ಆರ್.ವಿ.ದೇಶಪಾಂಡೆ
ಶಾಸಕರು, ಮಾಜಿ ಸಚಿವರು
ಉತ್ತರ ಭಾರತದ ಅನೇಕ ಹಿರಿಯ ನಾಯಕರೊಂದಿಗೆ ಹೆಗಡೆಯವರಿಗೆ ಆತ್ಮೀಯ ಸಂಬಂಧವಿತ್ತು. ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರೀ, ಮೊರಾರ್ಜಿ ದೇಸಾಯಿ, ಡಾ.ರಾಮ ಮನೋಹರ ಲೋಹಿಯಾ, ಜೆ.ಬಿ.ಕೃಪಲಾನಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರ ಒಡನಾಟವು ಅವರ ರಾಜಕೀಯ ದೃಷ್ಟಿಕೋನ ಮತ್ತಷ್ಟು ವಿಸ್ತರಿಸಿತು. ಹೊಂದಿದ್ದ ಸಿದ್ಧಾಪುರದ ದೊಡ್ಡಮನೆ ಕುಟುಂಬದಲ್ಲಿ ಬೆಳೆದ ಹೆಗಡೆಯವರ ವ್ಯಕ್ತಿತ್ವದ ಮೇಲೆ ಮಹಾತ್ಮ ಗಾಂಧೀಜಿ, ವಿನೋಬಾ ಭಾವೆ ಹಾಗೂ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಚಿಂತನೆಗಳ ಆಳವಾದ ಪ್ರಭಾವ ವಿತ್ತು.
ಉತ್ತರ ಭಾರತದ ಅನೇಕ ಹಿರಿಯ ನಾಯಕರೊಂದಿಗೆ ಹೆಗಡೆಯವರಿಗೆ ಆತ್ಮೀಯ ಸಂಬಂಧವಿತ್ತು. ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರೀ, ಮೊರಾರ್ಜಿ ದೇಸಾಯಿ, ಡಾ.ರಾಮಮನೋಹರ ಲೋಹಿಯಾ, ಜೆ.ಬಿ.ಕೃಪಲಾನಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರ ಒಡನಾಟವು ಅವರ ರಾಜಕೀಯ ದೃಷ್ಟಿಕೋನ ಮತ್ತಷ್ಟು ವಿಸ್ತರಿಸಿತು.
ನೆಹರು ಅವರ ದೂರದೃಷ್ಟಿ, ಜಾತ್ಯತೀತ ಮನೋಭಾವ ಹಾಗೂ ಪ್ರಜಾಪ್ರಭುತ್ವದ ಬದ್ಧತೆ ಹೆಗಡೆಯವರಿಗೆ ವಿಶೇಷವಾಗಿ ಪ್ರಿಯವಾಗಿತ್ತು. ಅಧಿಕಾರ ವಿಕೇಂದ್ರೀಕರಣದ ಚಿಂತಕ ಎಸ್.ಕೆ.ಡೇ ಅವರ ವಿಚಾರಗಳು ಸಹ ಹೆಗಡೆಯವರ ಆಡಳಿತದ ಮೇಲೆ ಮಹತ್ತರ ಪರಿಣಾಮ ಬೀರಿದ್ದವು. 1983ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದಾಗ ಹೆಗಡೆಯವರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದರು.
ಇದನ್ನೂ ಓದಿ: Birth centenary of Ramakrishna Hegde: ಹೆಗಡೆಯವರಿಗೇ ಹೆಗಡೆಯವರೇ ಸಾಟಿ
ಜನರ ನಾಡಿಮಿಡಿತ ಅರಿಯುವ ಅಪೂರ್ವ ಶಕ್ತಿ ಅವರಲ್ಲಿತ್ತು. ಮುಖ್ಯಮಂತ್ರಿಗಳು ನೇರವಾಗಿ ಜನಸಾಮಾನ್ಯರ ಅಹವಾಲುಗಳನ್ನು ಆಲಿಸುವ ಜನತಾದರ್ಶನ ಕಾರ್ಯಕ್ರಮ ಅತ್ಯಂತ ಜನಪ್ರಿಯ ವಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಗೆ ಅಗತ್ಯ ಸ್ವಾತಂತ್ರ್ಯ ನೀಡುವ ಮೂಲಕ ಸಾಮಾನ್ಯ ಜನರಲ್ಲಿ ಆಡಳಿತ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಿದರು. ಆಡಳಿತದಲ್ಲಿ ಪಾರದರ್ಶಕತೆ, ಜನಸ್ಪಂದನೆ ಹಾಗೂ ಹೊಣೆಗಾರಿಕೆಗೆ ಅವರು ಹೆಚ್ಚಿನ ಆದ್ಯತೆ ನೀಡಿದರು. ನನ್ನ ರಾಜಕೀಯ ಜೀವನದಲ್ಲಿಯೂ ಹೆಗಡೆಯವರ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ.
