ಅದಮ್ಯ ಚೇತನ, ಇಸ್ಕಾನ್, ಸಿದ ಗಂಗಾ ಮಠಕ್ಕಿಲ್ಲ ಸಿಲಿಂಡರ್ ಆತಂಕ, 2009 ರಿಂದಲೂ ವಾಣಿಜ್ಯ ಸಿಲಿಂಡರ್ ಖರೀದಿಸದ ಅದಮ್ಯ ಚೇತನ
ಬೆಂಗಳೂರು: ರಾಜ್ಯದ ಬಹುಪಾಲು ಹೋಟೆಲ್, ಕಲ್ಯಾಣ ಮಂಟಪ, ದೇವಾಲಯಗಳ ಆಡಳಿತ ಮಂಡಳಿ ಯುದ್ಧದಿಂದಾಗಿ ಕೊರತೆಯಾಗುತ್ತಿರುವ ವಾಣಿಜ್ಯ ಸಿಲಿಂಡರ್‌ಗಳ ಬಗ್ಗೆ ಚಿಂತಿಸುತ್ತಿದ್ದರೆ, ನಿತ್ಯ ಲಕ್ಷಾಂತರ ಮಂದಿಗೆ ಅನ್ನದಾಸೋಹ ನಡೆಸುವ ಈ ಕ್ಷೇತ್ರಗಳಿಗೆ ಮಾತ್ರ ಈ ಆತಂಕವಿಲ್ಲ. ಏಕೆಂದರೆ, ಇವರೆಲ್ಲ ಸಿಲಿಂಡರ್‌ಗಳನ್ನು ಮೀರಿದ ‘ಆತ್ಮನಿ ರ್ಭರತೆ’ಯನ್ನು ಸಾಧಿಸಿದ್ದಾರೆ.
ಬೆಂಗಳೂರಿನ ಅದಮ್ಯಚೇತನ, ಇಸ್ಕಾನ್‌ನ ಅಕ್ಷ ಯಪಾತ್ರ, ಸಿದ್ದಗಂಗಾ ಮಠ, ಧರ್ಮಸ್ಥಳ ದಂತಹ ಕ್ಷೇತ್ರದಲ್ಲಿ ನಿತ್ಯ ಲಕ್ಷಾಂತರ ಜನರಿಗೆ ಅನ್ನಪ್ರಸಾದ ವನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಈ ಎಲ್ಲ ಕಡೆ ಸೋಲಾರ್, ಹಬೆಯಾಧಾರಿತ ಆಹಾರ ತಯಾರಿಕಾ ಕ್ರಮ ಅಥವಾ ಸೋಲಾರ್ ಬಳಸುವುದರಿಂದ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಯಾದರೂ ಚಿಂತಿಸುತ್ತಿಲ್ಲ.
ತೇಜಸ್ವಿನಿ ಅನಂತ ಕುಮಾರ್ ಅವರು ಮುನ್ನಡೆಸುತ್ತಿರುವ ಅದಮ್ಯ ಚೇತನದಲ್ಲಿ 2009 ರಿಂದಲೇ ವಾಣಿಜ್ಯ ಸಿಲಿಂಡರ್‌ಗಳ ಬದಲು, ಪರ್ಯಾಯ ಇಂಧನದಲ್ಲಿ ನಿತ್ಯ ಆಹಾರ ಸಿದ್ಧಪಡಿಸಲಾಗುತ್ತಿದೆ.
ಇದನ್ನೂ ಓದಿ: LPG Gas Price: ಗುಡ್‌ನ್ಯೂಸ್... ಗುಡ್‌ನ್ಯೂಸ್! LPG ಗ್ಯಾಸ್ ಮತ್ತಷ್ಟು ಅಗ್ಗ!
ಅದಮ್ಯ ಚೇತನದ ಅಡುಗೆ ಮನೆಯಲ್ಲಿ 2009 ರಿಂದ ಬಯೋ ಗ್ಯಾಸ್, ಸೋಲಾರ್ ಹಾಗೂ ಬ್ರಿಕೆಟ್(ಕಲ್ಲಿದ್ದಲು ಪುಡಿ, ಕೃಷಿ ತ್ಯಾಜ್ಯ)ವನ್ನು ಬಳಸಿಕೊಂಡು ನಿತ್ಯ ಲಕ್ಷಾಂತರ ಜನರಿಗೆ ಅಡುಗೆ ತಯಾರಿಸಲಾಗುತ್ತಿದೆ. ಮನೆಗಳಲ್ಲಿ ಬ್ರಿಕೆಟ್‌ಗಳ ಬಳಕೆ ಸಾಧ್ಯವಿಲ್ಲವಾದರೂ, ದೊಡ್ಡ ದೊಡ್ಡ ಹೋಟೆಲ್ ಸೇರಿದಂತೆ ಸಾಮೂಹಿಕ ಅಡುಗೆ ತಯಾರಿಸುವ ಜಾಗದಲ್ಲಿ ಬಳಸಿಕೊಳ್ಳಬಹುದಾಗಿದೆ.
