ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಮಾಜಿ ಮುಖ್ಯಮಂತ್ರಿ ರಾಮಕೃಷ ಹೆಗಡೆಯವರ ಜನ್ಮಶತಮಾನೋತ್ಸವ ಸಂದರ್ಭ ವಿಶ್ವವಾಣಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ವಿಶೇಷ ಬರಹ.
ಇಂದು (ಆಗಸ್ಟ್ 29) ಕರ್ನಾಟಕದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿನ ಅತ್ಯಂತ ಮಹತ್ವದ ರಾಜಕೀಯ ನಾಯಕರಲ್ಲಿ ಒಬ್ಬರಾದ ರಾಮಕೃಷ್ಣ ಹೆಗಡೆಯವರ ಜನ್ಮಶತಮಾನೋತ್ಸವವನ್ನು ಮಾಜಿ ಮುಖ್ಯಮಂತ್ರಿ ರಾಮಕೃಷ ಹೆಗಡೆಯವರ ಜನ ಶತಮಾನೋತ್ಸವ ಸಂದರ್ಭ ವಿಶ್ವವಾಣಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ವಿಶೇಷ ಬರಹ.
ಜನರ ಸಾಮರ್ಥ್ಯ ಗುರುತಿಸುವುದು ಹೆಗಡೆ ಅವರ ವಿಶೇಷ ಗುಣವಾಗಿತ್ತು ಆಚರಿಸುತ್ತಿದ್ದೇವೆ. ಹೆಗಡೆಯವರು 1983ರಿಂದ 1988ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದವರು. ನಂತರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಹಾಗೂ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಆದರೆ ಈ ಶತಮಾನೋತ್ಸವವು ಅವರು ವಹಿಸಿದ ಹುದ್ದೆ ಗಳನ್ನು ಮಾತ್ರ ಸ್ಮರಿಸುವ ಸಂದರ್ಭವಲ್ಲ.
ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ವಿಚಾರಗಳು, ಕೊಡುಗೆಗಳು ಮತ್ತು ನಾಯಕತ್ವದ ಶೈಲಿಯನ್ನು ನೆನಪಿಸಿಕೊಳ್ಳುವ ಸಂದರ್ಭವೂ ಆಗಿದೆ. ಹೆಗಡೆಯವರಂತಹ ಮುತ್ಸದ್ಧಿ ನಾಯಕನ ಜೊತೆ ಹಿಂದೆ ನನಗೆ ಒಡನಾಟವಿದ್ದ ಕಾರಣದಿಂದಾಗಿ ಅವರಲ್ಲಿನ ಕೆಲವು ಗುಣಗಳನ್ನು ಹತ್ತಿರ ದಿಂದ ನೋಡುವ ಅವಕಾಶ ಸಿಕ್ಕಿತ್ತು. ತನ್ನ ಸುತ್ತಲಿನ ಜನರ ಸಾಮರ್ಥ್ಯವನ್ನು ಗುರುತಿಸುವುದು, ಅವರ ಮೇಲೆ ವಿಶ್ವಾಸವನ್ನಿಟ್ಟು, ಅವರಿಗೆ ಕೆಲಸ ಮಾಡುವ ಸ್ವಾತಂತ್ರ್ಯ ನೀಡುವುದು ಅವರ ವಿಶೇಷತೆ ಆಗಿತ್ತು.
