ಮಹಾರಾಷ್ಟ್ರದ ಇತ್ತೀಚಿನ ಯೋಜನೆಯು 1,500 ಹೆಕ್ಟೇರ್‌ಗಳನ್ನು ವ್ಯಾಪಿಸಿದೆ, ವಾರ್ಷಿಕವಾಗಿ 1.3 ಶತಕೋಟಿ ಲೀಟರ್ ನೀರನ್ನು ಸೇರಿಸುವ ಗುರಿ ಹೊಂದಿದೆ; 700 ಕೃಷಿ ಕುಟುಂಬಗಳಿಗೆ 80% ಯೋಜಿತ ಆದಾಯ ಹೆಚ್ಚಳವನ್ನು ಬೆಂಬಲಿಸುತ್ತದೆ. ಇತರೆ ಜಲ ಸಂರಕ್ಷಣಾ ಪೋರ್ಟ್ ಫೋಲಿಯೊಗಳು ವಾರ್ಷಿಕವಾಗಿ 2 ಶತಕೋಟಿ ಲೀಟರ್‌ಗಿಂತಲೂ ಹೆಚ್ಚು ನೀರನ್ನು ಮರುಪೂರಣ ಗೊಳಿಸುವ ನಿರೀಕ್ಷೆಯಿದೆ; ಇದು ಬೆಂಗಳೂರು, ಹೈದರಾಬಾದ್, ನವದೆಹಲಿ, ಮುಂಬೈ ನಗರದ ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.
2027ರ ವೇಳೆಗೆ ಭಾರತದ ಸಮುದಾಯಗಳಿಗೆ ತನ್ನ ನೇರ ಕಾರ್ಯಾಚರಣೆಗಳಲ್ಲಿ ಬಳಸುವುದಕ್ಕಿಂತ ಹೆಚ್ಚಿನ ನೀರನ್ನು ಒದಗಿಸುವ ಕಂಪನಿಯ ಗುರಿಯನ್ನು ಈ ಉಪಕ್ರಮಗಳು ಮುನ್ನಡೆಸುತ್ತವೆ.
ಯೋಜನೆಗಳು ಪ್ರಕೃತಿ ಆಧಾರಿತ ಪರಿಹಾರಗಳ ಮೂಲಕ ನಗರ ನೀರಿನ ಭದ್ರತೆ ಮತ್ತು ಗ್ರಾಮೀಣ ಕೃಷಿ ಚೇತರಿಕೆ ಎರಡನ್ನೂ ಪರಿಹರಿಸುತ್ತವೆ.
ಅಮೆಜಾನ್ ಇಂಡಿಯಾ ಇಂದು ಭಾರತದಾದ್ಯಂತ ಜಲ ಮರುಪೂರಣ(ಮರುಪೂರೈಕೆ ಅಥವಾ ಪುನರ್ಭರ್ತಿ) ಯೋಜನೆಗಳಲ್ಲಿ 37 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಮಾಡಿರುವುದಾಗಿ ಘೋಷಿಸಿದೆ, ಇವು ವಾರ್ಷಿಕವಾಗಿ 3 ಶತಕೋಟಿ ಲೀಟರ್‌ಗಿಂತಲೂ ಹೆಚ್ಚು ನೀರನ್ನು ಮರುಪೂರೈಕೆ ಮಾಡುವ ನಿರೀಕ್ಷೆಯಿದೆ, ಇದು ನೀರಿನ ಕೊರತೆಯಿರುವ ಸಮುದಾಯಗಳ ಜನರಿಗೆ ಪ್ರಯೋಜನ ನೀಡುತ್ತದೆ. ಈ ಉಪಕ್ರಮಗಳ ಪೋರ್ಟ್‌ಫೋಲಿಯೊವು 4 ಪ್ರಮುಖ ನಗರ ಕೇಂದ್ರಗಳಾದ ಬೆಂಗಳೂರು, ಹೈದರಾಬಾದ್, ನವದೆಹಲಿ ಮತ್ತು ಮುಂಬೈಗಳನ್ನು ವ್ಯಾಪಿಸಿದೆ. 2027ರ ವೇಳೆಗೆ ಭಾರತದಲ್ಲಿ ತನ್ನ ನೇರ ಕಾರ್ಯಾಚರಣೆಗಳಲ್ಲಿ ಬಳಸುವುದಕ್ಕಿಂತ ಹೆಚ್ಚಿನ ನೀರನ್ನು ಸಮುದಾಯ ಗಳಿಗೆ ಒದಗಿಸುವ ಅಮೆಜಾನ್‌ನ ಗುರಿಯನ್ನು ಬೆಂಬಲಿಸುತ್ತದೆ.
