ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೌಶಲ್ಯಾಧಾರಿತ ಶಿಕ್ಷಣದಿಂದ ಯಶಸ್ಸಿನತ್ತ: ಪದವಿಯ ಬಲೆಗೆ ಸಿಲುಕದೆ ಮುನ್ನಡೆಯುತ್ತಿರುವ ವೆಲ್‌ನೆಸ್ ಮತ್ತು ಹಾಸ್ಪಿಟಾಲಿಟಿ ಬಿ.ವೊಕ್ ಪದವೀಧರರು

ದಶಕಗಳಿಂದ ವಿದ್ಯಾರ್ಥಿಗಳ ವೃತ್ತಿಜೀವನದ ಬಗ್ಗೆ ಒಂದು ಸಾಮಾನ್ಯ ಕಲ್ಪನೆ ಇತ್ತು. ಮೊದಲು ಪದವಿ, ಬಳಿಕ ಇನ್ನೊಂದು ಉನ್ನತ ಪದವಿ, ನಂತರ ಉದ್ಯೋಗದ ಹುಡುಕಾಟ. ಇದೇ ಹಾದಿಯಲ್ಲಿ ಲಕ್ಷಾಂತರ ಮಂದಿ ಸಾಗುತ್ತಿರುವಾಗ, ಉದ್ಯೋಗಕ್ಕಾಗಿ ತೀವ್ರ ಸ್ಪರ್ಧೆ ಎದುರಾಗುತ್ತಿದೆ. ಈ ಪದವಿ ಕೇಂದ್ರಿತ ವ್ಯವಸ್ಥೆ ಯು ಬಹುಪಾಲು ಸಂದರ್ಭಗಳಲ್ಲಿ ಶೈಕ್ಷಣಿಕ ಪ್ರಮಾಣಪತ್ರವನ್ನೇ ವೃತ್ತಿಪರ ಸಾಮರ್ಥ್ಯದ ಮಾನದಂಡವೆಂದು ಪರಿಗಣಿಸುವಂತೆ ಮಾಡಿದೆ

ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಒಬ್ಬರಾದರೂ ಅಥವಾ ಇಬ್ಬರಾದರೂ ಇಂಥವರನ್ನು ನಾವು ಕಂಡೇ ಇರುತ್ತೇವೆ. "ಪದವಿ ಮಾಡಲೇಬೇಕು" ಎಂಬ ಕಾರಣಕ್ಕೆ ಒಂದು ಪದವಿ ಪಡೆದು, ನಂತರ ಆ ಪದವಿಗೆ ತಕ್ಕಂತ ಉದ್ಯೋಗ ಸಿಗದೇ ಅಥವಾ ಆ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಯದೇ, ಸಂಪೂರ್ಣ ವಿಭಿನ್ನ ದಿಕ್ಕಿನ ಮತ್ತೊಂದು ಕೋರ್ಸ್ ಮಾಡಿರುತ್ತಾರೆ. ಕಾಲಕ್ರಮೇಣ ಅವರ ಮೊದಲ ಪದವಿ ಮರೆತುಹೋಗಿದ್ದರೂ, ನಂತರ ಕಲಿತ ಆ ಸಣ್ಣ ಕೋರ್ಸ್ನ ಕೌಶಲ್ಯಗಳ ಆಧಾರದಿಂದ ವೃತ್ತಿ ಅಥವಾ ಉದ್ಯೋಗದಲ್ಲಿ ಯಶಸ್ಸು ಸಾಧಿಸಿರುವುದನ್ನು ಗಮನಿಸಿರಬಹುದು. ಮೂರು ವರ್ಷಗಳ "ಭವಿಷ್ಯ ರೂಪಿಸುವ" ಪದವಿ ನೀಡದ ಅವಕಾಶವನ್ನು ಕೆಲವೊಮ್ಮೆ ಆ ಚಿಕ್ಕ ಕೌಶಲ್ಯಾಧಾರಿತ ಕೋರ್ಸ್ ನೀಡಿರುತ್ತದೆ.

ದಶಕಗಳಿಂದ ವಿದ್ಯಾರ್ಥಿಗಳ ವೃತ್ತಿಜೀವನದ ಬಗ್ಗೆ ಒಂದು ಸಾಮಾನ್ಯ ಕಲ್ಪನೆ ಇತ್ತು. ಮೊದಲು ಪದವಿ, ಬಳಿಕ ಇನ್ನೊಂದು ಉನ್ನತ ಪದವಿ, ನಂತರ ಉದ್ಯೋಗದ ಹುಡುಕಾಟ. ಇದೇ ಹಾದಿಯಲ್ಲಿ ಲಕ್ಷಾಂತರ ಮಂದಿ ಸಾಗುತ್ತಿರುವಾಗ, ಉದ್ಯೋಗಕ್ಕಾಗಿ ತೀವ್ರ ಸ್ಪರ್ಧೆ ಎದುರಾಗುತ್ತಿದೆ. ಈ ಪದವಿ ಕೇಂದ್ರಿತ ವ್ಯವಸ್ಥೆಯು ಬಹುಪಾಲು ಸಂದರ್ಭಗಳಲ್ಲಿ ಶೈಕ್ಷಣಿಕ ಪ್ರಮಾಣಪತ್ರವನ್ನೇ ವೃತ್ತಿಪರ ಸಾಮರ್ಥ್ಯದ ಮಾನದಂಡವೆಂದು ಪರಿಗಣಿಸುವಂತೆ ಮಾಡಿದೆ. ಆದರೆ ವೇಗವಾಗಿ ಬೆಳೆಯುತ್ತಿರುವ ವೆಲ್‌ನೆಸ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳು ಈ ಕಲ್ಪನೆಯನ್ನು ಪ್ರಶ್ನಿಸುತ್ತಿವೆ.

ಇದನ್ನೂ ಓದಿ: Skill Development: ಸುಧಾರಿತ ಉತ್ಪಾದನಾ ಕ್ಷೇತ್ರಕ್ಕಾಗಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮೂಲಕ ಉದ್ಯೋಗಿಗಳ ಕೌಶಲ್ಯಾಭಿವೃದ್ಧಿಗೆ ಲ್ಯಾಮ್ ರಿಸರ್ಚ್ ಆದ್ಯತೆ

ವೆಲ್‌ನೆಸ್ ಕ್ಷೇತ್ರವು ಆರೋಗ್ಯಸೇವೆ, ಆತಿಥ್ಯ, ಜೀವನಶೈಲಿ, ದೈಹಿಕ ಕ್ಷೇಮಗಳ ಸಂಗಮವಾಗಿದೆ. ಇಂತಹ ಕ್ಷೇತ್ರದಲ್ಲಿ ಕೇವಲ ಸೈದ್ಧಾಂತಿಕ ಜ್ಞಾನ ಸಾಕಾಗುವುದಿಲ್ಲ. ಜನರೊಂದಿಗೆ ಪರಿಣಾಮ ಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯ, ಅವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಕೌಶಲ್ಯ, ತಂಡದೊAದಿಗೆ ಕಾರ್ಯನಿರ್ವಹಿಸುವ ಮನೋಭಾವ ಹಾಗೂ ಸುರಕ್ಷಿತವಾಗಿ ಸೇವೆಗಳನ್ನು ಒದಗಿಸುವ ಕೌಶಲ್ಯ ಅಗತ್ಯವಾಗಿರುತ್ತದೆ.

ಇಲ್ಲಿಯೇ ಬಿ.ವೊಕ್ ಕೋರ್ಸ್ಗಳು ಮಹತ್ವದ ಪರ್ಯಾಯವಾಗಿ ಕಾಣಿಸುತ್ತವೆ. ಪ್ರಾಯೋಗಿಕ ಕಲಿಕೆ ಮತ್ತು ಕೈಗಾರಿಕಾ ಅನುಭವಕ್ಕೆ ಒತ್ತು ನೀಡುವುದರ ಮೂಲಕ, ತರಗತಿಯಲ್ಲಿ ಕಲಿತ ಜ್ಞಾನವನ್ನು ನೈಜ ಉದ್ಯೋಗ ಕ್ಷೇತ್ರದ ಅಗತ್ಯಗಳೊಂದಿಗೆ ಜೋಡಿಸಲು ಇವು ನೆರವಾಗುತ್ತವೆ. ಪದವಿ ಪೂರ್ಣ ಗೊಂಡ ನಂತರ ಉದ್ಯೋಗ ಕ್ಷೇತ್ರದ ವಾಸ್ತವತೆಗಳನ್ನು ಅರಿಯುವ ಬದಲು, ವಿದ್ಯಾರ್ಥಿಗಳು ಕಲಿಯುವ ಅವಧಿಯಲ್ಲಿಯೇ ಕಾರ್ಯಾನುಭವ, ಆತ್ಮವಿಶ್ವಾಸ ಮತ್ತು ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು.

ಬಿ.ವೊಕ್ ವಿದ್ಯಾರ್ಥಿಗಳ ನಿಜವಾದ ಬಲವು ಅವರ ಜ್ಞಾನ ಮತ್ತು ಕೌಶಲ್ಯದ ಸಮತೋಲನದಲ್ಲಿದೆ. ವಿಶೇಷವಾಗಿ ವೆಲ್‌ನೆಸ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳಲ್ಲಿ ಉದ್ಯೋಗದಾತರು ಹಾಗೂ ಗ್ರಾಹಕರು ವಿಷಯಜ್ಞಾನದ ಜೊತೆಗೆ ಸಂವಹನ ಕೌಶಲ್ಯ, ಸಹಾನುಭೂತಿ, ವೃತ್ತಿಪರತೆ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯಕ್ಕೆ ಹೆಚ್ಚಿನ ಮೌಲ್ಯ ನೀಡುತ್ತಾರೆ.

ಹೀಗಾಗಿ ಇದನ್ನು "ವೃತ್ತಿಪರ ಶಿಕ್ಷಣ ವಿರುದ್ಧ ಪದವಿ" ಎಂಬ ದೃಷ್ಟಿಕೋನದಿಂದ ನೋಡುವ ಅವಶ್ಯಕತೆಯಿಲ್ಲ. ಬಿ.ವಾಕ್ ಎನ್ನುವುದು ಶೈಕ್ಷಣಿಕ ಕಲಿಕೆ ಮತ್ತು ವೃತ್ತಿಪರ ಅಭ್ಯಾಸದ ನಡುವೆ ಸೇತುವೆಯಂತಿರುವ ಶಿಕ್ಷಣ ಮಾದರಿಯಾಗಿದೆ. ಇದು ಉತ್ತಮ ಉದ್ಯೋಗಾವಕಾಶಗಳು, ಸ್ವಯಂ ಉದ್ಯೋಗ, ವಿಶೇಷ ಪರಿಣತಿ ಹಾಗೂ ನಿರಂತರ ಕಲಿಕೆಯ ದಾರಿಯನ್ನು ತೆರೆದಿಡಬಲ್ಲದು.

ಡಾ. ನರೇಂದ್ರ ಕೆ ಶೆಟ್ಟಿ, ಮುಖ್ಯ ಕ್ಷೇಮಪಾಲನಾ ಅಧಿಕಾರಿ, ಕ್ಷೇಮವನ