ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Army Officer Row: "ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು"; ಸ್ಪೈಸ್ ಜೆಟ್ ಮೇಲೆಯೇ FIR ದಾಖಲಿಸಿದ ಸೇನಾಧಿಕಾರಿ!

ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯ ನಾಲ್ವರು ಸಿಬ್ಬಂದಿ ಮೇಲೆ ಸಾಯುವ ರೀತಿಯಲ್ಲಿ ಹಲ್ಲೆ ನಡೆಸಿದ ಸೇನಾಧಿಕಾರಿ ಇದೀಗ ವಿಮಾನಯಾನ ಸಂಸ್ಥೆಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ವಿಮಾನಯಾನ ಸಂಸ್ಥೆ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ಪೈಸ್ ಜೆಟ್ ಮೇಲೆಯೇ FIR ದಾಖಲಿಸಿದ ಸೇನಾಧಿಕಾರಿ!  ಏನಿದು ಘಟನೆ ?

Vishakha Bhat Vishakha Bhat Aug 4, 2025 1:04 PM

ಶ್ರೀನಗರ: ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯ ನಾಲ್ವರು ಸಿಬ್ಬಂದಿ ಮೇಲೆ ಸಾಯುವ ರೀತಿಯಲ್ಲಿ ಹಲ್ಲೆ ನಡೆಸಿದ ಸೇನಾಧಿಕಾರಿ (Army Officer Row) ಇದೀಗ ವಿಮಾನಯಾನ ಸಂಸ್ಥೆಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ವಿಮಾನಯಾನ ಸಂಸ್ಥೆ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಹಲ್ಲೆಯಲ್ಲಿ ಸ್ಪೈಸ್‌ಜೆಟ್‌ನ ಓರ್ವ ಸಿಬ್ಬಂದಿಗೆ ಬೆನ್ನು ಮೂಳೆ ಮುರಿದಿದೆ ಎಂದು ಸಂಸ್ಥೆ ತಿಳಿಸಿದೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ನಾಗರಿಕ ವಿಮಾನಯಾನ ನಿಯಮಗಳಿಗೆ ಅನುಸಾರವಾಗಿ ಸೇನಾಧಿಕಾರಿಯನ್ನು ಹಾರಾಟ ನಿಷೇಧ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚುವರಿ ಕ್ಯಾಬಿನ್ ಬ್ಯಾಗೇಜ್‌ಗೆ ಹಣ ಪಾವತಿಸಲು ಪ್ರಯಾಣಿಕನಿಗೆ ಹೇಳಿದ ನಂತರ ಈ ಹಲ್ಲೆ ನಡೆದಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವಿಮಾನ ಸಂಸ್ಥೆ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.

ಏನಿದು ಘಟನೆ?

ಜುಲೈ 26 ರಂದು ಗುಲ್ಮಾರ್ಗ್‌ನಲ್ಲಿರುವ ಹೈ-ಆಲ್ಟಿಟ್ಯೂಡ್ ವಾರ್ಫೇರ್ ಶಾಲೆಗೆ ಸೇರಿದ ಅಧಿಕಾರಿಯೊಬ್ಬರು ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ನಾಲ್ವರು ಸ್ಪೈಸ್‌ಜೆಟ್ ಉದ್ಯೋಗಿಗಳಿಗೆ ಬೆನ್ನುಮೂಳೆ ಮುರಿತ ಸೇರಿದಂತೆ ಗಂಭೀರ ಗಾಯ ಉಂಟಾಗಿವೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ದೆಹಲಿಗೆ ತೆರಳುವ ಸ್ಪೈಸ್‌ಜೆಟ್ ವಿಮಾನ SG-386ರ ಬೋರ್ಡಿಂಗ್ ಸಂದರ್ಭದಲ್ಲಿ, ಹೆಚ್ಚುವರಿ ಕ್ಯಾಬಿನ್ ಸಾಮಾನು ಶುಲ್ಕಕ್ಕೆ (Viral Video) ಸಂಬಂಧಿಸಿದಂತೆ ಈ ಜಗಳ ಆರಂಭವಾಗಿತ್ತು.

ಈ ಸುದ್ದಿಯನ್ನೂ ಓದಿ: Rajinikanth: ಕಾಲು ಜಾರಿ ಬಿದ್ರಾ ನಟ ರಜನಿಕಾಂತ್? ವೈರಲ್‌ ವಿಡಿಯೊ‌ದ ಅಸಲಿಯತ್ತೇನು?

ಲೆಫ್ಟಿನೆಂಟ್ ಕರ್ನಲ್ ಎಂದು ಗುರುತಿಸಲಾದ ಆರೋಪಿಯು 16 ಕೆಜಿ ಕ್ಯಾಬಿನ್ ಲಗೇಜ್​​ ಹೊಂದಿದ್ದರು, ಇದು ಅನುಮತಿಸಲಾದ 7 ಕೆಜಿ ಮಿತಿಗಿಂತ ಹೆಚ್ಚಿತ್ತು. ಅದಕ್ಕಾಗಿ ಸಿಬ್ಬಂದಿ ಹೆಚ್ಚಿನ ಶುಲ್ಕವನ್ನು ಕೇಳಿದ್ದರು. ಇದರಿಂದಾಗಿ ಅವರು ಸಿಬ್ಬಂದಿಯ ಜೊತೆ ವಾಗ್ವಾದದಲ್ಲಿ ತೊಡಗಿದ್ದರು. ನಂತರ ಅದು ತೀವ್ರಗೊಂಡು ಸೇನಾಧಿಕಾರಿ ಅಲ್ಲಿನ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದರು. ವಿಮಾನ ನಿಲ್ದಾಣದ ಭದ್ರತೆಯನ್ನು ನಿರ್ವಹಿಸುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಅಷ್ಟಾದರೂ ಸುಮ್ಮನಿರದ ಸೇನಾಧಿಕಾರಿ ಮತ್ತೆ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.