1985ರಲ್ಲಿ ನಾನು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರು ಸ್ವತಃ ನನ್ನನ್ನು ಅಭಿನಂದಿಸಿದ್ದರು. ನಂತರ ಸಚಿವ ಸಂಪುಟಕ್ಕೆ ನನ್ನನ್ನು ಆಯ್ಕೆ ಮಾಡಿ, ನನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟರು. ಅವರೊಂದಿಗೆ ಕೆಲಸ ಮಾಡುವ ಅವಕಾಶ ನನ್ನ ಸಾರ್ವಜನಿಕ ಬದುಕಿನ ಮಹತ್ವದ ತಿರುವಾಯಿತು. ಹೆಗಡೆಯವರು ನನ್ನೊಬ್ಬನನ್ನೇ ಬೆಳೆಸಲಿಲ್ಲ. ಅನೇಕ ಹೊಸ ನಾಯಕರಿಗೆ ಅವಕಾಶ ನೀಡಿ, ಕರ್ನಾಟಕದ ರಾಜಕೀಯ ನಾಯಕತ್ವಕ್ಕೆ ಹೊಸ ಪೀಳಿಗೆ ರೂಪಿಸಿದರು. ಹೆಗಡೆಯವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಅಧಿಕಾರ ವಿಕೇಂದ್ರೀ ಕರಣ ಪ್ರಮುಖವಾದದ್ದು.
1983ರಲ್ಲಿ ಕರ್ನಾಟಕದಲ್ಲಿ ಜಿಲ್ಲಾ ಪರಿಷತ್ತು ಮತ್ತು ಮಂಡಲ ಪಂಚಾಯತ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಗ್ರಾಮೀಣ ಮಟ್ಟದ ನಾಯಕತ್ವ ಬೆಳೆಯಲು ಅವಕಾಶ ಕಲ್ಪಿಸಿದರು. ನಂತರ ದೇಶಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಜಾರಿಗೆ ಬಂದ 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಇಂತಹ ಚಿಂತನೆಗಳು ಪ್ರೇರಣೆಯಾದವು.
ಇದನ್ನೂ ಓದಿ: Birth centenary of Ramakrishna Hegde: ಜನರ ಸಾಮರ್ಥ್ಯ ಗುರುತಿಸುವುದು ಹೆಗಡೆ ಅವರ ವಿಶೇಷ ಗುಣವಾಗಿತ್ತು
ಇಂದು ದೇಶದ ಪ್ರಜಾಪ್ರಭುತ್ವದ ತಳಮಟ್ಟ ಬಲಿಷ್ಠವಾಗಿರುವುದರಲ್ಲಿ ಹೆಗಡೆಯವರ ದೂರದೃಷ್ಟಿ ಯ ಪಾತ್ರ ಮಹತ್ವದ್ದಾಗಿದೆ. ಹೆಗಡೆಯವರ ಆಡಳಿತಾವಧಿಯಲ್ಲಿ ಶಿಕ್ಷಣ, ಕೃಷಿ, ಗ್ರಾಮೀಣ ಅಭಿವೃದ್ಧಿ, ರೈತರ ಸಾಲ ಸೌಲಭ್ಯ, ಆಹಾರ ಭದ್ರತೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳು ಜಾರಿಗೆ ಬಂದವು. ಜಲಾನಯನ ಪ್ರದೇಶಗಳ ಅಭಿವೃದ್ಧಿ, ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು ಹಾಗೂ ಸಹಕಾರಿ ಕ್ಷೇತ್ರದ ಸುಧಾರಣೆಗಳು ಜನಜೀವನದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಿದವು.
