ಕೊನೆಗೂ ತಣ್ಣಗಾದ ಕಾಂಗ್ರೆಸ್ ಭಿನ್ನಮತ
ಉಮೇಶ್ ಮೇಟಿಗೆ ಮಣೆ
ವೀರಣ್ಣನ ಕೈ ಹಿಡಿಯಲಿದ್ದಾರಾ ಜನ?
ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪ ಟ್ಟಿದೆ. ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಹವಣಿಸುತ್ತಿದ್ದರೆ, ಇತ್ತ ಮೂರು ಬಾರಿ ಶಾಸಕರಾಗಿರುವ ವೀರಣ್ಣ ಚರಂತಿಮಠ ಅವರನ್ನೇ ಬಿಜೆಪಿ ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಠಕ್ಕರ್ ಕೊಟ್ಟಿದೆ.
ಹಗ್ಗಜಗ್ಗಾಟದ ನಡುವೆ ಟಿಕೆಟ್ ಅಂತಿಮವಾಗಿದ್ದು, ಎಚ್.ವೈ.ಮೇಟಿ ಪುತ್ರ ಉಮೇಶ್ ಮೇಟಿ ಅವರನ್ನು ಕಾಂಗ್ರೆಸ್ ಹುರಿಯಾಳನ್ನಾಗಿ ಮಾಡಿದೆ. ಟಿಕೆಟ್ ಸಂಬಂಧ ಎದ್ದಿದ್ದ ಭಿನ್ನಮತ ಪರಿಹರಿಸುವಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಯಶಸ್ವಿಯಾಗಿದ್ದಾರೆ.
ಇನ್ನೂ ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲಕ್ಕೆ ಆಸ್ಪದ ನೀಡದೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರನ್ನೇ ಕಣಕ್ಕಿಳಿಸಿದೆ. ಈ ಮೂಲಕ ಬಾಗಲಕೋಟೆಯಲ್ಲಿ ಮತ್ತೊಮ್ಮೆ ಮೇಟಿ ಹಾಗೂ ಚರಂತಿಮಠ ಕುಟುಂಬದ ನಡುವೆ ಹಣಾಹಣಿ ಏರ್ಪಟ್ಟಿದ್ದು, ಜನರ ಮನಸ್ಸು ಗೆಲ್ಲುವಲ್ಲಿ ಇಬ್ಬರೂ ಅಭ್ಯರ್ಥಿಗಳು ಕಸರತ್ತು ಆರಂಭಿಸಿದ್ದಾರೆ.
ಇದನ್ನೂ ಓದಿ: Bagalkot News: ಪಿಕೆಪಿಎಸ್ ಚುನಾವಣೆ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ
ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷದಿಂದ ದೂರ ಹೋಗಿದ್ದ ಮುಖಂಡರನ್ನು ಮರಳಿ ಗೂಡಿಗೆ ಸೇರಿಸುತ್ತಿದ್ದು, ಚದುರಿದ ಮತಗಳ ಕ್ರೋಢಿಕರಣ ತಂತ್ರದ ಮೊರೆ ಹೋಗಿದೆ.
ಮೇಟಿ ಕುಟುಂಬದಲ್ಲಿನ ಕಲಹ ಈ ಬಾರಿ ಟಿಕೆಟ್ ವಿಚಾರವಾಗಿ ಬಹಳಷ್ಟು ಚರ್ಚೆ ಯಾದರೂ ಸಿಎಂ ಸಿದ್ದರಾಮಯ್ಯ ಮಾತಿಗೆ ಅಸಮಾಧಾನ ಕೊಂಚ ಕಡಿಮೆಯಾಗಿದೆ. ಆಪ್ತ ಸ್ನೇಹಿತನ ಮಗನನ್ನು ಗೆಲ್ಲಿಸುವ ಪ್ರಯತ್ನದಲ್ಲಿರುವ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಉಪಕದನ ಪ್ರಚಾರಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅಷ್ಟೇ ಅಲ್ಲದೆ ಹಿಂದುಳಿದ ಸಮು ದಾಯಗಳ ಮತ ಸೆಳೆಯಲು ಸಚಿವ ತಿಮ್ಮಾಪುರ, ಸತೀಶ್ ಜಾರಕಿಹೊಳಿ ಅವರಿಗೆ ಜವಾಬ್ದಾರಿ ನೀಡಿರುವ ಕಾಂಗ್ರೆಸ್ ಶತಾಯಗತಾಯ ಗೆಲ್ಲಲು ಕಸರತ್ತು ನಡೆಸಿದೆ.
