Vishwavani Global Achievers Award Ceremony at Bhutan: ಭೂತಾನ್‌ನಲ್ಲಿ ಕನ್ನಡ ಭಾವ ಲಹರಿ ಉಕ್ಕಿಸಿದ ವಿಶ್ವವಾಣಿ
ಕೈಗೆಟಕುವ ಮೋಡಗಳ ಮಾಲೆ. ಎಲ್ಲಿ ನೋಡಿದರೆ ಹಸಿರು ಗಿರಿಗಳ ಸಾಲು. ಮನಕ್ಕೆ ತಂಗಾಳಿ, ಕಣ್ಣಿಗೆ ಕಂಪು ಸೂಸುವ ನಿಸರ್ಗ ರಮಣೀಯ ನೋಟ. ಹೃನ್ಮನ ಸೆಳೆಯುವ ಸೇಬು ತೋಟಗಳು, ಎಲ್ಲೆಲ್ಲಿಯೂ ನದಿ ಜಲಧಾರೆಗಳು, ಜಲಪಾತಗಳು, ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಕಳವಳವಿಲ್ಲದ ಅಪರೂಪದ ದೇಶ ಭೂತಾನ್.


ಪ್ರತ್ಯಕ್ಷ ವರದಿ: ರಾಜು ಅಡಕಳ್ಳಿ
11ನೇ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ
13 ಮಂದಿ ಕನ್ನಡ ನಾಡಿನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಬೆಂಗಳೂರಿನಿಂದ ಹೊರಟ ವಿಮಾನ ಈಶಾನ್ಯ ರಾಜ್ಯಗಳ ಗಿರಿಕಂದರಗಳನ್ನು ದಾಟಿ ಭೂತಾನ್ ಎಂಬ ಗಿರಿ ಶಿಖರಗಳ ನಾಡಿನ ಪಾರೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಈ ದೇಶ ಭಾರತದ ಒಂದು ರಾಜ್ಯವಾಗಿರಬಾರದಿತ್ತೇ ಎಂಬ ಭಾವನೆ ಮೂಡುವುದು ಸಹಜ.
ಕೈಗೆಟಕುವ ಮೋಡಗಳ ಮಾಲೆ. ಎಲ್ಲಿ ನೋಡಿದರೆ ಹಸಿರು ಗಿರಿಗಳ ಸಾಲು. ಮನಕ್ಕೆ ತಂಗಾಳಿ, ಕಣ್ಣಿಗೆ ಕಂಪು ಸೂಸುವ ನಿಸರ್ಗ ರಮಣೀಯ ನೋಟ. ಹೃನ್ಮನ ಸೆಳೆಯುವ ಸೇಬು ತೋಟಗಳು, ಎಲ್ಲೆಲ್ಲಿ ಯೂ ನದಿ ಜಲಧಾರೆಗಳು, ಜಲಪಾತಗಳು, ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಕಳವಳವಿಲ್ಲದ ಅಪರೂಪದ ದೇಶ ಭೂತಾನ್.

ಇಂತಹ ಅಪರೂಪದ ದೇಶದಲ್ಲಿ ಅಷ್ಟೇ ಅನನ್ಯವಾಗಿ ನಡೆದಿದ್ದು ವಿಶ್ವವಾಣಿಯ 10ನೆಯ ಗ್ಲೋಬಲ್ ಅಚೀವರ್ಸ್ ಸಮ್ಮೇಳನ. ವಿಶ್ವವಾಣಿಯ ಗ್ಲೋಬಲ್ ಫಾರಂ ಮತ್ತು ಪರ್ವಗ್ರೂಪ್ ಸಹಯೋಗದಲ್ಲಿ ಭೂತಾನ್ ರಾಜಧಾನಿ ಥಿಂಪುವಿನಲ್ಲಿರುವ ಲೀ ಮೆರಿಡಿಯನ್ ಪಂಚತಾರಾ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಈ ಸಾಂಸ್ಕೃತಿಕ ಸಮ್ಮಿಲನ ಮತ್ತು ಭಾರತ-ಭೂತಾನ್ ಬಾಂಧವರ ಜಾಗತಿಕ ಸಮ್ಮೇಳನದಲ್ಲಿ ಈ ಬಾರಿ ವಿವಿಧ ರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ, ಕನ್ನಡಿಗರಿಗೆ ಗ್ಲೋಬಲ್ ಅಚೀವರ‍್ಸ್ ಪ್ರಶಸ್ತಿ ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: Vishweshwar Bhat Column: ದೇಶದ ಪ್ರಪ್ರಥಮ ಮತದಾರ
ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರ ಸಾರಥ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ಹಿರಿಯ ನಟಿ ಹಾಗೂ ಮಾಜಿ ಸಚಿವೆ ಜಯಮಾಲಾ ರಾಮಚಂದ್ರ ಹಾಗೂ ಭೂತಾನ್ ಸರಕಾರದ ಆರೋಗ್ಯ ಸಚಿವ ಲಿಯಾನೋ ಟಂಡಿನ್ ವಾಂಗ್ಚುಕ್ ಅವರು ಈ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕಾರ್ಯಕ್ರಮವು ಭಾರತ ಮತ್ತು ಭೂತಾನ್ ಉಭಯ ದೇಶಗಳ ರಾಷ್ಟ್ರಗೀತೆ ಹಾಗೂ ಗಣಪತಿ ಸ್ತುತಿಯೊಂದಿಗೆ ಇಳಿ ಸಂಜೆಯ ಹೊತ್ತಿನಲ್ಲಿ ಕಾರ್ಯಕ್ರಮ ಪ್ರಾರಂಭ ಆಯಿತು. ಇಡೀ ಸಭಾಂಗಣ ಭೂತಾನ್‌ನ ಗಣ್ಯರು, ಕೈಗಾರಿಕೋದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ತುಂಬಿ ಹೋಗಿತ್ತು.

ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿನಿಂದ ತೆರಳಿದ್ದ ಮತ್ತು ದುಬೈನಿಂದ ಬಂದಿದ್ದ ನಿಯೋಗದ ಸದಸ್ಯರು ಭೂತಾನ್ ಅತಿಥಿಗಳೊಂದಿಗೆ ಸೇರಿ ಪರಸ್ಪರ ಪ್ರೀತಿ ಸೌರ್ಹಾದತೆಯೊಂದಿಗೆ ಸೇರಿದ್ದು ಮದುವೆ ಮನೆಯ ಸಂಭ್ರಮದಂತೆ ಕಂಗೊಳಿಸಿತು.
ಇದಕ್ಕೆ ಮೆರಗು ಕೊಡುವಂತೆ ಭೂತಾನ್‌ನ ಪ್ರಸಿದ್ಧ ಕಲಾವಿದರ ನೃತ್ಯ ಪ್ರದರ್ಶನವೂ ಎಲ್ಲರ ಮೆಚ್ಚುಗೆ ಗಳಿಸಿತು. ಭೂತಾನ್‌ನ ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ನಮ್ಮಲ್ಲಿ ಯಕ್ಷಗಾನ, ಸುಗ್ಗಿಕುಣಿತ, ಜಾನಪದ ಸೊಗಡುಗಳು ಮತ್ತೊಮ್ಮೆ ನೆನಪಿಗೆ ಬರುವಂತಾದವು. ಈ ಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ವಿಶ್ವವಾಣಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಭೂತಾನ್‌ನ ಅನೇಕ ಗಣ್ಯಮಾನ್ಯರು ಪಾಲ್ಗೊಂಡು ಭಾರತದಿಂದ ಬಂದ ನಿಯೋಗದ ಸದಸ್ಯರ ಭೂತಾನ್ ಪ್ರವಾಸಕ್ಕೆ ಶುಭ ಕೋರಿದರು.

ನಿಯೋಗದಲ್ಲಿ ವಿಶ್ವೇಶ್ವರ ಭಟ್ ಅವರ ಧರ್ಮಪತ್ನಿ, ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಸುಷ್ಮಾ ಭಟ್, ಯಲ್ಲಾಪುರದ ಮಹಿಳಾ ಉದ್ಯಮಿ ಆರ್ಯಾ ಶಾನಭಾಗ, ಕೊಡಗಿನ ಲೇಖಕಿ ಫ್ಯಾನ್ಸಿ ಮುತ್ತಣ್ಣ, ಗೋಕರ್ಣದ ಗೋದಾವರಿ ಹೋಟೆಲ್ ಮಾಲೀಕರು, ಉದ್ಯಮಿ ಗಳಾಗಿರುವ ರಾಘವೇಂದ್ರ ನಾಯಕ್, ಪ್ರಸಿದ್ಧ ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರ, ವಿಶ್ವವಾಣಿಯ ಸಿಇಒ ಚಿದಾನಂದ ಕಡಲಾಸ್ಕರ, ಪತ್ರಕರ್ತ ರಾಜು ಅಡಕಳ್ಳಿ, ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ ಹೊಸಬಾಳೆ, ಡಿಯಾಗೋ ಫೈನಾನ್ಸ್ ಸಂಸ್ಥೆಯ ಅಕ್ಷಿತಾ ಕಟೂರಿ, ಕಾಫಿ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಸಿದ್ದೇಶ್ ಹಾರನಹಳ್ಳಿ, ಉತ್ತರ ಕರ್ನಾಟಕದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಭುವನ್ ಕೌಲಗಿ ಉಪಸ್ಥಿತರಿದ್ದರು.
