ರೇಸ್‌ನಲ್ಲಿ ಗೆದ್ದು ದಾಖಲೆ ಬರೆದ ಸಕ್ಕರೆ ನಗರಿಯ ಯುವಕನ ಪ್ರೀತಿಯ ಪಾರಿವಾಳ
ಮಂಡ್ಯ: ‘ಇದು ಪ್ರೀತಿಯ ಪಾರಿವಾಳ ಹಾರಿ ಬಂದ’ ಕಥೆ. ಸಾಕಷ್ಟು ಜನರು ಪಾರಿವಾಳವನ್ನು ಸಾಕುತ್ತಾರೆ. ರೇಸ್‌ಗಾಗಿಯೂ ಪಾರಿವಾಳವನ್ನು ಸಾಕುವವರಿದ್ದಾರೆ. ರೇಸ್‌ಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡಿ ಪಾರಿವಾಳವನ್ನು ಖರೀದಿಸುವವರಿದ್ದಾರೆ. ಇಂತಹದ್ದೇ ಒಂದು ರೇಸ್‌ನಲ್ಲಿ ಪಾಲ್ಗೊಂಡಿದ್ದ ಪಾರಿವಾಳ 52 ದಿನ ಗಳಲ್ಲಿ 1790 ಕಿ.ಮೀ ಕ್ರಮಿಸಿ ತನ್ನ ಮಾಲೀಕ ನನ್ನ ಹುಡುಕಿಕೊಂಡು ಬಂದು ದಾಖಲೆ ಬರೆದಿದೆ.
ಇಂತಹ ಅಚ್ಚರಿ ಘಟನೆಗೆ ಮಂಡ್ಯ ನಗರ ಸಾಕ್ಷಿ ಆಗಿದೆ. ಮಾಲೀಕನನ್ನು ಹುಡುಕಿಕೊಂಡು ದೆಹಲಿ ಯಿಂದ ಮಂಡ್ಯಕ್ಕೆ ಬರುವ ಮೂಲಕ ಒಂದು ವರ್ಷ ವಯಸ್ಸಿನ ಅಭಿಮನ್ಯು ಹೆಸರಿನ ಪಾರಿವಾಳ ವಿಶೇಷ ದಾಖಲೆ ನಿರ್ಮಿಸಿದೆ. ಕೇವಲ ಒಂದು ವರ್ಷದ ಸಾಕು ಪಾರಿವಾಳವೊಂದು ಇಷ್ಟು ದೂರ ಕ್ರಮಿಸಿ ವಾಪಸಾಗುವ ಮೂಲಕ ದಾಖಲೆ ಪುಸ್ತಕ ಸೇರಿದೆ.
ಇದನ್ನೂ ಓದಿ: Tragedy in Mandya: ಈಜಲು ಹೋದ ಬಾಲಕರಿಬ್ಬರು ನೀರುಪಾಲು
ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ ರಾಜಧಾನಿ ದೆಹಲಿಯಲ್ಲಿ ಪಾರಿವಾಳಗಳ ರೇಸ್ ಆಯೋಜಿಸಿದ್ದರು. ಇದರಲ್ಲಿ ಮಂಡ್ಯದ ವಿ.ಸಿ.ಫಾರಂನ ಶ್ರೀಧರ್ ಅವರಿಗೆ ಸೇರಿದ ಅಭಿಮನ್ಯು ಹೆಸರಿನ ಪಾರಿವಾಳ ಸತತ 52 ದಿನಗಳ ಹಾರಾಟ ನಡೆಸಿ ದೆಹಲಿಯಿಂದ ಮಂಡ್ಯಕ್ಕೆ ಬಂದಿದೆ. ಈ ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳನಾಡಿನ ಮೂಲದ ಒಟ್ಟು 22 ಪಾರಿವಾಳ ಭಾಗವಹಿಸಿದ್ದವು.
ಪಾರಿವಾಳಗಳಿಗೆ ರೇಸ್‌ಗೂ ಮುನ್ನ ರಿಂಗ್ ಅಳವಡಿಕೆ ಮಾಡಲಾಗಿತ್ತು. ಏ.5ರಂದು ಎಲ್ಲಾ ಪಾರಿವಾಳಗಳನ್ನು ಹಾರಿ ಬಿಡಲಾಗಿತ್ತು. ಅಂದಿನಿಂದ ಒಟ್ಟು 1790 ಕಿ.ಮೀ ಹಾರಾಟ ನಡೆಸಿ ಮೇ.28ರಂದು ಅಭಿಮನ್ಯು ಮಾಲೀಕನ ಬಳಿಗೆ ಬಂದಿದೆ. ಒಟ್ಟು 22 ಪಾರಿವಾಳಗಳ ಪೈಕಿ 14 ಪಾರಿವಾಳ ಗಳು ತಮ್ಮ ನೆಲೆಗೆ ವಾಪಸ್ಸಾಗಿದ್ದು, ಅದರಲ್ಲಿ ಅತಿ ಚಿಕ್ಕ ವಯಸ್ಸಿನ ಮಂಡ್ಯದ ಅಭಿಮನ್ಯು ದಾಖಲೆ ನಿರ್ಮಿಸಿದೆ.