ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lokadhwani awards to Achievers: ಸಮಾಜಮುಖಿ ಚಿಂತನೆ, ವಿಶಿಷ್ಠ ಸಂಸ್ಕೃತಿಯ ಅನಾವರಣ

ಪತ್ರಿಕೋದ್ಯಮ ಎನ್ನುವುದು ಕೇವಲ ಸುದ್ದಿಗಷ್ಟೇ ಸೀಮಿತವಾಗದೆ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಜನರ ಅಪಾರ ವಿಶ್ವಾಸವನ್ನು ಗಳಿಸಬೇಕು. ಕೆಲವು ಸಂದರ್ಭಗಳಲ್ಲಿ ಕಠಿಣ ಸತ್ಯಗಳನ್ನು ಎದುರಿಸಲು ಮಾಧ್ಯಮಗಳು ಸನ್ನದ್ಧವಾಗಬೇಕು. ಸಮಾಜಕ್ಕೆ ಅನಾವಶ್ಯಕವೆನಿಸುವ ವಿಷಯಗಳನ್ನು ಬದಿಗಿಟ್ಟು ಪ್ರಗತಿಪರ ಚಿಂತನೆಗಳಿಗೆ ಒತ್ತು ನೀಡಬೇಕು.

ಈಶಾನ್ಯದ ಮೇಘಗಳ ನಾಡಿನಲ್ಲಿ ಲೋಕಧ್ವನಿ ಹೆಮ್ಮೆಯ ಸಾಧಕರಿಗೆ ಪ್ರಶಸ್ತಿ ಪ್ರದಾನ

ಶಿಲ್ಲಾಂಗ್ ರಾಜಭವನದ ಇತಿಹಾಸ ಹಂಚಿಕೊಂಡ ರಾಜ್ಯಪಾಲ ಸಿ.ಎಚ್.ವಿಜಯಶಂಕರ್

ಶಿಲ್ಲಾಂಗ್: ಯಶಸ್ಸು ಅಥವಾ ಸಾಧನೆ ಎನ್ನುವುದು ಯಾರ ವೈಯಕ್ತಿಕ ಸ್ವತ್ತಲ್ಲ. ಶ್ರೀಕೃಷ್ಣನು ಭಗದ್ಗೀತೆಯಲ್ಲಿ ಬೋಧಿದಂತೆ ಫಲಾಫಲಗಳ ಕುರಿತು ಚಿಂತಿಸದೆ, ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಹಾಗೂ ಕಾಯಕವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಮೇಘಾಲಯದ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಮೇಘಾಲಯದ ರಾಜಧಾನಿಯ ಶಿಲ್ಲಾಂಗ್ ಲೋಕಭ ವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯ ಕ್ರಮದಲ್ಲಿ ಲೋಕಧ್ವನಿ ಹೆಮ್ಮೆಯ ಸಾಧಕರು ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಿ ಅವರು ಮಾತನಾಡಿ ದರು. ವಿಶ್ವವಾಣಿ ಪ್ರಧಾನ ಸಂಪಾದಕ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ.

ಇದನ್ನೂ ಓದಿ: Lokadhwani Awards: ʼಲೋಕಧ್ವನಿ’ ಹೆಮ್ಮೆಯ ಸಾಧಕ ಪ್ರಶಸ್ತಿ ಪುರಸ್ಕೃತ ರವೀಂದ್ರ ನಾಯ್ಕ, ಸುರೇಶ್ಚಂದ್ರ ಹೆಗಡೆಗೆ ಶಿರಸಿಯಲ್ಲಿ ಸನ್ಮಾನ

ಪತ್ರಿಕೋದ್ಯಮ ಎನ್ನುವುದು ಕೇವಲ ಸುದ್ದಿಗಷ್ಟೇ ಸೀಮಿತವಾಗದೆ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಜನರ ಅಪಾರ ವಿಶ್ವಾಸವನ್ನು ಗಳಿಸಬೇಕು. ಕೆಲವು ಸಂದರ್ಭಗಳಲ್ಲಿ ಕಠಿಣ ಸತ್ಯಗಳನ್ನು ಎದುರಿಸಲು ಮಾಧ್ಯಮಗಳು ಸನ್ನದ್ಧವಾಗಬೇಕು. ಸಮಾಜಕ್ಕೆ ಅನಾವಶ್ಯಕವೆನಿಸುವ ವಿಷಯಗಳನ್ನು ಬದಿಗಿಟ್ಟು ಪ್ರಗತಿಪರ ಚಿಂತನೆಗಳಿಗೆ ಒತ್ತು ನೀಡಬೇಕು. ’ವಿಶ್ವವಾಣಿ’ ಮತ್ತು ‘ಲೋಕಧ್ವನಿ’ ಪತ್ರಿಕೆಗಳು ಇಷ್ಟು ವರ್ಷಗಳ ಕಾಲ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಉಳಿಸಿ ಕೊಂಡು ಬಂದಿರುವುದರ ಹಿಂದೆ ಅನೇಕ ಹಿರಿಯರ ಪರಿಶ್ರಮ ಅಡಗಿದೆ.

