Aero India: ಏರೋ ಇಂಡಿಯಾದಿಂದ ದೂರ ಉಳಿದ ಎಫ್16
ಕೆಲ ದಿನಗಳ ಹಿಂದೆ ಅಲಸ್ಕಾ ಏರ್‌ಬೇಸ್‌ನಲ್ಲಿ ಸಂಭವಿಸಿರುವ ಅಪಘಾತದ ಕಾರಣಕ್ಕೆ ಎಫ್ 35 ಹಾಗೂ ಎಫ್ 16 ವಿಮಾನಗಳಿಂದ ಫ್ಲೈಯಿಂಗ್ ಡಿಸ್ಪ್ಲೆ ಇರುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವುದರಿಂದ, ಸುರಕ್ಷಿತಾ ಕಾರಣಕ್ಕೆ ಈ ಎರಡು ಅತ್ಯಾ ಧುನಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸುವು ದಾಗಿ ಅಮೆರಿಕದ ಏರ್ ಕಾಂಬ್ಯಾಟ್ ಕಮಾಂಡ್ ಅಧಿಕೃತವಾಗಿ ಘೋಷಿಸಿದೆ


ಅಮೆರಿಕದ ಎಫ್-35 ಹಾರಾಟ ಬಹುತೇಕ ಅನುಮಾನ
ತಾಂತ್ರಿಕ ಕಾರಣವೋ ಅಥವಾ ರಾಜತಾಂತ್ರಿಕ ಕಾರಣವೋ ಎನ್ನುವ ಅನುಮಾನ
ಬೆಂಗಳೂರು: ಬಹುನಿರೀಕ್ಷಿತ ಏರೋ ಇಂಡಿಯಾಕ್ಕೆ ಕೆಲವೇ ದಿನಗಳು ಬಾಕಿಯಿರುವ ಹೊಸ್ತಿಲಲ್ಲಿ ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದ ಅತ್ಯಾಧುನಿಕ ಯುದ್ಧ ವಿಮಾನ ಎನಿಸಿರುವ ಎಫ್35 ಹಾಗೂ ಎಫ್16 ಯುದ್ದ ವಿಮಾನಗಳು ಹಾರಾಡುವುದು ಅನುಮಾನ ಎನ್ನುವ ಮಾತುಗಳು ಶುರುವಾಗಿದೆ.
ಐದನೇ ಜನರೇಷನ್‌ನ ಎಫ್ 35 ಈ ಬಾರಿ ಏರೋ ಇಂಡಿಯಾ ಕೇಂದ್ರ ಬಿಂದುವಾಗಿರಲಿದೆ ಎನ್ನುವ ಮಾತುಗಳಿತ್ತು. ಆದರೆ ಕೆಲ ದಿನಗಳ ಹಿಂದೆ ಅಲಸ್ಕಾ ಏರ್‌ಬೇಸ್‌ನಲ್ಲಿ ಸಂಭವಿಸಿರುವ ಅಪಘಾತದ ಕಾರಣಕ್ಕೆ ಎಫ್ 35 ಹಾಗೂ ಎಫ್ 16 ವಿಮಾನಗಳಿಂದ ಫ್ಲೈಯಿಂಗ್ ಡಿಸ್ಪ್ಲೆ ಇರುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವುದರಿಂದ, ಸುರಕ್ಷಿತಾ ಕಾರಣಕ್ಕೆ ಈ ಎರಡು ಅತ್ಯಾಧುನಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸುವು ದಾಗಿ ಅಮೆರಿಕದ ಏರ್ ಕಾಂಬ್ಯಾಟ್ ಕಮಾಂಡ್ ಅಧಿಕೃತವಾಗಿ ಘೋಷಿಸಿದೆ.