ಇದನ್ನೂ ಓದಿ: Mohan Vishwa Column: ‘ಗಣೇಶೋತ್ಸವ’ ಭಾರತದ ಆರ್ಥಿಕತೆಯ ಶಕ್ತಿ
1983ರಲ್ಲಿ ನಾನು ಮೊದಲ ಬಾರಿಗೆ ಪಕ್ಷೇತರ ಶಾಸಕನಾಗಿ ವಿಧಾನಸಭೆಗೆ ಪ್ರವೇಶಿಸಿದಾಗ, ಹೊಸ ದಾಗಿ ರಚಿಸಲಾದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ನನ್ನನ್ನು ಕೇಳಿದ್ದರು. ಆಗ ಪ್ರತಿಯೊಬ್ಬರ ನಾಯಕತ್ವವನ್ನು ಗುರುತಿಸುವ ಅವರ ಗುಣದ ಪರಿಚಯವಾಗಿತ್ತು. ಅಂದು ಸ್ವಲ್ಪ ಹಿಂಜರಿದು, ‘ಕನ್ನಡ ಸಾಹಿತ್ಯದಲ್ಲಿ ಪದವೀಧರನಲ್ಲದ ನಾನು ಈ ಜವಾಬ್ದಾರಿಗೆ ಸೂಕ್ತ ವ್ಯಕ್ತಿಯೇ’ ಎಂಬ ಅನು ಮಾನವನ್ನು ವ್ಯಕ್ತಪಡಿಸಿದೆ. ಅದಕ್ಕೆ ಹೆಗಡೆಯವರು, ‘ ನಿಮಗೆ ಕನ್ನಡದ ಮೇಲೆ ಇರುವ ಪ್ರೀತಿ ಮತ್ತು ಗೌರವವೇ ಮುಖ್ಯ. ಇದು ಮೊದಲ ಕನ್ನಡ ಕಾವಲು ಸಮಿತಿ, ಇದರ ನೇತೃತ್ವವನ್ನು ನೀವು ವಹಿಸಬೇಕು’ ಎಂದು ಹೇಳಿದ್ದರು.
ನಾನು ನನ್ನ ಅರ್ಹತೆಗಳ ಬಗ್ಗೆ ಯೋಚಿಸುತ್ತಿದ್ದಾಗ, ಅವರು ನನ್ನಲ್ಲಿನ ಬದ್ಧತೆ ಯನ್ನು ಕಂಡಿದ್ದರು. ಅವರು ನನ್ನ ಮೇಲೆ ಇಟ್ಟಿದ್ದ ಆ ವಿಶ್ವಾಸವನ್ನು ನಾನು ಎಂದಿಗೂ ಮರೆಯಲಾರೆ. ಸುಮಾರು ಒಂದೂವರೆ ವರ್ಷಗಳ ಕಾಲ ನಾನು ಕಾವಲು ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. ಕರ್ನಾಟಕದಾದ್ಯಂತ ಸಂಚರಿಸಿ, ಸರ್ಕಾರಿ ಕಚೇರಿಗಳಲ್ಲಿ ಆಡಳಿತ ಕಾರ್ಯಗಳಲ್ಲಿ ಕನ್ನಡದ ಬಳಕೆ ಎಷ್ಟಿದೆ ಎಂಬುದನ್ನು ಪರಿಶೀಲಿಸಿದೆ. ಆಗ ಇಂಗ್ಲಿಷ್ ಟೈಪ್‌ರೈಟರ್‌ಗಳ ಬಳಕೆ ಸಾಮಾನ್ಯವಾಗಿತ್ತು. ಅವುಗಳ ಬದಲಿಗೆ ಕನ್ನಡ ಟೈಪ್‌ರೈಟರ್ ಗಳನ್ನು ಅಳವಡಿಸಿ, ಸರ್ಕಾರಿ ಕೆಲಸಗಳಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸಲಾಯಿತು.
ಕರ್ನಾಟಕದ ಆಡಳಿತ ಭಾಷೆಯಾಗಿ ಕನ್ನಡಕ್ಕೆ ಅದರ ಯೋಗ್ಯ ಸ್ಥಾನ ದೊರೆಯಬೇಕು ಎಂಬುದು ನಮ್ಮ ಮೂಲಭೂತ ತತ್ವವಾಗಿತ್ತು. ಈ ಜವಾಬ್ದಾರಿಯನ್ನೂ, ಅದನ್ನು ಜಾರಿಗೊಳಿಸಲು ಅಗತ್ಯ ವಾದ ಸ್ವಾತಂತ್ರ್ಯ ವನ್ನೂ ಹೆಗಡೆಯವರು ನನಗೆ ನೀಡಿದರು. 1985ರ ಚುನಾವಣೆಯ ವೇಳೆಗೆ ಹೆಗಡೆಯವರು ನನ್ನನ್ನು ಜನತಾ ಪಕ್ಷಕ್ಕೆ ಕರೆತಂದು, ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರು.
ನಾನು ಮರು ಆಯ್ಕೆಯಾದ ಬಳಿಕ ತಮ್ಮ ಸಚಿವ ಸಂಪುಟದಲ್ಲಿ ಪಶುಸಂಗೋಪನಾ ಇಲಾಖೆಯ ಹೊಣೆಯನ್ನು ವಹಿಸಿದರು. ಆಡಳಿತದಲ್ಲಿ ನಾನು ಇನ್ನೂ ಹೊಸಬನಾಗಿದ್ದರೂ, ಪ್ರತಿಯೊಂದು ನಿರ್ಧಾ ರವೂ ತಮ್ಮಿಂದಲೇ ಜಾರಿಯಾಗಬೇಕು ಎಂಬ ನಿಲುವನ್ನು ಅವರು ಹೊಂದಿರಲಿಲ್ಲ ಎನ್ನುವುದು ವಿಶೇಷ. ಸಚಿವರಿಗೆ ತಮ್ಮ ಇಲಾಖೆಯನ್ನು ಅರ್ಥ ಮಾಡಿಕೊಳ್ಳಲು, ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಅದರ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಅವಕಾಶ ನೀಡುತ್ತಿದ್ದರು.
ನಮ್ಮಂತಹ ಯುವ ನಾಯಕರಿಗೆ ಅದು ಒಂದು ಮಹತ್ವದ ರಾಜಕೀಯ ಪಾಠವಾಗಿತ್ತು. ಅದೇ ನಂಬಿಕೆ ಆಡಳಿತದ ಅಧಿಕಾರದ ದೃಷ್ಟಿಕೋನವನ್ನೂ ರೂಪಿಸಿತು. ಅಧಿಕಾರದ ಕೇಂದ್ರೀಕರಣ ವನ್ನು ಅವರು ಬಯಸಲಿಲ್ಲ. ಪಂಚಾಯತ್ ರಾಜ್ ಸುಧಾರಣೆಗಳ ಮೂಲಕ ಅಧಿಕಾರವನ್ನು ಗ್ರಾಮಗಳಿಗೂ, ಜನಸಾಮಾನ್ಯರ ಮನೆಬಾಗಿಲಿಗೂ ತಲುಪಿಸಿದ್ದು ಅವರ ಮಹತ್ವದ ಸಾಧನೆ.
ಹೆಗಡೆ ಅವರ ಸರಕಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿತು. ಭ್ರಷ್ಟಾಚಾರ ಮತ್ತು ಸಾರ್ವಜನಿಕ ಹುದ್ದೆಯ ದುರುಪಯೋಗದ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಜವಾಬ್ದಾರಿ ಯುತ ಆಡಳಿತವನ್ನು ಬಲಪಡಿಸುವ ಉದ್ದೇಶ ಇದಾಗಿತ್ತು. ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವು ದಾಗಲಿ, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಸಂಸ್ಥೆಗಳನ್ನು ನಿರ್ಮಿಸುವುದಾಗಲಿ ಈ ಎಲ್ಲದರ ಹಿಂದೆ ಹೆಗಡೆಯವರಿಗೆ ಇದ್ದ ಮೂಲ ಆಶಯ ಅಧಿಕಾರ ಹಂಚಿಕೆಯಾಗಬೇಕು ಮತ್ತು ಅದು ಜವಾಬ್ದಾರಿಯುತವಾಗಿರಬೇಕು ಎನ್ನುವುದಾಗಿತ್ತು.