ಇದನ್ನೂ ಓದಿ: Amazon.in ನಲ್ಲಿ ‘ಹೋಮ್ ಶಾಪಿಂಗ್ ಸ್ಪ್ರೀ’
"ಜಲ ಸುರಕ್ಷತೆಯು ಭಾರತದ ಅತ್ಯಂತ ಗುರುತರ ಪರಿಸರ ಸವಾಲುಗಳಲ್ಲಿ ಒಂದಾಗಿದೆ. ಇದಕ್ಕೆ ವಿವಿಧ ವಲಯಗಳ ಸಹಭಾಗಿತ್ವದ ಪರಿಹಾರಗಳು ಬೇಕಾಗುತ್ತವೆ" ಎಂದು ಅಮೆಜಾನ್ ಇಂಡಿಯಾ ಮತ್ತು ಆಸ್ಟ್ರೇಲಿಯಾದ ಕಾರ್ಯಾಚರಣೆಗಳ ಉಪಾಧ್ಯಕ್ಷ ಅಭಿನವ್ ಸಿಂಗ್ ಹೇಳಿದರು. "ನಗರ ಮತ್ತು ಗ್ರಾಮೀಣ ಜಲಾನಯನ ಪ್ರದೇಶಗಳಲ್ಲಿ ಕಾರ್ಯತಂತ್ರ ಹೂಡಿಕೆಗಳ ಮೂಲಕ, ನಾವು ತಕ್ಷಣದ ನೀರಿನ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸುವುದಲ್ಲದೆ, ನಾವು ಕಾರ್ಯ ನಿರ್ವಹಿಸುವ ಸಮುದಾಯಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಒದಗಿಸುತ್ತಿದ್ದೇವೆ. ಪ್ರತಿಯೊಂದು ಯೋಜನೆಯನ್ನು ಕೃಷಿ ಜೀವನೋಪಾಯ ಬೆಂಬಲಿಸಲು, ಜೀವವೈವಿಧ್ಯತೆ ಹೆಚ್ಚಿಸಲು ಮತ್ತು ನಗರ ನೀರಿನ ಪೂರೈಕೆಯನ್ನು ಸುರಕ್ಷಿತಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ" ಎಂದರು.
"ವೈತರ್ಣ ನದಿಯನ್ನು ಪುನಃ ತುಂಬಿಸುವ ಉಪಕ್ರಮವನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ನೀರಿನ ಕೊರತೆಯಿರುವ ಸಮುದಾಯಗಳಲ್ಲಿ ಹವಾಮಾನ ಹೊಂದಾಣಿಕೆ(ಸ್ಥಿತಿಸ್ಥಾಪಕತ್ವ)ಯನ್ನು ಹೆಚ್ಚಿಸುವುದು ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ" ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು. "ವೈತರ್ಣ ಜಲಾನಯನ ಪ್ರದೇಶದಲ್ಲಿ ಅಂತರ್ಜಲವನ್ನು ಮರುಪೂರಣಗೊಳಿಸಲು ಅಮೆಜಾನ್ ಮತ್ತು ಐಸಿಆರ್‌ಐಎಸ್ಎಟಿ ನಡುವಿನ ಸಹಭಾಗಿತ್ವವು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ವೈತರ್ಣ ನದಿ ಮುಂಬೈ ಮಹಾನಗರ ಪ್ರದೇಶಕ್ಕೆ ಮಾತ್ರವಲ್ಲದೆ, ಮಹಾರಾಷ್ಟ್ರದ ಕೃಷಿ ವ್ಯವಸ್ಥೆಗಳು ಮತ್ತು ಸಮುದಾಯಗಳಿಗೂ ನಿರ್ಣಾಯಕವಾಗಿದೆ. ಇದರ ಪುನರುತ್ಪಾದನೆಯು ನಮ್ಮ ಸಮುದಾಯಗಳು, ರೈತರು ಮತ್ತು ಆಹಾರ ವ್ಯವಸ್ಥೆಗಳಿಗೆ ನೇರವಾಗಿ ಪ್ರಯೋಜನ ನೀಡುತ್ತದೆ. ವೈತರ್ಣ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಮರುಪೂರಣಕ್ಕೆ ಅಮೆಜಾನ್ ಹೊಂದಿರುವ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ, ಇದು ನಮ್ಮ ಸಣ್ಣ ಹಿಡುವಳಿದಾರ ರೈತರನ್ನು ಬೆಂಬಲಿಸುತ್ತ ದ, ಭವಿಷ್ಯದ ಪೀಳಿಗೆಗೆ ನೀರಿನ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಹವಾಮಾನ ಬದಲಾವಣೆ ಮತ್ತು ಅಂತರ್ಜಲ ಸವಕಳಿಯಿಂದ ಉಂಟಾಗುವ ಸವಾಲುಗಳನ್ನು ಗಮನಿಸಿದರೆ, ಅಂತಹ ಉಪಕ್ರಮಗಳು ಸಕಾಲಿಕ ಮತ್ತು ಅತ್ಯಗತ್ಯ. ಈ ಯೋಜನೆಯು ನಮ್ಮ ಜನರಿಗೆ, ಕೃಷಿ ಮತ್ತು ಪರಿಸರಕ್ಕೆ ತರುವ ದೀರ್ಘಕಾಲೀನ ಪ್ರಯೋಜನಗಳನ್ನು ನಾನು ಎದುರು ನೋಡುತ್ತಿದ್ದೇನೆ. ಮತ್ತೊಮ್ಮೆ, ಈ ಉಪಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ ಮತ್ತು ಶ್ಲಾಘಿಸುತ್ತೇನೆ, ಅದರ ಯಶಸ್ಸಿಗೆ ಅವರಿಗೆ ಶುಭ ಹಾರೈಸುತ್ತೇನೆ, ”ಎಂದು ಅವರು ಹೇಳಿದರು.
ಅಮೆಜಾನ್‌ನ ನೀರಿನ ಮರುಪೂರಣ ಉಪಕ್ರಮಗಳಲ್ಲಿ ಬೆಂಗಳೂರು ಬಳಿಯ ಯಮರೆ ಸರೋವರ ಮತ್ತು ಹೈದರಾಬಾದ್ ಬಳಿಯ ಸಾಯಿ ರೆಡ್ಡಿ ಸರೋವರಗಳಿಗೆ ನೀರಿನ ಮರುಪೂರೈಕೆ ಸೇರಿವೆ, ಸೇಟ್ರೀಸ್ ಸಹಭಾಗಿತ್ವದೊಂದಿಗೆ, ಇದು ಒಟ್ಟಾಗಿ ವಾರ್ಷಿಕವಾಗಿ 570 ದಶಲಕ್ಷ ಲೀಟರ್‌ಗಳಿಗಿಂತ ಹೆಚ್ಚಿನ ನೀರು ತುಂಬುವ ನಿರೀಕ್ಷೆಯಿದೆ. ನವದೆಹಲಿಯಲ್ಲಿ, ಕಂಪನಿಯು ಯಮುನಾ ನದಿ ಜಲಾನಯನ ಯೋಜನೆಯಲ್ಲಿ ಹ್ಯಾಸ್ಟೆನ್ ರೀಜನರೇಶನ್‌ನೊಂದಿಗೆ ಕೆಲಸ ಮಾಡುತ್ತಿದೆ, ಇದು ವಾರ್ಷಿಕವಾಗಿ 400 ದಶಲಕ್ಷ ಲೀಟರ್‌ಗಳಷ್ಟು ನೀರು ತುಂಬುವ ಸಾಮರ್ಥ್ಯವನ್ನು ಸೇರಿಸುವ ನಿರೀಕ್ಷೆಯಿದೆ. ಈ ಉಪಕ್ರಮಗಳು ಹೂಳು ತೆಗೆಯುವುದು, ಕಟ್ಟು ರಚನೆಗಳನ್ನು ಸರಿಪಡಿಸುವುದು, ಇಂಟೆಲ್/ಔಟ್‌ಲೆಟ್ ರಚನೆಗಳನ್ನು ಮರುಸ್ಥಾಪಿಸುವುದು ಮತ್ತು ನೀರಿನ ಮರುಪೂರಣವನ್ನು ಗರಿಷ್ಠಗೊಳಿಸಲು ಪರ್ಕೊಲೇಷನ್ ಪಿಟ್‌ಗಳನ್ನು ನಿರ್ಮಿಸುವಂತಹ ಪರಿಹಾರಗಳನ್ನು ಬಳಸಿಕೊಳ್ಳುತ್ತವೆ.
