ಎನ್.ಎಸ್.ಶ್ರೀಧರಮೂರ್ತಿ
ಪತ್ರಿಕೋದ್ಯಮ, ಅನುವಾದ, ಸಾಹಿತ್ಯ, ಚಲನಚಿತ ಮೊದಲಾದ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ ಎನ್.ಎಸ್.ಶಂಕರ್ ನಮ್ಮನಗಲಿದ್ದಾರೆ. ಅವರೊಂದಿಗೆ ಸುದೀರ್ಘ ಒಡನಾಟ ಹೊಂದಿದ ಲೇಖಕರು, ಶಂಕರ್ ಇನ್ನಿಲ್ಲ ಎನ್ನುವುದು ಈ ಕ್ಷಣಕ್ಕೂ ಅರಗಿಸಿಕೊಳ್ಳ ಲಾಗದ ಸತ್ಯ. ತುಂಬಲಾರದ ನಷ ಎನ್ನುವುದು ಅಲಂಕಾರಿಕ ಪದಗುಚ್ಛ. ಶಂಕರ್ ಅಂತಹವರ ವಿಷಯದಲ್ಲಿ ಅದು ಅಕ್ಷರಶಃ ನಿಜ ಎಂದು, ಇಲ್ಲಿ ಬರೆದಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ ಕಳೆದ ತಿಂಗಳಷ್ಟೇ ನಮ್ಮ ‘ಇನ್ಸ್ʼಟ್ಯೂಟ್ ಆಫ್ ಟ್ರಾನ್ಸಲೇಷನ್ ಸ್ಡಡೀಸ್’ ಏರ್ಪಡಿಸಿದ್ದ ‘ಅನುವಾದದ ಸವಾಲುಗಳ’ ಕುರಿತ ಕಾರ್ಯಕ್ರಮಕ್ಕೆ ಬಂದು ಚಿಂತನಶೀಲ ಉಪನ್ಯಾಸ ನೀಡಿ, ಇಡೀ ದಿವಸ ಸಂಭ್ರಮದಿಂದ ನಮ್ಮ ಜೊತೆ ಕಳೆದಿದ್ದ ಗೆಳೆಯ ಎನ್.ಎಸ್.ಶಂಕರ್ ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲಿನಿಂತೆ ಬಂದೆರಗಿದೆ.
ಪತ್ರಕರ್ತ, ಅನುವಾದಕ, ಚಿತ್ರಕಲಾವಿದ, ನಿರ್ದೇಶಕ ಹೀಗೆ ಶಂಕರ್ ಅವರಿಗೆ ಹಲವು ಮುಖ ಗಳಿದ್ದವು. ಯಾವುದೂ ಕೇವಲ ಹವ್ಯಾಸವಾಗಿರಲಿಲ್ಲ. ಪ್ರತಿ ಕ್ಷೇತ್ರ ದಲ್ಲಿಯೂ ಆಳವಾದ ಅರಿವಿತ್ತು. ಅವರ ಜೊತೆಗೆ ಕಾಲ ಕಳೆಯುವುದು ಯಾವತ್ತೂ ಸಂತೋಷ ಕೊಡುವ ಸಂಗತಿಯಾಗಿತ್ತು. ಭೇಟಿ ವಿರಳ ವಾದಾಗಲೂ ವಾರಕ್ಕೊಂದು ಪೋನ್ ಇದ್ದೇ ಇರುತ್ತಿತ್ತು. ಪ್ರತಿಯೊಂದು ಸುದೀರ್ಘವಾದದ್ದೇ, ಶಂಕರ್ ಯಾವುದೇ ವಿಷಯದಲ್ಲಿ ಮಾತನಾಡಿದರೂ ಹೊಸ ಒಳನೋಟಗಳನ್ನು ನೀಡುತ್ತಿದ್ದರು, ಚಿಂತನೆಗೆ ಹಚ್ಚುತ್ತಿದ್ದರು. ಪತ್ರಿಕೋದ್ಯಮದ ದಾರಿಯಲ್ಲಿ ಶಿವಮೊಗ್ಗ ಜಿಲ್ಲೆ ಹೊನ್ನಾಳಿಯ ಬಳಿಯ ನ್ಯಾಮತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಗನಾಗಿ ಜನ್ಮ ತಳೆದಿದ್ದ ಶಂಕರ್ ಬೆಳೆದಿದ್ದು ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ; ಹೈಸ್ಕೂಲ್ ಶಿಕ್ಷಣ ಮೈಸೂರಲ್ಲಿ ನಡೆಯಿತು.