ಉದ್ಯಮಿ ಕಿರಣ್ ಕುಮಾರ್ ಅವರು ಕಾರ್ಯಕ್ರಮ ನಿರ್ವಹಿಸಿ, ವಿಶ್ವವಾಣಿ ಗ್ಲೋಬಲ್ ಫಾರಂ ಚಟುವಟಿಕೆಗಳನ್ನು ವಿವರಿಸಿದರು. ವಿಶ್ವವಾಣಿ ಬಳಗದ ನಾಗಾರ್ಜುನ ವಂದಿಸಿದರು. ಫನ್ ಸ್ಟೇ ಸಂಸ್ಥೆಯ ನಿತಿನ್ ಅಗರ್ವಾಲ್ ವಿಶ್ವವಾಣಿ ನಿಯೋಗದ ಭೂತಾನ್ ಪ್ರವಾಸ ವ್ಯವಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಪತ್ರಕರ್ತೆ ಭಾವನ ಬೆಳೆಗೆರೆ ಮತ್ತು ತುಮಕೂರಿನ ಓಂಕಾರ್ ಅವರು, ವಿಶ್ವವಾಣಿಯ ಗ್ಲೋಬಲ್ ಫಾರಂ ಪ್ರಯತ್ನಗಳನ್ನು ಶ್ಲಾಘಿಸಿದರು. ಸಮಾಜದಲ್ಲಿ ಪ್ರಸಿದ್ಧಿಗಾಗಿ ಹಪಹಪಿಸದೇ ಎಲೆ ಮರೆಯ ಕಾಯಿಗಳಂತೆ, ಹಣ್ಣುಗಳಂತೆ ಇರುವವರನ್ನು ಹುಡುಕಿ ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ವಿಶ್ವವಾಣಿಯ ಸಾಧನೆಯನ್ನು ಅವರು ಕೊಂಡಾಡಿದರು. ಲೇಖಕಿ ಫ್ಯಾನ್ಸಿ ಮುತ್ತಣ್ಣ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಸಮಾಜಸೇವೆ, ಕೃಷಿ, ಪತ್ರಿಕೋದ್ಯಮ, ವಕೀಲ ವೃತ್ತಿ, ಕೈಗಾರಿಕೋದ್ಯಮ, ರಾಜಕೀಯ, ಅನಿವಾಸಿ ಭಾರತೀಯರ ಸಾಧನೆ, ಹೋಟೆಲ್ ಉದ್ಯಮ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಗ್ಲೋಬಲ್ ಪ್ರಶಸ್ತಿ ನೀಡಿದ್ದು ವಿಶೇಷವಾಗಿತ್ತು.
ಭಾರತದ ಬಗ್ಗೆ ಪ್ರೀತಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭೂತಾನ್ ಸರಕಾರದ ಆರೋಗ್ಯ ಸಚಿವ ಲಿಯಾನೋ ಟಂಡಿನ್ ವಾಂಗ್ಚುಕ್ ಮಾತನಾಡಿ, ಭಾರತದ ಬಗ್ಗೆ ಭೂತಾನ್ ಪ್ರಜೆಗಳಿಗೆ ವಿಶೇಷ ಪ್ರೀತಿಯಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದರು. ಒಂದು ಪತ್ರಿಕಾ ಸಂಸ್ಥೆಯೊಂದು ಈ ರೀತಿಯ ಅಪೂರ್ವ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ವಿಶೇಷವೇ ಸರಿ. ಇದಕ್ಕಾಗಿ ವಿಶ್ವವಾಣಿ ಹಾಗೂ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳು.
ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಭಾರತ ಮತ್ತು ಭೂತಾನ್ ಹಲವು ರೀತಿಯ ಸಾಮ್ಯತೆ ಯನ್ನು ಹೊಂದಿರುವುದು ವಿಶೇಷ. ಭಾರತದಿಂದ ಆಗಮಿಸುತ್ತಿರುವ ಈ ಸಾಧಕರ ಸಾಧನೆಗಳನ್ನು ತಿಳಿದುಕೊಳ್ಳುವುದರಿಂದ ಭೂತಾನಿ ಯರಿಗೂ ಹೊಸ ಪ್ರೇರಣೆ ಸಿಗುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಶಾಂತವೇ ಭೂತಾನ್‌ನ ಭೂಷಣ
ಭೂತಾನ್ ಹಸಿರು ಸೀರೆಯನ್ನುಟ್ಟುಕೊಂಡು ಇಡೀ ದೇಶದ ತುಂಬೆಲ್ಲಾ ‘ಪ್ರಶಾಂತಿ’ಯನ್ನು ಕಾಪಾಡಿಕೊಂಡು ಹೊಸ ಅಧ್ಯಾತ್ಮವನ್ನು, ನವ ಸ್ಪೂರ್ತಿಯನ್ನು, ಸುರಿಸುವುದನ್ನು ಪ್ರತ್ಯಕ್ಷವಾಗಿ ಇಲ್ಲಿ ಅನುಭವಿಸುವಾಗ ಈ ಭೂತಾನ್ ನಿಜಕ್ಕೂ ‘ಭೂ’ ತಾಣ ಎಂದು ಅನಿಸದೇ ಇರದು. ಇಡೀ ದೇಶದಲ್ಲಿ ಇರುವುದು ಕೇವಲ 20 ಜಿಲ್ಲೆಗಳು. ಈ ಇಡೀ ದೇಶದಲ್ಲಿ ಕಣ್ಣಿಟ್ಟು ಹುಡುಕಿದರೂ ನಮ್ಮ ಬೆಂಗಳೂರಿನಂತ, ಮುಂಬೈನಂತಹ ಗೌಜು, ಗದ್ದಲಗಳ ನಗರ ಒಂದೂ ಕಾಣಿಸುವುದಿಲ್ಲ.
ಇಲ್ಲಿ ವಿಪರೀತವಾಗಿ ದುಡ್ಡು ಕರಗಿಸಬಲ್ಲ ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಿಲ್ಲ. ವಿಷ ಕಾರುವ ವಿಪರೀತ ಕೈಗಾರಿಕೋದ್ಯಮಗಳ ಹಾವಳಿಯಿಲ್ಲ. ಎಲ್ಲಾ ಕಡೆಯೂ ಒಂದೇ ರೀತಿಯ ಹೆರಿಟೇಜ್ ಕಟ್ಟಡಗಳನ್ನು ನಿರ್ಮಿಸಬೇ ಕೆಂಬ ಸರಕಾರದ ಕಟ್ಟಾಜ್ಞೆಯನ್ನು ಯಾರೂ ಇಲ್ಲಿ ಉಲ್ಲಂಘಿಸಿಲ್ಲ ವಾದ್ದರಿಂದ, ಇಡೀ ದೇಶಾದ್ಯಂತ ಒಂದೇ ಬಗೆಯ, ಒಂದೇ ಬಣ್ಣದ ವಾಸ್ತು ಶಿಲ್ಪಗಳನ್ನು ನೋಡುವುದೇ ಚಂದ.
ಯೋಗ ಧ್ಯಾನದಲ್ಲಿ ಆನಂದ ಕಾಣುವ, ರುದ್ರಾಕ್ಷಿ ಜಪಮಾಲೆ ಹಿಡಿದು ಬೌದ್ಧ ಮಂದಿರಗಳನ್ನು ಪ್ರದಕ್ಷಿಣೆ ಹಾಕುವ, ಭೌತಿಕ ಸುಖಕ್ಕಿಂತ ಆಧ್ಯಾತ್ಮ ಖುಷಿಗಾಗಿ ಹುಡುಕುವ ಭೂತಾನಿಯರಿಗೆ ಅತಿಯಾದ ಆಧುನಿಕವೆಂದರೆ ವರ್ಜ್ಯ. ಹೀಗೆ ಮೊದಲಿನಿಂದಲೂ ತನ್ನ ತನವನ್ನು ಕಾಪಾಡಿ ಕೊಂಡು, ವಿಶಿಷ್ಟ ಪರಂಪರೆಯನ್ನು ಉಳಿಸಿ ಬೆಳಸಿಕೊಂಡಿರುವ ಭೂತಾನ್ ಹಣದ ಆಸೆಗಾಗಿ ತನ್ನನ್ನು ವಿಪರೀತವಾಗಿ ಪ್ರವಾಸೋದ್ಯಮಕ್ಕೆ ತೆರೆದುಕೊಂಡು ತನ್ನ ನೆಲವನ್ನು ರಾಡಿ ಮಾಡಿ ಕೊಂಡಿಲ್ಲ. ರಸ್ತೆ, ಗಲ್ಲಿ, ಹಳ್ಳಿಗಳು ಇದರಿಂದಾಗಿ ಕ್ಲೀನಾಗಿ ಉಳಿದುಕೊಂಡಿವೆಯೇ ವಿನಃ ಗಬ್ಬೆದ್ದು ಹೋಗಿಲ್ಲ.

