ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Impact: ಅನರ್ಹ ಮತದಾರರಿದ್ದಾರೆ ಎಂಬ ಕೂಗಿನ ಸದ್ಧಡಗಿಸಿದ ಜವಾಬ್ದಾರಿ ಸ್ಥಾನದಲ್ಲಿರುವ ಶಿಕ್ಷಕರು

ಬೆಳಿಗ್ಗೆ 8.30ಕ್ಕೆ ಪ್ರಾರಂಭವಾದ ಮತದಾನ ಮಂದಗತಿಯಲ್ಲಿ ನಡೆದರೂ ಮಧ್ಯಾಹ್ನದ 4.30ರ ವೇಳೆಗೆ 469 ಮಂದಿ ಮತಚಲಾಯಿಸುವ ಮೂಲಕ ಶೇ.80ರಷ್ಟು ಮತದಾನ ವಾಗುವಂತೆ ನೋಡಿಕೊಂಡರು. ಅನರ್ಹರನ್ನು ಹೊರತುಪಡಿಸಿ ಲೆಕ್ಕಾಚಾರ ಮಾಡಿದರೆ 498 ಮತದಾರರ ಪೈಕಿ 469 ಮಂದಿ ಮತ ಚಲಾಯಿಸಿದ್ದು ಶೇ.94.17ರಷ್ಟು ರಷ್ಟು ಮತದಾನವಾಗಿದೆ

ಚಿಕ್ಕಬಳ್ಳಾಪುರ: ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆ ಶಾಂತವಾಗಿ ಪಾರದರ್ಶಕವಾಗಿ ನಡೆಯುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಿತು.

ಚುನಾವಣೆಯ ಹಿಂದಿನ ದಿನ ಶಿಕ್ಷಕರ ಸಂಘದ  ಚುನಾವಣೆಯಲ್ಲಿ ಗೋಲ್‌ಮಾಲ್ ಆಗಲು ಎಲ್ಲಾ ಸಿದ್ಧತೆಯಾಗಿದೆ. ನಿವೃತ್ತರು, ಬಡ್ತಿ ಹೊಂದಿದವರು, ಮರಣ ಹೊಂದಿದ ಸುಮಾರು 93 ಮಂದಿ ಅನರ್ಹಮತದಾರರಿದ್ದಾರೆ ಎಂಬ ಗುಲ್ಲು ಬಲವಾಗಿ ಕೇಳಿ ಬಂದಿತ್ತು. ಈ ಸಂಬಂಧ ವಿಶ್ವವಾಣಿ ಮುಖಪುಟದ ಸುದ್ದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಘವು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಎದ್ದಿದ್ದ ಕೂಗಿನ ಸದ್ಧಡಗಿಸಿ ಚುನಾವಣಾ ಘನತೆ ಗೌರವ ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Chikkaballapur News: ಸಮಾಧಾನ ರಾಜೀ ಮೂಲಕ ನ್ಯಾಯದಾನ ಸಕಾಲದಲ್ಲಿ ಕಾನೂನಿನ ಉಚಿತ ನೆರವು: ನ್ಯಾ. ಶಿಲ್ಪ.ಬಿ.

ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026 ರಿಂದ 2030ರ ಅವಧಿಯ ತಾಲೂಕು ಸಂಘದ ಶಿಕ್ಷಕರ ಚುನಾವಣೆ ಶುಕ್ರವಾರ ನಡೆದಿದ್ದು 12 ನಿರ್ದೇಶಕ ಸ್ಥಾನಗಳಿಗೆ ಒಟ್ಟು 19 ಮಂದಿ  ಸ್ಪರ್ಧೆಯ ಕಣದಲ್ಲಿದ್ದರು.