ಕಾಲೇಜಿಗೆ ಬೆಂಗಳೂರು ಸೇರಿದ ಇವರು, ಪದವಿ ನಂತರ ಐಎಎಸ್ ಮಾಡ ಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಆದರೆ ಅವರನ್ನು ನೇರವಾಗಿ ಮೂರನೇ ತರಗತಿಗೆ ಸೇರಿಸಿದ್ದರಿಂದ ಪದವಿ ಮುಗಿದಾಗ ಇವರಿಗೆ ಕೇವಲ 19 ವರ್ಷ. ಐಎಎಸ್ ಮಾಡಲು 21 ವರ್ಷ ಆಗಬೇಕಿತ್ತು. ಎರಡು ವರ್ಷ ಸುಮ್ಮನೆ ಕಾಯುವುದು ಏಕೆ ಎಂದು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ಓದು ಅವರನ್ನು ಪತ್ರಿಕೋದ್ಯಮದತ್ತ ಸೆಳೆಯಿತು. ಪತ್ರಿಕಾ ಪಯಣ ಆರಂಭವಾಗಿದ್ದು ತುಮಕೂರು ಜಿಲ್ಲಾ ಪತ್ರಿಕೆ ‘ತುಮಕೂರು ಟೈಮ್ಸ್’ ನಿಂದ ಮುಂದೆ ಜನವಾಣಿ ಅಲ್ಲಿಂದ ‘ಪ್ರಜಾವಾಣಿ’ಗೆ ಬಂದರು. ಆದರೆ ಅಲ್ಲಿಯೇ ನಿಲ್ಲದೆ ‘ಮುಂಗಾರು’, ‘ಸುದ್ದಿ ಸಂಗಾತಿ’ಗಳಲ್ಲಿ ಕೆಲಸ ಮಾಡಿದರು.
ಇದನ್ನೂ ಓದಿ: Leena Joshi Column: ಚಿನ್ನ ಅಡವಿಟ್ಟದ್ದರಿಂದ ಭಾರತಕ್ಕೆ ಏನಾಯಿತು ?
‘ಲಂಕೇಶ್ ಪತ್ರಿಕೆ’ ಸದ್ದು ಮಾಡುತ್ತಿದ್ದ ಕಾಲ ಅದು. ಶಂಕರ್ ಅವರನ್ನು ಲಂಕೇಶರೇ ಪ್ರೀತಿಯಿಂದ ಬರಮಾಡಿಕೊಂಡರು. ಸುಮಾರು ಎಂಟು ವರ್ಷ ಅಲ್ಲಿ ಕೆಲಸ ಮಾಡಿದ್ದ ಸಮಯದಲ್ಲಿಯೇ ಚಿತ್ರರಂಗ ಅವರನ್ನು ಕೈಬೀಸಿ ಕರೆಯಿತು. ಪತ್ರಿಕೋದ್ಯಮದಲ್ಲಿ ಇದ್ದಷ್ಟು ದಿನ ಶಂಕರ್ ತಮ್ಮದೇ ಆದ ಸ್ವಂತಿಕೆಯನ್ನು ಸ್ಥಾಪಿಸಿದ್ದರು. ಎಲ್ಲರನ್ನೂ ತಲುಪುವಂತೆ ಸುದ್ದಿ ಬರೆಯುವುದರ ಜೊತೆಗೆ ಒಳನೋಟ ವನ್ನು ನೀಡುವ ಶೈಲಿ ಅವರಿಗೆ ಹಸ್ತಗತವಾಗಿತ್ತು. ಇದಕ್ಕೆ ನೆರವಾಗಿದ್ದು ಅವರ ಅಪಾರ ಓದು ಮತ್ತು ಸಮಾಜವನ್ನು ನೋಡುವ ದೃಷ್ಟಿಕೋನ. ಚಿತ್ರರಂಗಕ್ಕೆ ಚೈತನ್ಯ ಕೊಟ್ಟರು ಶಂಕರ್ ಅವರಿಗೆ ಮೊದಲಿಂದಲೂ ಚಿತ್ರರಂಗದ ಒಲವಿತ್ತು. ಅವರೇನು ಅದಕ್ಕಾಗಿ ಬೇಕಾದ ತರಬೇತಿ ಪಡೆದಿರಲಿಲ್ಲ. ಆದರೆ ಜಾಗತಿಕ ಚಿತ್ರರಂಗವನ್ನು ಚೆನ್ನಾಗಿ ಅರಿತಿದ್ದರು. ಈ ಕುರಿತು ಬರವಣಿಗೆ ಮಾಡಿದ್ದರು. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿದ್ದರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿತ್ತು.