ಆರೋಗ್ಯ ಪೂರ್ಣ ಬದುಕಿಗೆ ಭೂತಾನ್ ಬುನಾದಿ
ಕಾರ್ಯಕ್ರಮದಲ್ಲಿ ಹಿರಿಯ ನಟಿ, ಮಾಜಿ ಸಚಿವೆ ಡಾ.ಜಯಮಾಲಾ ಮಾತನಾಡಿ, ಭೂತಾನ್ ನಿಸರ್ಗ ಸಂಪತ್ತನ್ನು ಕಾಳಜಿ ಪೂರ್ವಕವಾಗಿ ಉಳಿಸಿ, ಬೆಳೆಸಿಕೊಂಡಿರುವುದರಿಂದ ಇಲ್ಲಿಯ ನೆಲ-ಜಲ-ಗಾಳಿ ಎಲ್ಲವೂ ಶುದ್ಧವಾಗಿದ್ದು, ಆರೋಗ್ಯ ಪೂರ್ಣ ಬದುಕನ್ನು ಸಾಗಿಸಲು ಪೂರಕವಾಗಿದೆ. ಭೂತಾನ್‌ನ ಈ ವಿಶೇಷ ಗುಣದಿಂದಾಗಿ ಇಲ್ಲಿಗೆ ಬರುವವರಲ್ಲಿನ ಕೆಲವು ರೋಗಗಳು ಸಹಜ ವಾಗಿಯೇ ವಾಸಿಯಾಗಿ ಹೊಸ ಜೀವನೋತ್ಸಾಹಕ್ಕೆ ಸ್ಪೂರ್ತಿ ತುಂಬುತ್ತದೆ.
ಬುದ್ಧನ ಆರಾಧಕರ ದೇಶ ಭೂತಾನ್. ಭಗವಾನ್ ಬುದ್ಧ ನಮ್ಮ ಭಾರತದಿಂದಲೇ ಹೊಸ ಬದುಕಿನ ಶಾಂತಿ ಮಾರ್ಗಗಳನ್ನು ಹೇಳಿಕೊಟ್ಟ ದಾರ್ಶನಿಕರಾಗಿರುವುದು ವಿಶೇಷ ಎಂದು ಅಭಿಪ್ರಾಯ ಪಟ್ಟರು. ನಾನು ವಿಶ್ವವಾಣಿಯ ನಿಯೋಗದಲ್ಲಿ ಭಾಗವಹಿಸಿ ಅನೇಕ ದೇಶಗಳಲ್ಲಿ ನಡೆದ ಸಮಾರಂಭಗಳನ್ನು ಗಮನಿಸಿದ್ದೇನೆ. ಅತ್ಯಂತ ಶಿಸ್ತು ಮತ್ತು ಕಾಳಜಿ ಪೂರ್ವಕವಾಗಿ ಈ ಕಾರ್ಯಕ್ರಮಗಳು ನಡೆಯುತ್ತಿರುವುದಕ್ಕೆ ವಿಶ್ವೇಶ್ವರ ಭಟ್ಟರ ಸಂಘಟನಾ ಶಕ್ತಿಯೇ ಮುಖ್ಯ ಕಾರಣ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದೆಂದರೆ ಅದು ಸುಲಭದ ಮಾತಲ್ಲ. ಆದರೆ ಕೇವಲ ಒಂದುವರೆ ವರ್ಷದಲ್ಲಿಯೇ ಹತ್ತು ರಾಷ್ಟ್ರಗಳಲ್ಲಿ ಸಾಧಕರ ಸಮಾವೇಶವನ್ನು ಈ ರೀತಿಯಾಗಿ ಯಶಸ್ವಿಯಾಗಿ ನಡೆಸಿದ ವಿಶ್ವವಾಣಿಗೆ ಅಭಿನಂದನೆ ಎಂದರು.