ಇದನ್ನೂ ಓದಿ: Aero India Show: ನಾಳೆಯಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರ ಬಂದ್: ವೇಳಾಪಟ್ಟಿ ಇಲ್ಲಿದೆ
ಮೂಲಗಳ ಪ್ರಕಾರ ಈ ಬಾರಿಯ ಏರೋ ಇಂಡಿಯಾ ಪ್ರದರ್ಶನದಲ್ಲಿ ಅಮೆರಿಕದ ಯುದ್ಧ ವಿಮಾನಗಳ ಹಾರಾಟ ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಆದರೆ ಕೆಲ ಯುದ್ಧವಿಮಾನ ಗಳನ್ನು ಸ್ಟಾಟಿಕ್ ಡಿಸ್ಪ್ಲೆ (ಪ್ರದರ್ಶನಕ್ಕೆ ಮಾತ್ರ) ಬರುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಮೆರಿಕದ ಈ ತೀರ್ಮಾನಕ್ಕೆ ನಿಖರ ಕಾರಣಗಳು ಹೇಳದಿದ್ದರೂ, ಮೂಲಗಳ ಪ್ರಕಾರ ಕೇಂದ್ರ ಸರಕಾರ ವೈಮಾನಿಕ ಕ್ಷೇತ್ರದಲ್ಲಿ ‘ಆತ್ಮನಿರ್ಭರ’ಕ್ಕೆ ಒತ್ತು ನೀಡುತ್ತಿರುವುದರಿಂದ ಬೇಸರಗೊಂಡು ಭಾಗವಹಿಸುವಿಕೆಯನ್ನು ತಗ್ಗಿಸಿದೆ ಎನ್ನಲಾಗಿದೆ.
ಯುದ್ಧವಿಮಾನಗಳಲ್ಲಿ ಸ್ವಾವಲಂಬಿ; ಅಮೆರಿಕ ಕೆಂಗಣ್ಣು ಇತ್ತೀಚಿನ ವರ್ಷಗಳಲ್ಲಿ ಭಾರತೀಯ ವಾಯು ಸೇವೆ ಯುದ್ಧವಿಮಾನಗಳ ತಯಾರಿಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರೊಂದಿಗೆ ಸುಖೋಯ್ 30ಯನ್ನು ಮೇಲ್ದೆರ್ಜೆಗೆ ಏರಿಸುವ ಕ್ರಮವೂ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ.
ಆದ್ದರಿಂದ ಪ್ರತಿ ಆವೃತ್ತಿಯ ಏರೋ ಇಂಡಿಯಾದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಅಮೆರಿಕ ವಾಯುಸೇನೆ ಈ ಬಾರಿ ಹೆಚ್ಚು ಸಕ್ರಿಯವಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಸುಖೋಯ್ 57ನಿಂದ ಈ ಬಾರಿ ಹಾರಾಟ ಇನ್ನೊಂದೆಡೆ ರಷ್ಯಾದ ಅತ್ಯಾಧುನಿಕ ಯುದ್ಧ ವಿಮಾನ ಎನಿಸಿರುವ ಸುಖೋಯ್ 57 ಇದೇ ಮೊದಲ ಬಾರಿಗೆ ಏರೋ ಇಂಡಿಯಾದಲ್ಲಿ ಹಾರಾಟ ನಡೆಸಲಿದೆ ಎನ್ನ ಲಾಗಿದೆ.
2007ರಲ್ಲಿ ಸುಖೋಯ್ 57 ಅನ್ನು ಖರೀದಿಸಲು ಒಪ್ಪಿದ್ದ ಭಾರತ ಬಳಿಕ ಈ ಯೋಜನೆಯನ್ನು ಕೈ ಬಿಟ್ಟಿತ್ತು. ಆದ್ದರಿಂದ ಕಳೆದ ಬಾರಿಯ ಏರೋ ಇಂಡಿಯಾದಲ್ಲಿ ಸುಖೋಯ್ 57ನ್ನು ರಷ್ಯಾ ವಾಯುಪಡೆ ಹಾರಾಟ ನಡೆಸಿರಲಿಲ್ಲ. ಆದರೆ ಈ ಬಾರಿ ಭಾರತ-ರಷ್ಯಾ ಸಂಬಂಧ ವೃದ್ಧಿ ಸೇರಿದಂತೆ ವಿವಿಧ ಕಾರಣಕ್ಕೆ ಇದೇ ಮೊದಲ ಬಾರಿಗೆ ಡಬಲ್ ಎಂಜಿನ್‌ನ ಸುಖೋಯ್ 57 ಹಾರಾಟ ನಡೆಸ ಲಿದೆ ಎಂದು ಹೇಳಲಾಗಿದೆ.