ಅದೇ ರೀತಿ, ಎಡಬ್ಲ್ಯುಎಸ್ ಭಾರತದಾದ್ಯಂತ ಮಹತ್ವದ ನೀರಿನ ಯೋಜನೆಗಳನ್ನು ಜಾರಿಗೆ ತಂದಿದೆ, ಇದರಲ್ಲಿ ಹೈದರಾಬಾದ್ ಮತ್ತು ಆಂಧ್ರ ಪ್ರದೇಶದಲ್ಲಿ ವಾಟರ್‌ಏಡ್‌ನೊಂದಿಗೆ ಅಂತರ್ಜಲ ಮರುಪೂರಣ ಮತ್ತು ಮಳೆನೀರು ಕೊಯ್ಲು ಉಪಕ್ರಮಗಳು ಸೇರಿವೆ, ಇದು ವಾರ್ಷಿಕ ವಾಗಿ 640 ದಶಲಕ್ಷ ಲೀಟರ್ ನೀರನ್ನು ಪೂರೈಸುವ ನಿರೀಕ್ಷೆಯಿದೆ. Water.org ಜೊತೆಗಿನ ಎಡಬ್ಲ್ಯು ಎಸ್ ಸಹಭಾಗಿತ್ವವು ಮುಂಬೈ ಮತ್ತು ಹೈದರಾಬಾದ್ ಸುತ್ತಮುತ್ತಲ ಪ್ರದೇಶಗಳಲ್ಲಿ ಶುದ್ಧ ನೀರಿನ ನಿರಂತರ ಪ್ರವೇಶ ಅಥವಾ ಲಭ್ಯತೆ ಹೊಂದಿರದ ಜನರಿಗೆ ವಾರ್ಷಿಕವಾಗಿ 500 ದಶಲಕ್ಷ ಲೀಟರ್‌ಗಿಂತಲೂ ಹೆಚ್ಚಿನ ನೀರನ್ನು ಒದಗಿಸಿದೆ. ಎಡಬ್ಲ್ಯುಎಸ್ ಲಾಭರಹಿತ ಸಂಸ್ಥೆಯಾದ SEARCH ನೊಂದಿಗೆ ಸಹ ಕಾರ್ಯ ನಿರ್ವಹಿಸುತ್ತಿದೆ, ಇದು ಸೌಲಭ್ಯವಂಚಿತ ಗ್ರಾಮೀಣ ಗುಂಪುಗಳು ಹೆಚ್ಚಿನ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ, ಹೈದರಾಬಾದ್ ಸುತ್ತಮುತ್ತಲ ಹಳ್ಳಿಗಳ ರೈತರಿಗೆ ವಾರ್ಷಿಕವಾಗಿ 86 ದಶಲಕ್ಷ ಲೀಟರ್ ನೀರನ್ನು ಒದಗಿಸುತ್ತದೆ.