ಅಭಿವೃದ್ಧಿ ಎಂದರೆ ಕೇವಲ ನಗರಗಳ ಬೆಳವಣಿಗೆಯಲ್ಲ, ಗ್ರಾಮೀಣ ಜನರ ಬದುಕಿನ ಗುಣಮಟ್ಟ ಸುಧಾರಿಸುವುದೂ ಅಭಿವೃದ್ಧಿಯೇ ಎಂಬ ನಿಲುವು ಅವರ ಆಡಳಿತದ ವೈಶಿಷ್ಟ್ಯವಾಗಿತ್ತು. ಭ್ರಷ್ಟಾಚಾರ ನಿರ್ಮೂಲನೆಗಾಗಿ ಲೋಕಾಯುಕ್ತ ಸಂಸ್ಥೆಯ ಸ್ಥಾಪನೆ ಹೆಗಡೆಯವರ ಆಡಳಿತದ ಮತ್ತೊಂದು ಮಹತ್ವದ ಹೆಜ್ಜೆ. ಕರ್ನಾಟಕದ ಲೋಕಾಯುಕ್ತ ವ್ಯವಸ್ಥೆ ದೇಶದಾದ್ಯಂತ ಗಮನ ಸೆಳೆಯುವಂತೆ ಮಾಡುವಲ್ಲಿ ಅವರ ಕೊಡುಗೆ ಸ್ಮರಣೀಯವಾಗಿದೆ.
ರಾಷ್ಟ್ರಮಟ್ಟದ ರಾಜಕಾರಣದ ಬಗ್ಗೆ ಅವರಿಗಿದ್ದ ಆಸಕ್ತಿ ಮತ್ತು ವಿಶಾಲ ದೃಷ್ಟಿಕೋನವು ಅವರನ್ನು ಕೇವಲ ಪ್ರಾದೇಶಿಕ ನಾಯಕರನ್ನಾಗಿ ಉಳಿಸಲಿಲ್ಲ, ರಾಷ್ಟ್ರೀಯ ಚಿಂತನೆಯ ಮುತ್ಸದ್ಧಿ ಯಾಗಿ ರೂಪಿಸಿತು. ಮುಖ್ಯಮಂತ್ರಿಯಾಗಿ ಅವರು ಕೈಗೊಂಡ ದೂರದೃಷ್ಟಿಯ ಕ್ರಮಗಳು ಮತ್ತು ಜನಪರ ಕಾರ್ಯಗಳು ಮುಂದಿನ ಹಲವು ತಲೆಮಾರುಗಳಿಗೂ ಸ್ಮರಣೀಯವಾಗಿವೆ.
ಜನರ ಭಾವನೆಗಳಿಗೆ ಸದಾ ಸ್ಪಂದಿಸುತ್ತಾ, ಸಮಾಜದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ ಅವರು ನಿಜವಾದ ಜನನಾಯಕರಾಗಿದ್ದರು. ಅವರ ಆಡಳಿತದಲ್ಲಿ ಮೌಲ್ಯಾಧಾರಿತ ರಾಜಕಾರಣ, ಪ್ರಜಾ ಪ್ರಭುತ್ವದ ಬದ್ಧತೆ, ಅಧಿಕಾರ ವಿಕೇಂದ್ರೀಕರಣ ಮತ್ತು ಅಭಿವೃದ್ಧಿಯ ದೂರದೃಷ್ಟಿ ಒಂದಾಗಿ ಕಾಣಿಸಿಕೊಂಡವು. ಅವರ ಅನೇಕ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ. ಹೆಗಡೆ ಅವರ ಜನ್ಮ ಶತಮಾನೋತ್ಸವವನ್ನು ನಾವು ಸಾಕ್ಷಿಯಾಗುತ್ತಿರುವ ಈ ಸ್ಮರಣೀಯ ಸಂದರ್ಭದಲ್ಲಿ, ಕರ್ನಾಟಕದ ರಾಜಕೀಯ ಹಾಗೂ ಸಾರ್ವಜನಿಕ ಜೀವನಕ್ಕೆ ಅಪಾರ ಕೊಡುಗೆ ನೀಡಿದ ಈ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನಗಳು.
