ವಿಶ್ವವಾಣಿ ವಿಶೇಷ
ಬೆಂಗಳೂರು: 1998ನೇ ಬ್ಯಾಚ್‌ನ ಕೆಎಎಸ್ ಅಽಕಾರಿಗಳ ಆಯ್ಕೆ ಪಟ್ಟಿಯಲ್ಲಿ ಅನರ್ಹತೆ ಹೊಂದಿರುವವರಿಗೂ ಐಎಎಸ್ ಮುಂಬಡ್ತಿ ಭಾಗ್ಯ ದೊರೆತಿರುವುದು ಬಹಿರಂಗಗೊಂಡಿದೆ. ಹಲವು ಬಾರಿ ಪರಿಷ್ಕೃತಗೊಂಡ ನ್ಯಾಯಾಲ ಯಗಳ ಆದೇಶಗಳನ್ನು ಗಾಳಿಗೆ ತೂರಿ ಮತ್ತು ವಿವಾದಿತ ಆಯ್ಕೆ ಪಟ್ಟಿಯಲ್ಲಿಲ್ಲದ ಅಭ್ಯರ್ಥಿಗಳಿಂದು ಐಎಎಸ್ ಮತ್ತು ಕೆಎಎಸ್ ನಂತಹ ಅತ್ಯಂತ ಆಯಕಟ್ಟಿನ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ತಂಡವು ಕಾರ್ಯನಿರ್ವಹಿಸು ತ್ತಿದ್ದಾರೆ.
1998ರ ಬ್ಯಾಚ್‌ನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿ (ಗ್ರೂಪ್-ಬಿ) ಆಯ್ಕೆಯಾಗಿ ಪ್ರಸ್ತುತ ಕೆಪಿಎಸ್‌ಸಿಯ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಮತ್ತೋರ್ವರು ಇದೇ ಆಯ್ಕೆ ಪಟ್ಟಿಯಲ್ಲಿ ಅಬಕಾರಿ ಇಲಾಖೆಯ ಉಪ-ಅಧೀಕ್ಷಕರಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿದವರು ಕೆಪಿಎಸ್‌ಸಿಯ ಸದಸ್ಯ ರಾಗಿದ್ದಾರೆ.
ಪರಿಷ್ಕೃತ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗದ 07 ಅಧಿಕಾರಿಗಳು ಸರಕಾರದ ಕಾರ್ಯದರ್ಶಿ ಮಟ್ಟದ ಉನ್ನತ ಇಲಾಖೆಗಳ ಐಎಎಸ್ ವೃಂದದ ಹಿರಿಯ ಅಧಿಕಾರಿಗಳಾಗಿದ್ದಾರೆ. ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಇಲ್ಲದ 24 ಮಂದಿ ಕೆಎಎಸ್ ವೃಂದದ ಹಿರಿಯ ಅಧಿಕಾರಿಗಳಾಗಿದ್ದಾರೆ. ಅಲ್ಲದೆ, ಇತರ ಇಲಾಖೆಗಳಲ್ಲಿಯೂ ಸಹ ಆಯ್ಕೆ ಪಟ್ಟಿಯಲ್ಲಿ ಇಲ್ಲದ ಅಧಿಕಾರಿಗಳಿಗೆ ರಾಜ್ಯ ಸರಕಾರವು ಆಯಾ ಇಲಾಖೆಗಳ ಉನ್ನತ ಹುದ್ದೆಗಳಿಗೆ ಪದೋನ್ನತಿ ನೀಡಿ ಆಯಾಕಟ್ಟಿನ ಜಾಗಗಳಲ್ಲಿ ಅಧಿಕಾರಿಗಳನ್ನಾಗಿ ನೇಮಸಲಾಗಿರುತ್ತದೆ.