ದೂರದರ್ಶನಕ್ಕೊಂದು ಕಿರುಚಿತ್ರ ಮಾಡಿ ಕೊಟ್ಟಿದ್ದರು. ಆದರೆ ಅದು ಪ್ರಸಾರವಾಗಲೇ ಇಲ್ಲ. ‘ಬದುಕು ಜಟಕಾ ಬಂಡಿ’ ಧಾರಾವಾಹಿ ನಿರ್ದೇಶಿಸಿದ್ದರು. ಅದು ಜನಪ್ರಿಯವಾಗಿತ್ತು. ಲಂಕೇಶ್ ಈ ವೇಳೆಗಾಗಲೇ ಚಿತ್ರ ನಿರ್ದೇಶಿಸಿದ್ದರು. ಅವರ ಸಹವಾಸವೂ ಚಿತ್ರರಂಗದತ್ತ ಬರಲು ಕಾರಣವಾಗಿರ ಬಹುದು. ಅಪಾರ ಖ್ಯಾತಿ ತಂದ ಚಿತ್ರ! ರಮೇಶ್ ಅರವಿಂದ್, ಸಂಕೇಶ್ ಕಾಶಿ ದ್ವಿಪಾತ್ರದಲ್ಲಿ ಅದಲು ಬದಲಾಗುವ ‘ಉಲ್ಟಾ ಪಲ್ಟಾ’ ಹಾಸ್ಯ ಪ್ರಧಾನ ಚಿತ್ರ ಭರ್ಜರಿ ಯಶಸ್ವಿಯಾಗಿ ಶಂಕರ್ ಅವರಿಗೆ ಉತ್ತಮ ಹೆಸರು ತಂದು ಕೊಟ್ಟಿತು. ಆ ಸಿನೇಮಾದ ಸಂಭಾಷಣೆಗಾಗಿ ಶಂಕರ್ ಅವರಿಗೆ ರಾಜ್ಯ ಪ್ರಶಸ್ತಿ , ಉತ್ತಮ ನಟನೆಗಾಗಿ ಕಾಶಿ ಅವರಿಗೆ ಜೂರಿ ವಿಶೇಷ ಪ್ರಶಸ್ತಿ ಲಭಿಸಿತು. ಇದು ಷೇಕ್ಸಪಿಯರ್‌ನ ‘ಕಾಮಿಡಿ ಆಫ್ ಎರರ್ಸ್’ ನ ಅಳವಡಿಕೆ, ಆದರೆ ಬಿಡುಗಡೆಗೆ ಮುಂಚೆಯೇ ಹಕ್ಕುಗಳನ್ನು ಕೊಟ್ಟು ಬಿಟ್ಟಿದ್ದರಿಂದ ಶಂಕರ್ ಅವರಿಗೆ ಅದರಿಂದ ಆರ್ಥಿಕ ಲಾಭ ಸಿಕ್ಕಲೇ ಇಲ್ಲ. ಉದ್ಯೋಗಸ್ಥ ಮಹಿಳೆಯರು ಎದುರಿಸುವ ಲೈಂಗಿಕ ಕಿರುಕಳದ ಕುರಿತು ‘ರಾಂಗ್ ನಂಬರ್’ ಅವರ ಮುಂದಿನ ಚಿತ್ರ. ಭಾವನಾ ರಾಮಣ್ಣ ಪ್ರಧಾನ ಪಾತ್ರದಲ್ಲಿದ್ದರು. ಚಿತ್ರ ಚಿಂತನಾಶೀಲವಾದರೂ ಚರ್ಚೆಗೆ ಒಳಗಾಗ ಲಿಲ್ಲ. ಮುಂದೆ ‘ಜೂಟಾಟ’ ಚಿತ್ರವನ್ನು ನಿರ್ದೇಶಿಸಿದರು.
