ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Impact: ಮೂರು ವಿಶೇಷ ರೈಲುಗಳಿಗೆ ಮಧ್ಯ ರೈಲ್ವೆಯಿಂದ ವಾಣಿಜ್ಯ ನಿಲುಗಡೆಗೆ ಸೂಚನೆ: ವಿಶೇಷ ರೈಲುಗಳಿಗೆ ಕಲಬುರಗಿಯಲ್ಲಿ ನಿಲುಗಡೆ

ಬೆಂಗಳೂರಿನಿಂದ ನವದೆಹಲಿಗೆ ಸಂಚರಿಸುವ 04005 ವಿಶೇಷ ರೈಲು ನ.24ರಂದು ಕಲಬುರಗಿ ನಿಲ್ದಾಣಕ್ಕೆ ರಾತ್ರಿ 9.37ಕ್ಕೆ ಆಗಮಿಸಿ 9.40ಕ್ಕೆ ನಿರ್ಗಮಿಸಲಿದೆ. ಅದೇ ರೀತಿ, ನ.21ರಂದು ಚರ್ಲಪಲ್ಲಿಯಿಂದ ಪ್ರತಾಪ ನಗರಕ್ಕೆ ತೆರಳುವ 07087 ವಿಶೇಷ ರೈಲು ಕಲಬುರಗಿಯಲ್ಲಿ ರಾತ್ರಿ 9.40ರಿಂದ 9.43ರವರೆಗೆ ನಿಲುಗಡೆ ಹೊಂದಲಿದೆ. ನ.22ರಂದು ಪ್ರತಾಪನಗರದಿಂದ ಚರ್ಲಪಲ್ಲಿಗೆ ತೆರಳುವ 07088 ವಿಶೇಷ ರೈಲು ಮಧ್ಯಾಹ್ನ 2.37ರಿಂದ 2.40ರವರೆಗೆ ಕಲಬುರಗಿಯಲ್ಲಿ ನಿಲ್ಲಲಿದೆ.

ಕಲಬುರಗಿ: ವಿಶೇಷ ರೈಲುಗಳಿಗೂ ಕಲಬುರಗಿಯಲ್ಲಿ ನಿಲುಗಡೆ ನೀಡದೆ ಪ್ರಯಾಣಿಕರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಶ್ವವಾಣಿ ವರದಿ(Vishwavani Report)ಯ ಬೆನ್ನಲ್ಲೇ ಮಧ್ಯ ರೈಲ್ವೆ ಸ್ಪಂದಿಸಿದ್ದು, ಕಲಬುರಗಿ ಜಂಕ್ಷನ್‌(Kalaburagi Junction)ನಲ್ಲಿ ಮೂರು ವಿಶೇಷ ರೈಲುಗಳಿಗೆ ಹೆಚ್ಚುವರಿ ವಾಣಿಜ್ಯ ನಿಲುಗಡೆ ಮಂಜೂರು ಮಾಡಿದೆ. ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಸೊಲ್ಲಾಪುರ ವಿಭಾಗವೂ ಮಧ್ಯ ರೈಲ್ವೆಗೆ ಪತ್ರ ಬರೆದು ಈ ನಿಲುಗಡೆಗೆ ಅನುಮತಿ ನೀಡಿದೆ.

ಬೆಂಗಳೂರಿನಿಂದ ನವದೆಹಲಿಗೆ ಸಂಚರಿಸುವ 04005 ವಿಶೇಷ ರೈಲು ನ.24ರಂದು ಕಲಬುರಗಿ ನಿಲ್ದಾಣಕ್ಕೆ ರಾತ್ರಿ 9.37ಕ್ಕೆ ಆಗಮಿಸಿ 9.40ಕ್ಕೆ ನಿರ್ಗಮಿಸಲಿದೆ. ಅದೇ ರೀತಿ, ನ.21ರಂದು ಚರ್ಲಪಲ್ಲಿ ಯಿಂದ ಪ್ರತಾಪನಗರಕ್ಕೆ ತೆರಳುವ 07087 ವಿಶೇಷ ರೈಲು ಕಲಬುರಗಿಯಲ್ಲಿ ರಾತ್ರಿ 9.40ರಿಂದ 9.43ರವರೆಗೆ ನಿಲುಗಡೆ ಹೊಂದಲಿದೆ. ನ.22ರಂದು ಪ್ರತಾಪನಗರದಿಂದ ಚರ್ಲಪಲ್ಲಿಗೆ ತೆರಳುವ 07088 ವಿಶೇಷ ರೈಲು ಮಧ್ಯಾಹ್ನ 2.37ರಿಂದ 2.40ರವರೆಗೆ ಕಲಬುರಗಿಯಲ್ಲಿ ನಿಲ್ಲಲಿದೆ.

