ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Aarathi Krishna: ʼಆರತಿ ಕೃಷ್ಣʼಗೆ ಅನಿವಾಸಿ ಸಚಿವೆ ಪಟ್ಟ ನೀಡಿ

ಆರತಿ ಕೃಷ್ಣ ಅವರು ಕಳೆದ ಒಂದುವರೆ ದಶಕದಿಂದ ಅನಿವಾಸಿ ಭಾರತೀಯರನ್ನು ಹಾಗೂ ರಾಜ್ಯ ಸರಕಾರದ ನಡುವೆ ಸೇತುವೆಯ ರೀತಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಅನೇಕ ಅನಿವಾಸಿ ಭಾರತೀಯರಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಮನಸ್ಸಿರುತ್ತದೆ. ಅಂತಹವರೊಂದಿಗೆ ಚರ್ಚಿಸಲು, ಅವರಿಗೆ ಅಗತ್ಯವಿರುವ ಸಹಾಯವನ್ನು ಸರಕಾರದ ಮಟ್ಟದಲ್ಲಿ ನೀಡಲು ಒಬ್ಬರ ಅಗತ್ಯವಿದೆ

ಅನಿವಾಸಿ ಭಾರತೀಯರಿಂದ ಸರಕಾರಕೆ ಒತ್ತಡ

ಇತ್ತೀಚೆಗೆ ಎನ್‌ಆರ್‌ಐ ಇಲಾಖೆ ಘೋಷಿಸಿದ ಡಿಕೆ

ಶಿವಕುಮಾರ್ ಅಧಿಕಾರ ವಹಿಸಿಕೊಂಡು ಶುಕ್ರವಾರಕ್ಕೆ ಒಂದು ತಿಂಗಳು ಭರ್ತಿಯಾಗಲಿದೆ. ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಸ್ಪಷ್ಟನೆ ನೀಡದಿದ್ದರೂ, ರಾಜ್ಯ ಕಾಂಗ್ರೆಸ್‌ನಲ್ಲಿ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಸಚಿವ ಸಂಪುಟಕ್ಕೆ ಆರತಿ ಕೃಷ್ಣರನ್ನು ಅನಿವಾಸ ಭಾರತೀಯರ ಇಲಾಖೆ ಸಚಿವೆಯನ್ನಾಗಿ ನೇಮಿಸಬೇಕೆಂಬ ಒತ್ತಡ ಅನಿವಾಸಿ ಭಾರತೀಯರಿಂದ ಶುರುವಾಗಿದೆ.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ, ಅನಿವಾಸಿ ಭಾರತೀಯಗಾಗಿಯೇ ಪ್ರತ್ಯೇಕ ಸಚಿವಾಲಯ ಆರಂಭಿಸುವುದಾಗಿ ಘೋಷಿಸಿದ್ದರು. ಈ ಇಲಾಖೆ ಎನ್‌ಆರ್‌ಐ ಹಾಗೂ ರಾಜ್ಯ ಸರಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎನ್ನುವ ಮಾತುಗಳನ್ನು ಹೇಳಿದ್ದರು.

ಈ ಇಲಾಖೆಯ ಮೂಲಕ ಮುಂದಿನ ದಿನದಲ್ಲಿ ವಿದೇಶದಲ್ಲಿರುವ ಕನ್ನಡಿಗರಿಗೆ ಅಗತ್ಯ ನೆರವು ನೀಡುವುದು, ವಿದೇಶಕ್ಕೆ ಕೆಲಸ, ವಿದ್ಯಾಭ್ಯಾಸಕ್ಕೆಂದು ಹೋಗುವವರಿಗೆ ಅಗತ್ಯ ಸಹಕಾರ ನೀಡುವು ದರೊಂದಿಗೆ, ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಂದ ಹೂಡಿಕೆಯನ್ನು ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಈ ಇಲಾಖೆ ಒತ್ತು ನೀಡಲಿದೆ ಎನ್ನಲಾಗಿತ್ತು.

ಇದನ್ನೂ ಓದಿ: CM DK Shivakumar: 2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಲು ಶಕ್ತಿ ತುಂಬಿ: ಕ್ಷೇತ್ರದ ಜನರಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