ಇಂದು ಅಮೆಜಾನ್ ತನ್ನ ಇತ್ತೀಚಿನ ನೀರಿನ ಹೂಡಿಕೆಯನ್ನು ಸಹ ಘೋಷಿಸಿದೆ - ಮಹಾರಾಷ್ಟ್ರದ ವೈತರ್ಣ ಜಲಜಲಾನಯನ ಪ್ರದೇಶದಲ್ಲಿ 10 ಕೋಟಿ ರೂ. ಮೌಲ್ಯದ ಯೋಜನೆ ಇದಾಗಿದ್ದು, ಇದು 2027ರಲ್ಲಿ ಪೂರ್ಣಗೊಂಡಾಗ ವಾರ್ಷಿಕವಾಗಿ 1.3 ಶತಕೋಟಿ ಲೀಟರ್ ನೀರನ್ನು ತುಂಬುತ್ತದೆ. ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ ಸ್ಟಿಟ್ಯೂಟ್ ಫಾರ್ ದಿ ಸೆಮಿ-ಆರಿಡ್ ಟ್ರಾಪಿಕ್ಸ್(ICRISAT) ನೊಂದಿಗೆ ಅಭಿವೃದ್ಧಿಪಡಿಸಲಾದ ಈ ಉಪಕ್ರಮವು ಮುಂಬೈನ ಮೇಲ್ಭಾಗದ ಪ್ರದೇಶಲ್ಲಿರುವ ಸಮುದಾಯಗಳಿಗೆ ವ್ಯಾಪಿಸಿದೆ, ಮಳೆನೀರು ಕೊಯ್ಲು ರಚನೆಗಳು, ಕ್ಷೇತ್ರ ಬಂಡಿಂಗ್ ಮತ್ತು ಸುಧಾರಿತ ಒಳಚರಂಡಿ ಜಾಲಗಳನ್ನು ಕಾರ್ಯಗತಗೊಳಿಸುತ್ತದೆ, ಇದು ಮುಂಬೈನ ಮಹಾನಗರ ಪ್ರದೇಶಕ್ಕೆ ನೀರಿನ ಭದ್ರತೆಯನ್ನು ಬೆಂಬಲಿಸುವ ಜತೆಗೆ, 700 ರೈತ ಕುಟುಂಬಗಳಿಗೆ ಪ್ರಯೋಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅಮೆಜಾನ್‌ನ ನೀರಿನ ಹೂಡಿಕೆಗಳಿಂದ ಸಮುದಾಯಗಳಿಗೆ ಸಿಗುವ ಪ್ರಭಾವವು ಪರಿಸರ ಪ್ರಯೋಜನಗಳನ್ನು ಮೀರಿ ವಿಸ್ತರಿಸುತ್ತದೆ, ಗಮನಾರ್ಹ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಮಹಾರಾಷ್ಟ್ರ ಯೋಜನೆಯು ಹಿಂಗಾರು ಹಂಗಾಮಿನಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ, ರೈತ ಕುಟುಂಬಗಳಿಗೆ ಮನೆಯ ಆದಾಯವನ್ನು ಸುಮಾರು 80%ರಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇತರೆ ಯೋಜನಾ ಸ್ಥಳಗಳಲ್ಲಿ ಇದೇ ರೀತಿಯ ಫಲಿತಾಂಶಗಳನ್ನು ದಾಖಲಿಸಲಾಗಿದೆ, ಅಲ್ಲಿ ಸುಧಾರಿತ ನೀರಿನ ಲಭ್ಯತೆಯು ಹೆಚ್ಚಿನ ಕೃಷಿ ಸಾಧ್ಯತೆಗಳನ್ನು ಪರಿವರ್ತಿ ಸಿದೆ ಮತ್ತು ಬರ ಪರಿಸ್ಥಿತಿಗಳಲ್ಲಿ ನೀರಿನ ಕೊರತೆಯನ್ನು ಕಡಿಮೆ ಮಾಡಿದೆ. ಈ ನೀರಿನ ಮರು ಪೂರಣ ಉಪಕ್ರಮಗಳು ಅಮೆಜಾನ್‌ನ ವಿಶಾಲವಾದ ಸುಸ್ಥಿರತೆಯ ಬದ್ಧತೆಗಳೊಂದಿಗೆ ಹೊಂದಿಕೆ ಯಾಗುತ್ತವೆ, ಇದರಲ್ಲಿ ದಿ ಕ್ಲೈಮೇಟ್ ಪ್ಲೆಡ್ಜ್‌ನ ಸಹ-ಸಂಸ್ಥಾಪಕರಾಗಿ, 2040ರ ವೇಳೆಗೆ ಅದರ ಕಾರ್ಯಾಚರಣೆಗಳಲ್ಲಿ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ತಡೆಯುವ ಗುರಿಯೂ ಸೇರಿದೆ.
ನೀರಿನ ಸಂರಕ್ಷಣೆ ಮತ್ತು ಮರುಸ್ಥಾಪನೆಗೆ ಅಮೆಜಾನ್ ಹೊಂದಿರುವ ಬದ್ಧತೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಅಮೆಜಾನ್‌ನ ನೀರಿನ ಉಸ್ತುವಾರಿ ವೆಬ್‌ಸೈಟ್‌ನಲ್ಲಿ ಕಾಣಬಹುದು.