ಬ್ರಿಕೆಟ್, ಬಾಯ್ಲರ್‌ಗಳ ಬಳಕೆ ಆರಂಭದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಹಾಗೂ ಇದಕ್ಕೆ ತಾಂತ್ರಿಕ ಸಿಬ್ಬಂದಿಗಳ ಅಗತ್ಯವಿರುತ್ತದೆ. ಆದರೆ ಬಯೋ ಗ್ಯಾಸ್‌ನಲ್ಲಿ ಈ ಸಮಸ್ಯೆಯಿಲ್ಲ. ಸದ್ಯ ಹೋಟೆಲ್, ಹಾಸ್ಟೆಲ್‌ಗಳು ಎದುರಿಸುತ್ತಿರುವ ಸಮಸ್ಯೆ ಹೋಲಿಸಿದರೆ ಈ ಪರ್ಯಾಯ ಮಾರ್ಗ ಸೂಕ್ತ ಹಾಗೂ ಅನಿವಾರ್ಯ ಎನ್ನುವ ಮಾತುಗಳನ್ನು ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಆರದ ಒಲೆಯ ಜ್ವಾಲೆ
ಸಿದ್ದಗಂಗಾ ಮಠದ ದಾಸೋಹ ಶ್ರೀ ಅಟವಿ ಸ್ವಾಮಿಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಶಿವಕುಮಾರ ಸ್ವಾಮೀಜಿಗಳ ಕಾಲಕ್ಕೆ ದಾಸೋಹ ಸೇವೆ ಲೋಕ ಸೋಜಿಗದ ಮಹಾಮನೆಯಾಗಿ ಬದಲಾಗಿದೆ. ದಾಸೋಹದ ಅಡುಗೆ ಮನೆಯ ಒಲೆಯು ಉಜ್ವಲವಾಗಿ ಉರಿಯುತ್ತಿದೆ. ಪ್ರತಿ ನಿತ್ಯ ದಾಸೋಹಕ್ಕೆ ಸುಮಾರು 50 ಕ್ವಿಂಟಾಲ್ ಅಕ್ಕಿ, 20 ಕ್ವಿಂಟಾಲ್ ರಾಗಿ, ಸುಮಾರು 10 ಕ್ವಿಂಟಾಲ್ ಕಾಳು ಬೇಳೆ, ಇವುಗಳ ಪ್ರಮಾಣಕ್ಕೆ ಅನುಗುಣವಾಗಿ ಸಾಂಬಾರುಪುಡಿ, ತೆಂಗಿನಕಾಯಿ, ಈರುಳ್ಳಿ, ಎಣ್ಣೆ ಹಾಲು, ಬೆಲ್ಲ ಸಕ್ಕರೆ, ಹೀಗೆ ನೂರಾರು ಕೆಜಿ ಲೆಕ್ಕದಲ್ಲಿ ಪದಾರ್ಥಗಳು ಬೇಕಾಗುತ್ತವೆ.
ಸಿದ್ದಗಂಗಾ ಮಠದ ದಾಸೋಹ ಒಲೆ (ಅಡುಗೆಮನೆ) ತ್ರಿವಿಧ ದಾಸೋಹಕ್ಕೆ (ಅನ್ನ, ಅಕ್ಷರ, ಜ್ಞಾನ) ಪ್ರಸಿದ್ಧವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಊಟವನ್ನು ನೀಡುತ್ತದೆ. 1966ರ ಭೀಕರ ಬರಗಾಲದ ಸಮಯದಲ್ಲಿ, ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸ್ವತಃ ಅಡುಗೆಮನೆಯಲ್ಲಿ ನಿಂತು ಆಹಾರ ತಯಾರಿಸಿ, ಹಸಿದವರಿಗೆ ಹಂಚುವ ಮೂಲಕ ಈ ದಾಸೋಹ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನೇ ಬಳಸದ ಕಾರಣ, ಅನ್ನದಾಸೋಹಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಸಿದ್ದಗಂಗಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
![]()
2009ರಲ್ಲಿಯೇ ಅದಮ್ಯ ಚೇತನದಲ್ಲಿ ಬ್ರಿಕೆಟ್ ಹಾಗೂ ಬಯೋ ಇಂಧನದ ಬಳಕೆ ಮಾಡಲು ಶುರುಮಾಡಿದ್ದೇವೆ. ಆರಂಭದಲ್ಲಿ ಅನೇಕರು ನಮ್ಮ ನಡೆಗೆ ಅಚ್ಚರಿ ವ್ಯಕ್ತಪಡಿ ಸಿದ್ದರೂ, ಪರ್ಯಾಯ ಇಂಧನ ಅನಿವಾರ್ಯ ಎನ್ನುವುದು ಈಗ ತಿಳಿಯುತ್ತಿದೆ. ಸಣ್ಣ ಸ್ಥಳದಲ್ಲಿ ಬ್ರಿಕೆಟ್‌ಗಳ ಬಳಕೆ ಸವಾಲು. ಆದರೆ ಸಾಮೂಹಿಕ ಅಡುಗೆ ಮಾಡುವಲ್ಲಿ ಇದು ಉತ್ತಮ ಆಯ್ಕೆ.
-ತೇಜಸ್ವಿನಿ ಅನಂತಕುಮಾರ್, ಮುಖ್ಯಸ್ಥೆ, ಅದಮ್ಯ ಚೇತನ