ಇದನ್ನೂ ಓದಿ: KPSC: ಒಎಂಆರ್ ಶೀಟ್ ಸ್ಕ್ಯಾನ್ ಮಾಡಿದ್ದ ಡಿಸ್ಕೇ ಇಲ್ಲ, ಕೇಂದ್ರ ಕಚೇರಿಯಲ್ಲೇ ಭಾನಗಡಿ ಪತ್ತೆ
ಈ ಕುರಿತು ಡಿ.ಕೆ.ಶಿವಕುಮಾರ್ ಅವರು( ಇಂದಿನ ಮುಖ್ಯಮಂತ್ರಿ) ಉಪ ಮುಖ್ಯಮಂತ್ರಿಯಾಗಿದ್ದಾಗ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದಿನಾಂಕ: 20.05.2026ರಂದು ಟಿಪ್ಪಣಿ ನೀಡಿ 1998 ಹಾಗೂ 1999 ನೇ ತಂಡದ ಗೆಜೆಟೆಡ್ ಪ್ರೊಬೆಷರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಸಂಖ್ಯೆ 28245/2016 ರಲ್ಲಿ ದಿನಾಂಕ: 11.04.2018 ರ ತೀರ್ಪು ರಿವೀವ್ ಪಿಟಿಷನ್ (ಸಿ) ಸಂಖ್ಯೆ: 606/2019 ರಲ್ಲಿನ ದಿನಾಂಕ: 27.04.2019 ಹಾಗೂ ಕ್ಯುರಿಯೇಟಿವ್ ಪಿಟಿಷನ್ (ಸಿ) ಸಂಖ್ಯೆ: 57/2020 ದಿನಾಂಕ: 19.05.2020ರಲ್ಲಿ ವಜಾಗೊಳಿಸಿದ್ದರಿಂದ ನ್ಯಾಯಾಲಯದ ಆದೇಶದನ್ವಯ 1998 ಹಾಗೂ 1999ನೇ ತಂಡದ ಕೆಎಎಸ್ ಕಿರಿಯ ಶ್ರೇಣಿ ಹುದ್ದೆಗಳ ಆಯ್ಕೆ ಪಟ್ಟಿ ಅಂತಿಮಗೊಂಡಿರುತ್ತದೆ.
ಈ ಅಂಶ ಉಲ್ಲೇಖಿಸಿ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ: 741-747/2021 ದಿನಾಂಕ: 22.04.2022 ರಂದು ಸ್ಪಷ್ಟವಾದ ನಿರ್ದೇಶನ ನೀಡಿದರೂ ಅನರ್ಹ 07 ಅಧಿಕಾರಿಗಳು ಪ್ರಸ್ತುತ ಐಎಎಸ್ ವೃಂದದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಕಾರ್ಯದರ್ಶಿ ಗಳಿಗೆ ಟಿಪ್ಪಣಿ ನೀಡಿದ್ದರೂ ಕ್ರಮವಿಲ್ಲ.