ಕಾಲಕಾಲಕ್ಕೆ ಜವಾಬ್ದಾರಿಯನ್ನು ಯಶಸ್ವಿಯಾಗಿ ಹಸ್ತಾಂತರಿಸುತ್ತಾ ಸಾಗಿರುವುದೇ ಈ ಸಂಸ್ಥೆಗಳ ಯಶಸ್ಸಿನ ರಹಸ್ಯ ಎಂದು ಅವರು ವಿಶ್ಲೇಷಿಸಿದರು. 150 ವರ್ಷಗಳ ಇತಿಹಾಸವಿರುವ ಮೇಘಾಲಯ ಲೋಕಭವನ ಮೇಘಾಲಯದ ರಾಜಭವನಕ್ಕೆ (ಲೋಕಭವನ) ಸುಮಾರು 150 ವರ್ಷಗಳ ಭವ್ಯ ಇತಿಹಾಸವಿದೆ ಎಂದು ಸ್ಮರಿಸಿದ ಸಿ.ಎಚ್. ವಿಜಯಶಂಕರ್, ಈ ಪರಿಸರದಲ್ಲಿ ಹನ್ನೆರಡು ಶತಮಾನ ಗಳಷ್ಟು ಹಳೆಯದಾದ ಅರ್ಧನಾರೀಶ್ವರ ದೇವಾಲಯವಿದೆ ಎಂದು ಮಾಹಿತಿ ನೀಡಿದರು.

LOka 3 R

ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಈ ಪವಿತ್ರ ದೇಗುಲದಲ್ಲಿ ಬ್ರಿಟಿಷರ ಕಾಲದಿಂದಲೂ ಪೂಜಾ ವಿಧಿವಿಧಾನಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಅಧ್ಯಾತ್ಮಿಕ ಜಗತ್ತಿನ ಪ್ರಮುಖ ರಾದ ಸ್ವಾಮಿ ವಿವೇಕಾನಂದರು, ಬಂಕಿಮಚಂದ್ರ ಚಟರ್ಜಿ ಹಾಗೂ ರಾಮಕೃಷ್ಣ ಪರಮಹಂಸರು ಈ ಪುಣ್ಯಭೂಮಿಗೆ ಭೇಟಿ ನೀಡಿದ್ದರು. ಇಲ್ಲಿ ಕಳೆದ ನೂರು ವರ್ಷಗಳಿಂದ ಸಮಾಜ ಸೇವೆ ಮಾಡು ತ್ತಿರುವ ರಾಮಕೃಷ್ಣ ಮಿಷನ್ ಸಂಸ್ಥೆಯು ಅತ್ಯಂತ ಪ್ರಶಂಸನೀಯ ಕಾರ್ಯ ಮಾಡುತ್ತಿದ್ದು, ಪ್ರಸ್ತುತ ಸುಮಾರು 12000 ಆದಿವಾಸಿ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ ಎಂದರು.

ಶಿಲ್ಲಾಂಗ್ ನಗರದ ಮಾತೃಪ್ರಧಾನ ಸಂಸ್ಕೃತಿ ಮತ್ತು ಆದರ್ಶ ಸಮಾಜ ಮೇಘಾಲಯದ ರಾಜಧಾನಿ ಯಾದ ಶಿಲ್ಲಾಂಗ್ ವಿಶಿಷ್ಟ ಸಾಮಾಜಿಕ ರಚನೆ ಹಾಗೂ ಇತಿಹಾಸವನ್ನು ಹೊಂದಿದೆ. ಇಲ್ಲಿನ ಸಮಾಜದಲ್ಲಿ ಮಹಿಳೆಯರಿಗೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗಿದ್ದು, ಮಾತೃಪ್ರಧಾನ ಕೌಟುಂಬಿಕ ವ್ಯವಸ್ಥೆ ಜಾರಿಯಲ್ಲಿದೆ. ಮದುವೆಯ ನಂತರ ಪುರುಷರು ಹೆಣ್ಣಿನ ಮನೆಗೆ ಹೋಗಿ ವಾಸಿಸುವುದು ಇಲ್ಲಿನ ಪದ್ಧತಿಯಾಗಿದೆ. ಅಷ್ಟೇ ಅಲ್ಲದೆ, ಮಕ್ಕಳು ತಮ್ಮ ಹೆಸರಿನೊಂದಿಗೆ ತಾಯಿಯ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ಮಾತೃ ಗೌರವವನ್ನು ಎತ್ತಿ ಹಿಡಿಯುತ್ತಾರೆ ಎಂಬ ವಿಶಿಷ್ಟ ಸಂಗತಿಯನ್ನು ರಾಜ್ಯಪಾಲರು ಹಂಚಿಕೊಂಡರು.