ಹೆಗಡೆಯವರ ಆಡಳಿತದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಮೊದಲ ರಾಜ್ಯ ಕರ್ನಾಟಕವಾಯಿತು. ಜಿಲ್ಲಾ ಪಂಚಾಯತ್ ಮತ್ತು ಮಂಡಲ ಪಂಚಾಯತ್‌ಗಳಲ್ಲಿ ಶೇ.25 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾ ಯಿತು. ಇದು ದೇಶದಾದ್ಯಂತ ಕಾನೂನಿನ ರೂಪದಲ್ಲಿ ಜಾರಿಗೆ ಬರುವ ಹಲವು ವರ್ಷಗಳ ಮೊದಲೇ ಕರ್ನಾಟಕದಲ್ಲಿ ಜಾರಿಯಾಗಿದ್ದು ಒಂದು ಐತಿಹಾಸಿಕ ಸಾಧನೆಯಾಗಿದೆ.
ಹೆಗಡೆ ಅವರ ಸರಕಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿತು. ಭ್ರಷ್ಟಾಚಾರ ಮತ್ತು ಸಾರ್ವಜನಿಕ ಹುzಯ ದುರುಪಯೋಗದ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಜವಾಬ್ದಾರಿಯುತ ಆಡಳಿತವನ್ನು ಬಲಪಡಿಸುವ ಉದ್ದೇಶ ಇದಾಗಿತ್ತು. ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವು ದಾಗಲಿ, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಸಂಸ್ಥೆಗಳನ್ನು ನಿರ್ಮಿಸುವುದಾಗಲಿ ಈ ಎಲ್ಲದರ ಹಿಂದೆ ಹೆಗಡೆಯವರಿಗೆ ಇದ್ದ ಮೂಲ ಆಶಯ ಅಧಿಕಾರ ಹಂಚಿಕೆಯಾಗಬೇಕು ಮತ್ತು ಅದು ಜವಾಬ್ದಾರಿಯುತವಾಗಿರಬೇಕು ಎನ್ನುವುದಾಗಿತ್ತು.
ರಾಜ್ಯಗಳು ಸದೃಢವಾಗಿದ್ದರೆ ಮಾತ್ರ ಭಾರತ ಬಲವಾಗಿರುತ್ತದೆ ಎಂಬುದು ಹೆಗಡೆಯವರ ಗಟ್ಟಿ ದನಿಯಾಗಿತ್ತು. ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಅವರು ಮಹತ್ವದ ಪ್ರಶ್ನೆಗಳನ್ನು ಎತ್ತಿದರು ಮತ್ತು ರಾಜ್ಯಗಳ ಸಂವಿಧಾನಾತ್ಮಕ ಹಕ್ಕುಗಳಿಗೆ ಗೌರವ ನೀಡಬೇಕು ಎಂದು ದೃಢವಾಗಿ ವಾದಿಸಿದ್ದರು. ಆ ಚರ್ಚೆ ಇಂದಿಗೂ ಪ್ರಸ್ತುತವಾಗಿದೆ. ಒಕ್ಕೂಟ ವ್ಯವಸ್ಥೆ ಎಂದರೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷವಲ್ಲ, ಅದು ಪರಸ್ಪರ ಗೌರವದ ಆಧಾರದ ಮೇಲಿನ ಸಹಭಾಗಿತ್ವ. ಇದನ್ನು ಅಂದಿನ ಕಾಲದಲ್ಲಿಯೇ ಹೆಗಡೆಯವರು ಪ್ರತಿಪಾದಿಸಿದ್ದರು. ಅವರ ರಾಜಕೀಯ ದೃಷ್ಟಿಕೋನ ಜಾತ್ಯತೀತ ಮತ್ತು ಉದಾರ ಮನೋಭಾವದಿಂದ ಕೂಡಿತ್ತು. ವಿಭಿನ್ನ ಸಮುದಾಯ ಗಳ ಜನರೊಂದಿಗೆ ಕೆಲಸ ಮಾಡುವುದು, ತಮ್ಮ ಅಭಿಪ್ರಾಯಗಳಿಗೆ ವಿರುದ್ಧವಾದ ದೃಷ್ಟಿಕೋನ ಗಳನ್ನೂ ಆಲಿಸುವುದು ಅವರಿಗೆ ಸಹಜವಾಗಿತ್ತು.