ಇದನ್ನೂ ಓದಿ: Kalaburagi News: ಕಲಬುರಗಿಯಲ್ಲಿ ತಪ್ಪಿದ ಭಾರಿ ದುರಂತ; ತಾಂತ್ರಿಕ ದೋಷದಿಂದ ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ವಿಶೇಷ ರೈಲುಗಳ ಸಂಚಾರ ಹೆಚ್ಚುತ್ತಿರುವ ನಡುವೆಯೂ ಕಲಬುರಗಿಗೆ ನಿಲುಗಡೆ ನೀಡದಿರುವ ಕುರಿತು ಪ್ರಯಾಣಿಕರು ಹಾಗೂ ಸ್ಥಳೀಯ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಇದೀಗ ಮೂರು ರೈಲುಗಳಿಗೆ ನಿಲುಗಡೆ ಕಲ್ಪಿಸಿರುವುದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಕಲ್ಯಾಣ ನಾಡು ವಿಕಾಸ ವೇದಿಕೆ ಮನವಿಗೆ ಸ್ಪಂದನೆ: ಕಲಬುರಗಿ ಜಂಕ್ಷನ್‌ನಲ್ಲಿ 04005, 07087 ಹಾಗೂ 07088 ವಿಶೇಷ ರೈಲುಗಳಿಗೆ ನಿಲುಗಡೆ ಕಲ್ಪಿಸುವಂತೆ ಕಲ್ಯಾಣ ನಾಡು ವಿಕಾಸ ವೇದಿಕೆ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿತ್ತು. ಸಣ್ಣ ನಿಲ್ದಾಣಗಳಿಗೆ ನಿಲುಗಡೆ ನೀಡಿ ಕಲಬುರಗಿಯನ್ನು ಕಡೆಗಣಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ತಕ್ಷಣ ನಿಲುಗಡೆ ಕಲ್ಪಿಸುವಂತೆ ಒತ್ತಾಯಿಸಿತ್ತು. ಈ ಮನವಿಗೆ ಸ್ಪಂದಿಸಿದ ಸೊಲ್ಲಾಪುರ ರೈಲ್ವೆ ವಿಭಾಗೀಯ ಕಚೇರಿ, ಕಲಬುರಗಿಯಲ್ಲಿ ರೈಲುಗಳ ನಿಲುಗಡೆಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದರ ಫಲವಾಗಿ ಮೂರು ವಿಶೇಷ ರೈಲುಗಳಿಗೆ ಕಲಬುರಗಿ ಜಂಕ್ಷನ್‌ನಲ್ಲಿ ವಾಣಿಜ್ಯ ನಿಲುಗಡೆಗೆ ಅನುಮತಿ ದೊರೆತಿದೆ.

ಯಾವ ರೈಲುಗಳಿಗೆ ನಿಲುಗಡೆ?

04005 ಬೆಂಗಳೂರು-ಕಂಟೋನ್ಮೆಂಟ್‌ ನವದೆಹಲಿ ವಿಶೇಷ ರೈಲು

07087 ಚರ್ಲಪಲ್ಲಿ-ಪ್ರತಾಪನಗರ ವಿಶೇಷ ರೈಲು

07088 ಪ್ರತಾಪನಗರ-ಚರ್ಲಪಲ್ಲಿ ವಿಶೇಷ ರೈಲು

image

ಪ್ರಯಾಣಿಕರ ಅನುಕೂಲ ಹಾಗೂ ಸಾರ್ವಜನಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೈಲು ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಕಲಬುರಗಿ ಜಂಕ್ಷನ್‌ನಲ್ಲಿ ಮೂರು ವಿಶೇಷ ರೈಲುಗಳಿಗೆ ವಾಣಿಜ್ಯ ನಿಲುಗಡೆ ನೀಡಿರುವುದು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಮುಂದೆಯೂ ಪ್ರಯಾಣಿಕರ ಬೇಡಿಕೆಗಳನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ವಿಕ್ರಮ್ ಎ.ಕೆ., ಪಿಆರ್‌ಒ ರೈಲ್ವೆ ಇಲಾಖೆ
image

ವಿಭಾಗೀಯ ಕೇಂದ್ರವಾಗಿರುವ ಹಾಗೂ ಕಲ್ಯಾಣ ಕರ್ನಾಟಕದ ಅತಿ ದೊಡ್ಡ ನಗರ, ಸೇವಾ ಮತ್ತು ಕೈಗಾರಿಕಾ ವಲಯದ ಪ್ರಮುಖ ಕೇಂದ್ರವಾಗಿರುವ ಕಲಬುರಗಿಯಲ್ಲಿ ರೈಲುಗಳಿಗೆ ನಿಲುಗಡೆ ನೀಡದೆ ಪದೇಪದೇ ಕಡೆಗಣಿಸುತ್ತಿರುವ ಮಧ್ಯ ರೈಲ್ವೆಯ ಕ್ರಮವನ್ನು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾದರೆ ರೈಲು ರೋಕೋ ಹೋರಾಟ ನಡೆಸಬೇಕಾಗುತ್ತದೆ.

- ಮುತ್ತಣ್ಣ ಎಸ್. ನಡಗೇರಿ, ಸಂಸ್ಥಾಪಕ ಅಧ್ಯಕ್ಷ, ಕಲ್ಯಾಣ ನಾಡು ವಿಕಾಸ ವೇದಿಕೆ, ಕಲಬುರಗಿ.