Loka 5 R

ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಯವರ ಆಶಯದಂತೆ ಮೇಘಾಲಯದ ಲೋಕಭವನ ವನ್ನು ಕೇವಲ ಆಡಳಿತಾತ್ಮಕ ಕೇಂದ್ರವನ್ನಾಗಿ ಉಳಿಸದೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿ ತೆರೆದಿಡಲಾಗಿದೆ. ತಾನು ಮೇಘಾಲಯದವರೇ ಆಗಿ ಇಲ್ಲಿನ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವು ದಾಗಿ ಹೆಮ್ಮೆಯಿಂದ ನುಡಿದ ರಾಜ್ಯಪಾಲರು, ಲೋಕಭವನವನ್ನು ಒಂದು ದೇವಾಲಯದಂತೆ ಪವಿತ್ರವಾಗಿ ಕಾಯ್ದುಕೊಳ್ಳಲಾಗಿದೆ ಎಂದರು. ಈ ಕಾರಣಕ್ಕಾಗಿ ಇಡೀ ಆವರಣದಲ್ಲಿ ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.

ವಿವಾದಮುಕ್ತ ಆಡಳಿತ ಮತ್ತು ನೂತನ ಅರಣ್ಯ ನೀತಿ ನಾನು ಮೇಘಾಲಯದ ರಾಜ್ಯಪಾಲರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಇದುವರೆಗೆ ಯಾವುದೇ ರೀತಿಯ ವಿವಾದಗಳಿಗೆ ಆಸ್ಪದ ನೀಡಿಲ್ಲ. ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿಯಾಗಲಿ ಅಥವಾ ಭ್ರಷ್ಟಾಚಾರದ ಅಗತ್ಯವಾಗಲಿ ಇಲ್ಲ. ರಾಜ್ಯದಲ್ಲಿ ನೂರಾರು ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ಮತ್ತು ನಾಗರಿಕ ಹೋರಾಟ ಗಾರರು ಸಕ್ರಿಯವಾಗಿದ್ದರೂ ಅತ್ಯಂತ ಸೌಹಾರ್ದಯುತ ಆಡಳಿತ ನಡೆಸಲಾಗುತ್ತಿದೆ ಎಂದು ವಿಜಯಶಂಕರ್ ತಿಳಿಸಿದರು.

ಮೇಘಾಲಯದಲ್ಲಿ ಸದ್ಯಕ್ಕೆ ಕಟ್ಟುನಿಟ್ಟಾದ ಅರಣ್ಯ ಸಂರಕ್ಷಣಾ ಕಾನೂನು ಜಾರಿಯಲ್ಲಿಲ್ಲ. ಈ ಕೊರತೆ ಯನ್ನು ನೀಗಿಸಲು ನೂತನ ’ಫಾರೆಸ್ಟ್ ಪಾಲಿಸಿ’ (ಅರಣ್ಯ ನೀತಿ) ರೂಪಿಸುವ ನಿಟ್ಟಿನಲ್ಲಿ ತಜ್ಞರ ಅಧ್ಯಯನ ನಡೆಯುತ್ತಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಇದನ್ನು ಅಧಿಕೃತವಾಗಿ ಜಾರಿಗೆ ತರಲಾಗುವುದು. ಉಳಿದಂತೆ ಪ್ರಮುಖ ಆರು-ಏಳು ಇಲಾಖೆಗಳಿಗೆ ಅಗತ್ಯವಿರುವ ನಿಯಮಾ ವಳಿಗಳನ್ನು ಅಂತಿಮಗೊಳಿಸಿದ ಬಳಿಕ ತಾವು ಕರ್ನಾಟಕಕ್ಕೆ ಮರಳುವುದಾಗಿ ಸ್ಪಷ್ಟಪಡಿಸಿದರು.

ವಿಶೇಷ ಆಕರ್ಷಣೆ ಮತ್ತು ಸಾಂಸ್ಕೃತಿಕ ವೈಭವ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಯಾಗಿ ’ಲೋಕಧ್ವನಿ’ ಪತ್ರಿಕೆಯ 43 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಹಾದಿ ಮತ್ತು ಈ ಬಾರಿ ಪ್ರಶಸ್ತಿಗೆ ಭಾಜನರಾದ ಸಾಧಕರ ಪರಿಚಯ ಒಳಗೊಂಡ ವಿಶೇಷ ಸಾಕ್ಷ್ಯಚಿತ್ರ (ವಿಡಿಯೊ) ಪ್ರದರ್ಶನ ವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯಪಾಲರಾದ ಸಿ.ಎಚ್. ವಿಜಯ ಶಂಕರ್ ಅವರು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಸುಷ್ಮಾ ಭಟ್ ದಂಪತಿಯನ್ನು ವೇದಿಕೆಯಲ್ಲಿ ವಿಶೇಷವಾಗಿ ಗೌರವಿಸಿದರು.