ಧ್ಯಾನ್, ರಿಚಾ ಪೋಲೆಂಡ್, ಆಕಾಶ್ ಮೊದಲಾದ ಹೊಸಬರಿದ್ದ ಚಿತ್ರ ವಿಭಿನ್ನವಾಗಿತ್ತು. ಮುಂದೆ ಶಂಕರ್ ಸಾಕ್ಷ್ಯಚಿತ್ರಗಳ ಕಡೆಗೆ ತಿರುಗಿಕೊಂಡರು. ಅವರಿಗೆ ಮುಖ್ಯ ಸಿನಿಮಾ ವ್ಯಾಕರಣ ಚೆನ್ನಾಗಿ ಗೊತ್ತಿತ್ತು. ಬಹಳ ಸೂಕ್ಷ್ಮವಾಗಿ ಚಿತ್ರಿಕೆಗಳನ್ನು ರೂಪಿಸುತ್ತಿದ್ದರು. ಡಾ.ಅಂಬೇಡ್ಕರ್ ಕುರಿತು ಸಾಕ್ಷ್ಯಚಿತ್ರವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಪುನೀತ್ ರಾಜ್‌ಕುಮಾರ್ ಅವರನ್ನು ಗಮನದಲ್ಲಿಟ್ತು ಕೊಂಡು ಚಿತ್ರಕಥೆಯನ್ನು
ರೂಪ ಕೊಟ್ಟಿದ್ದರು. ಅದಕ್ಕಾಗಿಯೇ ರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿದ್ದರು. (ಡಾ.ರಾಜ್ ಕುಮಾರ್ ‘ಉಲ್ಟಾ ಪಲ್ಟಾ’ ಚಿತ್ರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು. ಶಂಕರ್ ಅವರ ಮನೆಯಲ್ಲಿ ಅವರು ರಾಜ್ ಕುಮಾರ್ ಅವರ ಜೊತೆಗಿರುವ ಚಿತ್ರ ಗೋಡೆಯನ್ನು ಅಲಂಕರಿಸಿತ್ತು.) ಕಾರಣಾಂತರಗಳಿಂದ ಅದು ಕೈಗೂಡಲಿಲ್ಲ. ಶಂಕರ್ ಸದಾ ಒಂದಲ್ಲ ಒಂದು ಚಿತ್ರಕಥೆ ಸಜ್ಜು ಗೊಳಿಸುತ್ತಲೇ ಇದ್ದರು. ಇಂತಹ ಹಲವು ಕಥೆಗಳನ್ನು ನಾನು ಕೇಳಿ ಆನಂದಿಸಿದ್ದೇನೆ. ಡಾ.ರಾಮಚಂದ್ರ ದೇವ ಅವರ ’‘ಥ ಮಸುಲ’ ನಾಟಕವನ್ನು ಬೆಳ್ಳಿತೆರೆಗೆ ತರುವುದು ಅವರ ದೊಡ್ಡ ಕನಸಾಗಿತ್ತು.
ಇತ್ತೀಚೆಗೆ ‘ಸಿನಿಮಾ ಕಫೆ’ ಎನ್ನುವ ಆಸಕ್ತರ ಕೂಟ ಕಟ್ಟಿಕೊಂಡು ‘ಈಗ’ ಎನ್ನುವ ಚಿತ್ರದ ಕೆಲಸ ಗಳಲ್ಲಿ ತೊಡಗಿಸಿಕೊಂಡಿದ್ದರು. ಲಂಕೇಶ್ ಅವರ ‘ಮುಟ್ಟಿಸಿಕೊಂಡವರು’ ಪ್ರತಿಭಾ ನಂದಕುಮಾರ್ ಅವರ ‘ಅರುಂಧತಿ’ ಪಿ.