ಬೆಳಿಗ್ಗೆ ೮.೩೦ಕ್ಕೆ ಪ್ರಾರಂಭವಾದ ಮತದಾನ ಮಂದಗತಿಯಲ್ಲಿ ನಡೆದರೂ ಮಧ್ಯಾಹ್ನದ ೪.೩೦ರ ವೇಳೆಗೆ 469 ಮಂದಿ ಮತಚಲಾಯಿಸುವ ಮೂಲಕ ಶೇ.80ರಷ್ಟು ಮತದಾನ ವಾಗುವಂತೆ ನೋಡಿಕೊಂಡರು. ಅನರ್ಹರನ್ನು ಹೊರತುಪಡಿಸಿ ಲೆಕ್ಕಾಚಾರ ಮಾಡಿದರೆ 498 ಮತದಾರರ ಪೈಕಿ 469 ಮಂದಿ ಮತ ಚಲಾಯಿಸಿದ್ದು ಶೇ.94.17ರಷ್ಟು ರಷ್ಟು ಮತದಾನವಾಗಿದೆ ಎನ್ನಬಹುದು.

8u

ಎಂದಿನA ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ನಮಗೆ ಮತ ಹಾಕಿ, ನಮಗೆ ಮತಹಾಕಿ ಎಂದು ಶಿಕ್ಷಕರ ಮನ ಒಲಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ಬಿಸಿಲಧಗೆ ತಣಿಸಲು ಕೆಲಸ ಶಿಕ್ಷಕರು ಐಸ್‌ಕ್ರೀಮ್ ಹಂಚುವ ಮೂಲಕ ಮತಯಾಚನೆ ಮಾಡಿದ್ದು, ಊಟ ಹಾಕಿಸುವ ಮೂಲಕ ತಮ್ಮ ಪರವಾದ ಒಲವು ಮೂಡಿಸಲು ಪ್ರಯತ್ನಿಸಿದ್ದು ಕಂಡು ಬಂದವು.

ಚುನಾವಣೆ ಅಹಿತಕರವಾಗಿ ನಡೆಯದಂತೆ ಪೊಲೀಸ್ ಇಲಾಖೆ ಬಿಗಿಭದ್ರತೆ ಒದಗಿಸ ಲಾಗಿದ್ದು ಚುನಾವಣಾಧಿಕಾರಿ ನರಸಿಂಹರೆಡ್ಡಿ ಆಕ್ಷೇಪಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ಚುನಾವಣೆ ನಡೆಸಿ ಸೈ ಎನಿಸಿಕೊಂಡರು.

voting

ಫಲಿತಾಂಶ ಅತಂತ್ರ!!
ಸಂಜೆ ೬.೩೦ಕ್ಕೆ ಮತ ಎಣಿಕೆ ಪ್ರಾರಂಭವಾದ ಕಾರಣ ಮೊದಲಿಗೆ ಮಹಿಳಾ ನಿರ್ದೇಶಕರ ಮತ ಎಣಿಕೆ ನಡೆದು 4 ಮಂದಿ ಆಯ್ಕೆಯಾದರು. ಪುರುಷರ 8 ನಿರ್ದೇಶಕ ಸ್ಥಾನಗಳ ಫಲಿತಾಂಶ 12 ಗಂಟೆಯಷ್ಟರಲ್ಲಿ ತಿಳಿಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದು ಶನಿವಾರ ಸ್ಪಷ್ಟ ಮಾಹಿತಿ ಪ್ರಕಟಿಸಲಾಗುವುದು.  

4 ಮಂದಿ ಮಹಿಳಾ ನಿರ್ದೇಶಕರಾಗಿ ಆಯ್ಕೆಯಾದವರ ಪಟ್ಟಿ ಹೀಗಿದೆ. 1. ಪಿ.ಎಸ್.ವಹೀದಾ ಬಾನು-313 ಮತಗಳನ್ನು ಪಡೆದಿದ್ದಾರೆ. 2. ಅಪ್ಸರ-260, ಕೆ., 3. ಜಯಭಾರತಿ-255.4. ಪ್ರೇಮಾವತಿ.ಎಸ್.-205 ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ನರಸಿಂಹರೆಡ್ಡಿ ಘೋಷಿಸಿದರು.