ಇದೇ ವೇಳೆ ’ಲೋಕಧ್ವನಿ’ ಮತ್ತು ’ವಿಶ್ವವಾಣಿ’ ಸಂಸ್ಥೆಗಳ ಪರವಾಗಿ ವಿಶ್ವೇಶ್ವರ ಭಟ್ ಅವರು ರಾಜ್ಯಪಾಲರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದ ಅಧಿಕೃತ ಮುಕ್ತಾಯದ ಬೆನ್ನಲ್ಲೇ ರಾಜಭವನದ ಆವರಣದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತದನಂತರ ರಾಜ್ಯಪಾಲರು ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಹಾಗೂ ಅವರ ಕುಟುಂಬದವರಿಗಾಗಿ ರಾಜಭವನದಲ್ಲಿಯೇ ಭೋಜನ ಕೂಟ ಏರ್ಪಡಿಸಿ ದ್ದರು. ಈ ಸಂದರ್ಭದಲ್ಲಿ ರಾಜ್ಯಪಾಲರು ನೆರೆದಿದ್ದ ನೂರಾರು ಕನ್ನಡಿಗರೊಂದಿಗೆ ಸುದೀರ್ಘ ಕಾಲ ಅತ್ಯಂತ ಆತ್ಮೀಯವಾಗಿ ಸಂಭಾಷಿಸುತ್ತಾ ಕಾಲ ಕಳೆದರು.

ಈ ಐತಿಹಾಸಿಕ ಕ್ಷಣಗಳಿಗೆ ಪ್ರಶಸ್ತಿ ವಿಜೇತ ಸಾಧಕರು ಮತ್ತು ಅವರ ಕುಟುಂಬಸ್ಥರೊಂದಿಗೆ, ಹಿರಿಯ ಪತ್ರಕರ್ತರಾದ ರಾಜು ಅಡಕಳ್ಳಿ, ’ವಿಶ್ವವಾಣಿ’ ಸಮೂಹದ ಸಿಇಒ ಚಿದಾನಂದ ಕಡಲಾಸ್ಕರ್, ’ಲೋಕಧ್ವನಿ’ ಸಂಸ್ಥೆಯ ಪ್ರಕಾಶಕರಾದ ಜಯಂತ್ ಭಟ್, ’ಲೋಕಧ್ವನಿ’ ಮುಖ್ಯ ವರದಿಗಾರರಾದ ಸಂದೇಶ ಭಟ್ ಬೆಳಖಂಡ, ಪರ್ವ ಗ್ರೂಪ್‌ನ ದಿವ್ಯಾ ನೀಲೇಶ್ ಸಾಕ್ಷಿಯಾದರು.

ಮೇಘಾಲಯದ ರಾಜಭವನದಲ್ಲಿ ಈ ಭವ್ಯ ಕಾರ್ಯಕ್ರಮದ ಯಶಸ್ವಿ ಆಯೋಜನೆಯ ಜವಾಬ್ದಾರಿ ಹೊತ್ತಿದ್ದ ’ಅಡಿಗಾಸ್ ಗ್ರೂಪ್’ ಸಂಸ್ಥೆಯ ನಾಗರಾಜ ಅಡಿಗ ಹಾಗೂ ಮಹೇಶ್, ಸಾಧಕರ ಕುಟುಂಬ ದವರಾದ ಅಂಚಲ ಆನಂದು ನಾಯ್ಕ, ಕುಮಾರಿ ಆಸಿಯಾ ಆನಂದು ನಾಯ್ಕ, ಜ್ಯೋತಿ ಹೆಗಡೆ, ವಿ.ಆರ್.ಶಾಲಿನಿ, ಮಹೇಶ್ ಹೆಚ್.ಜೆ, ಡಾ.ಬಿ.ಟಿ.ಚೇತನ್, ಡಾ.ಅಮೃತಾ ತಿಪ್ಪೇಸ್ವಾಮಿ, ಪಿಯುಷ್ ಪ್ರದೀಪ ನಾಯಕ್, ಬಿ. ಎಂ. ಜ್ಯೋತಿ, ಮೀನಾ ನಾಗರಾಜ ನಾಯಕ, ದೀಪಕಾ ಶಿರಸಿಕರ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