ಸಾಹಿತ್ಯ, ಸಂಗೀತ, ನಾಟಕ, ಚಲನಚಿತ್ರ, ಚಿತ್ರಕಲೆ ಹಾಗೂ ನೃತ್ಯ ಸೇರಿದಂತೆ ಎಲ್ಲ ಕಲಾ ಪ್ರಕಾರಗಳ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇತ್ತು. ವಿವಿಧ ರಾಜ್ಯಮಟ್ಟದ ಸಾಂಸ್ಕೃತಿಕ ಪ್ರಶಸ್ತಿಗಳನ್ನು ಸ್ಥಾಪಿಸುವ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೂ ಅವರು ಮಹತ್ವದ ಕೊಡುಗೆ ನೀಡಿದರು. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯನ್ನು ಅವರ ಮಾನವೀಯ ಕೊರತೆಗಳಿಂದಲ್ಲ, ಅವರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಮಾಡಿದ ಉತ್ತಮ ಕಾರ್ಯಗಳಿಂದ ಅಳೆಯಬೇಕು ಎಂಬುದು ನನ್ನ ನಂಬಿಕೆ. ಆ ದೃಷ್ಟಿಯಿಂದ ನೋಡಿದಾಗ ರಾಮಕೃಷ್ಣ ಹೆಗಡೆಯವರ ಆಡಳಿತ ಕರ್ನಾಟಕದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಹಲವು ಶಾಶ್ವತ ಬದಲಾವಣೆಗಳಿಗೆ ಕಾರಣವಾಗಿದೆ.
ರಾಷ್ಟ್ರಮಟ್ಟದ ರಾಜಕಾರಣದ ಬಗ್ಗೆ ಅವರಿಗಿದ್ದ ಆಸಕ್ತಿ ಮತ್ತು ವಿಶಾಲ ದೃಷ್ಟಿಕೋನವು ಅವರನ್ನು ಕೇವಲ ಪ್ರಾದೇಶಿಕ ನಾಯಕರನ್ನಾಗಿ ಉಳಿಸಲಿಲ್ಲ, ರಾಷ್ಟ್ರೀಯ ಚಿಂತನೆಯ ಮುತ್ಸದ್ಧಿಯಾಗಿ ರೂಪಿಸಿತು. ಮುಖ್ಯಮಂತ್ರಿಯಾಗಿ ಅವರು ಕೈಗೊಂಡ ದೂರದೃಷ್ಟಿಯ ಕ್ರಮಗಳು ಮತ್ತು ಜನಪರ ಕಾರ್ಯಗಳು ಮುಂದಿನ ಹಲವು ತಲೆಮಾರುಗಳಿಗೂ ಸ್ಮರಣೀಯವಾಗಿವೆ.
ನರ ಭಾವನೆಗಳಿಗೆ ಸದಾ ಸ್ಪಂದಿಸುತ್ತಾ, ಸಮಾಜದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ ಅವರು ನಿಜವಾದ ಜನನಾಯಕರಾಗಿದ್ದರು. ಅವರ ಆಡಳಿತದಲ್ಲಿ ಮೌಲ್ಯಾಧಾರಿತ ರಾಜಕಾರಣ, ಪ್ರಜಾ ಪ್ರಭುತ್ವದ ಬದ್ಧತೆ, ಅಧಿಕಾರ ವಿಕೇಂದ್ರೀಕರಣ ಮತ್ತು ಅಭಿವೃದ್ಧಿಯ ದೂರದೃಷ್ಟಿ ಒಂದಾಗಿ ಕಾಣಿಸಿಕೊಂಡವು. ಅವರ ಅನೇಕ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ. ಹೆಗಡೆ ಅವರ ಜನ್ಮ ಶತಮಾನೋತ್ಸವವನ್ನು ನಾವು ಸಾಕ್ಷಿಯಾಗುತ್ತಿರುವ ಈ ಸ್ಮರಣೀಯ ಸಂದರ್ಭದಲ್ಲಿ, ಕರ್ನಾಟಕದ ರಾಜಕೀಯ ಹಾಗೂ ಸಾರ್ವಜನಿಕ ಜೀವನಕ್ಕೆ ಅಪಾರ ಕೊಡುಗೆ ನೀಡಿದ ಈ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನಗಳು.