ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತ್ತ ನರೇಗಾವೂ ಇಲ್ಲ, ಇತ್ತ ವಿಬಿ ಜಿ ರಾಮ್‌ಜಿಯೂ ಇಲ್ಲ

ಕೇಂದ್ರ ಸರಕಾರ ನರೇಗಾ ಕಾಯಿದೆಯ ಬದಲಿಗೆ ವಿಬಿರಾಮ್‌ಜಿ ಕಾಯಿದೆಯ ಮೂಲಕ ಉದ್ಯೋಗ ಖಾತ್ರಿಯನ್ನು ಜಾರಿಗೊಳಿಸಲು ಮುಂದಾಗಿದೆ. ನರೇಗಾದಲ್ಲಿದ್ದ ಅಂಶಗಳಿಗೆ ತಿದ್ದುಪಡಿಗೊಳಿಸಲಾಗಿದೆ. ಆದರೆ ಕೇಂದ್ರದ ಈ ತೀರ್ಮಾನವನ್ನು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿರೋಧಿಸುತ್ತಿದ್ದು, ರಾಜ್ಯದಲ್ಲಿ ಸರಕಾರ ವಿಬಿ ರಾಮ್ ಜಿ ಕಾಯಿದೆಯನ್ನು ಜಾರಿಗೊಳಿಸುವ ವಿಷಯದಲ್ಲಿ ಈಗಲೂ ಕರ್ನಾಟಕ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ

ವಾಸ್ತವವಾಗಿ ಬೇಸಿಗೆಯಲ್ಲೆ ಅಗತ್ಯವಿದ್ದ ಉದ್ಯೋಗಕ್ಕೆ ಕತ್ತರಿ

ಬೆಂಗಳೂರು: ಸಂಪೂರ್ಣವಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಕಾಯ್ದೆಯನ್ನು ಮಾರ್ಪಾಡು ಮಾಡುವ ಮೂಲಕ ಹೊಸದಾಗಿವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತುಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ- ಜಿರಾಮ್ ಜಿ) ಕಾಯ್ದೆಯನ್ನು ಕೇಂದ್ರ ಸರಕಾರ ಪರಿಚಯಿಸಿದೆ. ಆದರೆ ಈ ಕಾಯಿದೆಯನ್ನು ರಾಜ್ಯ ಸರಕಾರವು ಇನ್ನೂ ಅಳವಡಿಸಿ ಕೊಳ್ಳದೇ ಇರುವುದರಿಂದ ಉದ್ಯೋಗ ಖಾತ್ರಿಯನ್ನೇ ನಂಬಿಕೊಂಡಿದ್ದ ಲಕ್ಷಾಂತರ ಕೂಲಿ ಕಾರ್ಮಿಕರು ಅತ್ತ ಕೂಲಿಯೂ ಇಲ್ಲದೇ, ಇತ್ತ ಕಾಳಿಗೂ ಪರಿತಪಿಸುವ ಪರಿಸ್ಥಿತಿಗೆ ಸಿಲುಕಿದ್ದಾರೆ.

ಯುಪಿಎ ಸರಕಾರ ಜಾರಿಗೊಳಿಸಿದ್ದ ಮನರೇಗಾವನ್ನು ಬದಿಗಿಟ್ಟು, ಅದೇ ಉದ್ಯೋಗ ಖಾತ್ರಿಗೆ ವಿಬಿ ರಾಮ್ ಜಿ ಕಾಯಿದೆ ಎಂದು ಹೆಸರಿಟ್ಟು ಯೋಜನೆ ಯನ್ನು ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೊಳಿಸಿದೆ. ಆದರೆ ಈ ಯೋಜನೆಯನ್ನು ಕರ್ನಾಟಕದಲ್ಲಿ ಯಾವ ರೀತಿ ಯಲ್ಲಿ ಜಾರಿಯಾಗಲಿದೆ ಎನ್ನುವ ಗೊಂದಲ ಶುರುವಾಗಿದೆ.

ಕೇಂದ್ರ ಸರಕಾರ ನರೇಗಾ ಕಾಯಿದೆಯ ಬದಲಿಗೆ ವಿಬಿರಾಮ್‌ಜಿ ಕಾಯಿದೆಯ ಮೂಲಕ ಉದ್ಯೋಗ ಖಾತ್ರಿಯನ್ನು ಜಾರಿಗೊಳಿಸಲು ಮುಂದಾಗಿದೆ. ನರೇಗಾದಲ್ಲಿದ್ದ ಅಂಶಗಳಿಗೆ ತಿದ್ದುಪಡಿಗೊಳಿಸಲಾಗಿದೆ. ಆದರೆ ಕೇಂದ್ರದ ಈ ತೀರ್ಮಾನವನ್ನು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿರೋಧಿಸುತ್ತಿದ್ದು, ರಾಜ್ಯದಲ್ಲಿ ಸರಕಾರ ವಿಬಿ ರಾಮ್ ಜಿ ಕಾಯಿದೆಯನ್ನು ಜಾರಿಗೊಳಿಸುವ ವಿಷಯದಲ್ಲಿ ಈಗಲೂ ಕರ್ನಾಟಕ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಇದರಿಂದಾಗಿ, ನರೇಗಾ ಯೋಜನೆಯಲ್ಲಿ ಇಷ್ಟು ದಿನ ಕೆಲಸ ಪಡೆಯು ತ್ತಿದ್ದ ಲಕ್ಷಾಂತರ ಜನರಿಗೆ ಈ ವರ್ಷ ಕೆಲಸ ಸಿಗುವುದೋ ಇಲ್ಲವೋ ಎನ್ನುವ ಆತಂಕ ಶುರುವಾಗಿದೆ.

ಇದನ್ನೂ ಓದಿ: Srivathsa Joshi Column: ಪ್ರತಿ ಕಚ್ಚುವಿಕೆಯಲ್ಲಿ ಆನಂದ: ಹಿಟ್ಟಲ್ಲ, ಸೂಪರ್‌ ಹಿಟ್‌ !

ವಿಬಿ ರಾಮ್‌ಜಿ ಕಾಯಿದೆಯನ್ನು ಈಗಾಗಲೇ ಕೇಂದ್ರ ಸರಕಾರ ಅನುಮೋದನೆ ನೀಡಿ, ಬಜೆಟ್‌ನಲ್ಲಿ ಅನುದಾನವನ್ನೂ ಮೀಸಲಿಟ್ಟಿದೆ. ಆದರೆ ಕರ್ನಾಟಕ ಸರಕಾರ ತನ್ನ ಬಜೆಟ್‌ ನಲ್ಲಿ ವಿಬಿ ರಾಮ್ ಜಿ ಯೋಜನೆಯನ್ನು ವಿರೋಧಿಸಿರುವುದು ಮಾತ್ರವಲ್ಲದೇ, ನರೇಗಾ ಯೋಜನೆಗೆ ಎರಡು ಸಾವಿರ ಕೋಟಿ ರು. ಮೀಸಲಿಡುವ ಪ್ರಸ್ತಾಪ ಮಾಡಿದೆ ಆದರೆ ನೇಗಾ ಯೋಜನೆಯನ್ನು ಕೇಂದ್ರ ಸಂಪೂರ್ಣವಾಗಿ ಕೈಬಿಟ್ಟಿರುವುದರಿಂದ, ಈ ಯೋಜನೆ ಯಡಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ.

ಎರಡು ಸರಕಾರಗಳು ಭಿನ್ನ ಆಲೋಚನೆಯಲ್ಲಿರುವುದರಿಂದ ಎರಡೂ ಯೋಜನೆ ಯಿಂದ ಉದ್ಯೋಗ ಖಾತ್ರಿ ಹಂಚಿಕೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಬೇಸಿಗೆಯೇ ನಿರ್ಣಾಯಕ: ಮಳೆಗಾಲದ ಸಮಯದಲ್ಲಿ ರೈತರು ಹಾಗೂ ಕೂಲಿ ಕಾರ್ಮಿ ಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಿರುದ್ಯೋಗ ಸಮಸ್ಯೆ, ಗುಳೆ ಹೋಗುವ ಸಮಸ್ಯೆ ಹೆಚ್ಚಾಗುತ್ತಿರಲಿಲ್ಲ. ಆದ್ದರಿಂದ ಬೇಸಿಗೆ ಕಾಲದಲ್ಲಿ ರೈತರಿಗೆ, ಕೂಲಿ ಕಾರ್ಮಿಕರಿಗೆ ಕೆಲಸದ ಅಗತ್ಯವಿರುತ್ತದೆ. ಆದರೆ ಇದೀಗ ನರೇಗಾ ಯೋಜನೆಯಲ್ಲಿ ಯಾವುದೇ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ಸರಕಾರಗಳ ನಡುವಿನ ಈ ಗೊಂದಲ ದಿಂದ, ಬೇಸಿಗೆ ಸಮಯದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಕೆಲಸ ಸಿಗದೇ ಹೋಗುವ ಆತಂಕ ಶುರುವಾಗಿದೆ. ಒಂದು ವೇಳೆ ರಾಜ್ಯ ಸರಕಾರವು ಕೇಂದ್ರದ ವಿಬಿ ರಾಮ್ ಜಿ ಕಾಯಿದೆಯನ್ನು ಮಳೆಗಾಲದ ಅಧಿವೇಶನದಲ್ಲಿ ಅಳವಡಿಸಿಕೊಂಡರೂ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು, ಕಾಮಗಾರಿ ಕೈಗೆತ್ತಿಕೊಳ್ಳಲು ಕನಿಷ್ಠ ಮೂರ‍್ನಾಲ್ಕು ತಿಂಗಳು ಬೇಕಾಗು ತ್ತದೆ. ಈ ಸಮಯದಲ್ಲಿ ಕೂಲಿ ಕೆಲಸದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಜನರಿಗೆ ಆದಾಯಕ್ಕೆ ಹೊಡೆತ ಬೀಳಲಿದೆ ಎನ್ನುವ ಆತಂಕ ಶುರುವಾಗಿದೆ.

ನರೇಗಾ ಮುಕ್ತಾಯವಾದರೂ ದುರುಪಯೋಗದ ಚರ್ಚೆಯಿಲ್ಲ

ಈ ನಡುವೆ 2025ನೇ ಸಾಲಿನ ಸಿಎಜಿ ವರದಿಯಲ್ಲಿ ಸುಮಾರು 187 ಕೋಟಿ ರು. ಅನುಚಿತ ವಾಗಿ ಬಳಸಿಕೊಂಡಿರುವ ವಿಷಯವನ್ನು ಪ್ರಸ್ತಾಪಿಸಲಾಗಿದೆ. 2019-20ರಿಂದ 2025ರವರೆಗೆ ಸುಮಾರು 79,284 ದುರುಪಯೋಗವಾಗಿರುವ ಪ್ರಕರಣಗಳಿವೆ ಎನ್ನುವ ವಿಷಯವನ್ನು ಉಲ್ಲೇಖಿಸಲಾಗಿದೆ. ಆದರೀಗ, ನರೇಗಾ ಯೋಜನೆಯೇ ಕೊನೆಯಾಗಿರುವುದರಿಂದ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಹಿಂದೆ ದುರುಪಯೋಗವಾಗಿರುವ ಕಾಮಗಾರಿಗಳಿಂದ ವಸೂಲಿ ಮಾಡಲಾಗಿದೆ ಎಂದು ಸರಕಾರ ಹೇಳಿದ್ದರೂ, ಇದನ್ನು ಪೂರ್ಣ ಪ್ರಮಾಣದಲ್ಲಿ ಸಿಎಜಿ ಒಪ್ಪಿಲ್ಲ. ಆದ್ದರಿಂದ ಇದೀಗ ಈ ವಿಷಯದಲ್ಲಿ ಸರಕಾರದ ನಡೆಯೇನಾಗಿರಲಿದೆ ಎನ್ನುವ ಕುತೂಹಲ ಅನೇಕರಲ್ಲಿದೆ.

ಆಗುತ್ತಿರುವ ಸಮಸ್ಯೆಯೇನು

ಕೇಂದ್ರದಿಂದ ಮನರೇಗಾ ಯೋಜನೆ ಸ್ಥಗಿತಗೊಂಡು, ವಿಬಿ ರಾಮ್‌ಜಿ ಕಾಯಿದೆ ಜಾರಿ ಯಾಗಿದೆ

ವಿಬಿ ರಾಮ್ ಕರ್ನಾಟಕದಲ್ಲಿ ಜಾರಿಯಾಗಬೇಕಾದರೆ ವಿಧೇಯಕವನ್ನು ಮಂಡಿಸಬೇಕು

ನರೇಗಾ ಪರವಾಗಿ ಬ್ಯಾಟ್ ಮಾಡುತ್ತಿರುವುದರಿಂದ ವಿಬಿ ರಾಮ್ ಜಿ ಕಾಯಿದೆ ಅಳವಡಿಸಿ ಕೊಂಡಿಲ್ಲ

ಅಳವಡಿಕೆ ಮಾಡಿಕೊಳ್ಳದ ಹೊರತು ಈ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ.

ಮುಂದಿನ ಸಮಸ್ಯೆಯೇನು?

ಮಳೆಗಾಲದ ಅಧಿವೇಶನದಲ್ಲಿ ಅಳವಡಿಸಿಕೊಂಡರೂ ಅಕ್ಟೋಬರ್‌ವರೆಗೆ ಕೆಲಸ ಕೊಡಲು ಅವಕಾಶವಿಲ್ಲ

ನರೇಗಾ ರೀತಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಅನುಮೋದನೆ ಪಡೆಯುವುದಕ್ಕೆ ವಿಬಿ ರಾಮ್‌ಜಿಯಲ್ಲಿ ಅವಕಾಶವಿಲ್ಲ

ವಿಬಿ ರಾಮ್‌ಜಿ ಕಾಯಿದೆಯಲ್ಲಿ ಉದ್ಯೋಗ ನೀಡಲು ಬಜೆಟ್‌ನಲ್ಲಿ ಅನುದಾನ ಎತ್ತಿಟ್ಟಿಲ್ಲ

ಪೂರ್ಣ ಪ್ರಮಾಣದಲ್ಲಿ ನರೇಗಾ ಜಾರಿಗೊಳಿಸಲು ಮುಂದಾದರೆ ಭಾರಿ ಪ್ರಮಾಣದ ಅನುದಾನ ಮೀಸಲಿಡಬೇಕಾಗುತ್ತದೆ.