ಟಿಪ್ಪಣಿ ಅನುಸಾರ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ 1998ರ ಪರಿಷ್ಕೃತ ಆಯ್ಕೆ ಪಟ್ಟಿ ಸಿಂಧುಗೊಳಿಸಿ ಕೆಪಿಎಸ್ ಪರವಾಗಿ ಆದೇಶ ಮಾಡಿದ್ದರೂ ಹೈಕೋರ್ಟ್ ಡಬ್ಲ್ಯೂ.ಪಿ 2855/2021ರಲ್ಲಿ ಅರ್ಜಿದಾರರಾದ ಕೆಪಿಎಸ್‌ಸಿ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಸೂಕ್ತ ದಾಖಲೆ ನೀಡದೇ 1998ನೇ ಬ್ಯಾಚಿನ ಇಬ್ಬರು ಅಧಿಕಾರಿಗಳು ಕೆಪಿಎಸ್‌ಸಿ ಸದಸ್ಯರಾಗಿ ರುವದರಿಂದ ಅವರ ಒತ್ತಡಕ್ಕೆ ಮಣಿದು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಕಳೆದ ಐದು ವರ್ಷಗಳಿಂದ ಆಯ್ಕೆ ಪಟ್ಟಿಯಲ್ಲಿಲ್ಲದ ಐಎಎಸ್, ಕೆಎಎಸ್, ಹಾಗೂ ಇತರ ಇಲಾಖೆಯ ಅಧಿಕಾರಿ ಗಳು ಸದರಿ ಸದಸ್ಯರ ಕೃಪಾಕಟಾಕ್ಷಕ್ಕೆ ಒಳಗಾಗಿ ಸರಕಾರದ ಆಯಾ ಕಟ್ಟಿನ ಜಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
28 ವರ್ಷಗಳ ಬಳಿಕವೂ ಬಗೆಹರಿಯದ ವಿವಾದ 1998ನೇ ಬ್ಯಾಚ್‌ನ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದಕ್ಕೆ ಸುಮಾರು 28 ವರ್ಷಗಳಾದರೂ ಸಂಪೂರ್ಣ ಪರಿಹಾರ ದೊರೆತಿಲ್ಲ. ಒಂದು ಕಡೆ ಪರಿಷ್ಕೃತ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದ ಅರ್ಹ ಅಭ್ಯರ್ಥಿಗಳಿಗೆ ಸೇವಾ ಸೌಲಭ್ಯ ಹಾಗೂ ಪದೋನ್ನತಿ ದೊರೆಯದೆ ಇರುವ ಆರೋಪವಿದ್ದರೆ, ಮತ್ತೊಂದೆಡೆ ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆಯದ ಅಧಿಕಾರಿಗಳು ಉನ್ನತ ಹುದ್ದೆಗಳಲ್ಲಿ ಮುಂದುವರಿಯುತ್ತಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.
ನ್ಯಾಯಾಲಯಗಳ ಆದೇಶಗಳು, ರಾಜ್ಯ ಆಡಳಿತ ನ್ಯಾಯಮಂಡಳಿಯ ನಿರ್ದೇಶನಗಳು ಮತ್ತು ಸರಕಾರದ ಮುಖ್ಯಸ್ಥರ ಟಿಪ್ಪಣಿ ಗಳ ಹಿನ್ನೆಲೆಯಲ್ಲಿ ಸರಕಾರವು ಸಮಗ್ರ ಪರಿಶೀಲನೆ ನಡೆಸಿ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದರ ಜತೆಗೆ ಆಯ್ಕೆ ಪಟ್ಟಿಯ ಹೊರಗಿನ ಅಧಿಕಾರಿಗಳ ಪದೋ ನ್ನತಿ ಮತ್ತು ನೇಮಕಾತಿಗಳ ಕಾನೂನುಬದ್ಧತೆ ಸ್ಪಷ್ಟಪಡಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ
ಮುಖ್ಯಾಂಶಗಳು
ವಿವಾದಿತ 1998ರ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿದ್ದ ಕೆಪಿಎಸ್‌ಸಿ ಹಂಗಾಮಿ ಅಧ್ಯಕ್ಷ.
ಅನರ್ಹ 07 ಅಧಿಕಾರಿಗಳು ಪ್ರಸ್ತುತ ಐಎಎಸ್ ವೃಂದದಲ್ಲಿ ಮುಂದುವರಿಕೆ.
ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಕಳಂಕಿತ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಮುಂಬಡ್ತಿ
5 ವರ್ಷ ಗಳಿಂದ ಆಯ್ಕೆ ಪಟ್ಟಿಯಲ್ಲಿಲ್ಲದ ಐಎಎಸ್, ಕೆಎಎಸ್ ಅಧಿಕಾರಿಗಳಿಗೆ ಕೆಪಿಎಸ್‌ಸಿ ಸದಸ್ಯರ ಕೃಪಾಕಟಾಕ್ಷ?