ದೇಶ ಸುತ್ತು ಕೋಶ ಓದು ಎನ್ನುವ ಮಾತಿದೆ. ಅದರಂತೆಯೇ ವಿಶ್ವವಾಣಿಯ ಅಂತಾರಾಷ್ಟ್ರೀಯ ಸಮ್ಮೇಳನಗಳು ಅನೇಕ ದೇಶಗಳನ್ನು ಸುತ್ತುವುದಕ್ಕೆ ಅಧ್ಯಯನ ಮಾಡುವುದಕ್ಕೆ ಸಹಕಾರಿಯಾಗಿದೆ. ವಿಶ್ವೇಶ್ವರ ಭಟ್ಟರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ನಮಗೆಲ್ಲ ಕೋಶ ಓದುವ ಆಸಕ್ತಿ ಯನ್ನು ಹೆಚ್ಚಿಸಿದ್ದಾರೆ. ವಿಶ್ವವಾಣಿ ಬಳಗದಿಂದ ಪ್ರಾರಂಭವಾಗಿರುವ ಪ್ರವಾಸಿ ಪ್ರಪಂಚ ಹೊಸ ವಾರಪತ್ರಿಕೆಯೂ ಪ್ರವಾಸೋದ್ಯಮದ ಹಲವು ಆಯಾಮಗಳನ್ನು ಓದುಗರಿಗೆ ಅರ್ಥಪೂರ್ಣವಾಗಿ ಪರಿಚಯಿಸುತ್ತಿರುವುದು ಅಭಿನಂದನೀಯ.
- ಡಾ.ಜಯಮಾಲಾ, ಹಿರಿಯ ನಟಿ ಹಾಗೂ ಮಾಜಿ ಸಚಿವ
ಭೂತಾನ್ ಅಭಿವೃದ್ಧಿಯಲ್ಲಿ ಭಾರತದ್ದು ದೊಡ್ಡಣ್ಣನ ಪಾತ್ರ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಭಾರತ ಮತ್ತು ಭೂತಾನ್ ರಾಷ್ಟ್ರಗಳು ಪರಸ್ಪರ ಸಹೋದರ ರಾಷ್ಟ್ರಗಳಂತಿವೆ. ಭೂತಾನ್‌ನ ಅನೇಕ ಆಪತ್ಕಾಲದಲ್ಲಿ ಭಾರತ ದೊಡ್ಡಣ್ಣನಂತೆ ಉದಾರ ಸಹಾಯ ನೀಡಿದೆ. ಭೂತಾನಿನ ಅಭಿವೃದ್ಧಿ ಚಟುವಟಿಕೆಗಳಿಗೆ ಹಾಗೂ ಮೂಲಭೂತ ಸೌಲಭ್ಯ ನಿರ್ಮಾಣಕ್ಕೆ ಭಾರತದ ಸಹಾಯಹಸ್ತ ಸದಾ ಯಿದೆ ಎಂದರು. ಭಾರತದ ರೀತಿಯಲ್ಲಿಯೇ ಭೂತಾನ್ ಸಹ ಶಾಂತಿಪ್ರಿಯ ರಾಷ್ಟ್ರ. ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ, ಶಿಸ್ತು, ಸ್ವಚ್ಛತೆಯ ವಿಚಾರದಲ್ಲಿ ಭೂತಾನ್ ನಿಂದ ನಾವು ಭಾರತೀಯರು ಕಲಿಯಬೇಕಾಗಿರುವುದು ಬಹಳಷ್ಟಿದೆ.
ಭಾರತದ ನೆರೆಯ ರಾಷ್ಟ್ರವಾಗಿ ಇಷ್ಟೆಲ್ಲ ಆಕರ್ಷಣೆಗಳನ್ನು ಹೊಂದಿದ್ದರೂ, ನಮ್ಮಲ್ಲಿಯೇ ಅನೇಕ ಪ್ರವಾಸಿಗರು ಭೂತಾನ್ ದೇಶವನ್ನೇ ನೋಡಿಲ್ಲ. ಹೀಗಾಗಿ ಈ ಬಾರಿ ವಿಶ್ವವಾಣಿಯಿಂದ ಈ ಸಮಾರಂಭಕ್ಕಾಗಿ ಭೂತಾನ್ ಅನ್ನೇ ಆಯ್ಕೆ ಮಾಡಲಾಗಿದೆ. ಕಲೆ, ಸಂಸ್ಕೃತಿ, ವಾಣಿಜ್ಯೋದ್ಯಮಗಳ ಸಂಬಂಧವನ್ನು ಈ ಉಭಯ ದೇಶಗಳ ನಡುವೆ ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾದರೆ ಈ ಶ್ರಮ ಸಾರ್ಥಕ ಎಂದು ಅಭಿಪ್ರಾಯಪಟ್ಟರು.