’ವಿಶ್ವವಾಣಿ’ ಸಂಸ್ಥೆಯ ಮ್ಯಾನೇಜರ್ ನಾಗಾರ್ಜುನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ದರೆ, ಮೇಘಾಲಯ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾದ ಹರಿಶ್ಚಂದ್ರ ಚೌಧರಿ ಅವರು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

ಭಟ್ಟರ ಪರಿಶ್ರಮಕ್ಕೆ ಗೌರವ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ಹಾಗೂ ವಿಶಿಷ್ಟ ಹೆಸರು ಗಳಿಸಿರುವ ವಿಶ್ವೇಶ್ವರ ಭಟ್ ಅವರ ಮೇಲಿರುವ ವೈಯಕ್ತಿಕ ಗೌರವದಿಂದಾಗಿ, ಅವರ ಒಂದು ಕರೆಗೆ ಓಗೊಟ್ಟು ತಾವು ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾಗಿ ತಿಳಿಸಿದರು. ವಿಶ್ವೇಶ್ವರ ಭಟ್ ಅವರದ್ದು ಸದಾ ತ್ಯಾಗ ಮತ್ತು ಕಠಿಣ ಪರಿಶ್ರಮದ ಜೀವನವಾಗಿದೆ.

ಸಂಧ್ಯಾಕಾಲದ ಅತ್ಯಂತ ಶುಭದಾಯಕ ಗೋಧೂಳಿ ಮುಹೂರ್ತದಲ್ಲಿ ಆಯೋಜಿಸಲಾಗಿದ್ದ ಈ ಸುಂದರ ಸಮಾರಂಭದಲ್ಲಿ ಸಮಾಜಮುಖಿ ಚಿಂತನೆಯುಳ್ಳ ಅರ್ಹ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಸದೃಢ ಹಾಗೂ ಪ್ರಗತಿಪರ ದೇಶದ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಭಾರತೀಯ ನೂ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಬೇಕು ಎಂದು ಅವರು ಆಶಿಸಿದರು.

ಪತ್ರಿಕೋದ್ಯಮದ ಮುಕುಟಪ್ರಾಯ

ದುಬೈನ ಪರ್ವ ಗ್ರೂಪ್ ಸಂಸ್ಥೆಯ ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರಾದ ನಿಲೇಶ್ ಎಚ್.ಪಿ. ಅವರು ಮಾತನಾಡಿ, ಭಾರತದ ಸುಂದರ ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರ ಸುಪುತ್ರರಾದ ಸಿ.ಎಚ್. ವಿಜಯಶಂಕರ್ ಅವರಂತಹ ಜನಸ್ನೇಹಿ ಮುತ್ಸದ್ಧಿ ನಾಯಕರನ್ನು ರಾಜ್ಯಪಾಲರನ್ನಾಗಿ ಪಡೆದಿರುವುದು ಇಡೀ ಕನ್ನಡ ಕುಲಕೋಟಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರಾಯಚೂರು ಶ್ರೀಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಾನಂಂದ ಕೆಳಗಿನಮನಿ ಮಾತನಾಡಿ, ಕರ್ನಾಟಕದ ಜನರು ಜನ್ಮತಃ ಕಠಿಣ ಶ್ರಮಜೀವಿಗಳು. ಇವತ್ತಿನ ಆಧುನಿಕ ಕಾಲಮಾನದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಸಮಾಜದ ಕಟ್ಟಕಡೆಯ ಸಾಮಾನ್ಯ ಪ್ರಜೆಗೂ ಅತ್ಯಂತ ಆಸಕ್ತಿ ಹುಟ್ಟಿಸುವಂತೆ ಪತ್ರಿಕೆಯನ್ನು ತಲುಪಿಸಿದ ಕೀರ್ತಿ ’ವಿಶ್ವದ ಭಟ್ರು’ ಎಂದೇ ಜಾಗತಿಕ ಕನ್ನಡಿಗರಿಂದ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರಿಗೆ ಸಲ್ಲುತ್ತದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

ಪ್ರಶಸ್ತಿ ಪುರಸ್ಕೃತರಾದ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಚ್.ಎಸ್.ಕರುಣಾಕರ್ ಹಾಗೂ ಡಾ.ನಯನಾ ಭಸ್ಮೆ ಮಾತನಾಡಿ, ಇತಿಹಾಸ ಪ್ರಸಿದ್ಧ ಮೇಘಾಲಯದ ಲೋಕ ಭವನದಲ್ಲಿ ಇಂತಹದ್ದೊಂದು ವಿಶಿಷ್ಟ ಮತ್ತು ಗಂಭೀರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅತ್ಯಂತ ವ್ಯವಸ್ಥಿತ ವಾಗಿ ಆಯೋಜಿಸಿರುವುದರ ಔಚಿತ್ಯವನ್ನು ಕೊಂಡಾಡಿದರು. ಜೊತೆಗೆ, ಕನ್ನಡಿಗರನ್ನು ಈ ಪವಿತ್ರ ಸನ್ನಿಧಿಗೆ ಆಹ್ವಾನಿಸಿ ಗೌರವಿಸಿದ ರಾಜ್ಯಪಾಲರಿಗೂ ಹಾಗೂ ಆಯೋಜಕ ರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ವಿಶ್ವವಾಣಿ, ಲೋಕಧ್ವನಿ ಪತ್ರಕರ್ತರದ್ದೇ ಧ್ವನಿ