ಚರಂತಿಮಠ ಪ್ಲಸ್
ಆಂತರಿಕ ಭಿನ್ನಮತ ಮರೆತು ಜಿಲ್ಲಾ ನಾಯಕರು ಒಂದಾಗಿರುವುದು
ಶಿವಾಜಿ ಜಯಂತಿ ವೇಳೆ ನಡೆದ ಕಲ್ಲು ತೂರಾಟದಿಂದ ಹಿಂದೂ ಮತಗಳು ಒಗ್ಗೂಡುವ ಸಾಧ್ಯತೆ
ನೇರ ಮಾತು ಹಾಗೂ ನಿಷ್ಠುರವಾದ ಚರಂತಿಮಠರಿಗೆ ಲಾಭವಾಗುವ ಸಾಧ್ಯ
ಚರಂತಿಮಠ ಮೈನಸ್
ಬಿಜೆಪಿ ಕೆಲ ನಾಯಕರ ಜತೆಗಿನ ವೈಯಕ್ತಿಕ ಭಿನ್ನಾಭಿಪ್ರಾಯ ಹೊಡೆತ ಬೀಳುವ ಸಾಧ್ಯತೆ
ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ನಾಯಕರ ನಡುವಿನ
ಹೊಂದಾಣಿಕೆ ಕೊರತೆ
ವೀರಣ್ಣ ಚರಂತಿಮಠ ಕುಟುಂಬದೊಳಗಿನ ಆಂತರಿಕ ಕಚ್ಚಾಟ
ಉಮೇಶ್ ಮೇಟಿ ಪ್ಲಸ್
ಶಾಸಕ ಎಚ್.ವೈ.ಮೇಟಿ ಸಾವಿನಿಂದ ಕ್ಷೇತ್ರದಲ್ಲಿ ಅನುಕಂಪದ ಅಲೆ
ದಿ.ಮೇಟಿ ಅವರ ಮೇಲಿನ ಸಿಎಂ
ಸಿದ್ದರಾಮಯ್ಯ ಅವರ ಆಪ್ತತೆ ಲಾಭ
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕಾರಣ ಮತದಾರರ ಒಲವು
ಸಂಪುಟ ವಿಸ್ತರಣೆಯಾದರೆ ಸಚಿವ ಸ್ಥಾನ ಸಿಗುವ ಸಾಧ್ಯತೆ
ಉಮೇಶ್ ಮೇಟಿ ಮೈನಸ್
ಟಿಕೆಟ್ ವಿಚಾರವಾಗಿ ಮೇಟಿ ಕುಟುಂಬದಲ್ಲಿ ಅಂತರಿಕ ಕಚ್ಚಾಟ
ದಿ.ಎಚ್.ವೈ.ಮೇಟಿ ರೀತಿ ಕುಟುಂಸ್ಥರು ಕ್ಷೇತ್ರದಲ್ಲಿ ಜನಮನ್ನಣೆ ಗಳಿಸದಿರುವುದು
ಕಾಂಗ್ರೆಸ್ ಟಿಕೆಟ್ ವಂಚಿತರು ಚುನಾವಣೆಯಲ್ಲಿ ಒಳಹೊಡೆತ ಕೊಡುವ ಸಾಧ್ಯತೆ