ವಿಶ್ವವಾಣಿಯ ಗ್ಲೋಬಲ್ ಫಾರಂ ವತಿಯಿಂದ ಸಂಘಟಿಸಲಾಗುತ್ತಿರುವ ಅಂತಾ ರಾಷ್ಟ್ರೀಯ ಕಾರ್ಯಕ್ರಮಗಳ ಮತ್ತು ವಿದೇಶಿ ಪ್ರವಾಸಗಳಲ್ಲಿ ಭಾಗವಹಿಸುತ್ತಿರುವ ಡಾ.ಜಯಮಾಲಾ ಅವರು ವಿಶ್ವವಾಣಿಯ ಸಾಂಸ್ಕೃತಿಕ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ. ಅವರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿರುವುದಕ್ಕೆ ವಂದನೆ ಎಂದು ಹೇಳಿದರು.
ಭಾರತದ ಬಗ್ಗೆ ಪ್ರೀತಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭೂತಾನ್ ಸರಕಾರದ ಆರೋಗ್ಯ ಸಚಿವ ಲಿಯಾನೋ ಟಂಡಿನ್ ವಾಂಗ್ಚುಕ್ ಮಾತನಾಡಿ, ಭಾರತದ ಬಗ್ಗೆ ಭೂತಾನ್ ಪ್ರಜೆಗಳಿಗೆ ವಿಶೇಷ ಪ್ರೀತಿಯಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದರು. ಒಂದು ಪತ್ರಿಕಾ ಸಂಸ್ಥೆಯೊಂದು ಈ ರೀತಿಯ ಅಪೂರ್ವ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ವಿಶೇಷವೇ ಸರಿ. ಇದಕ್ಕಾಗಿ ವಿಶ್ವವಾಣಿ ಹಾಗೂ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳು. ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಭಾರತ ಮತ್ತು ಭೂತಾನ್ ಹಲವು ರೀತಿಯ ಸಾಮ್ಯತೆಯನ್ನು ಹೊಂದಿರುವುದು ವಿಶೇಷ.
ಭಾರತದಿಂದ ಆಗಮಿಸುತ್ತಿರುವ ಈ ಸಾಧಕರ ಸಾಧನೆಗಳನ್ನು ತಿಳಿದುಕೊಳ್ಳುವುದರಿಂದ ಭೂತಾನಿ ಯರಿಗೂ ಹೊಸ ಪ್ರೇರಣೆ ಸಿಗುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಮ್ಮಲ್ಲಿ ಹಲವು ರಂಗಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿದ್ದಾರೆ. ಆದರೆ ಅವರಲ್ಲಿ ಎಷ್ಟೋ ಮಂದಿ ಬೆಳಕಿಗೆ ಬರುವುದಿಲ್ಲ. ಇಂತಹ ಸಾಧಕರನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪುರಸ್ಕರಿಸಿ, ಸ್ಪೂರ್ತಿ ತುಂಬುವುದು ವಿಶ್ವವಾಣಿ ಗ್ಲೋಬಲ್ ಫಾರಂನ ಉದ್ದೇಶ. ಭೂತಾನ್‌ನಲ್ಲಿ ಈ ಸಮಾರಂಭ ಸಂಪನ್ನ ಗೊಳ್ಳುವಲ್ಲಿ ಭೂತಾನ್ ಸರಕಾರ, ಭೂತಾನ್ ವಾಣಿಜ್ಯೋದ್ಯಮಿಗಳು ಸಹಭಾಗಿತ್ವ ನೀಡಿದ ಪರ್ವ ಗ್ರೂಪ್ ಸಂಸ್ಥೆಗಳಿಗೂ ಧನ್ಯವಾದ.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ, ವಿಶ್ವವಾಣಿ

ಭೂತಾನ್‌ನಲ್ಲಿ ನಡೆದ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮ ಪರ್ವ ಗ್ರೂಪ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕರುನಾಡಿನ ಉತ್ಸಾಹಿ ಯುವಕರು ದುಬೈ ಹಾಗೂ ಕರ್ನಾಟಕದ ನಡುವೆ ‘ಸೇತುವೆ’ಯಾಗಿ ಪರ್ವ ಗ್ರೂಪ್ ಸ್ಥಾಪಿಸಿದ್ದಾರೆ. ತುಮಕೂರು ಮೂಲದ ಯುವ ಉದ್ಯಮಿ ನೀಲೇಶ್ ಹಾಗೂ ಚಿತ್ರದುರ್ಗ ಮೂಲದ ಶಶಿಧರ್ ನಾಗರಾಜಪ್ಪ ಅವರು ಪರ್ವ ಗ್ರೂಪ್‌ನ್ನು ಆರಂಭಿಸಿದ್ದಾರೆ.