ಮೊಹಮದ್ ಅವರ ‘ಡಿಸಂಬರ್ 6’ ಹೀಗೆ ಮೂರು ಸಣ್ಣಕಥೆಗಳನ್ನು ಆಧರಿಸಿದ ಚಿತ್ರದ ಬಗ್ಗೆ ಅವರಿಗೆ ಬಹಳ ನಿರೀಕ್ಷೆಗಳಿದ್ದವು. ಅವರ ವೈಚಾರಿಕ ಸಂಗಾತಿಯೂ ಆಗಿದ್ದ ಮಡದಿ ಉಮಾರಾಣಿಯವರ ಆರೋಗ್ಯದಲ್ಲಾದ ಏರುಪೇರಿನ ಕಾರಣ ಅವರ ಆರೈಕೆಯಲ್ಲಿ ಎಲ್ಲಾ ಕೆಲಸಗಳನ್ನು ಶಂಕರ್ ಮುಂದೂಡಿದ್ದರು. ಜನವರಿಯಲ್ಲಿ ಅವರ ಉಮಾ ಅವರ ನಿಧನದ ನಂತರ, ಶಂಕರ್ ಬದುಕಿನ ಹೊಸ ಪರ್ವ ಆರಂಭಗೊಂಡಿತ್ತು ಎಂದೇ ಹೇಳಬಹುದು. ನಂತರ ಮತ್ತೆ ಬದುಕಿಗೆ ಮರಳುತ್ತಿದ್ದ ಅವರು ‘ಸಿನಿಮಾ ಕೆಲಸ ಮುಗಿಸ ಬೇಕ್ರಿ’ ಎಂದು ಸಿಕ್ಕಾ ಗೆಲ್ಲಾ ಹೇಳುತ್ತಿದ್ದರು. ಅವರ ಮಗ ರಾಹುಲ್ ಚಿತ್ರರಂಗ ದಲ್ಲಿಯೇ ಇದ್ದು ಯೋಗರಾಜ್ ಭಟ್ ಅವರ ಸಹಾಯಕರಾಗಿ ದ್ದಾರೆ. ಅವರು ತಂದೆಯ ಕನಸನ್ನು ಈಡೇರಿಸಬಲ್ಲರು. ಬರಹಗಳಲ್ಲಿ ಅನನ್ಯತೆ ಶಂಕರ್, ಸಾಂಸ್ಕೃತಿಕ ಚಳವಳಿಗಳು ಮತ್ತು ಬಂಡಾಯ ಸಾಹಿತ್ಯದ ತತ್ವಗಳಿಗೆ ಸದಾ ಧ್ವನಿಯಾಗಿದ್ದರು. ಕಲೆ, ಸಿನಿಮಾ, ರಾಜಕೀಯ ಮತ್ತು ಸಮಾಜದ ವಿವಿಧ ಆಯಾಮಗಳ ಕುರಿತು 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳನ್ನು ಬರೆದಿದ್ದ ಅವರ ಹೆಸರಾಂತ ಕೃತಿಗಳಲ್ಲಿ ‘ಅರಸು ಯುಗ’, ಚಂಚಲೆ, ಉಸಾಬರಿ, ‘ಹುಡುಕಾಟ’, ‘ಚಿತ್ರ ಸಲ್ಲಾಪ’, ಅಂಬೇಡ್ಕರ್ ಚಿಂತನೆಗಳ ಕುರಿತ ಕೃತಿಗಳು, ದಲಿತ ಚಳವಳಿ ಕುರಿತ ಚಿಂತನೆಗಳು ಸೇರಿವೆ. ಡಾ.ಅಂಬೇಡ್ಕರ್ ಕುರಿತು ಅಧಿಕೃತವಾಗಿ ಮಾತನಾಡ ಬಲ್ಲ ಶಂಕರ್, ದೇವರಾಜ ಅರಸು ಅವರ ರಾಜಕೀಯ ಕೊಡುಗೆಗಳ ಕುರಿತೂ ಸಮರ್ಥವಾಗಿ ಚರ್ಚಿಸಬಲ್ಲವ ರಾಗಿದ್ದರು. ಸಿನಿಮಾದಂತೆ ರಾಜಕೀಯ ಕ್ಷೇತ್ರದಲ್ಲಿಯೂ ಅವರಿಗೆ ಒಳನೋಟಗಳಿದ್ದವು. ಶಂಕರ್ ಅತ್ಯುತ್ತಮ ಅನುವಾದಕರೂ ಕೂಡ ಹೌದು. ಬೇರೆ ಸಂಸ್ಕೃತಿಯಿಂದ ಬಂದ ಬರಹಗಳನ್ನು ಕನ್ನಡದ ಜಾಯಮಾನಕ್ಕೆ ಅವರು ಒಗ್ಗಿಸುತ್ತಿದ್ದ ರೀತಿ ನಿಜಕ್ಕೂ ಮಾದರಿಯಾಗಿತ್ತು. ಶಂಕರ್ ಅವರಲ್ಲಿ ಹಲವಾರು ಮುನ್ನೋಟಗಳಿದ್ದವು. ತಮ್ಮ ಕಾಲಕ್ಕಿಂತಲೂ ಅವರು ಸಾಕಷ್ಟು ಮುಂದೆ ಯೋಚಿಸುತ್ತಿದ್ದರು. ಇದನ್ನೂ ದೃಶ್ಯ ಮಾಧ್ಯಮ ಸರಿಯಾಗಿ ರೂಪುಗೊಳ್ಳದಿದ್ದ ಕಾಲದಲ್ಲಿ ಸುದ್ದಿವಾಹಿನಿ ಆರಂಭಿಸುವುದರ ಕುರಿತು ಯೋಚಿಸಿದ್ದರು. ಅದು ಕಾರ್ಯರೂಪಕ್ಕೆ ಬರಲು ಮುಂದೆ ಇಪ್ಪತ್ತು ವರ್ಷಗಳೇ ಬೇಕಾದವು. ‘ಶಂಕರ್ ಇನ್ನಿಲ್ಲ’ ಎನ್ನುವುದು ಈ ಕ್ಷಣಕ್ಕೂ ಅರಗಿಸಿ ಕೊಳ್ಳಲಾಗದ ಸತ್ಯ. ‘ತುಂಬಲಾರದ ನಷ್ಟ’ ಎನ್ನುವುದು ಅಲಂಕಾರಿಕ ಪದಗುಚ್ಚ.. ಶಂಕರ್ ಅಂತಹವರ ವಿಷಯದಲ್ಲಿ ಅದು ಅಕ್ಷರಶಃ ನಿಜ. ನನ್ನಂತಹ ಸ್ನೇಹಿತರಿಗೆ ಮಾತ್ರವಲ್ಲ, ಕನ್ನಡ ಸಾಂಸ್ಕೃತಿಕ ಲೋಕಕ್ಕೇ ಇದು ತುಂಬಲಾರದ ನಷ್ಟ.
ಮೈತ್ರಿಯ ವೀಣೆ ಮಿಡಿದ ಮಧುರ ತಾನಕೆ! ‘ಮೈತ್ರಿಯ ವೀಣೆ ಮಿಡಿದ ಮಧುರ ತಾನಕೆ ಹಾಕಿದೆ ನೀ ಅನುರಾಗ ರಾಗಮಾಲಿಕೆ’ ಈ ರೂಪಕದ ಕುರಿತು ಲಂಕೇಶ್ ಅವರಿಗೆ ಇದ್ದಕಿದ್ದ ಹಾಗೆ ಕುತೂಹಲ ಹುಟ್ಟಿತ್ತು. ಅದಕ್ಕಾಗಿಯೇ ನನ್ನನ್ನು ಕರೆಸಿದ್ದರು. ಅದು ‘ಹಸಿರು ತೋರಣ’ ಚಿತ್ರಕ್ಕೆ ಆರ್.ಎನ್.ಜಯ ಗೋಪಾಲ್ ಅವರು ಬರೆದ ಗೀತೆ ಎಂದು ಹೇಳಿ ಆ ಚಿತ್ರದ ಭಿನ್ನತೆ ಕುರಿತು ಹೇಳದ್ದೆ. ಲಂಕೇಶ್ ಅವರಿಗೆ ಶಂಕರ್ ಅವರು ‘ಹಸಿರು ತೋರಣ’ ಚಿತ್ರ ತೋರಿಸಿದ್ದರು. ‘ರಾಜ್ ಕುಮಾರ್ ಕುರಿತ ಅಭಿಪ್ರಾಯವೇ ಬದಲಾಯಿತು, ಅವರು ಬರೀ ಭಕ್ತಿ, ಭಾವುಕತೆಗೆ ಎಂದು ಕೊಂಡಿದ್ದೆ. ಅವರ ಅಭಿನಯಕ್ಕೆ ದೊಡ್ಡ್ ರೇಂಜ್ ಇದೆ’ ಎಂದು ಲಂಕೇಶ್ ಅವರಂತಹ ಲಂಕೇಶ್ ಮೆಚ್ಚುಗೆ ಮಾತನಾ ಡಲು ಶಂಕರ್ ಕಾರಣರಾಗಿದ್ದರು. ಮೇಷ್ಟ್ರ ಜೊತೆಗೇ ಇದ್ದು, ಅವರ ನೆರಳಾಗದೆ ಗ್ರಹಿಕೆಗಳ ತಪ್ಪನ್ನು ತೋರಿಸ ಬಲ್ಲ ಶಕ್ತಿ ಇದ್ದ ಕೆಲವರಲ್ಲಿ ಶಂಕರ್ ಮುಖ್ಯ ರಾದವರಾಗಿದ್ದರು. ಕೆಲವು ವಿಷಯಗಳಲ್ಲಿ ಅವರು ಲಂಕೇಶರಿಗಿಂತ ಹೆಚ್ಚು ನಿಷ್ಠುರರಾಗಿದ್ದರು.