ಆದ್ದರಿಂದ ಸರಕಾರ ಆರಂಭಿಸಲು ಉದ್ದೇಶಿಸಿರುವ ಈ ಇಲಾಖೆಗೆ, ಹೊಸಬರನ್ನು ನೇಮಿಸುವ ಬದಲು ಈ ಹಿಂದೆ ಎನ್‌ಆರ್‌ಐ ಫಾರಂನಲ್ಲಿ ಕಾರ್ಯನಿರ್ವಹಿಸಿದ್ದ ಅನುಭವವಿರುವ ಆರತಿ ಕೃಷ್ಣರನ್ನೇ ಈ ಇಲಾಖೆಯ ಸಚಿವರನ್ನಾಗಿ ಮಾಡಬೇಕು. ಇದರಿಂದ ಸರಕಾರ ಹಾಗೂ ಎನ್‌ಐಆರ್‌ ಗಳಿಗೆ ಅನುಕೂಲವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ರಾಜ್ಯಕ್ಕೆ ಹೆಚ್ಚಿನ ಲಾಭ: ಆರತಿ ಕೃಷ್ಣ ಅವರು ಕಳೆದ ಒಂದುವರೆ ದಶಕದಿಂದ ಅನಿವಾಸಿ ಭಾರತೀಯರನ್ನು ಹಾಗೂ ರಾಜ್ಯ ಸರಕಾರದ ನಡುವೆ ಸೇತುವೆಯ ರೀತಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಅನೇಕ ಅನಿವಾಸಿ ಭಾರತೀಯರಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಮನಸ್ಸಿರುತ್ತದೆ. ಅಂತಹವರೊಂದಿಗೆ ಚರ್ಚಿಸಲು, ಅವರಿಗೆ ಅಗತ್ಯವಿರುವ ಸಹಾಯವನ್ನು ಸರಕಾರದ ಮಟ್ಟದಲ್ಲಿ ನೀಡಲು ಒಬ್ಬರ ಅಗತ್ಯವಿದೆ. ಅನಿವಾಸಿ ಭಾರತೀಯರಿಗೂ ಆರತಿ ಕೃಷ್ಣ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದನ್ನು ಅವರಿಗೆ ಸಚಿವ ಸ್ಥಾನ ನೀಡಿದರೆ ರಾಜ್ಯಕ್ಕೆ ಬಂಡವಾಳ ಹೂಡಿಕೆ ಯೂ ಹೆಚ್ಚಾಗಲಿದೆ. ಆದ್ದರಿಂದ ಆರತಿ ಕೃಷ್ಣ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್: ಇನ್ನು ಆರತಿ ಕೃಷ್ಣ ಅವರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳಬೇಕು, ಅವರಿಗೆ ಎನ್‌ಆರ್‌ಐ ಖಾತೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರು ಆರಂಭಿಸಿದ್ದ ಟ್ವಿಟರ್ ಅಭಿಯಾನ ಟ್ರೆಂಡ್ ಆಗಿದೆ. ನಾಲ್ಕೈದು ದಿನಗಳ ಹಿಂದೆ ‘ಘ್ಕೆಐIಐಘೆಐಖS’ ಎನ್ನುವ ಹ್ಯಾಷ್‌ಟ್ಯಾಗ್ ಭಾರಿ ಟ್ರೆಂಡ್ ಆಗಿತ್ತು.

ಉತ್ತಮ ಒಡನಾಟ

ವಿಧಾನಪರಿಷತ್ ಸದಸ್ಯೆಯಾಗಿರುವ ಆರತಿ ಕೃಷ್ಣ ಅವರು ಈ ಹಿಂದೆ ಎನ್‌ಆರ್‌ಐ ಫಾರಂನ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ವಿದೇಶದಲ್ಲಿರುವ ಎನ್‌ಆರ್‌ಐಗಳು ಅನುಭವಿಸುವ ಸಮಸ್ಯೆಗಳು, ಕೆಲಸ ಅರಸಿ ಹೋಗಿರುವ ಅನೇಕ ಕನ್ನಡಿಗರಿಗೆ ವಿದೇಶದಲ್ಲಿ ಸಮಸ್ಯೆಯಾದಾಗ ರಾಯಭಾರ ಕಚೇರಿಯೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಲವು ಕಾರ್ಯಗಳನ್ನು ಮಾಡಿದ್ದಾರೆ. ಕರೋನಾ ಸಮಯದಲ್ಲಿಯೂ ವಿದೇಶದಲ್ಲಿ ಅತಂತ್ರ ವಾಗಿದ್ದ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರಲು ಪ್ರಮುಖ ಪಾತ್ರವನ್ನು ವಹಿಸಿದ್ದರು.

image

ಕನ್ನಡದ ಕಂಪು ವಿಶ್ವಾದ್ಯಂತ ಹರಡುತ್ತಿದೆ. ಅದಕ್ಕೆ ಸಚಿವಾಲಯದ ಬೆಂಬಲವೂ ಸಿಗಲಿ. ಕರ್ನಾ ಟಕಕ್ಕೆ ಜಾಗತಿಕ ಹೂಡಿಕೆ ಮತ್ತು ಅವಕಾಶಗಳನ್ನು ತರುವ ಸೇತುವೆಯಾಗಿ ಎನ್‌ಆರ್‌ಐ ಸಚಿವಾ ಲಯ ಕಾರ್ಯನಿರ್ವಹಿಸಲಿ. ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರದಲ್ಲಿ ಸ್ಥಾಪನೆಯಾಗಲಿ. ಈ ಹಿಂದೆ ಎನ್‌ಆರ್‌ಐ ಫಾರಂ ಅನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವವಿರುವ ಡಾ. ಆರತಿ ಕೃಷ್ಣ ಅವರಿಗೆ ಮುಂದಾಳತ್ವ ನೀಡಿ.

-ಡಾ.ಅಬ್ದುಲ್ ಶಕೀಲ್, ಅನಿವಾಸಿ ಭಾರತೀಯ