ಇಬ್ಬರು ಯುವ, ಉತ್ಸಾಹಿ ಉದ್ಯಮಿಗಳ ನೇತೃತ್ವದಲ್ಲಿ ಪರ್ವ ಗ್ರೂಪ್ ಅತ್ಯಂತ ಯಶಸ್ವಿ ಸೇವೆ ಯನ್ನು ನೀಡುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಈಗಾಗಲೇ ದುಬೈ ಎಕ್ಸ್‌ಪೋ ನಡೆಸಿದ್ದಾರೆ. ಭೂತಾನ್ ಗ್ಲೋಬಲ್ ಅಚೀವರ್ಸ್ ಪುರಸ್ಕೃತರಲ್ಲಿ ಈ ಇಬ್ಬರೂ ಇರುವುದು ವಿಶೇಷ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಪರ್ವ ಸಂಸ್ಥೆಯ ಸಂಸ್ಥಾಪಕ ಎಚ್.ಪಿ.ನೀಲೇಶ್ ಮತ್ತು ಸಹ ಸಂಸ್ಥಾಪಕ ಶಶಿಧರ್ ನಾಗರಾಜಪ್ಪ ಅವರು ದುಬೈನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಲಾಭವನ್ನು ಉದಾಹರಣೆ ಸಮೇತ ವಿವರಿಸಿದರು.
ಕನ್ನಡಿಗರಿಂದಲೇ ದುಬೈನಲ್ಲಿ ಕಟ್ಟಿರುವ ಪರ್ವ ರಿಯಾಲಿಟಿಯಿಂದ ಗ್ರಾಹಕರಿಗೆ ಅನೇಕ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪರ್ವದ ಮೂಲಕ ದುಬೈನಲ್ಲಿ ಮನೆ ಖರೀದಿಸಿದರೆ ದುಬೈಗೆ ಉಚಿತವಾಗಿ ಖರೀದಿದಾರ ದಂಪತಿಯನ್ನು ಕರೆದೊ ಯ್ಯುವ ವುವಸ್ಥೆ ಮಾಡಲಾಗುವುದು ಎಂದರು.
ಈಗಲೇ ಬುಕ್ಕಿಂಗ್ ಮಾಡಿದವರಿಗೆ 10 ಗ್ರಾಂ ಚಿನ್ನದ ನಾಣ್ಯ, ದುಬೈ ಗೋಲ್ಡನ್ ವೀಸಾ, ಆಸ್ತಿಯನ್ನು ವಾಪಸು ಖರೀದಿಸುವ ಗ್ಯಾರಂಟಿ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿಕೆ ಸೇರಿದಂತೆ ಮುಂತಾದ ಆಕರ್ಷಕ ಯೋಜನೆಗಳನ್ನು ಪರ್ವದಿಂದ ನೀಡಲಾಗುತ್ತಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಹೂಡಿಕೆ ಮಾಡುವುದಕ್ಕಿಂತ ದುಬೈನಲ್ಲಿ ಹೂಡಿಕೆ ಹೆಚ್ಚು ಸುರಕ್ಷಿತ ಮತ್ತು ಲಾಭವೂ ಅಧಿಕ, ತೆರಿಗೆಯೂ ಕಡಿಮೆ. ಜಗತ್ತಿನಲ್ಲಿಯೇ ವೇಗವಾಗಿ ದುಬೈ ಬೆಳೆಯುತ್ತಿರುವುದು ಹೂಡಿಕೆದಾರರಿಗೆ ಭವಿಷ್ಯದಲ್ಲಿ ಹಲವು ಅನುಕೂಲಗಳಿವೆ. ಬಾಡಿಗೆದಾರರನ್ನು ಹುಡುಕೊಡುವ ವ್ಯವಸ್ಥೆಯನ್ನು ಪರ್ವ ಸಂಸ್ಥೆಯೇ ನಿರ್ವಹಿಸಲಿದೆ ಎಂದು ನೀಲೇಶ್ ಮತ್ತು ಶಶಿಧರ್ ನಾಗರಾಜಪ್ಪ ವಿವರಿಸಿದರು.