Loka 2 R

ತಮ್ಮ ಮಾಧ್ಯಮ ಸಮೂಹದ ಪ್ರಗತಿಯ ಹಾದಿಯನ್ನು ಹಂಚಿಕೊಂಡ ವಿಶ್ವೇಶ್ವರ ಭಟ್ ಅವರು, ಕನ್ನಡಿಗರ ಹೆಮ್ಮೆಯ ಪತ್ರಿಕೆಯಾದ ’ವಿಶ್ವವಾಣಿ’ಯನ್ನು ಕನ್ನಡದ ಧೀಮಂತ ಪತ್ರಕರ್ತ ಡಾ. ಪಾಟೀಲ್ ಪುಟ್ಟಪ್ಪ ಅವರಿಂದ ಪಡೆದುಕೊಂಡ ನಂತರ, ಕಳೆದ 11 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಮತ್ತೊಂದೆಡೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 43 ವರ್ಷಗಳಿಂದ ನಿರಂತರ ಪ್ರಸಾರದಲ್ಲಿರುವ ಜನಪ್ರಿಯ ’ಲೋಕಧ್ವನಿ’ ದಿನಪತ್ರಿಕೆಯನ್ನು ತಮ್ಮ ಸಾರಥ್ಯದಲ್ಲೇ ನಡೆಸಲಾಗುತ್ತಿದೆ. ಪ್ರಸ್ತುತ ’ವಿಶ್ವವಾಣಿ ಮಾಧ್ಯಮ ಸಮೂಹ’ವು ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗದೆ ದೃಶ್ಯ ಮತ್ತು ಡಿಜಿಟಲ್ ಲೋಕದಲ್ಲೂ ಹೆಜ್ಜೆಗುರುತು ಮೂಡಿಸಿದೆ. ಸಮೂಹದ ಅಡಿಯಲ್ಲಿ ’ವಿಶ್ವವಾಣಿ’, ’ಲೋಕಧ್ವನಿ’ ದಿನಪತ್ರಿಕೆಗಳೊಂದಿಗೆ ’ವಿಶ್ವವಾಣಿ ಟಿವಿ’, ’ವಿಶ್ವವಾಣಿ ಪ್ರಕಾಶನ’ ಹಾಗೂ ಪ್ರವಾಸೋ ದ್ಯಮ ಆಧಾರಿತ ’ಪ್ರವಾಸಿ ಪ್ರಪಂಚ’ ಮಾಸಿಕಗಳನ್ನು ಯಶಸ್ವಿಯಾಗಿ ಮುನ್ನಡೆಸ ಲಾಗುತ್ತಿದೆ.

ಪ್ರಸ್ತುತ ಈ ಸಂಸ್ಥೆಯಲ್ಲಿ ಸುಮಾರು 280 ಸಿಬ್ಬಂದಿ ನೇರವಾಗಿ ಹಾಗೂ 300ಕ್ಕೂ ಹೆಚ್ಚು ಸಿಬ್ಬಂದಿ ಗಳು ಪರೋಕ್ಷವಾಗಿ ಉದ್ಯೋಗ ಪಡೆದು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣವಾಗಿ ವೃತ್ತಿನಿರತ ಪತ್ರಕರ್ತರೊಬ್ಬರಿಂದಲೇ ಮುನ್ನಡೆಸಲ್ಪಡುತ್ತಿರುವ ಏಕೈಕ ಜನಪ್ರಿಯ ದಿನಪತ್ರಿಕೆ ’ವಿಶ್ವವಾಣಿ’ಯಾಗಿದೆ ಎಂದು ಹೇಳಿದರು.

ಸಾಧಕರ ಐತಿಹಾಸಿಕ ಸಾಂಸ್ಕೃತಿಕ ಪ್ರವಾಸ

Loka 4 R

ಮೇಘಾಲಯದ ರಾಜಭವನದಲ್ಲಿ ಆಯೋಜನೆ ಗೊಂಡಿದ್ದ ಈ ಅಭೂತಪೂರ್ವ ಸಮಾರಂಭಕ್ಕಾಗಿ ’ಲೋಕಧ್ವನಿ’ ಪತ್ರಿಕೆಯ ವತಿಯಿಂದ ವಿಶೇಷ ಮಾಧ್ಯಮ ನಿಯೋಗವೊಂದು ತೆರಳಿತ್ತು. ಈ ನಿಯೋಗದಲ್ಲಿ ’ವಿಶ್ವವಾಣಿ’ ಸಮೂಹದ ಸಿಇಒ ಚಿದಾನಂದ ಕಡಲಾಸ್ಕರ್, ಹಿರಿಯ ಪತ್ರಕರ್ತರಾದ ರಾಜು ಅಡಕಳ್ಳಿ, ’ಲೋಕಧ್ವನಿ’ ಪತ್ರಿಕೆಯ ಪ್ರಕಾಶಕರಾದ ಜಯಂತ್ ಭಟ್ ಹಾಗೂ ’ಲೋಕಧ್ವನಿ’ ಮುಖ್ಯ ವರದಿಗಾರರಾದ ಸಂದೇಶ ಭಟ್ ಬೆಳಖಂಡ ಅವರು ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಗಣ್ಯರನ್ನೊಳಗೊಂಡ ಒಟ್ಟು 40 ಜನರ ಈ ಪ್ರಮುಖ ನಿಯೋಗವು ರಾಜಧಾನಿ ಬೆಂಗಳೂರಿನಿಂದ ಹೆಮ್ಮೆಯ ಈಶಾನ್ಯ ರಾಜ್ಯಗಳತ್ತ ಪ್ರಯಾಣ ಬೆಳೆಸಿತು. ಮೊದಲು ಅಸ್ಸಾಂ ರಾಜ್ಯದ ಗುವಾಹಟಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ನಿಯೋಗವು, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ಗೆ ಪ್ರಯಾಣಿಸಿತು. ಈ ಸುದೀರ್ಘ ಪ್ರಯಾಣದ ದಾರಿಯುದ್ದಕ್ಕೂ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಗಡಿಭಾಗದಲ್ಲಿ ಬರುವ ಅತ್ಯಂತ ಆಕರ್ಷಕ ಪ್ರೇಕ್ಷಣೀಯ ತಾಣಗಳು ಹಾಗೂ ನೈಸರ್ಗಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಪವಿತ್ರ ಸ್ಥಳಗಳಿಗೆ ನಿಯೋಗದ ಸದಸ್ಯರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಕನ್ನಡದ ಕಂಪನ್ನು ಪಸರಿಸುತ್ತಿರುವ ಮೇಘಾಲಯ

ಈಶಾನ್ಯ ರಾಜ್ಯದೊಂದಿಗೆ ಕನ್ನಡಿಗರ ನಂಟು ಬೆಸೆದ ರಾಜ್ಯಪಾಲರ ಬಗ್ಗೆ ಮೆಚ್ಚುಗೆ ಶಿಲ್ಲಾಂಗ್: ಸಿಂಹವನ್ನು ಅದರದ್ದೇ ಆದ ಗುಹೆಯಲ್ಲಿ ನೋಡಬೇಕು ಎಂಬ ಹಳೆಯ ಜನಪ್ರಿಯ ಮಾತಿದೆ. ಇಂದು ಅಂತಹ ಒಂದು ಅಪರೂಪದ ಹಾಗೂ ಗಂಭೀರವಾದ ದೃಶ್ಯವನ್ನು ನಾವೆಲ್ಲರೂ ಮೇಘಾಲಯದ ಲೋಕಭವನದಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ, ಎಂದು ’ವಿಶ್ವವಾಣಿ’ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಬಣ್ಣಿಸಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಅವರು, ಕರ್ನಾಟಕದ ಹೆಮ್ಮೆಯ ನಾಯಕರಾಗಿ ಇಂದು ಮೇಘಾಲಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ನಡೆಸುತ್ತಿರುವ ಸಿ.ಎಚ್.ವಿಜಯಶಂಕರ್ ಅವರೊಂದಿಗೆ ತಮಗಿರುವ ಮೂರು ದಶಕಗಳ ಸುದೀರ್ಘ ಒಡನಾಟ ವನ್ನು ಅತ್ಯಂತ ಅಭಿಮಾನದಿಂದ ಸ್ಮರಿಸಿದರು. ವಿಜಯಶಂಕರ್ ಅವರು ಶಾಸಕರಾಗಿ, ಸಂಸದರಾಗಿ ಹಾಗೂ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಕಾಲದಿಂದಲೂ ನನಗೆ ಅವರೊಂದಿಗೆ ಅತ್ಯಂತ ಆತ್ಮೀಯ ಹಾಗೂ ವೃತ್ತಿಪರವಾದ ಸ್ನೇಹವಿದೆ.

