ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Global Achievers Award held at Manila, Philippines: ಸಪ್ತ ಸಾವಿರ ದ್ವೀಪದ ನಾಡಲ್ಲಿ ಕನ್ನಡಿಗರಿಗೆ ಸನ್ಮಾನ

ಇಡೀ ವಿಶ್ವದ ಜನರನ್ನು ತನ್ನ ಪ್ರವಾಸಿ ತಾಣಗಳ ಮೂಲಕವೇ ಸೆಳೆಯುವ ಫಿಲಿಪೈನ್ಸ್ ದೇಶದ ರಾಜಧಾನಿ ಮನಿಲಾದಲ್ಲಿ ಕನ್ನಡಿಗರ ಕಂಪು ಸೂಸುತ್ತಿತ್ತು. ವಿಶ್ವವಾಣಿ ಗ್ಲೋಬಲ್ ಫಾರಂ, ವಿಶ್ವವಾಣಿ ವತಿಯಿಂದ ಆಯೋಜಿಸಿದ್ದ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಾಡಿನ ಹೆಮ್ಮೆಯ ಸಾಧಕರನ್ನು ಸನ್ಮಾನಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಫಿಲಿಪೈನ್ಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿದ 13ನೇ ಆವೃತ್ತಿಯ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮ

12 ಸಾಧಕರಿಗೆ ಸನ್ಮಾನ

ಮನಿಲಾ, ಫಿಲಿಪೈನ್ಸ್: ಇಡೀ ವಿಶ್ವದ ಜನರನ್ನು ತನ್ನ ಪ್ರವಾಸಿ ತಾಣಗಳ ಮೂಲಕವೇ ಸೆಳೆಯುವ ಫಿಲಿಪೈನ್ಸ್ ದೇಶದ ರಾಜಧಾನಿ ಮನಿಲಾದಲ್ಲಿ ಕನ್ನಡಿಗರ ಕಂಪು ಸೂಸುತ್ತಿತ್ತು. ವಿಶ್ವವಾಣಿ ಗ್ಲೋಬಲ್ ಫಾರಂ, ವಿಶ್ವವಾಣಿ ವತಿಯಿಂದ ಆಯೋಜಿಸಿದ್ದ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಾಡಿನ ಹೆಮ್ಮೆಯ ಸಾಧಕರನ್ನು ಸನ್ಮಾನಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಕರುನಾಡಿನ ಸಾಧಕರನ್ನು ವಿಶ್ವ ಮಟ್ಟದಲ್ಲಿ ಗೌರವಿಸುವ ವಿಭಿನ್ನ ಆಲೋಚನೆಯಾಗಿರುವ ಗ್ಲೋಬಲ್ ಅಚೀವರ್ಸ್‌ ಅವಾರ್ಡ್ ಕಾರ್ಯಕ್ರಮ, ಪ್ರಕೃತಿಯ ಮುಗ್ದತೆಯೊಂದಿಗೆ ಸಾಹಸ ಕ್ರೀಡೆಗಳಿಗೆ ಹೆಸರಾಗಿರುವ ಫಿಲಿಪೈನ್ಸ್ ದೇಶದ ರಾಜಧಾನಿ ಮನಿಲಾದಲ್ಲಿ ಯಶಸ್ವಿಯಾಗಿ ಜರುಗಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಅಸಾಮಾನ್ಯ ಸಾಧಕರಿಗೆ ‘ಗ್ಲೋಬಲ್ ಅಚೀವರ್ಸ್’ ಪ್ರಶಸ್ತಿ ನೀಡುವ ಜತೆಜತೆಗೆ ಗುಚ್ಛದಂತಿರುವ ಸಪ್ತಸಾವಿರ ಫಿಲಿಪೈನ್ಸ್‌ನ ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ವಿಶ್ವವಾಣಿ ಸಮೂಹದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ನೇತೃತ್ವದ ನಿಯೋಗ ಭೇಟಿ ನೀಡಿತ್ತು. ಈ ನಿಯೋಗದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಹಿರಿಯ ವಕೀಲ ಅರುಣ್ ಶ್ಯಾಮ್ ಸೇರಿದಂತೆ 40ಕ್ಕೂ ಹೆಚ್ಚು ಗಣ್ಯರಿದ್ದರು.

ಇದನ್ನೂ ಓದಿ: 12th Global Achievers Awards in South Africa: ಸಮಾಜವನ್ನು ಪುನರ್‌ ಮಿಲನ ಮಾಡುವ ಪ್ರಯತ್ನ

ಫಿಲಿಪೈನ್ಸ್ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುವ ಮೊದಲು ನಡೆದ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗದಲ್ಲಿ ನೆಲೆಸಿರುವ, ವಿವಿಧ ಕ್ಷೇತ್ರದಲ್ಲಿ ಸದ್ದಿಲ್ಲದೇ ತಮ್ಮದೇಯಾದ ಛಾಪು ಮೂಡಿಸಿರುವ ಸಾಧಕರನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಫಿಲಿಪೈನ್ಸ್ ದೇಶದ ಸಾಂಪ್ರದಾಯಿಕ ಸಾಂಸ್ಕೃತಿಕ ಅನಾವರಣ, ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ತಮ್ಮ ಸಾಧನಾಪಥದ ಯಶೋಗಾಥೆಯ ಅನುಭವ ಹಂಚಿ ಕೊಂಡರು.

ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ

ವಿಶ್ವವಾಣಿ ಗ್ಲೋಬಲ್ ಫಾರಂ ಆಯೋಜಿಸುವ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಕಾರ್ಯಕ್ರಮ ಕೇವಲ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸೀಮಿತವಾಗಿರುವುದಿಲ್ಲ. ಬದಲಿಗೆ ಆಯಾ ದೇಶದ ಸಂಸ್ಕೃತಿ, ವೈವಿಧ್ಯತೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ, ಆ ದೇಶದ ಕನ್ನಡಿಗರೊಂದಿಗೆ ಸಂವಾದ ನಡೆಸುವ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಫಿಲಿಪೈನ್ಸ್ ನಲ್ಲಿ ನಡೆದ ಕಾರ್ಯಕ್ರಮದ ಬಳಿಕ, ಫಿಲಿಪೈನ್ಸ್ ದೇಶದ ಹತ್ತು ಹಲವು ಪ್ರವಾಸಿ ತಾಣಗಳಿಗೆ ವಿಶ್ವವಾಣಿ ನಿಯೋಗ ಭೇಟಿ ನೀಡಿತು.

ವಿಶ್ವವಾಣಿ ನಿಯೋಗದಲ್ಲಿದ್ದವರು

ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ಫಿಲಿಪೈನ್ಸ್‌ಗೆ ತೆರಳಿದ್ದ ನಿಯೋಗದಲ್ಲಿ ಬಸವರಾಜ ಹೊರಟ್ಟಿ, ಅರವಿಂದ ಪಾಟೀಲ್, ಸುಕುಮಾರ ಶೆಟ್ಟಿ, ಎಚ್.ಪಿ.ನೀಲೇಶ್, ದಿವ್ಯಾ, ಡಾ.ಶ್ರೀನಿವಾಸ್ ಮೂರ್ತಿ, ಅಂಬುಜಾಕ್ಷಿ, ರಾಮಮೂರ್ತಿ, ಹರಿಣಿ, ಸತ್ಯವತಿ, ಮಂಜುನಾಥ್ ಮಕ್ಕಳಗೇರಿ, ಜಯಶ್ರೀ, ಸ್ಪೂರ್ತಿ, ಸಪ್ನಾ, ನಂದೀಶ್, ನಾಗರಾಜ್, ಉಮೇಶ್ ಗೌಡ, ವಿಶಾಲ್ ಶಾನುಭಾಗ್, ಸಿದ್ದೇಶ್, ಸತೀಶ್ ಕುಮಾರ್, ಕರುಣಾಕರ್, ಸುಷ್ಮಾ ಅರುಣ್ ಶ್ಯಾಮ್, ಸುಷ್ಮಾ ಭಟ್, ನಿತಿನ್ ಅಗರ್‌ವಾಲ್, ಚಿದಾನಂದ ಕಡಲಾಸ್ಕರ, ನಾಗಾರ್ಜುನ್ ಮೋತಿಲಾಲ್, ರಾಜು ಅಡಕಳ್ಳಿ ಸೇರಿ 40 ಮಂದಿ ಇದ್ದರು.

ಪ್ರಶಸ್ತಿ ಪುರಸ್ಕೃತರು

ತಿಪ್ಪಣ್ಣಪ್ಪ ಕಮಕನೂರು

ಡಾ.ಅರುಣ್ ಶ್ಯಾಮ್

ಎಂ ಡಾ.ಎಚ್.ಕೃಷ್ಣರಾಮ್

ಎಂ.ಆರ್.ವೆಂಕಟೇಶ್

ಡಾ.ಅಬ್ದುಲ್ ಖಾದರ್

ಕೆ.ಎಂ.ಉಮೇಶ್ ಗೌಡ

ವಿಕಾಸ್ ಬಿ.ಜಿ

ದಾಸಪ್ಪ ಗೋವಿಂದರಾಜ್

ಎಂ.ಧರ್ಮಣ್ಣಗೌಡ

ವೀಣಾ ಜಿ.ಎನ್

ಎಂ.ವಿನೋದ್‌ಕುಮಾರ್

ಬಿ.ಎ.ಮೊಹಿನುದ್ದೀನ್ ಬಾವಾ

image

ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ಸಾಧಕರನ್ನು ಕೇವಲ ಸನ್ಮಾನಿಸುವುದಲ್ಲ. ಅವರ ಬದುಕಿನ ಪಯಣ, ಹೋರಾಟ ಮತ್ತು ಸಾಧನೆಯ ಕಥೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸುತ್ತದೆ. ವಿವಿಧ ಕ್ಷೇತ್ರಗಳ ಸಾಧಕರು ಒಂದೇ ವೇದಿಕೆಯಲ್ಲಿ ಒಂದಾಗುವುದರಿಂದ ಹೊಸ ಚಿಂತನೆ, ಸಂಪರ್ಕ ಹಾಗೂ ಭವಿಷ್ಯದ ಸಹಯೋಗಗಳಿಗೆ ದಾರಿ ತೆರೆದುಕೊಳ್ಳುತ್ತದೆ.

- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ, ವಿಶ್ವವಾಣಿ
image

ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಪತಿ ಪ್ರಶಸ್ತಿ ಎಲ್ಲವೂ ದೊಡ್ಡ ಗೌರವಗಳು. ಆದರೆ ಯಾವುದೇ ಶಿಫಾ ರಸು, ಪ್ರಭಾವ ಅಥವಾ ಲಾಭಿ ಇಲ್ಲದೆ ನಿಜವಾದ ಸಾಧಕರನ್ನು ಹುಡುಕಿ ಗೌರವಿಸುವ ಈ ಪ್ರಶಸ್ತಿ ಅವಕ್ಕಿಂತ ಮಿಗಿಲಾದದ್ದು. ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ನಿಜವಾದ ಸಾಧಕರಿಗೆ ಮಾತ್ರ ಸಿಗುತ್ತದೆ.

- ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ
image

ವಿಶ್ವೇಶ್ವರ ಭಟ್ಟರು ಹಾಗೂ ನನ್ನ ಗುರುಗಳಾದ ಬಸವರಾಜ ಹೊರಟ್ಟಿಯವರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ನನ್ನ ಪುಣ್ಯ. ಪಾಟೀಲ ಪುಟ್ಟಪ್ಪನವರ ಕಾಲದ ನಂತರ ವಿಶ್ವವಾಣಿ ಯನ್ನು ರಾಷ್ಟ್ರಮಟ್ಟಕ್ಕೆ ಬೆಳೆಸಿದವರು ವಿಶ್ವೇಶ್ವರ ಭಟ್ಟರು. ಅವರ ಲೇಖನ, ಪುಸ್ತಕ ಓದಿದರೆ ಅಪಾರ ಜ್ಞಾನ ಸಿಗುತ್ತದೆ.

- ತಿಪ್ಪಣ್ಣಪ್ಪ ಎಂ. ಕಮಕನೂರು, ವಿಧಾನಪರಿಷತ್ ಸದಸ್ಯ
image

ಹಣವಿದ್ದರೆ ಇಂದು ಯಾರು ಬೇಕಾದರೂ ಪ್ರವಾಸ ಮಾಡಬಹುದು. ಆದರೆ ಒಂದೇ ಮನೋ ಭಾವದ, ದೊಡ್ಡ ಹೃದಯದ ಸಾಧಕರನ್ನು ಒಂದೇ ಸಮಯದಲ್ಲಿ, ಒಂದೇ ವೇದಿಕೆಯಲ್ಲಿ ಸೇರಿಸು ವುದು ಸುಲಭದ ಕೆಲಸವಲ್ಲ. ಅದನ್ನು ವಿಶ್ವವಾಣಿ ತಂಡ ಮಾಡಿದೆ.

- ನೀಲೇಶ್ ಎಚ್.ಪಿ. ದುಬೈನ ಪರ್ವ ಗ್ರೂಪ್ ಸಂಸ್ಥಾಪಕ
image

ಇಂದು ಮಾಧ್ಯಮ ಲೋಕದಲ್ಲಿ ನಿಷ್ಠೆ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮ ವಿರಳವಾಗುತ್ತಿರುವ ಸಂದರ್ಭದಲ್ಲಿ ವಿಶ್ವವಾಣಿ ಜನಪರ ಚಿಂತನೆಗೆ ವೇದಿಕೆ ಯಾಗಿರುವುದು ಸಂತಸದ ಸಂಗತಿ. ವಿಶ್ವವಾಣಿ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ನೀಡುತ್ತಿದ್ದಾರೆ.

- ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ
image

ಸಾಧಕರನ್ನು ಸಮಾಜದ ಮುಂದೆ ಗುರುತಿಸಿ ಗೌರವಿಸುವುದು ಅತ್ಯಂತ ಪವಿತ್ರ ಕಾರ್ಯವಾಗಿದ್ದು, ಅದನ್ನು ವಿಶ್ವೇಶ್ವರ ಭಟ್ಟರು ನಿರಂತರವಾಗಿ ಮಾಡುತ್ತಿರುವುದು ಪ್ರಶಂಸನೀಯ. ಪ್ರಶಸ್ತಿ ಮತ್ತು ಗೌರವಗಳು ವ್ಯಕ್ತಿಯ ಮನಸ್ಸಿಗೆ ಸಂತೋಷ ನೀಡುವುದಲ್ಲದೆ, ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡುತ್ತವೆ.

- ಡಾ. ಶ್ರೀನಿವಾಸ್ ಮೂರ್ತಿ, ವ್ಯವಸ್ಥಾಪಕ ನಿರ್ದೇಶಕ, ವಾಲ್ಯೂ ಪ್ರಾಡಕ್ಟ್