1983ರ ಅವರ ಪೂರ್ಣ ಬಹುಮತವಿರದ ಸಮ್ಮಿಶ್ರ ಸರಕಾರವೇ ಇದಕ್ಕೆ ಉದಾಹರಣೆ. ಬಲಪಂಥೀಯ ಬಿಜೆಪಿ ಮತ್ತು ಎಡಪಂಥೀಯ ಕಮ್ಯುನಿಸ್ಟ್ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಅವರು ಸರಕಾರ ನಡೆಸಿದರು. ತಮ್ಮ ನಂಬಿಕೆಗಳನ್ನು ಕಳೆದುಕೊಳ್ಳದೆ, ಭಿನ್ನ ಸಿದ್ಧಾಂತಗಳವ ರೊಂದಿಗೆ ಕೆಲಸ ಮಾಡಲು ಅವರು ಸದಾ ಸಿದ್ಧರಾಗಿದ್ದರು. ಹೆಗಡೆಯವರು ಜೀವನವನ್ನು ತಮ್ಮದೇ ರೀತಿಯಲ್ಲಿ ಮುಕ್ತವಾಗಿ ಬದುಕಿದ ವರ್ಣರಂಜಿತ ವ್ಯಕ್ತಿಯೂ ಆಗಿದ್ದರು. ಅವರ ಜನಪ್ರಿಯತೆ ಕರ್ನಾಟಕದ ಗಡಿಗಳನ್ನು ಮೀರಿ ಹರಡಿತ್ತು. ದೇಶದ ವಿವಿಧ ಭಾಗಗಳ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪಾಂಡಿತ್ಯ ಹೊಂದಿದ್ದ ಅವರು, ಪ್ರಾದೇಶಿಕ ಗಡಿಗಳನ್ನು ಮೀರಿ ಜನರೊಂದಿಗೆ ಸುಲಭವಾಗಿ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದವರಾಗಿದ್ದರು.
ಅವರು ನನಗೆ ನೀಡಿದ ಅವಕಾಶಗಳು ನನ್ನ ರಾಜಕೀಯ ಶಿಕ್ಷಣದ ಒಂದು ಅಮೂಲ್ಯ ಭಾಗವಾಗಿವೆ. ನಂತರ ನಮ್ಮ ರಾಜಕೀಯ ಪಥಗಳು ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದವು. ಸಾರ್ವಜನಿಕ ಜೀವನ ದಲ್ಲಿ ಅದು ಸಹಜ. ಆದರೆ ಅವರನ್ನು ಎಂದಿಗೂ ನಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ, ವಿರೋಧ ಮಾಡಿಲ್ಲ. ಆ ಗೌರವ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ, ರಾಮಕೃಷ್ಣ ಹೆಗಡೆಯವರನ್ನು ನಾನು ಗೌರವದಿಂದ, ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಅವರು ನನಗೆ ನೀಡಿದ ಅವಕಾಶಗಳು ನನ್ನ ರಾಜಕೀಯ ಶಿಕ್ಷಣದ ಒಂದು ಅಮೂಲ್ಯ ಭಾಗವಾಗಿವೆ. ನಂತರ ನಮ್ಮ ರಾಜಕೀಯ ಪಥಗಳು ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದವು. ಸಾರ್ವಜನಿಕ ಜೀವನ ದಲ್ಲಿ ಅದು ಸಹಜ. ಆದರೆ ಅವರನ್ನು ಎಂದಿಗೂ ನಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ, ವಿರೋಧ ಮಾಡಿಲ್ಲ. ಆ ಗೌರವ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ, ರಾಮಕೃಷ್ಣ ಹೆಗಡೆಯವರನ್ನು ನಾನು ಗೌರವದಿಂದ, ಕೃತಜ್ಞತೆಯಿಂದ ಸ್ಮರಿಸುತ್ತೇನೆ.