ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

No 'subsidy' : ಅಂತರ್ಜಾತಿ ವಿವಾಹಿತರಿಗೆ ʼಸಹಾಯಧನʼ ದೂರ

ಸಮಾಜ ಕಲ್ಯಾಣ ಇಲಾಖೆಯಿಂದ ಆರಂಭವಾಗಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಗೆ ಕಳೆದ ಮೂರು ವರ್ಷದ ಅವಧಿಯಲ್ಲಿ ಬರೋಬ್ಬರಿ 15 ಸಾವಿರ ಅರ್ಜಿಗಳು ರಾಜ್ಯಾ ದ್ಯಂತ ಸಲ್ಲಿಕೆಯಾಗಿದ್ದು, ಅದರಲ್ಲಿ 140 ಅರ್ಜಿಗಳು ತಿರಸ್ಕೃತಗೊಂಡಿದ್ದರೆ, ಇನ್ನುಳಿದ 15225 ಅರ್ಜಿಗಳ ಪೈಕಿ 3725 ಮಂದಿಗೆ ಹಣ ಸಿಕ್ಕಿದೆ. ಇನ್ನು 5450 ಮಂದಿಗೆ ಹಣ ಬರಬೇಕಿದೆ. ಇನ್ನುಳಿದ ಅರ್ಜಿಗಳಿಗೆ ಹೆಚ್ಚಿನ ಮಾಹಿತಿ ಕೇಳಲಾಗಿದೆ.

ಸಮಾಜ ಕಲ್ಯಾಣಕ್ಕೆ ಆರ್ಥಿಕ ಸಮಸ್ಯೆ, ಕಳೆದ ವರ್ಷ 5402 ಅರ್ಜಿ ಪೈಕಿ 20 ದಂಪತಿಗೆ ಮಾತ್ರ ನೆರವು

ಸಮಾಜದಲ್ಲಿರುವ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಿ, ಪರಿಶಿಷ್ಟ ಜಾತಿಯವರನ್ನು ಇತರೆ ಜಾತಿಯವರು ವಿವಾಹವಾಗಲು ಪ್ರೋತ್ಸಾಹಿಸಬೇಕು ಅಥವಾ ವಿವಾಹವಾದರೆ ಎದುರಾಗಬಹುದಾದ ಸಾಮಾಜಿಕ ಸಮಸ್ಯೆಯನ್ನು ಎದುರಿಸಲು ಆರ್ಥಿಕ ಸಹಾಯ ಮಾಡುವ ಮಹತ್ವಾಕಾಂಕ್ಷೆ ಯೋಜನೆಗೆ ಆರ್ಥಿಕ ಸಮಸ್ಯೆ ಎದುರಾಗಿದೆಯೇ ಎನ್ನುವ ಅನುಮಾನ ಶುರುವಾಗಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಆರಂಭವಾಗಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಗೆ ಕಳೆದ ಮೂರು ವರ್ಷದ ಅವಧಿಯಲ್ಲಿ ಬರೋಬ್ಬರಿ 15 ಸಾವಿರ ಅರ್ಜಿಗಳು ರಾಜ್ಯಾದ್ಯಂತ ಸಲ್ಲಿಕೆಯಾಗಿದ್ದು, ಅದರಲ್ಲಿ 140 ಅರ್ಜಿಗಳು ತಿರಸ್ಕೃತಗೊಂಡಿ ದ್ದರೆ, ಇನ್ನುಳಿದ 15225 ಅರ್ಜಿಗಳ ಪೈಕಿ 3725 ಮಂದಿಗೆ ಹಣ ಸಿಕ್ಕಿದೆ. ಇನ್ನು 5450 ಮಂದಿಗೆ ಹಣ ಬರಬೇಕಿದೆ. ಇನ್ನುಳಿದ ಅರ್ಜಿಗಳಿಗೆ ಹೆಚ್ಚಿನ ಮಾಹಿತಿ ಕೇಳಲಾಗಿದೆ.

2023-24 ಹಾಗೂ 2024-25ನೇ ಅವಧಿಯಲ್ಲಿ 2904 ಹಾಗೂ 801 ದಂಪತಿಗಳಿಗೆ ಕ್ರಮವಾಗಿ ಸಹಾಯಧನ ಒದಗಿಸಲಾಗಿದೆ. ಆದರೆ 2025-26ನೇ ಸಾಲಿನಲ್ಲಿ ಕೇವಲ 29 ಫಲಾನುಭವಿ ಗಳಿಗೆ ಮಾತ್ರ ಅನುದಾನ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಂಕಿ-ಅಂಶದಲ್ಲಿ ಹೇಳಿದೆ.

