಥವಾ ಉದ್ದವಾಗಿ ರುವ ಪ್ಯಾಂಟ್‌ಗಳಿಂದ ಜನರು ಎಡವಿ ಬೀಳಬಹುದು, ಗಾಯಗೊಳ್ಳ ಬಹುದು ಎಂದು ಅದರಲ್ಲಿ ಹೇಳಲಾಗಿತ್ತು. ನಮ್ಮ ಫ್ರೆಂಡ್ ರೀತಿ ಮುಗ್ಗರಿಸಿ ಬಿದ್ದ ಅನೇಕರು ಅನುಭವಗಳನ್ನು ಹಂಚಿಕೊಂಡಿದ್ದರು. ಆಗ ಇದ್ದಕ್ಕಿದ್ದಂತೆ ಎಲ್ಲವೂ ಅರ್ಥವಾಯಿತು. ಇದು ಕೇವಲ ಫ್ಯಾಷನ್ ವಿಷಯವಾಗಿರಲಿಲ್ಲ, ಜನರ ಸುರಕ್ಷತೆಯ ವಿಷಯ ವಾಗಿತ್ತು!

ಪಾಪ, ನಮ್ಮ ಫ್ರೆಂಡ್ ತಾನು ಬಿದ್ದ ಕಥೆಯನ್ನು ಹೇಳುತ್ತಾ ಬೀರಿದ ನೋಟ ತಕ್ಷಣ ನೆನಪಾಯಿತು. ಅವಳಿಗೆ ಬೇಸರವಾಗಿದ್ದು ಸರಿಯಿದೆ ಅನಿಸಿತು! ಯೋಚಿಸುತ್ತಾ ಹೋದಂತೆ, ವೈಡ್-ಲೆಗ್ಡ್ ಜೀನ್ಸ್ ನೋಡಲು ತುಂಬಾ ಕೂಲ್ ಆಗಿರಬಹುದು. ಆದರೆ ಅದನ್ನು ಧರಿಸಿದಾಗ, ನಡೆಯಲು ಸ್ವಲ್ಪ ತಂತ್ರ, ಬ್ಯಾಲೆನ್ಸ್ ಮತ್ತು ಬಹುಶಃ ಸ್ವಲ್ಪ ಫಿಸಿಕ್ಸ್ ಜ್ಞಾನವೂ ಬೇಕು. ಜೀನ್ಸ್‌ನ ಕೆಳಭಾಗದ ಮೇಲೆ ಕಾಲಿಡ ದಂತೆ, ಮೆಟ್ಟಿಲಿನಲ್ಲಿ ಸಿಕ್ಕಿಕೊಳ್ಳದಂತೆ, ಅದರ ತಳಭಾಗವು ರಸ್ತೆಯನ್ನೇ ಗುಡಿಸದಂತೆ ಎಚ್ಚರ ವಹಿಸಬೇಕು.

ವೈಡ್-ಲೆಗ್ಡ್ ಜೀನ್ಸ್ ಆರಾಮದಾಯಕ, ಸ್ಟೈಲಿಶ್ ಮತ್ತು ಖಂಡಿತವಾಗಿಯೂ ಜನಪ್ರಿಯ. ಆದರೆ ಧರಿಸಿದಾಗ, ಸ್ವಲ್ಪ ಎಚ್ಚರ ಬೇಕು. ಈಗ ನಮ್ಮ ಅದೇ ಫ್ರೆಂಡ್ ಆಗಾಗ್ಗೆ ವೈಡ್-ಲೆಗ್ಡ್ ಜೀನ್ಸ್ ಹಾಕಿ ಕೊಳ್ಳುತ್ತಾಳೆ. ಆದರೆ ನಾವು, ಯಾರಿಗೂ ಯಾವುದೇ ಫ್ಯಾಷನ್ ಸಲಹೆ ಕೊಡುವುದಿಲ್ಲ. ಏಕೆಂದರೆ ಫ್ಯಾಷನ್ ಬದಲಾಗಬಹುದು, ಟ್ರೆಂಡ್‌ಗಳು ಬರಬಹುದು- ಹೋಗಬಹುದು; ಆದರೆ ಫ್ರೆಂಡ್‌ಗೆ ಒಂದು ಜೀನ್ಸ್ ಗಿಫ್ಟ್ ಮಾಡಿ, ಅವಳು ಅದನ್ನು ಧರಿಸಿ, ಎಡವಿ ಬಿದ್ದರೆ, ಗಾಯಮಾಡಿ ಕೊಂಡರೆ ಆ ವಿಷಯ ವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಅಲ್ಲವೇ?