ಪ್ರಸ್ತುತ ರಾಜಕೀಯ ವಲಯದಲ್ಲಿ ಅತ್ಯಂತ ವಿರಳವಾಗಿ ಕಂಡುಬರುವ ಮುತ್ಸದ್ದಿ ಹಾಗೂ ನಿರ್ಭೀತ ಸ್ವಭಾವದ ಕೆಲವೇ ಕೆಲವು ಗಣ್ಯ ರಾಜಕಾರಣಿಗಳ ಪೈಕಿ ಸಿ.ಎಚ್. ವಿಜಯಶಂಕರ್ ಅವರು ಪ್ರಮುಖರಾಗಿದ್ದಾರೆ ಎಂದು ಗುಣಗಾನ ಮಾಡಿದರು. ಮೇಘಗಳ ಆಲಯವೇ ಈ ‘ಮೇಘಾಲಯ’ ಎಂದು ಪ್ರಕೃತಿಯ ಸೌಂದರ್ಯ ವನ್ನು ಕೊಂಡಾಡಿದ ವಿಶ್ವೇಶ್ವರ ಭಟ್ ಅವರು, ಈ ರಾಜ್ಯವು ತನ್ನದೇ ಆದ ವಿಶಿಷ್ಟ ಸಾಮಾಜಿಕ ಹಾಗೂ ಭೌಗೋಳಿಕ ಹಿನ್ನೆಲೆಯನ್ನು ಹೊಂದಿದೆ ಎಂದರು. ಇದು ಜಗತ್ತಿನಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಹೊಂದಿರುವ ರಾಜ್ಯವಾಗಿದ್ದು, ಮಾತೃಪ್ರಧಾನ ಸಮಾಜ ವ್ಯವಸ್ಥೆಯನ್ನು ಹೊಂದಿದೆ.

ಕರ್ನಾಟಕದ ಇತಿಹಾಸದಲ್ಲೇ ಇಂತಹದ್ದೊಂದು ಪ್ರತಿಷ್ಠಿತ ಈಶಾನ್ಯ ರಾಜ್ಯದ ರಾಜ್ಯಪಾಲರ ಸ್ಥಾನ ಅಲಂಕರಿಸಲು ನಮ್ಮ ರಾಜ್ಯದ ಕನ್ನಡಿಗರೊಬ್ಬರು ಆಗಮಿಸಿರುವುದು ಇದೇ ಮೊದಲು ಎಂಬುದು ನಮಗೆಲ್ಲ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರವಾಸೋದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಈ ರಾಜ್ಯದಲ್ಲಿ ನೂರಾರು ಪ್ರವಾಸಿ ತಾಣಗಳು ಮತ್ತು ನೈಸರ್ಗಿಕ ವಿಶೇಷತೆಗಳಿವೆ. ಕರ್ನಾಟಕದ ವಿಜಯಶಂಕರ್ ಅವರು ಇಲ್ಲಿ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಕನ್ನಡಿಗರು ನಿರಂತರವಾಗಿ ಇಲ್ಲಿಗೆ ಆಗಮಿಸು ತ್ತಿದ್ದಾರೆ.

ಈ ಮೂಲಕ ಕರ್ನಾಟಕದ ಸಾಂಸ್ಕೃತಿಕ ಘನತೆ ಹಾಗೂ ಕನ್ನಡದ ಕಂಪನ್ನು ಮೇಘಾಲಯದ ಮೂಲೆ ಮೂಲೆಗಳಿಗೂ ಯಶಸ್ವಿಯಾಗಿ ಪಸರಿಸುವ ಅತ್ಯುನ್ನತ ಕೆಲಸ ನಡೆಯುತ್ತಿದೆ ಎಂದು ಅವರು ವಿವರಿಸಿ ದರು. ಲೋಕಧ್ವನಿ ಹೆಮ್ಮೆಯ ಸಾಧಕ ಪ್ರಶಸ್ತಿ ಪ್ರದಾನದ ಈ ಎರಡನೇ ಆವೃತ್ತಿಯ ಕಾರ್ಯಕ್ರಮವು ಮೇಘಾಲಯದ ಲೋಕಭವನದಲ್ಲಿ ಅತ್ಯಂತ ಸರಳ ಹಾಗೂ ನಿರಾಯಾಸವಾಗಿ ನೆರವೇರಿದೆ. ಮಲ್ಲಿಗೆ ಹೂವನ್ನು ಅತ್ಯಂತ ಜಾಗರೂಕತೆಯಿಂದ ಎತ್ತಿ ಇಡುವಷ್ಟೇ ಕೋಮಲವಾಗಿ ಹಾಗೂ ಸುಲಭವಾಗಿ ಇಡೀ ಕಾರ್ಯಕ್ರಮವು ಯಶಸ್ವಿಯಾಗಿ ಆಯೋಜನೆಗೊಂಡಿದೆ ಎಂದು ಹೇಳಿದರು.

Loka 2 R