ಇದನ್ನೂ ಓದಿ: Srivathsa Joshi Column: ಬರಿ, ಬರಿಯುತ್ತ ಬರಿ...ಕೋಸಂಬರಿ ರೀತಿಯೂ ಬರಿ !

ಬಾಕಿ ಉಳಿಸಿಕೊಂಡಿರುವ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲು ಅನುದಾನ ಕೊರತೆಯೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇದನ್ನು ಇಲಾಖೆಯೂ ಒಪ್ಪಿಕೊಂಡಿದೆ.

ಹಿರಿತನದ ಆಧಾರದಲ್ಲಿ ಅನುದಾನ

ಹುಬ್ಬಳ್ಳಿ-ಧಾರವಾಡ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಕೇಳಿದ್ದ ಪ್ರಶ್ನೆಗೆ ಉತ್ತರಿಸಿ ರುವ ಸಮಾಜ ಕಲ್ಯಾಣ ಇಲಾಖೆ, ಹಿರಿತನದ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡು ತ್ತಿರುವುದು ಹೇಳಿದೆ. ಇದರೊಂದಿಗೆ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಅರ್ಜಿ ಗಳನ್ನು ಅನುದಾನದ ಲಭ್ಯತೆಗೆ ಅನುಗುಣವಾಗಿ ಜೇಷ್ಠತೆಯ ಆಧಾರದಲ್ಲಿ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತದೆ. ಇನ್ನು ಈ ಯೋಜನೆಯ ಫಲಾನುಭವಿಗಳಿಗಾಗಿ ಮೀಸಲಿಟ್ಟ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ.

ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಅನುದಾನದ ಸಮಸ್ಯೆಯಾಗಿದ್ದು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸುವ ಸಂಬಂಧ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಪ್ರಸಕ್ತ ಸಾಲಿನಲ್ಲಿ 15365 ದಂಪತಿಗಳಿಂದ ಅರ್ಜಿ

2025-26ನೇ ಸಾಲಿನಲ್ಲಿ ಒಟ್ಟು 15365 ದಂಪತಿಗಳಿಂದ ಸಹಾಯಧನಕ್ಕೆ ಅರ್ಜಿ

3434 ಅರ್ಜಿಗಳು ಬಾಕಿ ಉಳಿಸಿಕೊಂಡಿದ್ದು, ಪರಿಶೀಲನಾ ಹಂತದಲ್ಲಿದೆ

ವರ್ಷದಿಂದ ವರ್ಷಕ್ಕೆ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅನುದಾನದ ಅಲಭ್ಯತೆಗೆ ಕಾರಣ

ಹೆಚ್ಚುವರಿ ಬಜೆಟ್ ನೀಡುವ ಸಂಬಂಧ ಪರಿಶೀಲಿಸುವುದಾಗಿ ಹೇಳಿರುವ ಸಮಾಜ ಕಲ್ಯಾಣ ಇಲಾಖೆ

ಅಂತರ್ಜಾತಿ ವಿವಾಹ ಸಹಾಯಧನ ಪಡೆಯುವುದು ಹೇಗೆ?

ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆ ಯನ್ನು ಆರಂಭಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳಾಗಲು ದಂಪತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿರಬೇಕು ಮತ್ತು ಇನ್ನೊಬ್ಬರು ಬೇರೆ ಜಾತಿಗೆ ಸೇರಿರಬೇಕು. ಪರಿಶಿಷ್ಟ ಜಾತಿಯ ಮಹಿಳೆ ಸವರ್ಣೀಯ ಪುರುಷನನ್ನು ಮದುವೆಯಾದರೆ ಮೂರು ಲಕ್ಷ ರು. ಹಾಗೂ ಪರಿಶಿಷ್ಟ ಜಾತಿಯ ಪುರುಷ ಸವರ್ಣೀಯ ಮಹಿಳೆಯನ್ನು ಮದುವೆಯಾದರೆ ಎರಡುವರೆ ಲಕ್ಷ ರು. ಸಹಾಯಧನವನ್ನು ಸರಕಾರ ನೀಡಲಿದೆ. ವಿವಾಹ ನೊಂದಣಿಯಾದ ಒಂದು ವರ್ಷದಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ನಿಬಂಧನೆ ವಿಧಿಸಲಾಗಿದೆ.